ಕ್ರಿಕೆಟ್ ವಿಚಾರವಾಗಿ ಕಿರಿಕ್, ಬಡಿಗೆಯಿಂದ ಯುವಕನ ಮೇಲೆ ದಾಳಿ

crime name image

SHIVAMOGGA LIVE NEWS | 29 ಮಾರ್ಚ್ 2022 ಕ್ರಿಕೆಟ್ ವಿಚಾರವಾಗಿ ಯುವಕರ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಮೇಲೆ ದಾಳಿ ನಡೆಸಲಾಗಿದೆ. ಗಾಯಗೊಂಡಿದ್ದ ಯುವಕ ಚೇತರಿಸಿಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಶಿಕಾರಿಪುರದ ಕೋಡಿಹಳ್ಳಿಯ ಹೆಚ್.ಬಿ.ರಜನಿಕಾಂತ (34) ಗಾಯಗೊಂಡಿರುವ ಯುವಕ. ಅರುಣ್ ಕುಮಾರ್ ಮತ್ತು ರಾಕೇಶ ಹಲ್ಲೆ ನಡೆಸಿದವರು. ಕೋಡಿಹಳ್ಳಿಯ ರವಿ ಎಂಬುವವರನ್ನು ಬೆಂಗಳೂರಿನ ಬಸ್ಸು ಹತ್ತಿಸಲು ಶಿರಾಳಕೊಪ್ಪಕ್ಕೆ ಬಂದಿದ್ದರು. ರಾತ್ರಿ ಬಸ್ಸು ಹತ್ತಿಸಿ ಹಿಂತಿರುಗುವಾಗ ರಜನಿಕಾಂತನನ್ನು ಅರುಣ್ ಮತ್ತು ರಾಕೇಶ್ ಸಮೀಪದ ಡಾಬಾಗೆ ಊಟಕ್ಕೆ … Read more

ಶರಾವತಿ ಸಂತ್ರಸ್ತರ ಆಕ್ರೋಶ, ಸರ್ಕಾರಕ್ಕೆ 15 ದಿನದ ಗಡುವು ನಿಗದಿ, ಹೇಗಿರುತ್ತೆ ಮುಂದಿನ ಹೋರಾಟ?

Sharavathi-Mulugade-Santrastara-Horata-Shimoga

SHIVAMOGGA LIVE NEWS | 29 ಮಾರ್ಚ್ 2022 ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಾಗವನ್ನು ಅರಣ್ಯ ಇಲಾಖೆಯಿಂದ ಕೈ ಬಿಡಬೇಕು. ಅಲ್ಲದೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಆಲ್ಕೊಳದಿಂದ ಪಾದಯಾತ್ರೆ ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ ಆಲ್ಕೊಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆಲ್ಕೊಳದಿಂದ ಸಾಗರ ರಸ್ತೆ ಮೂಲಕ ಬಸ್ ನಿಲ್ದಾಣ. ಬಿ.ಹೆಚ್.ರಸ್ತೆ ಮೂಲಕ ಅಮೀರ್ ಅಹಮದ್ ಸರ್ಕಲ್, … Read more

ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆ ಪಿಎಸ್ಐ ದಿಢೀರ್ ವರ್ಗಾವಣೆ

Thirthahalli Name Graphics

SHIVAMOGGA LIVE NEWS | 29 ಮಾರ್ಚ್ 2022 ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಪಿಎಸ್ಐ ಆಗಿದ್ದ ಜಯಪ್ಪ ನಾಯ್ಕ್ ಅವರನ್ನು ದಿಢೀರ್ ವರ್ಗಾಯಿಸಲಾಗಿದೆ. ಇವರಿಂದ ತೆರವಾದ ಸ್ಥಾನಕ್ಕೆ ಕುಂಸಿ ಪಿಎಸ್ಐ ನವೀನ್ ಮಠಪತಿ ಅವರನ್ನು ನಿಯೋಜಿಸಲಾಗಿದೆ. ವರ್ಗಕ್ಕೆ ಕಾರಣವಾಯ್ತಾ ಆಡಿಯೋ? ಮರಳು ಲಾರಿ ಮಾಲೀಕರು, ಚಾಲಕರು ಪಿಎಸ್ಐ ಜಯಪ್ಪ ನಾಯ್ಕ್ ಅವರ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದರು. ಈಚೆಗೆ ಜಯಪ್ಪ ನಾಯ್ಕ್ ಅವರದ್ದು … Read more

