ಶಿವಮೊಗ್ಗದ ರೈತರಿಗೆ ಕೃಷಿ ಇಲಾಖೆಯಿಂದ ಮಹತ್ವದ ಸೂಚನೆ, ಸೆ.14 ಕೊನೆಯ ದಿನಾಂಕ

SHIVAMOGGA-CITY-TALUK-NEWS-

SHIMOGA | ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (KISAN SAMMAN) ಯೋಜನೆಯ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಪಿ.ಎಂ.ಕಿಸಾನ್ ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 14 ಕಡೆಯ ದಿನವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ತಿಳಿಸಿದ್ದಾರೆ. ಇ-ಕೆವೈಸಿ ಯನ್ನು ಮೊಬೈಲ್ ಆಧಾರಿತ ಮತ್ತು ಬಯೋಮಿಟ್ರಿಕ್ ಆಧಾರಿತ ಎರಡು ವಿಧಗಳಲ್ಲಿ ಮಾಡಿಸಬಹುದು. ರೈತರು ತಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್, ಗ್ರಾಮ ಒನ್ ಕೇಂದ್ರ, ರೈತರ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ … Read more

‘ರೈತರ ಪಾಲಿಗೆ ಮರಣ ಶಾಸನವಾಗುತ್ತೆ ಮಸೂದೆ’, ರೈತ ಸಂಘ ಆಕ್ರೋಶ

Raitha-Sanga-HR-Basavarajappa-Led-protest-in-Shimoga

  SHIMOGA | ರೈತರು, ಗ್ರಾಹಕ ವಿರೋಧಿ ವಿದ್ಯುತ್ ತಿದ್ದುಪಡಿ (ELECTRICITY BILL) ಮಸೂದೆಯನ್ನು ಜಾರಿಗೊಳಿಸಬಾರದು, ಅತಿವೃಷ್ಟಿ ಆಗಿರುವ ಹಾನಿಗೆ ಕೂಡಲೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ ವಿದ್ಯುತ್ ತಿದ್ದುಪಡಿ ಮಸೂದೆಯ (ELECTRICITY BILL) … Read more

ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಗೆ 45 ದಿನ ತರಬೇತಿ, ಅರ್ಜಿ ಆಹ್ವಾನ

Shimoga Map Graphics

SHIMOGA | ಐಬಿಪಿಎಸ್ ರಾಷ್ಟ್ರೀಕೃತ ಬ್ಯಾಂಕ್’ಗಳ (IBPS EXAM) ಅಧಿಕಾರಿಗಳು ಮತ್ತು ಗುಮಾಸ್ತರ ಹುದ್ದೆಗಳ ನೇಮಕ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಈ ಹುದ್ದೆಯ ಆಕಾಂಕ್ಷಿಗಳಿಗೆ ತರಬೇತಿ ಆಯೋಜಿಸಲಾಗಿದೆ. 45 ದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (IBPS EXAM) ತರಬೇತಿ ಆಯೋಜಿಸಾಗಿದೆ. ಆಸಕ್ತರು ಸೆ.16ರ ಒಳಗಾಗಿ ಹೆಸರು ನೋಂದಾಯಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಸರನ್ನು ನೋಂದಾಯಿಸಿಕೊಳ್ಳಲು 0821-2515944 / 9964760090 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಪ್ರಭಾರ ಕುಲಸಚಿವರಾದ ಡಾ.ಎ.ಖಾದರ್ … Read more

ಇವತ್ತಿಂದ ಶಿವಮೊಗ್ಗ ನಗರದಿಂದ ಮತ್ತೊಂದು ಹೊಸ ರೈಲು ಸಂಚಾರ ಆರಂಭ

shimoga railway station

SHIMOGA | ನಗರದಿಂದ ಮತ್ತೊಂದು ಹೊಸ ರೈಲು (RAILWAY) ಸಂಚಾರ ಆರಂಭಿಸುತ್ತಿದೆ. ತುಮಕೂರು – ಅರಸೀಕೆರೆ – ತುಮಕೂರು ಡೆಮು ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ. ಅರಸೀಕರೆವರೆಗೂ ಇದ್ದ ರೈಲು ಸೇವೆಯನ್ನು ಶಿವಮೊಗ್ಗದವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. SHIVAMOGGA NANJAPPA HOSPITAL ಸೆ.12ರಿಂದ ಪ್ರತಿದಿನ ಈ ರೈಲು ಶಿವಮೊಗ್ಗ – ತುಮಕೂರು ನಡುವೆ ಸಂಚರಿಸಲಿದೆ. ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಹೊರಡುವ ರೈಲು ಮಧ್ಯಾಹ್ನ 12.50ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. … Read more

ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆಯಲ್ಲಿ ತಪ್ಪಿದ ದುರಂತ, ಆಗಿದ್ದೇನು?

KSRTC-Bus-accident-near-Harige-in-Shimoga.

