ಅಡಿಕೆ ಧಾರಣೆ | 1 ಆಗಸ್ಟ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ADIKE RATE, 1 AUGUST 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಚಿತ್ರದುರ್ಗ ಮಾರುಕಟ್ಟೆ ಅಪಿ 48100 48509 ಕೆಂಪುಗೋಟು 28719 29199 ಬೆಟ್ಟೆ 34729 35179 ರಾಶಿ 47639 48069 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38500 ವೋಲ್ಡ್ ವೆರೈಟಿ 38500 46500 ಯಲ್ಲಾಪುರ ಮಾರುಕಟ್ಟೆ ಕೆಂಪುಗೋಟು 25969 28366 ಕೋಕ 10000 27306 ಚಾಲಿ 31899 35800 ತಟ್ಟಿಬೆಟ್ಟೆ 34399 43099 … Read more

JOBS – ಕಡೂರು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಉದ್ಯೋಗ, ವಾರ್ಷಿಕ 2 ರಿಂದ 4 ಲಕ್ಷ ರೂ. ಸಂಬಳ

Shimoga-Jobs-General-Image

SHIMOGA JOBS, 1 AUGUST 2024 : ಶ್ರೀರಾಮ್‌ ಜನರಲ್‌ ಇನ್ಷುರೆನ್ಸ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಶಿವಮೊಗ್ಗ, ಕಡೂರು, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ, ಸಾಗರದಲ್ಲಿ ಉದ್ಯೋಗವಕಾಶವಿದೆ. ಅರ್ಹತೆ ಏನು? Experience: 1 Years+ in Insurance Industry (General Insruance) CTC Range: 2 to 4 Lakhs, (Agency Channel) Qualification: Any Degree ಹೆಚ್ಚಿನ ಮಾಹಿತಿಗೆ Girish Jettappa : 9538730280 ಇದನ್ನೂ ಓದಿ ⇓ ನಮ್ಮೂರ … Read more

ಅಪಾಯದ ಸ್ಥಿತಿಯಲ್ಲಿ ಮರಗಳು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಮೀಟಿಂಗ್‌, ಏನೆಲ್ಲ ಸೂಚಿಸಿದರು?

dc-gurudatta-hegde-meeting-in-Shimoga-dc-office

SHIMOGA, 1 AUGUST 2024 : ಅಪಾಯದ ಸ್ಥಿತಿಯಲ್ಲಿರುವ ಮರಗಳ (tree) ರೆಂಬೆ, ಕೊಂಬೆಗಳನ್ನು ಶೀಘ್ರ ತೆರವು ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅರಣ್ಯ ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಬಿರುಗಾಳಿ, ಮಳೆಗೆ ದುರ್ಬಲ ಮರಗಳು ಬಿದ್ದು ಪ್ರಾಣ ಹಾನಿ ಉಂಟಾಗಬಹುದು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ದೈತ್ಯ ಮತ್ತು ದುರ್ಬಲ ಮರಗಳ ಸ್ಥಿತಿ ಗಮನಿಸಿ, ಕೂಡಲೇ ಕ್ರಮ … Read more

ಶಿವಮೊಗ್ಗ ಜಿಲ್ಲೆಯ ವಾಹನ ಸವಾರರೆ ಎಚ್ಚರ, ವಿಡಿಯೋ ಸಂದೇಶ ರಿಲೀಸ್ ಮಾಡಿದ ಎಸ್‌ಪಿ

SP Mithun Kumar

SHIMOGA, 1 AUGUST 2024 : ಅತಿ ವೇಗ, ಅಡ್ಡಾದಿಡ್ಡಿ ವಾಹನ ಚಾಲನೆ, ಕ್ರಮಬದ್ಧವಲ್ಲದ ನಂಬರ್ ಪ್ಲೇಟ್ ಬಳಕೆ ಸೇರಿದಂತೆ ಸಂಚಾರ ನಿಮಯ ಉಲ್ಲಂಘಿಸುವವರ ವಿರುದ್ಧ ಇವತ್ತಿನಿಂದ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ (FINE) ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಆ.1ರಿಂದ ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಬಿಎನ್‌ಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗುತ್ತದೆ. ಶಿವಮೊಗ್ಗ ನಗರದ ವಿವಿಧೆಡೆ ಕ್ಯಾಮರಾಗಳಿವೆ. ಇವುಗಳ ಮೂಲಕ ಸಂಚಾರ … Read more

ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಮೊದಲ ಬಾಗಿನ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

bagina-for-chakra-and-savehaklu.

HOSANAGARA, 1 AUGUST 2024 : ಚಕ್ರಾ, ಸಾವೇಹಕ್ಲು ಜಲಾಶಯಗಳಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ಬಾಗಿನ (Bagina) ಅರ್ಪಿಸಿದರು. ನಾಲ್ಕು ದಶಕದಲ್ಲಿ ಇದೇ ಮೊದಲ ಬಾರಿ ಇವರೆಡು ಜಲಾಶಯಗಳಿಗೆ ಬಾಗಿನ ಅರ್ಪಿಸಲಾಗಿದೆ. ಯಾರೆಲ್ಲ ಏನೇನು ಹೇಳಿದರು?   ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಡಾ. ಧನಂಜಯ ಸರ್ಜಿ, ತಹಶೀಲ್ದಾರ್ ರಶ್ಮೀ ಹಾಲೇಶ್, ವಾರಾಹಿ ಯೋಜನೆ ಕಾಮಗಾರಿ ವಿಭಾಗದ ಪ್ರಭಾರ ಅಧೀಕ್ಷಕ ಎಂಜಿನಿಯರ್ ಪ್ರಕಾಶ ಬ್ರಹ್ಮಾವರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಹೇಶ್ ಬಿ.ಸಿ, … Read more

