SHIVAMOGGA LIVE NEWS
SHIMOGA | ಶಿವಮೊಗ್ಗ ಜಿಲ್ಲೆ ಮತ್ತು ಬೆಂಗಳೂರು (SHIMOGA BANGALORE TRAIN) ನಡುವೆ ಪ್ರತಿದಿನ ಐದು ರೈಲುಗಳು ಸಂಚರಿಸುತ್ತಿವೆ. ಈ ಪೈಕಿ ನಾಲ್ಕು ರೈಲುಗಳು ವಾರದ ಎಲ್ಲಾ ದಿನವು ಸಂಚರಿಸಲಿದೆ. ಒಂದು ರೈಲು ವಾರದ ಮೂರು ದಿನ ಮಾತ್ರ ಸಂಚರಿಸುತ್ತದೆ.
ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12090)
ಕಚೇರಿ ಸಮಯಕ್ಕೆ ಬೆಂಗಳೂರು ತಲುಪುವವರಿಗೆ ಅನುಕೂಲ ಈ ರೈಲು. ಪ್ರತಿದಿನ ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಜನ ಶತಾಬ್ದಿ ಹೊರಡಲಿದೆ. ಬೆ.5.33ಕ್ಕೆ ಭದ್ರಾವತಿ, ಬೆ.5.51ಕ್ಕೆ ತರೀಕೆರೆ, ಬೆ.6.18ಕ್ಕೆ ಬೀರೂರು, ಬೆ.6.28ಕ್ಕೆ ಕಡೂರು, ಬೆ.7 ಗಂಟೆಗೆ ಅರಸೀಕರೆ, ಬೆ.8.20ಕ್ಕೆ ತುಮಕೂರು, ಬೆ.9.22ಕ್ಕೆ ಯಶವಂತಪುರ, ಬೆ.9.50ಕ್ಕೆ ಮೆಜಸ್ಟಿಕ್ ರೈಲ್ವೆ ನಿಲ್ದಾಣ ತಲುಪಲಿದೆ.
4 ಗಂಟೆ 35 ನಿಮಿಷ ಪ್ರಯಾಣದ ಅವಧಿ. 7 ಕಡೆ ರೈಲು ನಿಲುಗಡೆ ಹೊಂದಿದೆ. ಸಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು ಎಸಿ ಚೇರ್ ಕಾರ್ ಬೋಗಿಗಳನ್ನು ಹೊಂದಿದೆ.
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ (ರೈಲು ಸಂಖ್ಯೆ 20652)
ತಾಳಗುಪ್ಪದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ ಇಂಟರ್ ಸಿಟಿ ರೈಲು. ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಬೆ.5.31ಕ್ಕೆ ಸಾಗರ ಜಂಬಗಾರು, ಬೆ.7ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣ, ಬೆ.7.25ಕ್ಕೆ ಭದ್ರಾವತಿ, ಬೆ.10.20ಕ್ಕೆ ತುಮಕೂರು, ಬೆ.11.20ಕ್ಕೆ ಯಶವಂತಪುರ, ಬೆ.11.55ಕ್ಕೆ ಮೆಜಸ್ಟಿಕ್ ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಮೈಸೂರು – ಶಿವಮೊಗ್ಗ – ತಾಳಗುಪ್ಪ ಮಧ್ಯೆ ಎಷ್ಟು ರೈಲುಗಳು ಸಂಚರಿಸುತ್ತಿವೆ? ಟೈಮಿಂಗ್ ಏನು?
ತಾಳಗುಪ್ಪದಿಂದ ಹೊರಡುವ ರೈಲು ಬೆಂಗಳೂರು ತಲುಪುವುದರಲ್ಲಿ 12 ಸ್ಟೇಷನ್ ಗಳಲ್ಲಿ ನಿಲುಗಡೆ ಹೊಂದಿದೆ. RESERVATION ಮತ್ತು UN RESERVED ಎರಡು ಬಗೆಯ ಬೋಗಿಗಳು ಇರಲಿವೆ. ಸಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು ಎಸಿ ಚೇರ್ ಕಾರ್ ಬೋಗಿಗಳಲ್ಲಿ RESERVATION ಗೆ ಅವಕಾಶವಿದೆ.
