ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಐವರು ಅರೆಸ್ಟ್‌, ಏನೇನೆಲ್ಲ ಸಿಕ್ತು?

Areca-theft-case-five-arrested

SHIVAMOGGA LIVE NEWS | 27 MAY 2024 SHIMOGA : ಜಿಲ್ಲೆಯ ವಿವಿಧೆಡೆ ಅಡಿಕೆ ಬೆಳೆಗಾರರಲ್ಲಿ (Growers) ಆತಂಕ ಸೃಷ್ಟಿಸಿದ್ದ ಖದೀಮರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾತ್ರೋರಾತ್ರಿ ಕ್ವಿಂಟಾಲ್‌ಗಟ್ಟೆಲೆ ಅಡಿಕೆ ಕಳ್ಳತನ ಮಾಡಿ, ಬೆಳೆಗಾರರ ನಿದ್ರೆ ಕಸಿದಿದ್ದ ಐವರನ್ನು ಬಂಧಿಸಲಾಗಿದೆ. ಇವರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌, ಸೊರಬ ಠಾಣೆಗಳ ಒಟ್ಟು 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. … Read more

‘ಕುರಾನ್‌ ಸಂದೇಶವನ್ನು ತಪ್ಪು ತಪ್ಪಾಗಿ ಅರ್ಥೈಸಿದ ಆ ಸಿನಿಮಾ ಬಿಡುಗಡೆ ಮಾಡಬಾರದುʼ

Maulana-Abdul-raza-in-Shimoga

SHIVAMOGGA LIVE NEWS | 27 MAY 2024 SHIMOGA : ‘ಹಮ್ ದೋ ಹಮಾರೆ ಭಾರಾ’ ಹಿಂದಿ ಸಿನಿಮಾದಲ್ಲಿ ಕುರಾನ್ ಶರೀಫ್‌ನ ಸಂದೇಶಗಳನ್ನು ತಪ್ಪು ಅರ್ಥ ಬರುವಂತೆ ಚಿತ್ರೀಕರಿಸಲಾಗಿದೆ. ಈ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಗಾಂಧಿ ಬಜಾರ್‌ನ ಸುನ್ನಿ ಜಾಮಿಯ ಮಸೀದಿಯ ಮೌಲ್ವಿ ಹಜರತ್ ಮೌಲಾನಾ ಅಬ್ದುಲ್ ರಝಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಜನರಿಗೆ ಮನರಂಜನೆ ಮತ್ತು ಉತ್ತಮ ಸಂದೇಶ ನೀಡುವುದಿಲ್ಲ. ಇದು ಒಂದು ಸಮುದಾಯದ ವಿರುದ್ಧ ತಪ್ಪು ಸಂದೇಶ … Read more

ಕೋಡೂರಿನಲ್ಲಿ ಮದುವೆ ಮುಗಿಸಿ ಮನೆಗೆ ಮರಳಿದ ಕುಟುಂಬಕ್ಕೆ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 27 MAY 2024 RIPPONPETE : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ (KEY) ಮುರಿದು ಹಣ ಕಳ್ಳತನ ಮಾಡಲಾಗಿದೆ. ರಿಪ್ಪನ್‌ಪೇಟೆ ಸಮೀಪದ ಕೋಡೂರು ಗ್ರಾಮದ ಫಯಾಜ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಫಯಾಜ್‌ ಅವರ ಕುಟುಂಬದವರು ಅಂಬ್ಲಿಗೊಳ್ಳದಲ್ಲಿ ಸಂಬಂಧಿಯ ಮದುವೆಗೆ ತೆರಳಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಸರ್ಕಾರಿ ಅಧಿಕಾರಿ ನೇಣಿಗೆ ಶರಣು, ಡೆತ್‌ ನೋಟ್‌ನಲ್ಲಿತ್ತು ಮೂವರ ಹೆಸರು ಕಳ್ಳರು ಮನೆ ಬಾಗಿಲಿನ ಬೀಗ ಮುರಿದು ಬೆಡ್‌ ರೂಂನಲ್ಲಿದ್ದ … Read more

ಅಡಿಕೆ ಧಾರಣೆ | 27 ಮೇ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 27 MAY 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಮಟ ಮಾರುಕಟ್ಟೆ ಕೋಕ 13569 27099 ಚಿಪ್ಪು 25069 30099 ಫ್ಯಾಕ್ಟರಿ 11509 20829 ಹಳೆ ಚಾಲಿ 37599 39399 ಹೊಸ ಚಾಲಿ 31099 35609 ಚಿತ್ರದುರ್ಗ ಮಾರುಕಟ್ಟೆ ಅಪಿ 52629 53059 ಕೆಂಪುಗೋಟು 29509 29910 ಬೆಟ್ಟೆ 37019 37499 ರಾಶಿ 52139 52569 ಚನ್ನಗಿರಿ ಮಾರುಕಟ್ಟೆ ರಾಶಿ 48200 … Read more

ಶಿವಮೊಗ್ಗದಲ್ಲಿ ಸರ್ಕಾರಿ ಅಧಿಕಾರಿ ನೇಣಿಗೆ ಶರಣು, ಡೆತ್‌ ನೋಟ್‌ನಲ್ಲಿತ್ತು ಮೂವರ ಹೆಸರು

government-officer-chandrashekar-succumbed-at-home.

SHIVAMOGGA LIVE NEWS | 27 MAY 2024 SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಸರ್ಕಾರಿ ಅಧಿಕಾರಿಯೊಬ್ಬರು (Officer) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಬಡಾವಣೆಯ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್‌ ಚಂದ್ರಶೇಖರ್‌ (50) ನೇಣು ಬಿಗಿದುಕೊಂಡವರು. ಮನೆಯಲ್ಲಿ ಯಾರೂ ಇಲ್ಲದಾಗ ನೇಣಿಗೆ ಚಂದ್ರಶೇಖರ್‌ ಪತ್ನಿ ಕವಿತಾ ಶಿವಮೊಗ್ಗದ ವಿಕಲಚೇತನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಚಂದ್ರಶೇಖರ್‌ ಶಿವಮೊಗ್ಗದಲ್ಲಿ ಮನೆ ಮಾಡಿದ್ದರು. ಮೇ 24ಕ್ಕೆ ಬೆಂಗಳೂರಿನಿಂದ … Read more

ಶಿವಮೊಗ್ಗದಲ್ಲಿ ಲ್ಯಾಂಡಿಂಗ್‌ ಸಾಧ್ಯವಾಗದೆ ಹೈದರಾಬಾದ್‌ಗೆ ತೆರಳಿದ ವಿಮಾನ, 3 ಗಂಟೆ ಬಳಿಕ ವಾಪಸ್‌

Star-Airline-Flight-from-hyderabad-in-Shimoga

SHIVAMOGGA LIVE NEWS | 27 MAY 2024 SHIMOGA : ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಸ್ಟಾರ್‌ ಏರ್‌ ವಿಮಾನವು (Flight) ಹವಾಮಾನ ವೈಪರಿತ್ಯದಿಂದ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗಲು ಸಾಧ್ಯವಾಗದೆ ಹೈದರಾಬಾದ್‌ಗೆ ತೆರಳಿತ್ತು. ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ತಿರುಪತಿಯಿಂದ ಮಧ್ಯಾಹ್ನ 1.05ಕ್ಕೆ ಹೊರಟ ವಿಮಾನ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ ಎರಡು ಬಾರಿ ಪ್ರಯತ್ನಪಟ್ಟರು ಲ್ಯಾಂಡಿಂಗ್‌ ಸಾಧ್ಯವಾಗಲಿಲ್ಲ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ಹೈದರಾಬಾದ್‌ಗೆ ತೆರಳಿತ್ತು. ಸಂಜೆ 4 ಗಂಟೆಗೆ ಹೈದರಾಬಾದ್‌ನಿಂದ … Read more

ಶಿವಮೊಗ್ಗದ ರೋಡ್‌ ರೋಮಿಯೋಗಳಿಗೆ ಕಾದಿದೆ ಗ್ರಹಚಾರ, ಇವತ್ತಿಂದ ಚೆನ್ನಮ್ಮ ಪಡೆ ಆರಂಭ, ಏನಿದು?

Chennamma-Pade-by-Shimoga-Police.

SHIVAMOGGA LIVE NEWS | 27 MAY 2024 SHIMOGA : ರೋಡ್‌ ರೋಮಿಯೋಗಳಿಗೆ (Road Romeos) ಬಿಸಿ ಮುಟ್ಟಿಸಲು ಪೊಲೀಸ್‌ ಇಲಾಖೆ ಈ ಹಿಂದೆ ಓಬವ್ವ ಪಡೆದ ಆರಂಭಿಸಿತ್ತು. ಈಗ ಆ ಪಡೆಗೆ ಮರು ಜೀವ ನೀಡಲಾಗಿದೆ. ಚೆನ್ನಮ್ಮ ಪಡೆ ಎಂಬ ಹೊಸ ಹೆಸರಿನೊಂದಿಗೆ ಇವತ್ತಿನಿಂದ ಗಸ್ತು ಆರಂಭಿಸಲಿದೆ. ಹೊಸ ಕಾರು, ವಿನೂತನ ಲೋಗೊ ಓಬವ್ವ ಪಡೆ ಮಾದರಿಯಲ್ಲೇ ಚೆನ್ನಮ್ಮ ಪಡೆಗು ಪ್ರತ್ಯೇಕ ವಾಹನ ನಿಗದಿಪಡಿಸಲಾಗಿದೆ. ಏರ್ಟಿಗಾ ವಾಹನವನ್ನು ಪಡೆಗೆ ಮೀಸಲಿರಿಸಲಾಗಿದೆ. ಓಬವ್ವ ಪಡೆಗೆ ಪ್ರತ್ಯೇಕ … Read more

ಶಿವಮೊಗ್ಗದಲ್ಲಿ ಮೋಡ ಕವಿದ ವಾತಾವರಣ, ಉಳಿದೆಡೆ ಸಾಧಾರಣ ಮಳೆ, ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

SHIVAMOGGA LIVE NEWS | 27 MAY 2024 WEATHER REPORT : ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಇವತ್ತೂ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಇವತ್ತು ಶಿವಮೊಗ್ಗದಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ‌ ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 24 ಡಿಗ್ರಿ ಸೆಲ್ಸಿಯಸ್‌, ಬೆಳಗ್ಗೆ 10 ಗಂಟೆಗೆ 26.1 ಡಿಗ್ರಿ, ಮಧ್ಯಾಹ್ನ 12ಕ್ಕೆ … Read more