ಮಹಿಳೆ ಜೊತೆಗಿನ ಸಲುಗೆ ತಂದ ಆಪತ್ತು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಸಾವು

crime name image

SHIVAMOGGA LIVE NEWS | 2 ಮಾರ್ಚ್ 2022 ಹೊಸಮನೆ ಬಡಾವಣೆಯಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುನಾಥ್ (46) ಹೊಸಮನೆ ಬಡಾವಣೆಯ 5ನೇ ತಿರುವಿನ ಮನೆಯೊಂದರ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಕೂಡಲೆ ಸ್ಥಳೀಯರು ಬೆಂಕಿ ನಂದಿಸಿ ಮಂಜುನಾಥ್ ಅವರ ರಕ್ಷಿಸಿದ್ದರು. ಇದನ್ನೂ ಓದಿ | ಹೊಸಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ವ್ಯಕ್ತಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ … Read more

ತೀರ್ಥಹಳ್ಳಿಯಲ್ಲಿ ಬೈಕ್ ಅಪಘಾತ, ಗಂಭೀರ ಗಾಯಗೊಂಡಿದ್ದ ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವು

crime name image

SHIVAMOGGA LIVE NEWS | 2 ಮಾರ್ಚ್ 2022 ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯೊಬ್ಬರು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಆರಗದ ಹೊಂಡ ಕೆರೆಯ ಬಸ್ತಿ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ಅಶೋಕ್ ಮತ್ತು ಅವರ ಪತ್ನಿ ಶೃತಿ ಅವರು ಸಂಬಂಧಿಯ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಕಾರು ಬಂದಿದ್ದು, ಅಶೋಕ ಅವರು ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿದೆ. ರಸ್ತೆ ಪಕ್ಕದ ಗುಂಡಿಗೆ ಬಿದ್ದು ಶೃತಿ ಅವರ ತಲೆ ಭಾಗಕ್ಕೆ ಪೆಟ್ಟು ಬಿದ್ದಿದೆ. … Read more

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಹುಟ್ಟುಹಬ್ಬ, 3 ಪ್ರಮುಖ ನಿರ್ಧಾರ ಪ್ರಕಟ

Madhu-Bangarappa-Birthday-at-Shimoga

SHIVAMOGGA LIVE NEWS | 2 ಮಾರ್ಚ್ 2022 ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಇವತ್ತು ಶಿವಮೊಗ್ಗದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಮಧು ಬಂಗಾರಪ್ಪ ಅವರಿಗೆ ಶುಭ ಹಾರೈಸಿದರು. ಈ ವೇಳೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಗುರಿ ಎಂದು ಅವರು ತಿಳಿಸಿದರು. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಇರುವ ತಮ್ಮ ಮನೆಯಲ್ಲಿ ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಿಸಿಕೊಂಡರು. ಪಕ್ಷದ ಪ್ರಮುಖರು, ಅಭಿಮಾನಿಗಳು, ಬೆಂಬಲಿಗರು ಮಧು ಬಂಗಾರಪ್ಪ ಅವರಿಗೆ ಶುಭ ಹಾರೈಸಿದರು. … Read more

ಇವತ್ತಿನ ಅಡಕೆ ಧಾರಣೆ | 2 ಮಾರ್ಚ್ 2022

Areca Price in Shimoga APMC

SHIVAMOGGA LIVE NEWS | 2 ಮಾರ್ಚ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17060 33798 ಬೆಟ್ಟೆ 47400 51899 ರಾಶಿ 42099 45809 ಸರಕು 52009 75299 ಸಾಗರ ಮಾರುಕಟ್ಟೆ ಕೆಂಪುಗೋಟು 30899 36492 ಕೋಕ 27221 31809 ಚಾಲಿ 32699 36889 ಬಿಳೆ ಗೋಟು 23129 29144 ರಾಶಿ 36786 45429 ಸಿಪ್ಪೆಗೋಟು 14881 18569 ಸಿದ್ದಾಪುರ ಮಾರುಕಟ್ಟೆ ಕೆಂಪುಗೋಟು 28869 32689 ಕೋಕ 19880 … Read more

