ಸಿಬಿಐ ದಾಳಿಗೆ ಖಂಡನೆ, ಶಿವಮೊಗ್ಗದಲ್ಲಿ ಮೆರವಣಿಗೆ, ಕೇಂದ್ರದ ವಿರುದ್ಧ ಪ್ರತಿಭಟನೆ

Congress-Protest-in-Shimoga-against-CBI-Raid

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ  (cbi raid) ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಕಚೇರಿಯಿಂದ ಮಹಾವೀರ ಸರ್ಕಲ್ ವರೆಗೆ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಇದೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಬಿಜೆಪಿ ಮತ್ತು … Read more

ಅಡಕೆ ಕಾರ್ಯಪಡೆ ಅಧ್ಯಕ್ಷರು ಬರುವ ತನಕ ಉಪವಾಸ ಸತ್ಯಾಗ್ರಹ

Protest-against-Foreign-adike-in-Shimoga-by-AAP

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ವಿದೇಶದಿಂದ ಅಡಕೆ (foreign adike) ಆಮದು ತಡೆಗೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ನಾಯಕಿ ನೇತ್ರಾವತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಎರಡನೆ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೇತ್ರಾವತಿ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿ 24 ಗಂಟೆ ಕಳೆದಿದೆ. ಈತನಕ ಯಾರೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿಲ್ಲ ಎಂದು … Read more

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಪರಿಷ್ಕರಣೆ, ಗೃಹ ಬಳಕೆಗೆ ಎಷ್ಟು? ಇತರೆ ಸಂಪರ್ಕಕ್ಕೆಷ್ಟು ದರ?

Water Tap image

SHIVAMOGGA LIVE NEWS |  20 DECEMBER 2022 ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ದರವನ್ನು (water tax) ಪರಿಷ್ಕರಿಸಲಾಗಿದೆ. ಈಗಾಗಲೆ ನೀರಿನ ಕಂದಾಯ ಪಾವತಿ ಮಾಡಿರುವವರು ವ್ಯತ್ಯಾಸದ ಮೊತ್ತವನ್ನು ಕಟ್ಟಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆ ಸರ್ಕಾರ ಮತ್ತು ಪಾಲಿಕೆ ನಿರ್ದೇಶನದಂತೆ ದರ (water tax) ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. … Read more

ದಿಢೀರ್ ಒತ್ತುವರಿ ತೆರವು ಆರೋಪ, ವಿಷ ಕುಡಿದು ಮಹಿಳೆ ಅಸ್ವಸ್ಥ

SHIVAMOGGA-CITY-TALUK-NEWS-

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ನೊಟೀಸ್ ನೀಡದೆ ಒತ್ತುವರಿ ತೆರವು ಮಾಡಲು ಮುಂದಾಗಿದ್ದರಿಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (suicide attempt) ಯತ್ನಿಸಿದ್ದಾರೆ. ಆಕ್ರೋಶಗೊಂಡ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿದರು. ಇವೆಲ್ಲದರ ನಡುವೆ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಚೋರಡಿ ಗ್ರಾಮದಲ್ಲಿ ಗ್ರಾಮ ಠಾಣಾ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಸೋಮವಾರ ಒತ್ತುವರಿ ತೆರವಿಗೆ ಮುಂದಾಗಿದೆ. ಜೆಸಿಬಿ ಮೂಲಕ … Read more