SHIMOGA | ಶಿವಮೊಗ್ಗ-ಭದ್ರಾವತಿ ರಾಷ್ಟ್ರೀಯ ಹೆದ್ದಾರಿ (HIGHWAY) ನಡುವೆ ಗುಂಡಿ (POT HOLE) ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್‌ವೊಂದು ಡಿವೈಡರ್ ಮೇಲೆ ಹತ್ತಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊಯಮತ್ತೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ಹರಿಗೆ ಬಳಿ ಭಾನುವಾರ ಭಾರಿ ಗಾತ್ರದ ಗುಂಡಿಗೆ ಚಕ್ರಗಳು ಇಳಿದಿವೆ. ಮಳೆಯಿಂದ ಮೇಲೆ ಗುಂಡಿಯಲ್ಲಿ ನೀರು ನಿಂತಿದ್ದರಿಂದ ಆಳ ಅರಿಯದೇ ಚಾಲಕ ಇಳಿಸಿದ್ದು ನಿಯಂತ್ರಣ ಕಳೆದುಕೊಂಡ ಬಸ್‌ನ ಎರಡು ಚಕ್ರಗಳು ಕಿತ್ತು ಹೊರಬಂದಿವೆ. ಬಸ್ ಡಿವೈಡರ್ ಮೇಲೆ ಹತ್ತಿದ್ದು, … Read more

ಅಮೆರಿಕಾದಿಂದ ಐಫೋನ್ ಬರುತ್ತೆ ಅನ್ನೋ ಆಸೆ ಹುಟ್ಟಿಸಿ ಶಿವಮೊಗ್ಗದ ಯುವತಿಗೆ ಪಂಗನಾಮ

Cyber-Crime-in-Shivamogga

SHIMOGA | ಅಮೆರಿಕಾದಿಂದ (AMERICA) ಕಡಿಮೆ ಬೆಲೆಗೆ ಐಫೋನ್ (iphone se) ಖರೀದಿಸಿ ಕೊಡುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ (INSTAGRAM) ನಂಬಿಸಿ, ಶಿವಮೊಗ್ಗದ ವಿದ್ಯಾರ್ಥಿನಿಗೆ 90 ಸಾವಿರ ವಂಚಿಸಲಾಗಿದೆ. ಕಡಿಮೆ ಬೆಲೆಗೆ ಐಫೋನ್ ಲಭ್ಯವಿದೆ ಎಂದು ಇನ್ಸ್ಟಾಗ್ರಾಂನದಲ್ಲಿ ಪ್ರಕಟಿಸಿದ್ದ ಪೋಸ್ಟ್ ಗಮನಿಸಿ ವಿದ್ಯಾರ್ಥಿನಿ ಆತನನ್ನು ಸಂಪರ್ಕಿಸಿದ್ದಾಳೆ. ಮೊಬೈಲ್ ನಂಬರ್ ಮತ್ತು ಅಕೌಂಟ್ ನಂಬರ್ ಕೊಟ್ಟಿದ್ದ ವ್ಯಕ್ತಿ, 90 ಸಾವಿರ ರೂ. ಹಣವನ್ನು ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದ. ಪೋಸ್ಟ್ ಮಾಡಿದವನು ತಿಳಿಸಿದ ಬ್ಯಾಂಕ್ ಖಾತೆಗೆ ವಿದ್ಯಾರ್ಥಿನಿ 47 ಸಾವಿರ ರೂ. … Read more

ಮನೆಗೆ ಹೊರಟಿದ್ದವನ ಪಾಲಿಗೆ ಯಮ ಸ್ವರೂಪಿಯಾಗಿ ಬಂದ ಬೈಕ್, ಓರ್ವ ಸಾವು

crime name image

SHIMOGA | ಎರಡು ಬೈಕುಗಳ ನಡುವೆ ಅಪಘಾತ (BIKE ACCIDENT) ಸಂಭವಿಸಿ ಓರ್ವ ಸವಾರ ಸಾವನ್ನಪ್ಪಿದ್ದಾರೆ. ಗೋಂದಿ ಚಟ್ನಹಳ್ಳಿ (GONDHI CHANTNAHALLI) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗೋಂದಿ ಚಟ್ನಹಳ್ಳಿ ನಿವಾಸಿ ವೆಂಟಕೇಶ್ (44) ಮೃತ ಬೈಕ್ ಸವಾರ. ಸೆ.9ರಂದು ಸಂಜೆ ಹೊಳೆಹನಸವಾಡಿ ಗ್ರಾಮಕ್ಕೆ ಹೋಗಿ ಗೋಂದಿ ಚಟ್ನಹಳ್ಳಿಗೆ ಮರಳಿದ್ದರು. ಗ್ರಾಮದಲ್ಲಿ ಪರಿಚಿತರೊಬ್ಬರ ಮನೆ ಬಳಿಯಿಂದ ತಮ್ಮ ಮನೆಗೆ ತರಳಲು ವೆಂಕಟೇಶ್ ಬೈಕನ್ನ ಬಲಕ್ಕೆ ತಿರುಗಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಂದ ಮತ್ತೊಂದು ಬೈಕು ವೆಂಕಟೇಶ್ ಅವರ ಬೈಕಿಗೆ … Read more