ಸುಳ್ಳು ದಾಖಲೆ ನೀಡಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ, ತಹಶೀಲ್ದಾರ್ ಸೇರಿ ನಾಲ್ವರ ವಿರುದ್ಧ ಕೇಸ್

soraba map graphics

SHIVAMOGGA LIVE NEWS | 2 ಮಾರ್ಚ್ 2022 ಪರಿಶಿಷ್ಟ ಜಾತಿಗೆ ಸೇರದಿದ್ದರೂ ಸುಳ್ಳು ಮಾಹಿತಿ ಒದಗಿಸಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣದ ದಾಖಲಾಗಿದೆ. ಆತನಿಗೆ ಸಹಕರಿಸಿದ ಆರೋಪದ ಹಿನ್ನೆಲೆ ಅಂದಿನ ಗ್ರಾಮ ಲೆಕ್ಕಿಗ, ರೆವಿನ್ಯೂ ಇನ್ಸ್ ಪೆಕ್ಟರ್ ಮತ್ತು ಸೊರಬ ತಹಶೀಲ್ದಾರ್ ವಿರುದ್ಧವು ಕೇಸ್ ದಾಖಲಾಗಿದೆ. ಸೊರಬದ ಷಣ್ಮುಖ ಎಂಬುವವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಆ ವರ್ಗಕ್ಕೆ ಸೇರದಿದ್ದರೂ ಸುಳ್ಳು ಪ್ರಮಾಣ ಪತ್ರ ಹೊಂದಿದ್ದ ಸಂಬಂಧ … Read more

ಹರ್ಷ ಹತ್ಯೆ ಕೇಸ್ ತನಿಖೆಗೆ ಬೆಂಗಳೂರಿನಿಂದ ಬಂತು ಟೀಮ್, ಕಾರಣವೇನು?

Bajarangadal Worker Harsha Murdered

SHIVAMOGGA LIVE NEWS | 2 ಮಾರ್ಚ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರ ಜತೆಗೆ ಬೆಂಗಳೂರಿನ ವಿಶೇಷ ತನಿಖಾ ತಂಡ ಕೈಜೋಡಿಸಿದೆ. ಇದುವರೆಗೆ ಶಿವಮೊಗ್ಗ ಪೊಲೀಸರು ಮಾತ್ರ ತನಿಖೆ ನಡೆಸುತ್ತಿದ್ದರು. ಈ ಹಿಂದೆ ಎನ್ಐಎ ತನಿಖೆ ಮಾಡಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದರು. ಅದರ ಹೊರತಾಗಿ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆ ಇದೀಗ ಬೆಂಗಳೂರು ತಂಡವು ಶಿವಮೊಗ್ಗ ತಂಡದ ಜತೆ ತನಿಖೆ ಆರಂಭಿಸಿದೆ. ಈಗಾಗಲೇ 10 ಆರೋಪಿಗಳನ್ನು ಬಂಧಿಸಿರುವ ಶಿವಮೊಗ್ಗ ಪೊಲೀಸರಿಗೆ … Read more

ರೈಲ್ವೆ ಗೇಟ್ ತೆಗೆಯುವಂತೆ ಮಹಿಳಾ ಸಿಬ್ಬಂದಿಗೆ ಬೆದರಿಕೆ, ಬೈಕ್’ಗೆ ಬೆಂಕಿ

Train engine and boggies

SHIVAMOGGA LIVE NEWS | 2 ಮಾರ್ಚ್ 2022 ರೈಲ್ವೆ ಗೇಟ್ ತೆಗೆಯುವಂತೆ ರೈಲ್ವೆ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. ಅಲ್ಲದೆ ಅವರ ಬೈಕಿಗೆ ಬೆಂಕಿ ಹಚ್ಚಲಾಗಿದೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.   ಯಡೇಹಳ್ಳಿ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ರೈಲು ಬರುವ ಸಂದರ್ಭ ಗೇಟ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಗೇಟ್ ಹಾಕಿದ್ದಾರೆ. ಆಗ ಬಂದ ಗಿರೀಶ್, ಬಾಲಿ, ಇಲಿಯಾಸ್, ರಫಿ ಮತ್ತಿತರರು ಗೇಟ್ ತೆಗೆಯುವಂತೆ ತಿಳಿಸಿದ್ದಾರೆ. ಮಹಿಳಾ … Read more

