ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನಟ ಪ್ರಥಮ್ ನೆರವು

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಅವರ ಕುಟುಂಬಕ್ಕೆ ನಟ, ನಿರ್ದೇಶಕ ಪ್ರಥಮ್ ನೆರವು ಘೋಷಿಸಿದ್ದಾರೆ.  ಈ ಸಂಬಂಧ ಫೇಸ್ ಬುಕ್’ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ. ತಮ್ಮ Olle Hudga Pratham ಫೇಸ್ ಬುಕ್ ಖಾತೆಯ ಮೂಲಕ ನೆರವು ಪ್ರಕಟಿಸಿದ್ದಾರೆ. ಅಲ್ಲದೆ ಎಲ್ಲರು ಹರ್ಷನ ಕುಟುಂಬಕ್ಕೆ ನೆರವಾಗುವಂತೆ ಪ್ರಥಮ್ ಮನವಿ ಮಾಡಿದ್ದಾರೆ.

BREAKING NEWS | ಶಿವಮೊಗ್ಗ ನಗರದ ಶಾಲೆ, ಕಾಲೇಜಿಗೆ ಮತ್ತೊಂದು ದಿನ ರಜೆ

breaking news graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಮತ್ತು ಆನಂತರ ಪ್ರಕ್ಷುಬ್ದ ವಾತಾವರಣದ ಹಿನ್ನೆಲೆ, ಶಿವಮೊಗ್ಗ ನಗರದ ಶಾಲೆ, ಕಾಲೇಜಿಗೆ ಮತ್ತೊಂದು ದಿನ ರಜೆ ಘೋಷಣೆ ಮಾಡಲಾಗಿದೆ. ಫೆ.22ರಂದು ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ | ಹರ್ಷ ಹತ್ಯೆ ಪ್ರಕರಣ, ಮೂವರ ಬಂಧನ, ವಿಚಾರಣೆ ಚುರುಕು

ಶಿವಮೊಗ್ಗ ಆಲ್ಕೊಳದಲ್ಲಿ ಶಾರ್ಟ್ ಸರ್ಕಿಟ್’ನಿಂದ ಪೊಲೀಸ್ ಬಸ್ಸಿಗೆ ಬೆಂಕಿ

Fire at Shimoga alkola

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ವಿದ್ಯುತ್ ಶಾರ್ಟ್ ಸರ್ಕಿಟ್’ನಿಂದಾಗಿ ಪೊಲೀಸ್ ವ್ಯಾನ್ ಒಂದಕ್ಕೆ ಬೆಂಕಿ ತಗುಲಿದ್ದು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಿವಮೊಗ್ಗದ ಆಲ್ಕೊಳದ ಗ್ಯಾರೇಜ್ ಒಂದರಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಮಾಚೇನಹಳ್ಳಿಯ KSRP ಪೊಲೀಸ್ ಪಡೆಗೆ ಸೇರಿದ ವ್ಯಾನ್ ಒಂದನ್ನು ದುರಸ್ಥಿಗೆ ಗ್ಯಾರೇಜ್’ನಲ್ಲಿ ತಂದು ಬಿಡಲಾಗಿತ್ತು. ಶಾರ್ಟ್ ಸರ್ಕಿಟ್’ನಿಂದಾಗಿ ಬಸ್ಸಿಗೆ ಬೆಂಕಿ ತಗುಲಿದೆ. ಬಸ್ಸಿನ ಒಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. … Read more

ಹರ್ಷ ಹತ್ಯೆ ಪ್ರಕರಣ, ಮೂವರ ಬಂಧನ, ವಿಚಾರಣೆ ಚುರುಕು

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹತ್ಯೆ ಮಾಡಿದ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಫೆ.20ರಂದು ರಾತ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಯಿಯಿಂದ ದೂರು ಹರ್ಷನ ಹತ್ಯೆ ಸಂಬಂಧ ಆತನ ತಾಯಿ … Read more

ಬಜರಂಗದಳ ಕಾರ್ಯಕರ್ತ ಹರ್ಷ ಅಂತಿಮ ಸಂಸ್ಕಾರ, ಸಚಿವ, ಸಂಸದರು ಭಾಗಿ

Procession of harsha in Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಅಂತಿಮ ಸಂಸ್ಕಾರ ಶಿವಮೊಗ್ಗದಲ್ಲಿ ನೆರವೇರಿತು. ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನೆರವೇರಿದ ಅಂತ್ಯ ಸಂಸ್ಕಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಿವಮೊಗ್ಗ ನಗರದಲ್ಲಿ ಹರ್ಷನ ಅಂತಿಮ ಯಾತ್ರೆ ನೆರವೇರಿತು. ಸೀಗೆಹಟ್ಟಿಯಲ್ಲಿ ಇರುವ ಹರ್ಷನ ಮನೆಯಿಂದ ಗಾಂಧಿ ಬಜಾರ್ ಮಾರ್ಗವಾಗಿ … Read more

‘ಜಯ ರಾಮ, ಶ್ರೀರಾಮ ಎಂದುಕೊಂಡೆ ಹೋದ, ನಮ್ಮ ಕುಟಂಬಕ್ಕೆ ನ್ಯಾಯ ಬೇಕು’