ಕೆಲಸ ಹುಡುಕ್ತಿದ್ದೀರಾ? ಹುಷಾರು, ಯಾಮಾರಿಸುವ ಜಾಲವಿದೆ, ಮಹಿಳೆಗೆ 4 ಲಕ್ಷ ರೂ. ಪಂಗನಾಮ

Online-Fraud-Case-image

SHIMOGA | ಪಾರ್ಟ್ ಟೈಮ್ (PART TIME JOB) ಕೆಲಸದ ಆಮಿಷವೊಡ್ಡಿ, ಇನ್ಫೋಸಿಸ್ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ. ಉದ್ಯೋಗ ಅರಸುವವರನ್ನೆ ಗುರಿಯಾಗಿಸಿಕೊಂಡು ವಂಚಕರು ಜಾಲ ಬೀಸಿದ್ದಾರೆ. ಗೃಹಿಣಿಯೊಬ್ಬರು ಫೇಸ್ ಬುಕ್’ನಲ್ಲಿ (FACEBOOK) ಇನ್ಫೋಸಿಸ್ (INFOSYS) ಸಂಸ್ಥೆಯ ಹೆಸರಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಬಳಿಕ ವಂಚಕರು  (ONLINE FRAUD) ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ, 4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಏನಿದು ಪ್ರಕರಣ? ಹೇಗಾಯ್ತು ವಂಚನೆ? ಫೇಸ್ ಬುಕ್ಕಲ್ಲಿ ಇನ್ಫೋಸಿಸ್ … Read more

ಆನೆಯ ಸಿಟ್ಟು, ಮಾವುತನನ್ನು ಅಟ್ಟಾಡಿಸಿದ ವಿಡಿಯೋ ವೈರಲ್

Elephant-attacking-on-mahut-in-Sakrebyle

SHIMOGA | ಸಕ್ರೆಬೈಲಿನ (SAKREBYLE) ಸಾಕಾನೆಯೊಂದು ಬಿಡಾರದಿಂದ ಕಾಡಿಗೆ ಹೋಗುವಾಗ ತನ್ನ ಮಾವುತನ ಮೇಲೆ ಮುನಿಸಿಕೊಂಡು (ANGRY ELEPHANT), ಬೆನ್ನಿತ್ತಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಘಟನೆ ಸಂಭವಿಸಿದೆ. ಸಕ್ರೆಬೈಲು ಬಿಡಾರದ ಮಣಿಕಂಠ ಆನೆ ತನ್ನ ಮಾವುತ ಖಲೀಲ್ ಅವರ ಮೇಲೆ ದಾಳಿಗೆ ಮುಂದಾಗಿದೆ. ಆನೆಯ ಮುನಿಸಿನ ಬಗ್ಗೆ ತಿಳಿದ ಖಲೀಲ್ ಅವರು ಓಡಲು ಯತ್ನಿಸಿದ್ದಾರೆ. ಆನೆ ಅವರನ್ನು ಬೆನ್ನಟ್ಟಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೋದಲ್ಲಿ ಏನಿದೆ? ಮಣಿಕಂಠ ಆನೆಯನ್ನು(ANGRY ELEPHANT) ಬಿಡಾರದಿಂದ ಕಾಡಿಗೆ … Read more

ಸಿಗಂದೂರು ಲಾಂಚ್ ಅನಿರ್ದಿಷ್ಟಾವಧಿಗೆ ತಡೆದು ಪ್ರತಿಭಟಿಸುವ ಎಚ್ಚರಿಕೆ, ಕಾರಣವೇನು?

Sigandur-Launch-General-Image

SAGARA | ಸಿಗಂದೂರಿಗೆ (SIGANDUR LAUNCH) ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಶರಾವತಿ ಹಿನ್ನೀರು ಭಾಗದಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಲಾಂಚ್’ಗಳ ಸಿಬ್ಬಂದಿಗೆ ಒಂದು ವರ್ಷದಿಂದ ಸಂಬಳ ನೀಡಿಲ್ಲ. ಸರ್ಕಾರದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ತುಮರಿ ಸಮೀಪ ಸಿಗಂದೂರು ಲಾಂಚ್ ಮುಂಭಾಗ ವಿವಿಧ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು. ಒಂದು ವರ್ಷದಿಂದ ವೇತನವಿಲ್ಲ ಶರಾವತಿ ಎಡದಂಡೆಯಲ್ಲಿ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಸೇರಿದಂತೆ ಮುಪ್ಪಾನೆ, ಹಸಿರುಮಕ್ಕಿ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಲಾಂಚ್ … Read more