ಶಿವಮೊಗ್ಗ ಲೋಕಸಭೆ, ಎಣಿಕೆ ಆರಂಭವಾಗಿ 1 ಗಂಟೆ, ಯಾರು ಎಷ್ಟು ಮತ ಗಳಿಸಿದ್ದಾರೆ?

040624 shimoga loksabha result 9 am

SHIVAMOGGA LIVE NEWS | 4 JUNE 2024 RESULT NEWS : ಲೋಕಸಭೆ ಚನಾವಣೆ ಮತ ಎಣಿಕೆ ಆರಂಭವಾಗಿ ಒಂದು ಗಂಟೆಯಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ದೊಡ್ಡ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟಾಪ್‌ 3 ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 26691 ಮತ ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ 18641 ಮತ ಪಡೆದಿದ್ದಾರೆ. ಬಿ.ವೈ.ರಾಘೇಂದ್ರ 8050 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ 1277 ಮತ ಪಡೆದಿದ್ದಾರೆ.  ಇದನ್ನೂ … Read more

BREAKING NEWS – ಶಿವಮೊಗ್ಗದಲ್ಲಿ ಮತ ಎಣಿಕೆ ಆರಂಭ, ಅಂಚೆ ಮತಗಳಲ್ಲಿ ಯಾರಿಗೆ ಮುನ್ನಡೆ ದೊರೆತಿದೆ?

Counting-Center-in-Shimoga

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಸ್ಟ್ರಾಂಗ್‌ ರೂಂನಿಂದ ಮತ ಪೆಟ್ಟಿಗೆಗಳನ್ನು ಎಣಿಕೆ ಕೊಠಡಿಗೆ ಕೊಂಡೊಯ್ದು ಎಣಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ಫಲಿತಾಂಶ LIVE | ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಆರಂಭ ಮೊದಲ ಹಂತದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ 5199 ಅಂಚೆ ಮತಗಳು ಚಲಾವಣೆಯಾಗಿದೆ. ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ … Read more

ಶಿವಮೊಗ್ಗ ಫಲಿತಾಂಶ LIVE | ಎರಡು ಲಕ್ಷ ದಾಟಿದ ಅಂತರ, ಈತನಕ ರಾಘವೇಂದ್ರ ಪಡೆದ ಮತಗಳೆಷ್ಟು?

RESULT-THUMBNAIL1

SHIVAMOGGA LIVE NEWS | 4 JUNE 2024 RESULT : ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಲೋಕಸಭೆ ಚನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. 23 ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಇನ್ನಷ್ಟೆ ನಿರ್ಧಾರವಾಗಲಿದೆ. ಮೂವರು ಘಟಾನುಘಟಿ ಅಭ್ಯರ್ಥಿಗಳು ಪಡೆದ ಮತಗಳ ವಿವರವನ್ನು ಲೈವ್‌ನಲ್ಲಿ ಕೊಡಲಿದ್ದೇವೆ. ಆಗಾಗ ಈ ಪೇಜ್‌ ಮಾಡಿ ಅಥವಾ ಇದೇ ಲಿಂಕ್‌ ಅನ್ನು ಮತ್ತೆ ಓಪನ್‌ ಮಾಡಿದರೆ ಅಪ್‌ಡೇಟ್‌ ಆಗಿರುವ ಫಲಿತಾಂಶ ದೊರೆಯಲಿದೆ. ಬಿ.ವೈ.ರಾಘವೇಂದ್ರ ಬಿಜೆಪಿ ಪಡೆದ ಮತ   ಅಂತರ   ಗೀತಾ … Read more

ಶಿವಮೊಗ್ಗದಲ್ಲಿ ಮತ ಎಣಿಕೆಗೆ ಕ್ಷಣಗಣನೆ, ಕೆಲವೇ ನಿಮಿಷದಲ್ಲಿ ಸ್ಟ್ರಾಂಗ್‌ ರೂಂ ಓಪನ್‌

Officials-enter-counting-center-in-Shimoga-sahyadri-college.

SHIVAMOGGA LIVE NEWS | 4 JUNE 2024 SHIMOGA : ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಅಧಿಕಾರಿಗಳು, ಸಿಬ್ಬಂದಿ ಎಣಿಕೆ ಕೇಂದ್ರದತ್ತ (Counting Center) ಆಗಮಿಸುತ್ತಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂನಲ್ಲಿರುವ ಮತ ಪೆಟ್ಟಿಗೆಗಳನ್ನು ಹೊರ ತೆಗೆಯುವ ಪ್ರಕ್ರಿಯೆ ಶುರುವಾಗಿದೆ. ಗುರುತು ಚೀಟಿ ಇದ್ದವರಷ್ಟೆ ಒಳಗೆ ಚುನಾವಣೆ ಆಯೋಗದ ಅಧಿಕೃತ ಗುರುತು ಚೀಟಿ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಪಕ್ಷಗಳ ಎಣಿಕೆ ಏಜೆಂಟರು, ಅಭ್ಯರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಹೊರತು ಮತ್ಯಾರಿಗು ಮತ ಎಣಿಕೆ … Read more

ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಇರಿದ ವ್ಯಕ್ತಿ, ಕಾರಣವೇನು?

Vaddinakoppa-Village-board.

SHIVAMOGGA LIVE NEWS | 4 JUNE 2024 SHIMOGA : ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಮಹಿಳೆಗೆ (Woman) ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಶಿವಮೊಗ್ಗ ತಾಲೂಕು ವಡ್ಡಿನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವನಾಯ್ಕ್‌ (35) ಎಂಬಾತ ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಶಿವನಾಯ್ಕ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಕೂಡ ಮದುವೆಯಾಗಿದ್ದರು. ಈಚೆಗೆ ಅನೈತಿಕ ಸಂಬಂಧ ಬಹಿರಂಗವಾಗಿ ಹಿರಿಯರು … Read more

ಶಿವಮೊಗ್ಗದಲ್ಲಿ ತಾಪಮಾನ ತುಸು ಇಳಿಕೆ, ಇವತ್ತು ಎಷ್ಟಿರುತ್ತೆ ಉಷ್ಣಾಂಶ? ಮಳೆ ಕುರಿತು ವರದಿಯಲ್ಲಿ ಏನಿದೆ?

WEATHER-REPORT-SHIMOGA-

SHIVAMOGGA LIVE NEWS | 4 JUNE 2024 WEATHER UPDATE : ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ತಾಪಮಾನ ಪುನಃ 30 ಡಿಗ್ರಿ ಆಸುಪಾಸಿಗೆ ಬಂದು ನಿಂತಿದೆ. ಇವತ್ತು ಶಿವಮೊಗ್ಗದಲ್ಲಿ ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 24.2 ಡಿಗ್ರಿ, ಬೆಳಗ್ಗೆ 9ಕ್ಕೆ 26.7 ಡಿಗ್ರಿ, ಬೆಳಗ್ಗೆ 11 ಗಂಟೆಗೆ 28.6 … Read more