ಲೋಕಾಯುಕ್ತ ದಾಳಿ, ₹30 ಸಾವಿರ ಲಂಚದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸೆಕ್ಷನ್ ಆಫೀಸರ್
ಶಿಕಾರಿಪುರ: ಗುತ್ತಿಗೆದಾರನಿಗೆ ಬಿಲ್ ಪಾವತಿಸಲು ಬಿಲ್ ಮೊತ್ತದ ಶೇ.3ರಷ್ಟು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್.ಹೆಚ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Raid) ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಲಿಂಗರಾಜ್ ಶಿವಪ್ಪ ಉಳ್ಳಾಗಡ್ಡಿ ಎಂಬುವವರು ಸೊರಬ ತಾಲೂಕಿನ ವಿವಿಧ ರಸ್ತೆ, ಶಾಲೆ ಕಾಮಗಾರಿ ನಡೆಸಿದ್ದರು. ಇದರ ಬಿಲ್ ಮೊತ್ತ ₹77.59 ಲಕ್ಷ ಪಾವತಿಗೆ ಬಾಕಿ ಇತ್ತು. ಬಿಲ್ ಪಾವತಿಗೆ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ್.ಹೆಚ್ … Read more