ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

himoga-DC-office-and-Police-jeep-in-front-of-office

SHIMOGA, 30 JULY 2024 : ಜಿಲ್ಲೆಯ ವಿವಿಧೆಡೆಯ ಪೊಲೀಸ್‌ ಠಾಣೆಗಳ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು  (PSI) ವರ್ಗಾಯಿಸಲಾಗಿದೆ. ಯಾವ್ಯಾವ ಠಾಣೆಯಿಂದ ಯಾರು ವರ್ಗ? ಹೊಳೆಹೊನ್ನೂರು ಠಾಣೆ ಪಿಎಸ್‌ಐ ಸುರೇಶ್‌ ಅವರನ್ನು ಚನ್ನಗಿರಿ ಠಾಣೆಗೆ. ಆನಂದಪುರ ಪೊಲೀಸ್‌ ಠಾಣೆಯ ಪಿಎಸ್‌ಐ ನಿರ್ಮಲಾ ಅವರನ್ನು ಹೊನ್ನಾಳಿ ಠಾಣೆಗೆ. ಶಿಕಾರಿಪುರ ನಗರ ಠಾಣೆಯ ಪಿಎಸ್‌ಐ ಪ್ರಶಾಂತ್‌ ಕುಮಾರ್‌ ಅವರನ್ನು ಶಿರಾಳಕೊಪ್ಪ ಪೊಲೀಸ್‌ ಠಾಣೆಗೆ. ಶಿಕಾರಿಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಶರತ್‌ ಅವರನ್ನು ಶಿಕಾರಿಪುರ ನಗರ ಠಾಣೆಗೆ. ಹಾವೇರಿ ಜಿಲ್ಲೆ ಗುತ್ತಲ ಪೊಲೀಸ್‌ … Read more

ಶಿವಮೊಗ್ಗ ಜಿಲ್ಲೆಗೆ ನಾಳೆ ಅಲರ್ಟ್‌ ಪ್ರಕಟಿಸಿದ ಹವಾಮಾನ ಇಲಾಖೆ, ಏನಿದೆ ಅಲರ್ಟ್‌ ಮೆಸೇಜ್‌?

rain-in-shimoga-city-near-NCC-Office.

RAINFALL NEWS, 30 JULY 2024 : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇವತ್ತು ಧಾರಾಕಾರ ಮಳೆಯಾಗಿದೆ. ಈ ಮಧ್ಯೆ ಹವಾಮಾನ ಇಲಾಖೆ ಜು.31ರಂದು ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಅಲರ್ಟ್‌ (Alert) ಪ್ರಕಟಿಸಿದೆ. ಬುಧವಾರದಂದು ಶಿವಮೊಗ್ಗ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರೆಡ್‌ ಅಲರ್ಟ್‌ ಇರುವ ಕಡೆ ಭಾರಿ ಮಳೆಯಾಗಲಿದೆ. ಇದರ ಜೊತೆ ವಿಪರೀತ ಮೇಲ್ಮೈ ಗಾಳಿ ಇರಲಿದೆ ಎಂದು ಅಲರ್ಟ್‌ನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಇದೆ. ಉತ್ತರ … Read more

ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುವ ದಿನಾಂಕ ಪ್ರಕಟ, ಹಳ್ಳಿ ಹಳ್ಳಿಗೆ ತೆರಳಿ ಮೈಕ್‌ನಲ್ಲಿ ಎಚ್ಚರಿಕೆ ಸಂದೇಶ

linganamakki-dam-mike-announcement

SAGARA, 30 JULY 2024 : ಧಾರಾಕಾರ ಮಳೆಗೆ ಲಿಂಗನಮಕ್ಕಿ ಜಲಾಶಯದ (DAM) ಒಳ ಹರಿವು ಹೆಚ್ಚಳವಾಗಿದೆ. ಯಾವುದೇ ಸಂದರ್ಭ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ, ಹಳ್ಳಿಗೆ ಹಳ್ಳಿಗೆ ತೆರಳಿ ಮೈಕ್‌ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಭರ್ತಿಯ ಸನಿಹಕ್ಕೆ ಲಿಂಗನಮಕ್ಕಿ ಡ್ಯಾಂ ಲಿಂಗನಮಕ್ಕಿ ಜಲಾಶಯು ಭರ್ತಿಯ ಸನಿಹಕ್ಕೆ ತಲುಪಿದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1811.50 ಅಡಿಗೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ … Read more

ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

breaking news graphics

SHIMOGA, 30 JULY 2024 : ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಜು.31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೂರು ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ (Holiday) ಘೋಷಿಸಲಾಗಿದೆ. ಸದ್ಯ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ತಹಶೀಲ್ದಾರ್‌ಗಳು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಅಂಗನವಾಡಿಗಳು, ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ತಹಶೀಲ್ದಾರ್‌ಗಳು ಆದೇಶಿಸಿದ್ದಾರೆ. ಇದನ್ನೂ ಓದಿ ⇓ ಹೊಸನಗರದಲ್ಲಿ ಬಿಡುವು ಕೊಡದ ಮಳೆ, ಮನೆ, … Read more

ಹೊಸನಗರದಲ್ಲಿ ಬಿಡುವು ಕೊಡದ ಮಳೆ, ಮನೆ, ತೋಟ, ದೇಗುಲ ಜಲಾವೃತ, ಶಾಲಾ – ಕಾಲೇಜಿಗೆ ರಜೆ

Hosanagara-Heavy-rainfall.

HOSANAGARA, 30 JULY 2024 : ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ (Heavy Rain). ಬಿಡುವು ನೀಡದೆ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಮೂಡಿದೆ. ನಗರದಲ್ಲಿ ನಿರಂತರ ಮಳೆ ನಗರ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಇದರಿಂದ ತಗ್ಗು ಪ್ರದೇಶದ ಜನರಲ್ಲಿ ಭಯ ಆವರಿಸಿದೆ. ಜನರು ಮನೆಯಿಂದ ಹೊರ ಬರಲಾಗದಷ್ಟು ರಭಸವಾಗಿ ಮಳೆ ಸುರಿಯುತ್ತಿದೆ. ನಗರ ಹೋಬಳಿ ಸದ್ಯ ನೆರೆಗೆ ತುತ್ತಾಗಿದೆ. ದ್ವೀಪದಂತಾದ ಮನೆ, ದೇಗುಲ ಜಲಾವೃತ ನಗರ ಭಾಗದಲ್ಲಿ ಭಾರಿ ಮಳೆಯಿಂದಾಗಿ … Read more

ತೀರ್ಥಹಳ್ಳಿಯಲ್ಲಿ ಎಡೆಬಿಡದೆ ಮಳೆ, ಅಪಾಯದ ಮಟ್ಟದಲ್ಲಿ ತುಂಗೆ, ಶಾಲೆ, ಕಾಲೇಜಿಗೆ ರಜೆ

Thirthahalli-tunga-river-heavy-rain

THIRTHAHALLI, 30 JULY 2024 : ತೀರ್ಥಹಳ್ಳಿ ತಾಲೂಕಿನಾದ್ಯಂತ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇನ್ನೊಂದೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಾದ್ಯಂತ ಮಳೆ ಅಬ್ಬರ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಬಿರುಸಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಸದ್ಯ ಹೊನ್ನೇತಾಳು, ಬಿದರಗೋಡು ಸೇರಿದಂತೆ ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ತೂದರು, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಆರಗ, ಹೆಗ್ಗೋಡು ಸೇರಿದಂತೆ ವಿವಿಧೆಡೆ ಜೋರು ಮಳೆಯಾಗುತ್ತಿರುವ ವರದಿಯಾಗಿದೆ. ರಾಮ … Read more

ತುಂಗಾ, ಭದ್ರಾ ಜಲಾಶಯಗಳ ಒಳ, ಹೊರ ಹರಿವು ಏರಿಕೆ, ನದಿ ಪಾತ್ರದಲ್ಲಿ ಜನರಲ್ಲಿ ಭೀತಿ

Bhadra-Dam-Water-Out-Flow

SHIMOGA CITY, 30 JULY 2024 : ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆ ತುಂಗಾ ಮತ್ತು ಭದ್ರಾ ಜಲಾಶಯದ ಒಳ ಹರಿವು (Inflow) ಹೆಚ್ಚಳವಾಗಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಳವಾಗಿದೆ. ‌ ತೀರ್ಥಹಳ್ಳಿ, ಕೊಪ್ಪ, ಎನ್‌.ಆರ್‌.ಪುರ ಸೇರಿದಂತೆ ವಿವಿಧೆಡೆ ಜೋರು ಮಳೆಯಾಗುತ್ತಿದೆ. ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಗಾಜನೂರಿನ ತುಂಗಾ ಜಲಾಶಯದ ಒಳ ಹರಿವು 77 ಸಾವಿರ ಕ್ಯೂಸೆಕ್‌ ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಕಳೆದ ವಾರ … Read more

BREAKING NEWS – ಭದ್ರಾ ಡ್ಯಾಂನ ನಾಲ್ಕು ಗೇಟ್‌ಗಳು ಓಪನ್‌

bhadra-dam-gates-lifted

BHADRAVATHI, 30 JULY 2024 : ಭದ್ರಾ ಜಲಾಶಯ (Bhadra Dam) ಗರಿಷ್ಠ ಮಟ್ಟಕ್ಕೆ ಭರ್ತಿಯಾಗಿದೆ. ಈ ಹಿನ್ನೆಲೆ ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಲಾಗಿದೆ. ಬೆಳಗ್ಗೆ 9.30ಕ್ಕೆ ನಾಲ್ಕು ಕ್ರಸ್ಟ್‌ ಗೇಟ್‌ಗಳನ್ನು ಮೇಲೆತ್ತಲಾಯಿತು. ಹಾಲ್ನೊರೆಯಂತೆ ನೀರು ಹೊಳೆಗೆ ಹರಿಯಿತು. ಇದನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯ ಜನರು ಜಲಾಶಯದ ಮುಂದೆ ಆಗಮಿಸಿದ್ದರು. ಪ್ರತಿ ಗೇಟ್‌ ಮೇಲೆತ್ತಿದಾಗಲೂ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಎಷ್ಟಿದೆ ಒಳ ಮತ್ತು ಹೊರ ಹರಿವು? ಇವತ್ತು ಭದ್ರಾ ಜಲಾಶಯಕ್ಕೆ 20,774 ಕ್ಯೂಸೆಕ್‌ ಒಳ ಹರಿವು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, ತಾಪಮಾನ ಏರಿಕೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

WEATHER REPORT, 30 JULY 2024 : ಜಿಲ್ಲೆಯಲ್ಲಿ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ವಿವಿಧೆಡೆ ಸಾಧಾರಣ ಮಳೆಯಾಗುತ್ತಿದೆ. ಮೇಲ್ಮೈ ಗಾಳಿ ಅಬ್ಬರವು ಕಡಿಮೆಯಾಗಿದೆ. ಕಳೆದ ವಾರ ಮಲೆನಾಡು ಭಾಗದಲ್ಲಿ ಅಬ್ಬರಿಸಿದ್ದ ವರುಣ ಬಿಡುವು ನೀಡಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿ ಚಟುವಟಿಕೆ ಬಿರುಸು ಪಡೆದಿದೆ. ಇನ್ನೊಂದೆಡೆ ಹವಾಮಾನ ಇಲಾಖೆಯಿಂದಲು ಶಿವಮೊಗ್ಗ ಜಿಲ್ಲೆಗೆ ಯಾವುದೇ ಅಲರ್ಟ್‌ ಘೋಷಣೆಯಾಗಿಲ್ಲ. ಇವತ್ತು ಎಷ್ಟಿದೆ ತಾಪಮಾನ? ಮಳೆ ಕಡಿಮೆಯಾದ ಬೆನ್ನಿಗೆ ಜಿಲ್ಲೆಯಲ್ಲಿ ತಾಪಮಾನ … Read more

BREAKING NEWS – ಯಾವುದೇ ಕ್ಷಣ ಭದ್ರಾ ಜಲಾಶಯದ ಗೇಟುಗಳು ಓಪನ್‌, ನಾಲೆಗಳಿಗು ನೀರು

Bhadra-dam-General-Image

SHIMOGA, 30 JULY 2024 : ಯಾವುದೇ ಸಂದರ್ಭ ಭದ್ರಾ ಜಲಾಶಯದ (BHADRA DAM) ಗೇಟ್‌ಗಳನ್ನು ಮೇಲೆತ್ತುವ ಸಾಧ್ಯತೆ ಇದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಕ್ರಸ್ಟ್‌ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇವತ್ತು ಬೆಳಗ್ಗೆ ಭದ್ರಾ ಜಲಾಶಯದ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೆ ಸಾಮಾಜಿಕ ಜಲಾತಾಣಗಳಲ್ಲಿ ಮಾಹಿತಿ ವೈರಲ್‌ ಆಗಿದೆ. ಸುತ್ತಮುತ್ತಲ ವಿವಿಧೆಡೆಯ ಜನರು ಈ ಕ್ಷಣ ಕಣ್ತುಂಬಿಕೊಳ್ಳಲು ಭದ್ರಾ ಜಲಾಶಯದ ಬಳಿ ಜಮಾಯಿಸಲಿದ್ದಾರೆ. ನಾಲೆಗಳಿಗೆ ನೀರು … Read more