ಶಿವಮೊಗ್ಗ, ಭದ್ರಾವತಿ, ಹೊಳೆಹೊನ್ನೂರು ವ್ಯಾಪ್ತಿಯ ವಿವಿಧೆಡೆ ಪೊಲೀಸರ ದಾಳಿ

crime name image

SHIVAMOGGA LIVE NEWS | 29 ಮಾರ್ಚ್ 2022 ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಕ್ರಮ ಮದ್ಯ ಮಾರಾಟ, ಗಾಂಜಾ ಸೇವನೆ ಮತ್ತು ಓಸಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಯಾವ್ಯಾವ ಠಾಣೆ ವ್ಯಾಪ್ತಿಯಲ್ಲಿ ಯಾವೆಲ್ಲ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಬಳ್ಳಾಪುರ ಗ್ರಾಮದ ಹೊನ್ನಾಳಿ ಮುಖ್ಯರಸ್ತೆಯ ತೋಟದ ಬಳಿಯ ಅಂಗಡಿ ಹತ್ತಿರ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅವಕಾಶ ಮಾಡಿಕೊಡಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ಎಎಸ್ಐ ಕೃಷ್ಣಮೂರ್ತಿ ಅವರು ಗಸ್ತು ತಿರುಗುತ್ತಿದ್ದಾಗ ವಿಚಾರ ತಿಳಿದು ಬಂದಿದೆ. ದಾಳಿ ನಡೆಸಿದ ಪೊಲೀಸರು … Read more

ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸುವಾಗ ಇರಲಿ ಎಚ್ಚರಿಕೆ

bike theft reference image

SHIVAMOGGA LIVE NEWS | 29 ಮಾರ್ಚ್ 2022 ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಖಾಸಗಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಶರಾವತಿ ನಗರದ ಸಿದ್ದರಾಜು ಎಂಬುವವರಿಗೆ ಸೇರಿದ ಹೀರೋ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ಖಾಸಗಿ ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿದ್ದ ಸಿದ್ದರಾಜು ಅವರು ಚನ್ನಗಿರಿಗೆ ಹೋಗಿದ್ದರು. ಹಿಂತಿರುಗಿ ಬಂದಾಗ ಬೈಕ್ ನಾಪತ್ತೆಯಾಗಿದೆ. ಎಲ್ಲಾ ಕಡೆ ಹುಡುಕಾಡಿದ ಸಿದ್ದರಾಜು ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ | ಇವತ್ತಿನ … Read more

ಭದ್ರಾವತಿಯಲ್ಲಿ ಎರಡು ಬೊಲೇರೋ ಪಿಕಪ್ ವಾಹನಗಳ ಮುಖಾಮುಖಿ ಡಿಕ್ಕಿ

Bhadravathi News Graphics

SHIVAMOGGA LIVE NEWS | 28 ಮಾರ್ಚ್ 2022 ಬೊಲೇರೋ ಗೂಡ್ಸ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಐದು ಮಂದಿ ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಬಸವನಗುಡಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೊಲೇರೋ ಗೂಡ್ಸ್ ವಾಹನದ ಚಾಲಕ ನೂರ್ ಅಹಮ್ಮದ್ (44) ಮೃತಪಟ್ಟಿದ್ದಾರೆ. ಹೇಗಾಯ್ತು ಅಪಘಾತ? ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಗಡಿ ರಂಗಾಪುರ, ಕಾಳೇನಹಳ್ಳಿಯ ನಿವಾಸಿಗಳು ಶಿವಮೊಗ್ಗಕ್ಕೆ ಬಂದು ಹಿಂತಿರುಗುತ್ತಿದ್ದರು. ಶನಿವಾರ ರಾತ್ರಿ 8.20ರ ಹೊತ್ತಿಗೆ ತಮ್ಮೂರಿಗೆ ಮರಳುತ್ತಿದ್ದರು. ಭದ್ರಾವತಿಯ ಬಸವನಗುಡಿ ಗ್ರಾಮದ ಸಂದ್ಯಾದೀಪ ವೃದ್ಧಾಶ್ರಮದ … Read more

ಊಟ ಮುಗಿಸಿ ಮನೆಯಿಂದ ಹೊರ ಬಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ

crime name image

SHIVAMOGGA LIVE NEWS | 28 ಮಾರ್ಚ್ 2022 ರಾತ್ರಿ ಊಟ ಮುಗಿಸಿ ಹೊರ ಬಂದ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲು ಮುಂದಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತೋಷ್ (23) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ಹೊಸಬುಳ್ಳಾಪುರದಲ್ಲಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಹೊಸಬುಳ್ಳಾಪುರದ ಸಂತೋಷ್ ರಾತ್ರಿ ಊಟ ಮುಗಿಸಿ ಮನೆಯಿಂದ … Read more