ಪೆಟ್ರೋಲ್ ವಿಚಾರವಾಗಿ ಇಬ್ಬರ ನಡುವೆ ಹೊಡೆದಾಟ, ಕೊಲೆ ಬೆದರಿಕೆ

crime name image

SHIVAMOGGA LIVE NEWS | 2 ಮಾರ್ಚ್ 2022 ಬೈಕಿನಿಂದ ಪೆಟ್ರೋಲ್ ತೆಗೆದುಕೊಂಡ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿಗೆ ಬೆಳೆದು, ಹೊಡೆದಾಟವಾಗಿದೆ. ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ. ಸಾಗರ ತಾಲೂಕು ನೇರಲಗಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಅಣ್ಣಪ್ಪ ಅವರ ಬೈಕಿನಿಂದ ಗಣಪತಿ ಎಂಬುವವರು ಪೆಟ್ರೋಲ್ ತೆಗೆದುಕೊಂಡಿದ್ದರು. ಈ ಕುರಿತು ಅಣ್ಣಪ್ಪ ಅವರ ಸೊಸೆಗೆ ತಿಳಿಸಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅಣ್ಣಪ್ಪ ಅವರು ಮನೆಗೆ ಬಂದಾಘ ಬೈಕಿನಲ್ಲಿ ಪೂರ್ಣ ಪೆಟ್ರೋಲ್ ಖಾಲಿಯಾಗಿತ್ತು. ಈ ಸಂಬಂಧ ಗಣಪತಿ … Read more

ತ್ಯಾಗರ್ತಿ ಮಾರ್ಗವಾಗಿ ಆನಂದಪುರಕ್ಕೆ ತೆರಳುತ್ತಿದ್ದ ಬೈಕ್’ಗೆ ವಾಹನ ಡಿಕ್ಕಿ

sagara graphics

SHIVAMOGGA LIVE NEWS | 2 ಮಾರ್ಚ್ 2022 ಬೈಕ್’ನಲ್ಲಿ ತೆರಳುತ್ತಿದ್ದವರೆಗೆ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಲ್ಲುಕೊಪ್ಪ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಶಿವರಾಜ್ ಮತ್ತು ಮಹೇಂದ್ರ ಅವರು ಗಾಯಗೊಂಡಿದ್ದಾರೆ. ಸೊರಬದ ಬೆಲವಂತಕೊಪ್ಪದಿಂದ ತ್ಯಾಗರ್ತಿ ಮಾರ್ಗವಾಗಿ ಆನಂದಪುರದ ಕಡೆಗೆ ತರಳುತ್ತಿದ್ದಾಗ ಎದುರಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಶಿವರಾಜ್ ಮತ್ತು ಮಹೇಂದ್ರ ಗಾಯಗೊಂಡಿದ್ದು, ಸ್ಥಳೀಯರು, ಇತರೆ ವಾಹನ ಸವಾರರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ರಾತ್ರಿ ಘಟನೆ … Read more

ರಸ್ತೆ ಪಕ್ಕ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ, ಗಾಯ

Sagara Police Station Building

SHIVAMOGGA LIVE NEWS | 2 ಮಾರ್ಚ್ 2022 ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಸಿದ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಕರಣ ದಾಖಲಾಗಿದೆ. ಸಾಗರದ ಸುಭಾಷ್ ನಗರದ ಚಾಂಪ್ಲಾನಾಯ್ಕ ಅವರು ಕೆಲಸದ ನಿಮಿತ್ತ ಪಟ್ಟಣಕ್ಕೆ ತೆರಳಿದ್ದರು. ರಸ್ತೆ ಪಕ್ಕದಲ್ಲಿ ನಡೆದುಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಕೆಳದಿ ಸರ್ಕಲ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಸವಾರ ಚಾಂಪ್ಲಾನಾಯ್ಕ ಅವರಿಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ಚಾಂಪ್ಲಾನಾಯ್ಕ ಅವರ ಹಣೆ, ಕಣ್ಣಿನ ಭಾಗ, ಮೂಗು, ಎಡ … Read more