(SHIMOGA BANGALORE TRAIN)
ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್ ಸಿಟಿ (ರೈಲು ಸಂಖ್ಯೆ 16580)
ಮಧ್ಯಾಹ್ನ ಶಿವಮೊಗ್ಗದಿಂದ ಹೊರಡಲಿರುವ ರೈಲು ರಾತ್ರಿ ಬೆಂಗಳೂರು ತಲುಪಲಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದೆ. ಮಧ್ಯಾಹ್ನ 3.48ಕ್ಕೆ ಭದ್ರಾವತಿ, 4.08ಕ್ಕೆ ತರೀಕೆರೆ, 4.35ಕ್ಕೆ ಬೀರೂರು, 4.46ಕ್ಕೆ ಕಡೂರು, ಸಂಜೆ 5.18ಕ್ಕೆ ಅರಸೀಕೆರೆ, ಸಂಜೆ 5.43ಕ್ಕೆ ತಿಪಟೂರು, ಸಂಜೆ 6.30ಕ್ಕೆ ತುಮಕೂರು, ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.
ಐದು ಗಂಟೆಯ ಪ್ರಯಾಣ ಅವಧಿ ಇದಾಗಿದೆ. 7 ಕಡೆ ರೈಲು ನಿಲುಗಡೆ ಹೊಂದಿದೆ.
ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ ವಯಾ ಬೆಂಗಳೂರು (ರೈಲು ಸಂಖ್ಯೆ 16228)
ಬೆಂಗಳೂರು, ಮೈಸೂರು ತೆರಳುವವರಿಗೆ ಈ ರೈಲು ಅತ್ಯಂತ ಪ್ರಮುಖ ಸಾರಿಗೆ ವ್ಯವಸ್ಥೆ. ರಾತ್ರಿ 9 ಗಂಟೆಗೆ ತಾಳಗುಪ್ಪ ನಿಲ್ದಾಣದಿಂದ ಹೊರಡಲಿದೆ. ರಾ.9.20ಕ್ಕೆ ಸಾಗರ ಜಂಬಗಾರು, ರಾತ್ರಿ 11 ಗಂಟೆಗೆ ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ರಾ. 11.20ಕ್ಕೆ ಭದ್ರಾವತಿ, ರಾ. 3.28ಕ್ಕೆ ತುಮಕೂರು, ಬೆಳಗ್ಗೆ 4.40ಕ್ಕೆ ಯಶವಂತಪುರ, ಬೆ. 5 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ತಲುಪಲಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಪ್ರಯಾಣಿಕರೆ ಗಮನಿಸಿ – ರಾತ್ರಿ ಸಂಚರಿಸುವವರಿಗೆ ರೈಲ್ವೆ ಇಲಾಖೆಯಿಂದ ಅಲರಾಂ ಸೌಲಭ್ಯ, ಏನಿದು?
ಶಿವಮೊಗ್ಗ ಬೆಂಗಳೂರು ನಡುವೆ 6 ಗಂಟೆಯ ಪ್ರಯಾಣ ಅವಧಿಯಾಗಿದೆ. ರೈಲಿನಲ್ಲಿ RESERVATION ಮತ್ತು UN RESERVED ಎರಡು ಬಗೆಯ ಬೋಗಿಗಳು ಇರಲಿವೆ. ಸ್ಲೀಪರ್, ಎಸಿ ಬೋಗಿಗಳು ಇದ್ದಾವೆ.
ಶಿವಮೊಗ್ಗ ಟೌನ್ – ಯಶವಂತಪುರ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16582)
ವೀಕೆಂಡ್ ಸೇರಿದಂತೆ ಉಳಿದ ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ ವೇಳೆ ಮತ್ತೊಂದು ರೈಲು ವ್ಯವಸ್ಥೆ ಮಾಡಲಾಗಿದೆ. ವಾರದಲ್ಲಿ ಮೂರು ದಿನ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ, ಗುರುವಾರ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಲಿದೆ.
ರಾತ್ರಿ 11.55ಕ್ಕೆ ಶಿವಮೊಗ್ಗ ನಿಲ್ದಾಣದಿಂದ ರೈಲು ಹೊರಡಲಿದೆ. ರಾತ್ರಿ 12.14ಕ್ಕೆ ಭದ್ರಾವತಿ, ರಾತ್ರಿ 12.37ಕ್ಕೆ ತರೀಕೆರೆ, ಬೆಳಗ್ಗೆ 3.38ಕ್ಕೆ ತುಮಕೂರು, ಬೆಳಗ್ಗೆ 5.10ಕ್ಕೆ ಯಶವಂತಪುರ ತಲುಪಲಿದೆ.
5 ಗಂಟೆ 15 ನಿಮಿಷದ ಪ್ರಯಾಣ ಅವಧಿ ಇರಲಿದೆ. ಸ್ಲೀಪರ್, ಎಸಿ ಮತ್ತು UN RESERVE ಬೋಗಿಗಳು ಈ ರೈಲಿನಲ್ಲಿದೆ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.