ರಾತ್ರೋರಾತ್ರಿ ಅಡಕೆ ನಾಪತ್ತೆ, CCTV ನುಡಿಯಿತು ಸಾಕ್ಷಿ, ನಡುರಾತ್ರಿ ಸಾಹೇಬರ ಮನೆಗೆ ತಲುಪಿತಂತೆ ಕದ್ದ ಮಾಲು
ಶಿವಮೊಗ್ಗ | ಮನೆ ಹಿಂದೆ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆಯನ್ನು (ADIKE THEFT) ನಡುರಾತ್ರಿ ಕಳ್ಳತನ ಮಾಡಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ದೂರು ನೀಡಲಾಗಿದೆ. ಬುಳ್ಳಾಪುರದ (BULLAPURA) ಮಂಜಪ್ಪ ಗೌಡ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ಮನೆ ಹಿಂಭಾಗ ಸಿಪ್ಪೆಗೋಟು ಅಡಕೆಯನ್ನು ಒಣ ಹಾಕಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಅಡಕೆ ಇರಲಿಲ್ಲ. ಸಿಸಿಟಿವಿ ನುಡಿದ ಸಾಕ್ಷಿ ಮಂಜಪ್ಪ ಗೌಡ ಅವರು ತಮ್ಮ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗಸ್ಟ್ 28ರ ರಾತ್ರಿ … Read more