ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 4 JANUARY 2024
ಶಿವಮೊಗ್ಗ : KSRTC ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಮಧ್ಯರಾತ್ರಿಯಿಂದಲೆ ನೂತನ ದರ ಜಾರಿಗೆ ಬರಲಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿಂದ ಶಿವಮೊಗ್ಗಕ್ಕೆ ಎಷ್ಟು ರೇಟ್?
» ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವೇಗದೂತ ಬಸ್ಸುಗಳ ಟಿಕೆಟ್ ದರ ಈ ಹಿಂದೆ 332 ರೂ. ಇತ್ತು. ಶೇ.15ರಷ್ಟು ಹೆಚ್ಚಳವಾಗಿರುವುದರಿಂದ ಟಿಕೆಟ್ ದರ 356 ರೂ.ಗೆ ತಲುಪಿದೆ. ಒಟ್ಟು 44 ರೂ. ಹೆಚ್ಚಳವಾಗಿವೆ.
» ಶಿವಮೊಗ್ಗದಿಂದ ಭದ್ರಾವತಿಗೆ ಎಕ್ಸ್‌ಪ್ರೆಸ್ ಬಸ್ಸುಗಳಲ್ಲಿ 28 ರೂ. ಇತ್ತು. ಇನ್ಮುಂದೆ 32 ರೂ.ಗೆ ತಲುಪಲಿದೆ. ಸಾಮಾನ್ಯ ಬಸ್ಸಿನಲ್ಲಿ ಪ್ರತಿ ಟಿಕೆಟ್‌ಗೆ 25 ರೂ. ಇತ್ತು. ಇನ್ಮುಂದೆ 29 ರೂ.ಗೆ ತಲುಪಲಿದೆ.
ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಿದೆ ದರ?
ಶಿವಮೊಗ್ಗದಿಂದ | ಹಳೆ ದರ | ಹೊಸ ದರ |
ಸಾಗರ | 72 ರೂ. | 82 ರೂ. |
ಸೊರಬ | 101 ರೂ. | 116 ರೂ. |
ಶಿಕಾರಿಪುರ | 62 ರೂ. | 71 ರೂ. |
ತೀರ್ಥಹಳ್ಳಿ | 65 ರೂ. | 75 ರೂ. |
ಹೊಸನಗರ | 65 ರೂ. | 75 ರೂ. |
ಉಡುಪಿ | 158 ರೂ. | 182 ರೂ. |
ದಾವಣಗೆರೆ | 101 ರೂ. | 116 ರೂ. |
ಹೊನ್ನಾಳಿ | 50 ರೂ. | 57 ರೂ. |
ಹರಿಹರ | 232 ರೂ. | 266 ರೂ. |
ತರೀಕೆರೆ | 45 ರೂ. | 52 ರೂ. |
ಇದನ್ನೂ ಓದಿ » ಭದ್ರಾ ಡ್ಯಾಮ್ ನಾಲೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422