ಬೆಡ್ ರೂಂ ಚೇರ್ ಮೇಲಿಟ್ಟಿದ್ದ ಮಾಂಗಲ್ಯ ಸರ ಮಾಯ, ಒಬ್ಬನ ಮೇಲೆ ಅನುಮಾನ, ಗೃಹಿಣಿ ದೂರು

theft case general image

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ಬೆಡ್ ರೂಂನ ಚೇರ್ ಮೇಲೆ ಇಟ್ಟಿದ್ದ ಮಾಂಗಲ್ಯ (mangalya missing) ಸರ ಕಳ್ಳತನವಾಗಿದೆ. ಟೈಲ್ಸ್ ಕೆಲಸಕ್ಕೆ ಬಂದಿದ್ದ ವ್ಯಕ್ತಿಯೆ ಕೃತ್ಯ ಎಸಗಿರಬೇಕು ಎಂದು ಶಂಕಿಸಿ ಗೃಹಿಣಿಯೊಬ್ಬರು ದೂರು ನೀಡಿದ್ದಾರೆ. ತುಂಗಾ ನಗರದ ಲತಾ ಎಂಬುವವರ ಮಾಂಗಲ್ಯ ಸರ (mangalya missing) ನಾಪತ್ತೆಯಾಗಿದೆ. ಮಾಂಗಲ್ಯ ಸರದ ತಂತಿ ತುಂಡಾಗುವ ಸಾದ್ಯತೆ ಇತ್ತು. ಹಾಗಾಗಿ ಲತಾ ಅವರು ಬೆಡ್ ರೂಮಿನಲ್ಲಿದ್ದ ಚೇರ್ ಮೇಲೆ ಅದನ್ನು ತೆಗೆದಿಟ್ಟಿದ್ದರು. ಮನೆಯ … Read more

ಟಿಪ್ಪು ನಗರದ ಮನೆ ಮೇಲೆ ತುಂಗಾ ನಗರ ಪೊಲೀಸರ ದಾಳಿ, ಮನೆಯಲ್ಲಿದ್ದವರು ಪರಾರಿ, ದಾಳಿಗೇನು ಕಾರಣ?

Police-General-Image

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ಖಚಿತ ಮಾಹಿತಿ ಮೇರೆಗೆ ಟಿಪ್ಪು ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, 40 ಕೆ.ಜಿ ದನದ ಮಾಂಸ (raid of beef) ವಶಕ್ಕೆ ಪಡೆದಿದ್ದಾರೆ. ಟಿಪ್ಪು ನಗರದ ಶಾಮೀರ್ ಖಾನ್ ಎಂಬುವವರ ಮನೆಯಲ್ಲಿ ಗೋವುಗಳ ವಧೆ ಮಾಡಿ, ಮಾಂಸ (raid of beef) ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ತುಂಗಾ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. … Read more

ಕಾರು ಪಡೆದು 4 ತಿಂಗಳಾದ್ರು ವಾಪಸ್ ಕೊಡದ ಸ್ನೇಹಿತನ ಪುತ್ರ, ಮನೆ ಬಳಿ ಹೋದಾಗ ಮಾಲೀಕನಿಗೆ ಶಾಕ್

crime name image

SHIVAMOGGA LIVE NEWS | 20 DECEMBER 2022 ಶಿವಮೊಗ್ಗ : ತುರ್ತು ಕೆಲಸಕ್ಕೆ ಅಗತ್ಯವಿದೆ ಎಂದು ಕೃಷಿಕರೊಬ್ಬರಿಂದ ಕಾರು (car missing) ಪಡೆದು ನಾಲ್ಕು ತಿಂಗಳಾದರು ಹಿಂತಿರುಗಿಸದೆ ವಂಚಿಸಲಾಗಿದೆ. ಈ ಸಂಬಂಧ ಸ್ನೇಹಿತನ ಮಗನ ವಿರುದ್ಧ ಆ ಕೃಷಿಕ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬಸವನಗೌಡ ಎಂಬುವವರು ತಮ್ಮ ಸ್ನೇಹಿತನ ಮಗ ರೋಹಿತ್ ಐಯ್ಯಂಗಾರ್ ಎಂಬುವವರಿಗೆ ವ್ಯಾಗನಾರ್ ಕಾರು ಕೊಟ್ಟಿದ್ದರು. (car missing) ಏನಿದು ಪ್ರಕರಣ? ರೋಹಿತ್ ಅಯ್ಯಂಗಾರ್ ಅವರ ತಂದೆ ಮತ್ತು ಬಸವನಗೌಡ ಅವರು ಸ್ನೇಹಿತರು. … Read more