ರಾಜ್ಯಾದ್ಯಂತ ಜೂನ್‌ 3ರಂದು ಸಾಂದರ್ಭಿಕ ರಜೆ, ಸರ್ಕಾರದ ಆದೇಶ, ಕೆಲವರಿಗಷ್ಟೆ ಅನ್ವಯ

VIDHANA-SOUDHA-GENERAL-IMAGE.jpg

SHIVAMOGGA LIVE NEWS | 29 MAY 2024 ELECTION NEWS : ಜೂನ್‌ 3ರಂದು ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಂದು ಮತ ಚಲಾಯಿಸುವ ಮತದಾರರಿಗೆ ರಾಜ್ಯಾದ್ಯಂತ ಸಾಂದರ್ಭಿಕ ರಜೆ (HOLIDAY) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯಕುಮಾರ್‌ ಹೆಚ್‌.ಬಿ ಅವರು ಆದೇಶ ಹೊರಡಿಸಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ … Read more

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆ, ರಾತ್ರಿ ವೇಳೆ ಕಡು ಕತ್ತಲೆ, ರೋಡಲ್ಲೆ ಪಾರ್ಟಿ, ನಿವಾಸಿಗಳಿಗೆ ಭೀತಿ

NR-Pura-Road-with-no-street-lights

SHIVAMOGGA LIVE NEWS | 29 MAY 2024 SHIMOGA : ಕಳೆದ ಕೆಲವು ದಿನದಿಂದ ನಗರದ ಎನ್‌.ಆರ್‌.ಪುರ ರಸ್ತೆಯಲ್ಲಿ ಬೀದಿ ದೀಪಗಳು (Street Light) ಕಣ್ಣಾಮುಚ್ಚಾಲೆ ಆಡುತ್ತಿವೆ. ಇದರಿಂದ ರಸ್ತೆಯಲ್ಲಿ ಕಡು ಕತ್ತಲೆ ಆವರಿಸಿದ್ದು, ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಶಿವಮೊಗ್ಗದ ಎಂಆರ್‌ಎಸ್‌ ಸರ್ಕಲ್‌ನಿಂದ ಒಡ್ಡಿನಕೊಪ್ಪ ಗ್ರಾಮದವರೆಗೆ ಎನ್‌.ಅರ್‌.ಪುರ ರಸ್ತೆಯ ಡಿವೈಡರ್‌ ಮೇಲೆ ಒಂದು ಬದಿಗೆ ಮಾತ್ರ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ವಿದ್ಯುತ್‌ ದೀಪಗಳು ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿವೆ. ಒಂದೆರಡು ದಿನ ಬೆಳಕು ಕಾಣಿಸಿಕೊಂಡರೆ … Read more

ಶಿವಮೊಗ್ಗದಲ್ಲಿ ಮತ ಎಣಿಕೆ, ವಾಹನ ಸಂಚಾರದ ಮಾರ್ಗ ಬದಲಾವಣೆ, ಪಾರ್ಕಿಂಗ್‌ಗೆ ಎಲ್ಲೆಲ್ಲಿದೆ ವ್ಯವಸ್ಥೆ?

BH-Road-in-front-of-Sahyadri-College.

SHIVAMOGGA LIVE NEWS | 29 MAY 2024 SHIMOGA : ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂನ್‌ 4ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಹಿನ್ನೆಲೆ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ಸಂಚಾರ ನಿಷೇಧ, ವಾಹನ ನಿಲುಗಡೆ ಹಾಗೂ ವಾಹನಗಳ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ (Diversion) ಮಾಡಿ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಆದೇಶಿಸಿದ್ದಾರೆ. ಯಾವ್ಯಾವ ಮಾರ್ಗದಲ್ಲಿ ವಾಹನ ಸಂಚಾರ ಬದಲು? ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀ. ಅಂತರದಲ್ಲಿ ಎಲ್ಲಾ … Read more

ಶಿವಮೊಗ್ಗ ತಾಲೂಕಿನ ವಿವಿಧೆಡೆ ನಾಳೆ ಮಧ್ಯಾಹ್ನದಿಂದ ಕರೆಂಟ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

