ಜೀ ಕನ್ನಡದ ನಾವು ನಮ್ಮವರು ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ದಂಪತಿ, ಹೇಗಿದೆ ಇವರ ಪ್ರದರ್ಶನ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಜೀ ಕನ್ನಡ ವಾಹಿನಿಯ ನಾವು ನಮ್ಮವರು ಕಾರ್ಯಕ್ರಮದಲ್ಲಿ (programme) ಶಿವಮೊಗ್ಗ ಜಿಲ್ಲೆಯ ದಂಪತಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಇತರೆ ಸ್ಪರ್ಧಿಗಳ ಜೊತೆಗೆ ಪೈಪೋಟಿಯ ಜೊತೆಗೆ ಮಲೆನಾಡಿನ ಸಂಸ್ಕೃತಿ, ಶಿವಮೊಗ್ಗ ಜಿಲ್ಲೆಯ ಪರಿಸರದ ಕತೆಯನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ನಟಿ ಪ್ರಿಯಾ ಕೆಸರೆ, ವಕೀಲ ಶಿವರಾಂ.ಬಿ.ಆರ್‌ ದಂಪತಿ ‘ನಾವು ನಮ್ಮವರುʼ ಕಾರ್ಯಕ್ರಮದಲ್ಲಿ ಕಳೆದ ಒಂದು ತಿಂಗಳಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಿಯಾ ಕೆಸರೆ ಮೂಲತಃ ಸಾಗರ ತಾಲೂಕಿನವರು. ರಂಗಭೂಮಿ ಕಲಾವಿದೆ. ಸಾಗರದ ಎಲ್‌.ಬಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಆ ಬಳಿಕ ಹಲವು ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿನ ಅದ್ಭುತ ಅಭಿಯನಕ್ಕೆ ಹಲವು ಪ್ರಶಸ್ತಿ ಇವರನ್ನು ಅರಸಿ ಬಂದಿವೆ.

ಇನ್ನು, ಹೈಕೋರ್ಟ್‌ ವಕೀಲ ಶಿವರಾಮ್‌.ಬಿ.ಆರ್‌ ಅವರ ಮೂಲ ಶಿಕಾರಿಪುರ. ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಬೆಂಗಳೂರಿನಲ್ಲಿ ವಕೀಲಿ ವೃತ್ತಿಯಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಲವು ರೈತರಿಗೆ ಅರಣ್ಯ ಇಲಾಖೆ ನೀಡಿದ ನೊಟೀಸ್‌ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಹಲವು ರೈತರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

 

View this post on Instagram

 

A post shared by Zee Kannada (@zeekannada)

ನಾವು ನಮ್ಮವರು ಕಾರ್ಯಕ್ರಮದಲ್ಲಿ

ಶಿವರಾಮ್‌ ಮತ್ತು ಪ್ರಿಯಾ ದಂಪತಿ ನಾವು ನಮ್ಮವರು ಕಾರ್ಯಕ್ರಮಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪ್ರತಿ ಎಪಿಸೋಡಿನಲ್ಲಿಯು ಮಲೆನಾಡು ಮತ್ತು ಶಿವಮೊಗ್ಗ ಜಿಲ್ಲೆಯ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.

 

View this post on Instagram

 

A post shared by Zee Kannada (@zeekannada)

ಶಿವಮೊಗ್ಗ ಜಿಲ್ಲೆಯ ದಂಪತಿಯನ್ನು ಬೆಂಬಲಿಸಲು SHPR ಎಂದು SMS ಟೈಪ್ ಮಾಡಿ 57575ಗೆ ಕಳುಹಿಸಬೇಕಿದೆ ಎಂದು ದಂಪತಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ » 17 ಗಂಟೆಯ ಅದ್ಧೂರಿ ಮೆರವಣಿಗೆ ಬಳಿಕ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆ

zee kannada programme

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment