BREAKING NEWS | ಶಿವಮೊಗ್ಗದಲ್ಲಿ ಮಾ.15ರಂದು ನಡೆಯಬೇಕಿದ್ದ ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿ ಆದೇಶ

breaking news graphics

SHIVAMOGGA LIVE NEWS | 14 ಮಾರ್ಚ್ 2022 ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ಮಾರ್ಚ್ 15ರಂದು ನಡೆಯಲಿರುವ ಕೆಲವು ಪರೀಕ್ಷೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 15ರಂದು ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಿಗದಿಯಾಗಿತ್ತು. ಆ ಪರೀಕ್ಷೆಯನ್ನ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ … Read more

BREAKING | ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ, ಶಾಲೆ, ಕಾಲೇಜಿಗೆ ರಜೆ

Shimoga Dc Dr.selvamani

SHIVAMOGGA LIVE | 14 ಮಾರ್ಚ್ 2022 ಶಾಲೆಯಲ್ಲಿ ಸಮವಸ್ತç ವಿವಾದ ಕುರಿತು ರಾಜ್ಯ ಹೈಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಮಂಗಳವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನದ ಮಟ್ಟಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮನವಿ ಮಾಡಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಮವಸ್ತç ವಿವಾದ ವಿಚಾರವಾಗಿ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕೋರ್ಟ್ … Read more

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರಿಂದ ದಿಢೀರ್ ಪ್ರತಿಭಟನೆ, ಆಡಳಿತ ಮಂಡಳಿ ವಿರುದ್ಧ ಘೋಷಣೆ

Sahyadri-College-Girl-Students-Protest-in-college

SHIVAMOGGA LIVE NEWS | 14 ಮಾರ್ಚ್ 2022 ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿನ ಸಮಸ್ಯೆ ಖಂಡಿಸಿ ಇವತ್ತು ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿನಿಯರು, ತಕ್ಷಣಕ್ಕೆ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು. ಕಳೆದ ವಾರ ಸಹ್ಯಾದ್ರಿ ಕಾಲೇಜಿನ 12 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಹೊಟ್ಟನೋವು, ವಾಂತಿಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲೇಜು ವತಿಯಿಂದ ಆಸ್ಪತ್ರೆಯ ಖರ್ಚು ಭರಿಸಲಾಗಿತ್ತು. ಈಗ ಹಣ ಹಿಂತಿರುಗಿಸುವಂತೆ ತಿಳಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು. … Read more

ಹಾಳು ಕೊಂಪೆಯಾಗಿದ್ದ ಬಸ್ ಸ್ಟಾಪ್’ಗೆ ಹೊಸ ರೂಪ ನೀಡಿದ ಯುವಕರು

Bus-Stop-Cleaned-by-ARMY-Club-Anandapuram

SHIVAMOGGA LIVE NEWS | 14 ಮಾರ್ಚ್ 2022 ಯುವಕರ ತಂಡವೊಂದು ಊರಿನ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿದ್ದಾರೆ. ಕಳೆಗಿಡಗಳನ್ನು ಸ್ವಚ್ಛಗೊಳಿಸಿ, ಬಸ್ ತಂಗುದಾಣಕ್ಕೆ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಿದ್ದಾರೆ. ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ ಯಡೆಹಳ್ಳಿಯ ಗೇರುಬಿಸು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಬಸ್ ತಂಗುದಾಣ ಹಾಳು ಕೊಂಪೆಯಾಗಿತ್ತು. ಪಂಚಾಯಿತಿ ವತಿಯಿಂದ ನಿರ್ಮಾಣವಾಗಿದ್ದ ತುಂಗುದಾಣದಲ್ಲಿ ನಿಲ್ಲಲು ಜನ ಹೆದರುವಂತಿತ್ತು. ಭಾನುವಾರದ ಶ್ರಮದಾನ ARMY ಕ್ಲಬ್ ವತಿಯಿಂದ ಯುವಕರ ತಂಡ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದೆ. ಭಾನುವಾರ … Read more

ಲಾರಿ ಕದ್ದವನು ಸಾಗರ ಪೊಲೀಸರ ಕೈಗೆ ಸಿಕ್ಕಿಬಿದ್ದ

Lorry-Theft-Near-Anandapura-in-Sagara

SHIVAMOGGA LIVE NEWS | 14 ಮಾರ್ಚ್ 2022 ಲಾರಿ ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕರಿಬಸಪ್ಪ ಅಲಿಯಾಸ್ ಕರಿಯ (32) ಎಂಬಾತ ಬಂಧಿತ. ಮಾರ್ಚ್ 3ರಂದು ಸಾಗರ ತಾಲೂಕಿನ ದಾಸಕೊಪ್ಪ ಗ್ರಾಮದಲ್ಲಿಲಾರಿ ಕದ್ದು ಪರಾರಿಯಾಗಿದ್ದ. ಲಾರಿ ಕಳ್ಳತನ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು, ಕರಿಬಸಪ್ಪನನ್ನು ಬಂಧಿಸಿದ್ದಾರೆ. 7.50 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಠಾಣೆ … Read more