Home Minister Meets Harsha Family

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಹರ್ಷನನ್ನು ಹತ್ಯೆ ಮಾಡಿದ್ದು ಯಾರು ಅನ್ನುವುದು ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ. ಜಯರಾಮ್ ಶ್ರೀರಾಮ್ ಎಂದು ಹೇಳಿಕೊಂಡೆ ಹೋದ ಎಂದು ಹತ್ಯೆಗೀಡಾದ ಹರ್ಷನ ಸಹೋದರಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿ ಅವರು, ನಾನು ಚಿಕ್ಕಮಗಳೂರಿನಲ್ಲಿ ಇದ್ದೆ. ಫೋನ್ ಮಾಡಿ ನಿನ್ನ ತಮ್ಮನನ್ನು ಹೊಡೆದು ಹಾಕಿದ್ದಾರೆ ಎಂದರು. ವಾಟ್ಸಪ್’ನಲ್ಲಿ ವಿಡಿಯೋ, ಫೋಟೊ ಕಳುಹಿಸಿದರು. ಈಗ ನಾವು … Read more

ಶಿವಮೊಗ್ಗ ನಗರಕ್ಕೆ RAF ಪಡೆ, ಎಲ್ಲೆಲ್ಲೂ ಬಂದೋಬಸ್ತ್

Shimoga city RAF unit visit shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಪಿಡ್ ಆಕ್ಷನ್ ಫೋರ್ಸ್ ಕೂಡ ನಗರಕ್ಕೆ ಆಗಮಿಸಿದೆ. ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರಕ್ಕೆ ಈಗಾಗಲೇ ರಾಪಿಡ್ ಆಕ್ಷನ್ ಫೋರ್ಸ್ (RAF) ತುಕಡಿ ಆಗಮಿಸಿದೆ. ಪ್ರಮುಖ ಸ್ಥಳದಲ್ಲಿ RAF ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ | ಶಿವಮೊಗ್ಗದಲ್ಲಿ ರಾತ್ರಿ ಬೈಕ್ … Read more

ಭದ್ರಾವತಿ ಸಿಟಿಯಲ್ಲಿ ಇವತ್ತಿನಿಂದ ನಿಷೇಧಾಜ್ಞೆ ಜಾರಿ, ಶಾಲೆಗಳಿಗೆ ರಜೆ

Bhadravathi Name Graphics

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 21 ಫೆಬ್ರವರಿ 2022 ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರ ಪ್ರಕ್ಷುಬ್ದಗೊಂಡಿದೆ. ಮುಂಜಾಗ್ರತ ಕ್ರಮವಾಗಿ ಭದ್ರಾವತಿ ಪಟ್ಟಣದಲ್ಲಿಯು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್ ಪ್ರದೀಪ್ ಅವರು ಆದೇಶ ಹೊರಡಿಸಿದ್ದಾರೆ. ಫೆ.21ರ ಬೆಳಗ್ಗೆ 8 ಗಂಟೆಯಿಂದ ಫೆ.22ರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿಜನರು ಗುಂಪುಗೂಡುವಂತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಭದ್ರಾವತಿ ನಗರದಲ್ಲಿಯು ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ದ್ವಿಚಕ್ರ … Read more

‘ಕೊಲೆ ಆರೋಪಿಗಳ ಸುಳಿವು ಪತ್ತೆ, ಸದ್ಯದಲ್ಲೇ ಅರೆಸ್ಟ್’

Aaraga Jnanendra going in car

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಕಳೆದ ರಾತ್ರಿ ನಡೆದ ಹರ್ಷ ಹತ್ಯೆ ಪ್ರಕರಣ ಸಂಬಂಧ ಸುಳಿವು ಸಿಕ್ಕಿದೆ. ಸದ್ಯದಲ್ಲೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ನಡು ಬೀದಿಯಲ್ಲಿ ಒಬ್ಬನ ಕೊಲೆ ಮಾಡಿರುವುದು ನೋವಿನ ಸಂಗತಿ. ಹತ್ಯೆ ಮಾಡಿದವರು ಯಾರು ಅನ್ನುವುದರ ಕುರಿತು ಸುಳಿವು ಸಿಕ್ಕಿದೆ. ಪೊಲೀಸರು ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ತಿಳಿಸಿದರು. ಪ್ರಕರಣ … Read more

ಶಿವಮೊಗ್ಗದಲ್ಲಿ ರಾತ್ರಿ ಬೈಕ್ ಸಂಚಾರ ನಿಷೇಧ, ಅಂಗಡಿಗಳು ಬಂದ್ ಮಾಡಲು ಟೈಮ್ ಫಿಕ್ಸ್

Police Bandobasth at Shimoga city

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಸೀಗೆಹಟ್ಟಿಯ ಯುವಕ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಫೆ.23ರ ರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಫೆ.23ರ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಐದಕ್ಕಿಂತಲೂ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಏನೆಲ್ಲ ನಿಷೇಧವಿರುತ್ತೆ? » ಮೆರವಣಿಗೆ, … Read more