SHIVAMOGGA LIVE NEWS | 29 MAY 2024 POWER CUT : ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೇ 30 ರಂದು ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ವಿವಿಧೆಡೆ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಭೋವಿ ಕಾಲೋನಿ, ಆಲದೇವರ ಹೊಸೂರು, ಶಕ್ತಿಧಾಮ, ಕೆ.ಐ.ಎ.ಡಿ.ಬಿ., ಕೆ.ಎಸ್.ಎಸ್.ಐ.ಡಿ.ಸಿ., ಇಂಡಸ್ಟ್ರೀಯಲ್ ಏರಿಯಾ, ದೇವಕಾತಿಕೊಪ್ಪ, ಶ್ರೀರಾಮಪುರ, ಸಿದ್ಲಿಪುರ ನೀರಾವರಿ ಪಂಪ್‍ಸೆಟ್, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದಾರಿ … Read more

ಅಡಿಕೆ ಧಾರಣೆ | 29 ಮೇ 2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 29 MAY 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಮಟ ಮಾರುಕಟ್ಟೆ ಕೋಕ 14069 26999 ಚಿಪ್ಪು 26509 29999 ಫ್ಯಾಕ್ಟರಿ 11509 20829 ಬೆಟ್ಟೆ 33300 37109 ಹಳೆ ಚಾಲಿ 37899 39509 ಹೊಸ ಚಾಲಿ 32009 35509 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ ವೆರೈಟಿ 28500 38000 ವೋಲ್ಡ್ ವೆರೈಟಿ 38000 46500 ಶಿಕಾರಿಪುರ ಮಾರುಕಟ್ಟೆ … Read more

ಶಿವಮೊಗ್ಗದಲ್ಲಿ ಅಡಿಕೆ ಗೋದಾಮುಗಳ ಮೇಲೆ 40 ಅಧಿಕಾರಿಗಳ ತಂಡದಿಂದ ದಿಢೀರ್‌ ದಾಳಿ

Officers-raid-on-areca-godown.

SHIVAMOGGA LIVE NEWS | 29 MAY 2024 SHIMOGA : ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳದ ಅಧಿಕಾರಿಗಳು ಅಡಿಕೆ ವ್ಯಾಪಾರ ಮಳಿಗೆಗಳು, ಗೋದಾಮುಗಳ (Godown) ಮೇಲೆ ದಿಢೀರ್‌ ದಾಳಿ ನಡೆಸಿ, ದಾಸ್ತಾರು ಪರಿಶೀಲಿಸಿದರು. 40 ಅಧಿಕಾರಿಗಳು ದಿಢೀರ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.   ಶಿವಮೊಗ್ಗ ವಿಭಾಗ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ, ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಅಧಿಕಾರಿಗಳು ಗೋದಾಮುಗಳಲ್ಲಿ ತಪಾಸಣೆ ನಡೆಸಿದರು. ಅಕ್ರಮ ವಹಿವಾಟು ದಾಸ್ತಾನು … Read more

ಶಿವಮೊಗ್ಗದ ATMನಲ್ಲಿ ಹಣ ಬಿಡಿಸುತ್ತಿದ್ದಾಗ ಒಳ ನುಗ್ಗಿದ ಯುವಕ, ದುಡ್ಡಿಗಾಗಿ ವ್ಯಕ್ತಿಯ ಅಟ್ಟಾಡಿಸಿ ಅಟ್ಯಾಕ್

Police-Jeep-at-Shimoga-General-Image

SHIVAMOGGA LIVE NEWS | 29 MAY 2024 SHIMOGA : ATMನಲ್ಲಿ ಹಣ ಬಿಡಿಸುತ್ತಿದ್ದಾಗ ಒಳ ನುಗ್ಗಿದ ಯುವಕ ತನಗೆ 2 ಸಾವಿರ ರೂ. ಹಣ ಕೊಡುವಂತೆ ವ್ಯಕ್ತಿಯೊಬ್ಬರಿಗೆ ಬೇಡಿಕೆ ಇಟ್ಟಿದ್ದಾನೆ. ನಿರಾಕರಿಸಿದ್ದಕ್ಕೆ ವ್ಯಕ್ತಿ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿ, ಬಂಗಾರದ ಸರ ಮತ್ತು ಡಾಲರ್‌ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರು ಎಸ್‌ಬಿಐ ಎಟಿಎಂನಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಪ್ರಕಾಶ್‌ ಎಂಬುವವರು ತಮ್ಮ ಪರಿಚಿತರ … Read more