ಶಿವಮೊಗ್ಗ ಜೈಲಿನ ಸಿಸಿಟಿವಿಯಲ್ಲಿ ಕಾಣಿಸ್ತು ಬಣ್ಣ ಬಣ್ಣ ವಸ್ತು, ದಾಖಲಾಯ್ತು ದೂರು

Shimoga-Central-Jail-Building

SHIMOGA, 1 AUGUST 2024 : ಶಿವಮೊಗ್ಗ ಸೆಂಟ್ರಲ್‌ ಜೈಲಿನಲ್ಲಿ (Jail) ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಜೈಲ್‌ ಆವರಣದ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಕಪ್ಪು, ಹಸಿರು ಮತ್ತು ನೀಲಿ ಬಣ್ಣದ ಗಮ್‌ ಪಟ್ಟಿಯನ್ನು ಸುತ್ತಿರುವ ವಸ್ತು ಪತ್ತೆಯಾಗಿದೆ. ಜೈಲಿನ ಕುಮದ್ವತಿ ವಿಭಾಗದ ಕೊಠಡಿಯೊಂದರ ಹಿಂಭಾಗದಲ್ಲಿ ಗಮ್‌ ಪಟ್ಟಿ ಸುತ್ತಿರುವ ನಾಲ್ಕು ವಸ್ತುಗಳು ಪತ್ತೆಯಾಗಿವೆ. ಸಿಸಿಟಿವಿ ಕರ್ತವ್ಯ ನಿರತ ಸಿಬ್ಬಂದಿ ಈ ವಿಚಾರವನ್ನು ಜೈಲು ಅಡಳಿತ ಮಂಡಳಿಗೆ ತಿಳಿಸಿದ್ದಾರೆ. ಜೈಲು ಸುತ್ತಲು ಕೆಎಸ್‌ಐಎಸ್‌ಎಫ್‌ ಭದ್ರತಾ ಪಡೆ ನಿಯೋಜನೆ … Read more

ಹೊಳೆಹೊನ್ನೂರಿನಲ್ಲಿ ಮನೆಗಳು ಜಲಾವೃತ, ಮಂಗೋಟೆ ಬಳಿ ರಸ್ತೆ ಮೇಲೆ ಹರಿದ ನೀರು, ಎಲ್ಲೆಲ್ಲಿ ಏನೇನಾಗಿದೆ?

flood-at-holehonnuru.

HOLEHONNURU, 1 AUGUST 2024 : ತುಂಗಾ ಮತ್ತು ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಹೊಳೆಹೊನ್ನೂರು ಪಟ್ಟಣದ ವಿವಿಧೆಡೆ ನೀರು ನುಗ್ಗಿ (Flood) ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಶಾಸಕಿ ಶಾರದಾ ಪೂರ್ಯಾನಾಯ್ಕ್‌, ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮಂಗೋಟೆಯಲ್ಲಿ ತೋಟ, ರಸ್ತೆ ಜಲಾವೃತ ಇತ್ತ ಮಂಗೋಟೆ ಗ್ರಾಮದಲ್ಲಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ತೋಟಗಳಿಗೆ ನೀರು ನುಗ್ಗಿದೆ. ನೀರು ಹರಿಯುತ್ತಿದ್ದರಿಂದ ಮಂಗೋಟೆ – … Read more

ಭೂಮಿಯಲ್ಲಿ 200 ಮೀಟರ್‌ನಷ್ಟು ದೂರ ಬಿರುಕು, ಭೂಕುಸಿತದ ಭೀತಿ

landslide-fear-at-aramanekoppa-at-Hosanagara.

HOSANAGARA, 1 AUGUST 2024 : ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್ಲು ಭಾಗದಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಭಾಗದ ಜನರಲ್ಲಿ ಭೂ ಕುಸಿತದ  (Landslide) ಭೀತಿ ಉಂಟಾಗಿದೆ. ಸುಮಾರು 200 ಮೀಟರ್‌ನಷ್ಟು ದೂರದವರೆಗೆ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೆ ಭೂಮಿ ಕುಸಿಯುತ್ತಿದೆ. ಒಂದು ವೇಳೆ ಭೂಮಿ ಕುಸಿತ ಉಂಟಾದರೆ ಈ ಭಾಗದ ಜನರು ತಮ್ಮೂರಿನಿಂದ ಹೊರ ಬರುವುದೇ ಕಷ್ಟವಾಗಲಿದೆ. ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕೂಡಲೆ ಈ ಕುರಿತು ಗಮನ ಹರಿಸಬೇಕು ಎಂದು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆ ಇರುತ್ತಾ? ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

WEATHER REPORT, 1 AUGUST 2024 : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ತುಸು ತಗ್ಗಿದೆ. ವಿವಿಧೆಡೆ ಬಿಸಿಲು ಕಾಣಿಸಿಕೊಂಡಿತ್ತು. ಹಾಗಾಗಿ ತಾಪಮಾನವು ಏರಿಕೆಯಾಗಿದೆ. ಈ ಮಧ್ಯೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಪ್ರಕಟಿಸಿದೆ. ಇವತ್ತು ಶಿವಮೊಗ್ಗ, ಭದ್ರಾವತಿಯಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್‌, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರದಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 24 … Read more