SHIVAMOGGA LIVE NEWS | 19 DECEMBER 2023
WHATSAPP NEWS | ವಾಟ್ಸಪ್ ತನ್ನ ಬಳಕೆದಾರರ ಅನುಕೂಲಕ್ಕೆ COMPANION MODE ರಿಲೀಸ್ ಮಾಡಿದೆ. 2023ರ ಏಪ್ರಿಲ್‌ನಿಂದ ಈ ಫೀಚರ್ ಇದೆ. ಒಂದೇ ವಾಟ್ಸಪ್ ಖಾತೆಯನ್ನು ಲ್ಯಾಪ್‌ಟಾಪ್ ಅಥವಾ ಮೊಬೈಲ್‌ಗಳು ಸೇರಿ ನಾಲ್ಕು ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ.
![]() |
ಕಂಪಾನಿಯನ್ ಮೋಡ್‌ನಲ್ಲಿ ವಾಟ್ಸಪ್ ಬಳಸುತ್ತಿರುವ ಡಿವೈಸ್‌ಗಳಲ್ಲಿ ವಾಟ್ಸಪ್ ಚಾಟ್, ವಾಯ್ಸ್ ಮತ್ತು ವಿಡಿಯೋ ಕಾಲ್ ಮಾಡಬಹುದು. ಆದರೆ ಹೊಸ ಅಪ್‌ಡೇಟ್, ಸ್ಟೇಟಸ್, ಚಾನಲ್‌ಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.
ಕಂಪಾನಿಯನ್ ಮೋಡ್ ಬಳಸೋದು ಹೇಗೆ?
ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಮೂಲಕ ವಾಟ್ಸಪ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬೇಕು. ಬಳಿಕ ಭಾಷೆ ಆಯ್ಕೆ ಮಾಡಬೇಕು. ಮೊಬೈಲ್ ನಂಬರ್ ದಾಖಲು ಮಾಡುವ ಪೇಜ್ ತೆರೆದುಕೊಳ್ಳಲಿದ್ದು ಮೊಬೈಲ್ ನಂಬರ್ ದಾಖಲಿಸುವ ಬದಲು ಬಲ ಭಾಗ ಮೇಲೆ ಮೆನು ಕ್ಲಿಕ್ ಮಾಡಬೇಕು. ಇದರಲ್ಲಿನ LINK ANOTHER DEVICE ಆಪ್ಷನ್ ಕ್ಲಿಕ್ ಮಾಡಬೇಕು. ಅಲ್ಲಿ QR CODE ಕಾಣಿಸಲಿದೆ. ಅದನ್ನು ವಾಟ್ಸಪ್ ಖಾತೆ ಹೊಂದಿರುವ ಪ್ರೈಮರಿ ಡಿವೈಸ್ ಮೂಲಕ ಸ್ಕ್ಯಾನ್ ಮಾಡಿದರೆ ಲಿಂಕ್ ಆಗಲಿದೆ.
ಇದನ್ನೂ ಓದಿ – ಸದ್ಯದಲ್ಲೆ ವಾಟ್ಸಪ್‌ನಲ್ಲಿ ರಿಲೀಸ್ ಆಗಲಿದೆ 3 ಹೊಸ ಫೀಚರ್, ಯಾವುದದು? ಏನದರ ಪ್ರಯೋಜನ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200