ರಾತ್ರೋರಾತ್ರಿ ಶೆಡ್‌ನಿಂದ ನಾಲ್ಕು ಕುರಿಗಳು ಮಿಸ್ಸಿಂಗ್‌, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ

crime name image

SHIVAMOGGA LIVE NEWS | 29 MAY 2024 BHADRAVATHI : ಕುರಿ ಶೆಡ್‌ನ ಬೀಗ ಮುರಿದು ನಾಲ್ಕು ಕುರಿಗಳನ್ನು (Sheep) ಕಳವು ಮಾಡಲಾಗಿದೆ. ಭದ್ರಾವತಿ ತಾಲೂಕು ಬೆಳ್ಳಿಗೆರೆ ಗ್ರಾಮದ ಅಡಿಕೆ ತೋಟದಲ್ಲಿದ್ದ ಕುರಿ ಶೆಡ್‌ನಲ್ಲಿ ಕೃತ್ಯ ನಡೆದಿದೆ. ಮೇ 25ರಂದು ಬೆಳಗ್ಗೆ ಮಾಲೀಕ ರಾಮಚಂದ್ರ ಅವರು ಕುರಿಗಳಿಗೆ ಮೇವು ಹಾಕಲು ಬಂದಾಗ ನಾಲ್ಕು ಕುರಿಗಳು ಕಳುವಾಗಿರುವುದು ಗೊತ್ತಾಗಿದೆ. ಇದನ್ನೂ ಓದಿ – ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೆ ಅರಣ್ಯ ರಕ್ಷಕನ ಮೃತದೇಹ ಪತ್ತೆ ಶೆಡ್‌ನಲ್ಲಿ ಒಟ್ಟು 7 ಕುರಿಗಳನ್ನು … Read more

ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೆ ಅರಣ್ಯ ರಕ್ಷಕನ ಮೃತದೇಹ ಪತ್ತೆ

Forest-Guard-Basavaraju-last-breath-at-house-in-bejjavalli-thirthahalli

SHIVAMOGGA LIVE NEWS | 29 MAY 2024 THIRTHAHALLI : ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೆ ಅರಣ್ಯ ರಕ್ಷಕ (GUARD) ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ವಲಯ ಅರಣ್ಯ ವಿಭಾಗದಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿವಹಿಸುತ್ತಿದ್ದ ಬಸವರಾಜ್‌ (34) ಮೃತರು. ಬೆಜ್ಜವಳ್ಳಿಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು. ಸೋಮವಾರ ರಾತ್ರಿ ಬಸವರಾಜ್‌ ಅವರು ಮನೆಗೆ ಬಂದಾಗ ಎಲ್ಲರು ನೋಡಿದ್ದರು. ಬೆಳಗ್ಗೆ ಬಹು ಹೊತ್ತು ಹೊರಗೆ ಬಾರದಿದ್ದರಿಂದ ಸ್ಥಳೀಯರು ಅನುಮಾನಗೊಂಡಿದ್ದಾರೆ. ಬಾಗಿಲು ತೆಗೆದಾಗ ಬಸವರಾಜ್‌ ಮಲಗಿದ್ದಲ್ಲೆ ಮೃತಪಟ್ಟಿದ್ದರು. ಮಾಳೂರು ಠಾಣೆ ಪೊಲೀಸರು ಸ್ಥಳಕ್ಕೆ … Read more

ಶಿವಮೊಗ್ಗದಲ್ಲಿ ಕಡಿಮೆಯಾದ ಮಳೆ, ಹೆಚ್ಚಿದ ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?

WEATHER-REPORT-SHIMOGA-

SHIVAMOGGA LIVE NEWS | 29 MAY 2024 WEATHER REPORT : ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ ತಾಪಮಾಣ ಏರಿಕೆಯಾಗಿದೆ. ಇವತ್ತು ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 9 ಗಂಟೆಗೆ 27.8 ಡಿಗ್ರಿ ಸೆಲ್ಸಿಯಸ್‌, ಬೆಳಗ್ಗೆ 11ಕ್ಕೆ 30.2 ಡಿಗ್ರಿ, ಮಧ್ಯಾಹ್ನ 2ಕ್ಕೆ 30.6 ಡಿಗ್ರಿ, ಸಂಜೆ 5ಕ್ಕೆ 28.9 ಡಿಗ್ರಿ, ರಾತ್ರಿ 8 … Read more