ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ನಂಬರ್ ಗಳಲ್ಲಿ ನಮ್ಮೂರು
SHIVAMOGGA LIVE NEWS | 19 JANUARY 2023
SHIMOGA | ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಜ್ಞಾನಪೀಠವು ಒಂದು. ಸರ್ವ ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈವರೆಗೂ ಕನ್ನಡದ 8 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಈ ಪೈಕಿ ಇಬ್ಬರು ಶಿವಮೊಗ್ಗ ಜಿಲ್ಲೆಯವರು ಎಂಬುದು ವಿಶೇಷ.
ಇಬ್ಬರು ಒಂದೇ ತಾಲೂಕಿನವರು
ಕನ್ನಡ ಸಾಹಿತ್ಯಕ್ಕೆ ಮೊದಲು ಜ್ಞಾನಪೀಠ ತಂದುಕೊಟ್ಟವರು ರಾಷ್ಟ್ರಕವಿ ಕುವೆಂಪು. 1994ರಲ್ಲಿ ಸಾಹಿತಿ ಪ್ರೊ. ಯು.ಆರ್.ಅನಂತ ಮೂರ್ತಿ ಅವರಿಗೆ ಜ್ಞಾನಪೀಠ ಲಭಿಸಿತು. ಇವರಿಬ್ಬರು ತೀರ್ಥಹಳ್ಳಿಯವರು. ಇಬ್ಬರು ಜ್ಞಾನಪೀಠಿಗಳನ್ನು ಪಡೆದ ಜಿಲ್ಲೆ ಎಂಬುದು ಶಿವಮೊಗ್ಗದವರಿಗೆ ಹೆಮ್ಮೆಯ ಸಂಗತಿ.
ಕನ್ನಡಕ್ಕೆ 8 ಜ್ಞಾನಪೀಠ
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮೊದಲ ಜ್ಞಾನಪೀಠ ಪ್ರಶಸ್ತಿ. ಕುವೆಂಪು ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕುಪ್ಪಳಿಯವರು.
ದ.ರಾ.ಬೇಂದ್ರ ಅವರ ನಾಕುತಂತಿ ಕವನ ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ ಲಭಿಸಿತು. ದ.ರಾ.ಬೇಂದ್ರೆ ಅವರು ಧಾರವಾಡ ಜಿಲ್ಲೆಯವರು.
ಶಿವರಾಮ ಕಾರಂತ ಅವರ ಮೂಕಜ್ಜಿಯ ಕನಸು ಕಾದಂಬರಿಗಾಗಿ 1977ರಲ್ಲಿ ಜ್ಞಾನಪೀಠ ಸಿಕ್ಕಿತು. ಅವರು ಉಡುಪಿ ಜಿಲ್ಲೆಯವರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ ಕೃತಿ ಮತ್ತು ಸಮಗ್ರ ಸಾಹಿತ್ಯಕ್ಕೆ 1983ರಲ್ಲಿ ಜ್ಞಾನಪೀಠ ದೊರೆಯಿತು. ಇವರು ಕೋಲಾರ ಜಲ್ಲೆಯವರು.
ವಿ.ಕೃ.ಗೋಕಾಕ ಅವರ ಸಮಗ್ರ ಸಾಹಿತ್ಯಕ್ಕೆ 1990ರಲ್ಲಿ ಜ್ಞಾನಪೀಠ ಸಿಕ್ಕಿತು. ವಿ.ಕೃ.ಗೋಕಾಕ ಅವರು ಹಾವೇರಿ ಜಿಲ್ಲೆಯ ಸವಣೂರಿನವರು.
ಪ್ರೊ. ಯು.ಆರ್.ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಲಭಿಸಿತು. ಪ್ರೊ. ಯು.ಆರ್.ಅನಂತಮೂರ್ತಿ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೇಳಿಗೆಯವರು.
ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಲಭಿಸಿತು. ಗಿರೀಶ್ ಕಾರ್ನಾಡ್ ಅವರು ಮುಂಬೈನಲ್ಲಿ ಜನಸಿದರು. ಶಿರಸಿ, ಧಾರವಾಡದಲ್ಲಿ ಬೆಳದವರು. ಕೊನೆಯವರೆಗು ಬೆಂಗಳೂರಿನಲ್ಲಿ ಬದುಕು ನಡೆಸಿದರು.
ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಚಂದ್ರಶೇಖರ ಕಂಬಾರ ಅವರು ಬೆಳಗಾವಿ ಜಿಲ್ಲೆಯವರು.
ಇದನ್ನೂ ಓದಿ – ಶಿವಮೊಗ್ಗದ ಈ ಅಂಗಡಿಯ ಬಟ್ಟೆ ಆರೋಗ್ಯ ಕಾಪಾಡುತ್ತೆ, ಇದಕ್ಕೆ ವಿದೇಶದಲ್ಲೂ ಇದೆ ಭಾರಿ ಬೇಡಿಕೆ, ಎಲ್ಲಿದೆ ಅಂಗಡಿ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422