ದಸರಾ ಹಬ್ಬ, ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲುಗಳು ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರೈಲ್ವೆ ಸುದ್ದಿ: ಮೈಸೂರಿನಲ್ಲಿ ನಡೆಯಲಿರುವ ದಸರಾ ಹಬ್ಬದ ಸಂದರ್ಭ ನಿರೀಕ್ಷಿತ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು, ನೈಋತ್ಯ ರೈಲ್ವೆಯು (railway) ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರವರೆಗೆ ಕೆಲವು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಒದಗಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ್ಯಾವ ರೈಲು? ಎಲ್ಲೆಲ್ಲಿ ನಿಲುಗಡೆ?

ರೈಲು ಸಂಖ್ಯೆ 16225/16226 ಮೈಸೂರುಶಿವಮೊಗ್ಗ ಟೌನ್ಮೈಸೂರು ಎಕ್ಸ್ ಪ್ರೆಸ್: ಈ ರೈಲು ಬೆಳಗುಳ, ಕೃಷ್ಣರಾಜಸಾಗರ, ಕಲ್ಲೂರು ಎಡಹಳ್ಳಿ ಹಾಲ್ಟ್, ಸಾಗರಕಟ್ಟೆ, ಡೋರನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ಹಾಲ್ಟ್, ಹೊಸ ಅಗ್ರಹಾರ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 16222/16221 ಮೈಸೂರುತಾಳಗುಪ್ಪಮೈಸೂರು ಎಕ್ಸ್ ಪ್ರೆಸ್: ಈ ರೈಲು ಕೃಷ್ಣರಾಜಸಾಗರ, ಕಲ್ಲೂರು ಎಡಹಳ್ಳಿ ಹಾಲ್ಟ್, ಡೋರನಹಳ್ಳಿ, ಹಂಪಾಪುರ ಮತ್ತು ಅರ್ಜುನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

Train-Jan-Shatabdi-General-Image

ರೈಲು ಸಂಖ್ಯೆ 17301/17302 ಮೈಸೂರುಬೆಳಗಾವಿಮೈಸೂರು ಎಕ್ಸ್ ಪ್ರೆಸ್: ಈ ರೈಲು ಬೆಳಗುಳ, ಸಾಗರಕಟ್ಟೆ, ಹೊಸ ಅಗ್ರಹಾರ, ಅಕ್ಕಿಹೆಬ್ಬಾಳು, ಬೀರಹಳ್ಳಿ ಹಾಲ್ಟ್, ಮಂದಗೆರೆ ಮತ್ತು ಮಾವಿನಕೆರೆ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಇದನ್ನೂ ಓದಿ » ಆಧಾರ್‌ ಕಾರ್ಡ್‌ ಕುರಿತು ಮಹತ್ವದ ಅಪ್‌ಡೇಟ್‌, ಈಗಲೆ ದಾಖಲೆ ಒದಗಿಸುವಂತೆ ಸಾರ್ವಜನಿಕರಿಗೆ ಸೂಚನೆ

ಹಬ್ಬದ ಸಂದರ್ಭ ಪ್ರಯಾಣಿಕರ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಮಾಡಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವಾಗ ಈ ತಾತ್ಕಾಲಿಕ ನಿಲುಗಡೆಗಳನ್ನು ಗಮನದಲ್ಲಿಟ್ಟುಕೊಳ್ಳಲು ಸೂಚಿಸಲಾಗಿದೆ.

Prashanth-Loan-Advertisement.

railway

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 3, 2025

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

Leave a Comment