ಧಗಧಗ ಉರಿದ ದಿನಸಿ ಅಂಗಡಿ, ಕಿಡಿಗೇಡಿಗಳಿಂದ ಬೆಂಕಿ ಶಂಕೆ

crime name image

SHIVAMOGGA LIVE NEWS | 14 ಮಾರ್ಚ್ 2022 ದಿನಸಿ ಅಂಗಡಿಯಲ್ಲಿಬೆಂಕಿ ಕಾಣಿಸಿಕೊಂಡು ವಸ್ತುಗಳೆಲ್ಲ ಸುಟ್ಟು ಕರಕಲಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿಯ ಗುಂಜನೂರಿನಲ್ಲಿ ಘಟನೆ ಸಂಭವಿಸಿದೆ. ಕಾಳಪ್ಪ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಳಪ್ಪ ಅವರ ಮನೆಗೆ ಹೊಂದಿಕೊಂಡ ಹಾಗೆ ಅಂಗಡಿ ಇದೆ. ಭಾನುವಾರ ಕಾಳಪ್ಪ ಅವರ ಕುಟುಂಬದವರು ಸಂಬಂಧಿಯ ಮನೆಗೆ ತೆರಳಿದ್ದರು. ಆಗ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ … Read more

‘ಯಡಿಯೂರಪ್ಪ ತಂದ ಕಾನೂನಿಂದ ರೈತರಿಗೆ ಸಂಕಷ್ಟ, ಸಂಸದರಿಗೆ ಇತಿಹಾಸ ಗೊತ್ತಿಲ್ಲ’, ಮಧು ಬಂಗಾರಪ್ಪ ಆಕ್ರೋಶ

Madhu-Bangarappa-General-Image1

SHIVAMOGGA LIVE NEWS | 13 ಮಾರ್ಚ್ 2022 ಅರಣ್ಯ ಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಡಬಲ್ ಇಂಜಿನ್ ಸರ್ಕಾರಗಳು ಮಾಡುತ್ತಿವೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 25 ಸಾವಿರ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ರೈತರಿಗೆ ನೋಟಿಸ್ ಕೊಟ್ಟು ಕೋರ್ಟಿಗೆ ಅಲೆಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಸೊರಬ ತಾಲೂಕಿನಲ್ಲಿ 11 ಸಾವಿರ ರೈತರಿಗೆ ಸಮಸ್ಯೆಯಾಗಿದೆ. ರೈತರು ಬೇಲ್ ತೆಗೆದುಕೊಳ್ಳುವ ಪರಿಸ್ಥಿತಿಯನ್ನು ಸರ್ಕಾರ … Read more

‘ಉಕ್ರೇನ್’ನಿಂದ ಮರಳಿದವರ ವಿದ್ಯಭ್ಯಾಸಕ್ಕೆ ಶಿವಮೊಗ್ಗದ ಶರಾವತಿ ಡೆಂಟಲ್ ಕಾಲೇಜಿನಲ್ಲಿ ಅನುಕೂಲ’

Madhu-Bangarappa-General-Image

SHIVAMOGGA LIVE NEWS | 13 ಮಾರ್ಚ್ 2022 ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಮೆಡಿಕಲ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ಮರಳಿರುವವರ ಮುಂದಿನ ಶಿಕ್ಷಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಯುದ್ದದ ಕಾರಣ ರಾಜ್ಯದ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ. ಅವರ ಮೆಡಿಕಲ್ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು. ಈ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು. ತಮ್ಮ ಕಾಲೇಜಿನಿಂದಲೂ ನೆರವು ಇನ್ನು, ಈ ಕುರಿತು … Read more

ಮಲವಗೊಪ್ಪ ಸಮೀಪ ಜಮೀನಿನಲ್ಲಿ ನಿತ್ರಾಣಗೊಂಡಿದ್ದ ನವಿಲು ರಕ್ಷಣೆ

Pecock-rescued-in-Malavagoppa-Shimoga.

SHIVAMOGGA LIVE NEWS | 13 ಮಾರ್ಚ್ 2022 ಕಾಲಿಗೆ ಗಾಯವಾಗಿ, ನಿತ್ರಾಣಗೊಂಡಿದ್ದ ನವಿಲೊಂದನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಕೊಟ್ಟು, ರಕ್ಷಣೆ ಮಾಡಿದ್ದಾರೆ. ಮಲವಗೊಪ್ಪದ ಕಾಂತರಾಜು ಎಂಬುವವರ ತೋಟದ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ನವಿಲು ಸಿಕ್ಕಿದೆ. ಸ್ಥಳೀಯರು ನೀಡಿದ ಮಾಹಿತಿ ಅಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನವಿಲಿಗೆ ಚಿಕಿತ್ಸೆ ನೀಡಿದ್ದಾರೆ. ಕಾಲಿಗೆ ಗಾಯವಾಗಿದ್ದರಿಂದ ನಿತ್ರಾಣಗೊಂಡಿತ್ತು ಎಂದು ತಿಳಿದು ಬಂದಿದೆ. ಮಲವಗೊಪ್ಪ ಸಮೀಪ ಮೇಯಲು ಬಂದಾಗ ಕಾಲಿಗೆ ಗಾಯವಾಗಿರುವ ಸಾದ್ಯತೆ … Read more

ಮುಕ್ತ ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

shivamogga graphics map

SHIVAMOGGA LIVE NEWS | 13 ಮಾರ್ಚ್ 2022 ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ.ಜಿ.ಡಿಪ್ಲೋಮಾ ಕೋರ್ಸ್’ಗಳ ಪ್ರವೇಶಾತಿ ಪ್ರಾರಂಭವಾಗಿದೆ. ಬಿಎ, ಬಿ.ಕಾಂ, ಬಿ.ಎಸ್ಸಿ, ಬಿ.ಎಲ್, ಐಎಸ್ಸಿ ಪದವಿ ಹಾಗೂ ಎಂ.ಎ, ಎಂ.ಕಾಂ, ಎಂ.ಎಲ್, ಐಎಸ್ಸಿ ಮತ್ತು ಎಂ.ಎಸ್ಸಿ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ.ಡಿಪ್ಲೊಮಾ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶಾತಿ ಪಡೆಯಲು ಮಾ.31 ಕೆಡೆಯ ದಿನವಾಗಿದೆ. ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಭರ್ತಿ … Read more