ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ, ಟೈಮಿಂಗ್‌ ಏನು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

RAILWAY NEWS, 3 NOVEMBER 2024 : ಶಿವಮೊಗ್ಗ – ಬೆಂಗಳೂರು ನಡುವೆ ನಿತ್ಯ ನಾಲ್ಕು ರೈಲುಗಳು (Trains) ಸಂಚರಿಸುತ್ತವೆ. ಈ ರೈಲುಗಳು ಸಾಮಾನ್ಯವಾಗಿ ಭರ್ತಿಯಾಗಿಯೇ ಸಂಚರಿಸುತ್ತವೆ.

ಯಾವ್ಯಾವ Trains, ಎಷ್ಟೊತ್ತಿಗೆ ಹೊರಡುತ್ತೆ?

ಬೆಳಗ್ಗೆ 5.15ಕ್ಕೆ ಜನಶತಾಬ್ದಿ ರೈಲು ಶಿವಮೊಗ್ಗ ನಿಲ್ದಾಣದಿಂದ ಹೊರಟು ಬೆಳಗ್ಗೆ  9.50ಕ್ಕೆ ಬೆಂಗಳೂರಿನ ಮೆಜಸ್ಟಿಕ್‌ ನಿಲ್ದಾಣ ತಲುಪಲಿದೆ. ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ.

ಬೆಳಗ್ಗೆ 7.15ಕ್ಕೆ ಇಂಟರ್‌ ಸಿಟಿ ರೈಲು ಶಿವಮೊಗ್ಗದಿಂದ ಹೊರಟು ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಮೆಜಸ್ಟಿಕ್‌ ನಿಲ್ದಾಣ ತಲುಪಲಿದೆ. ಈ ರೈಲು ಬೆಳಗ್ಗೆ 5.15ಕ್ಕೆ ತಾಳಗುಪ್ಪ ನಿಲ್ದಾಣದ ಹೊರಡಲಿದೆ. ಶಿವಮೊಗ್ಗದಿಂದ ಮಾರ್ಗ ಮಧ್ಯೆ ಮಹಾದೇವಿ ಟಾಕೀಸ್‌ ಬಳಿ ನಿಲ್ದಾಣ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ.

shimoga-to-bangalore-jan-shatabdi-trains-railway.webp

ಮಧ್ಯಾಹ್ನ 3.45ಕ್ಕೆ ಇಂಟರ್‌ಸಿಟಿ ರೈಲು ಶಿವಮೊಗ್ಗ ನಿಲ್ದಾಣದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಮಾರ್ಗ ಮಧ್ಯೆ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲುಗಡೆ ನೀಡಲಿದೆ.

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ರೈಲಿಗೆ ಹೊಸ ಸ್ಟಾಪ್‌ ಸೇರ್ಪಡೆ

ರಾತ್ರಿ 10.55ಕ್ಕೆ ತಾಳಗುಪ್ಪ ಮೈಸೂರು ಎಕ್ಸ್‌ಪ್ರೆಸ್‌ ರೈಲು ಶಿವಮೊಗ್ಗ ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ತಲುಪಲಿದೆ. ಶಿವಮೊಗ್ಗದಿಂದ ಮಾರ್ಗ ಮಧ್ಯೆ ಮಹಾದೇವಿ ಟಾಕೀಸ್‌ ಬಳಿ ನಿಲ್ದಾಣ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು , ಯಶವಂತಪುರ, ಮಲ್ಲೇಶ್ವರಂನಲ್ಲಿ ನಿಲುಗಡೆ ನೀಡಲಿದೆ.

shimoga railway station

ವಾರದಲ್ಲಿ ಮೂರು ದಿನ

ರಾತ್ರಿ 11.55ಕ್ಕೆ ಎಕ್ಸ್‌ಪ್ರೆಸ್‌ ರೈಲು ಶಿವಮೊಗ್ಗ ನಿಲ್ದಾಣದಿಂದ ಹೊರಟು ಬೆಳಗ್ಗೆ 5 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಮಾರ್ಗ ಮಧ್ಯೆ ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಭಾನುವಾರ, ಮಂಗಳವಾರ, ಗುರುವಾರ ಮಾತ್ರ ಚಲಿಸಲಿದೆ.

ವಾರಕ್ಕೆ ಒಮ್ಮೆ ಮಾತ್ರ

ಸಂಜೆ 5.15ಕ್ಕೆ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಶಿವಮೊಗ್ಗದಿಂದ ಹೊರಟು ರಾತ್ರಿ 10.20ಕ್ಕೆ ಬೆಂಗಳೂರು ತಲುಪಲಿದೆ. ಈ ರೈಲು ಚೆನ್ನೈ ಎಂಜಿಆರ್‌ ನಿಲ್ದಾಣಕ್ಕೆ ತೆರಳಲಿದೆ. ಪ್ರತಿ ಶನಿವಾರ ಮಾತ್ರ ಈ ರೈಲು ಚಲಿಸಲಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment