ಶಿವಮೊಗ್ಗದಲ್ಲಿ ಸಾಲು ಸಾಲು ಅಧಿಕಾರಿಗಳ ಮನೆಗಳ ಬೀಗ ಒಡೆದು ಕಳ್ಳತನ, ಎಲ್ಲಿ? ಹೇಗಾಯ್ತು?

theft-at-officers-quarters-in-shimoga.

SHIMOGA, 8 SEPTEMBER 2024 : ಅಧಿಕಾರಿಗಳ (Officers) ಕ್ವಾರ್ಟರ್ಸ್‌ನಲ್ಲಿರುವ ಐದು ಮನೆಗಳಲ್ಲಿ ಕಳ್ಳತನವಾಗಿದೆ. ಒಂದು ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ಬಸವನಗುಡಿಯ ಆಫೀಸರ್ಸ್‌ ಕ್ವಾರ್ಟರ್ಸ್‌ನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಬೆಳಗ್ಗೆ ಪ್ರಕರಣ ಬಯಲಿಗೆ ಬಂದಿದೆ. ಜಿಲ್ಲಾಧಿಕಾರಿ ಆಪ್ತ ಸಹಾಯಕ ದೀಪಕ್‌, ನ್ಯಾಯಾಧೀಶರ ಕಾರು ಚಾಲಕ ಪ್ರಕಾಶ್‌, ಎಸ್‌ಡಿಎ ಸಂಧ್ಯಾ, ವಾಣಿಜ್ಯ ತೆರಿಗೆ ಇಲಾಖೆಯ ನಂದಿನಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಭಾಗ್ಯ ಅವರ ಮನೆಯಲ್ಲಿ ಕಳ್ಳತನಕ್ಕೆ ವಿಫಲ … Read more

ಶಿವಮೊಗ್ಗ ಜಿಲ್ಲೆಗೆ ಇವತ್ತು ಯಲ್ಲೋ ಅಲರ್ಟ್‌, ಈಗ ಎಲ್ಲೆಲ್ಲಿ ಮಳೆಯಾಗುತ್ತಿದೆ?

Rain-at-Shimoga-Woman-walks-in-the-road.webp

SHIMOGA, 8 SEPTEMBER 2024 : ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆಯಾಗಲಿದೆ (Rain) ಎಂದು ಯಲ್ಲೊ ಅಲರ್ಟ್‌ ಘೋಷಿಸಿದೆ. ಮೇಲ್ಮೈ ಗಾಳಿ ಜೋರಿರಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದೆ. ಶಿವಮೊಗ್ಗ ನಗರದ ವಿವಿಧೆಡೆ ಬೆಳಗ್ಗೆಯಿಂದಲೆ ಆಗಾಗ ಮಳೆಯಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಕೆಲವು ಹೊತ್ತು ಜೋರಾಗಿ ಮಳೆಯಾಗುತ್ತಿದೆ. ಸಂಜೆ ವೇಳೆಗೆ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ. ಯಾವ್ಯಾವ ಊರಿನಲ್ಲಿ ಮಳೆಯಾಗುತ್ತಿದೆ? ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಜಿಲ್ಲೆಯ ವಿವಿಧೆಡೆ … Read more

ಭದ್ರಾವತಿಯ ಅರಬಿಳಚಿಯಲ್ಲಿ ನೀರವ ಮೌನ, ಬಂದೋಬಸ್ತ್‌ ಹೆಚ್ಚಳ, ಈಗ ಹೇಗಿದೆ ಪರಿಸ್ಥಿತಿ?

arabilachi-village-after-the-altercation-during-ganesh-procession

HOLEHONNURU, 8 SEPTEMBER 2024 : ಗಣಪತಿ ವಿಸರ್ಜನೆ ವೇಳೆ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿದ್ದ ಅರಬಿಳಚಿ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ (Bandobast) ಮುಂದುವರೆದಿದೆ. ಇನ್ನು ಗಲಾಟೆ ಸಂಬಂಧ ತನಿಖೆ ಚುರುಕುಗೊಂಡಿದ್ದು ಹಲವರ ಬಂಧನವಾಗಿದೆ. ಕೆಲವರು ಮನೆ ತೊರೆದಿದ್ದಾರೆ. ಅರಬಿಳಚಿ ಗ್ರಾಮದಲ್ಲಿ ಶನಿವಾರ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಡೊಳ್ಳಿನ ತಂಡದ ವಿಚಾರವಾಗಿ ಎರಡು ಗಣಪತಿ ಸಂಘಟನೆಗಳ ಮಧ್ಯೆ ಗಲಾಟೆಯಾಗಿತ್ತು. ಈ ಹಿನ್ನೆಲೆ ಭಾನುವಾರವು ಗ್ರಾಮದಲ್ಲಿ ಬಂದೋಬಸ್ತ್‌ ಮುಂದುವರೆದಿದೆ. ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹೊಳೆಹೊನ್ನೂರು … Read more

ರೈಲಲ್ಲಿ ಶಿವಮೊಗ್ಗಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿದೆ ಮೃತ್ಯು ಕೂಪ, ರಕ್ತ ಹೀರಲು ಕಾಯುತ್ತಿದೆ ಚರಂಡಿ ಮುಚ್ಚಳ

Pot-holes-at-KEB-Cirlce-in-Shimoga-near-railway-station

SHIMOGA, 8 SEPTEMBER 2024 : ಮಳೆಗಾಲ ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ರಸ್ತೆಗಳಲ್ಲಿ ಪಾತಾಳ ಕಾಣುವಂತಹ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ವಾಹನ ಸವಾರರ ಪಾಲಿಗೆ ಇವು ಅಕ್ಷರಶಃ ಮೃತ್ಯು ಕೂಪವಾಗಿವೆ. ಕಳೆದ ತಿಂಗಳು ಶಿವಮೊಗ್ಗ ನಗರದಲ್ಲಿ ಮಳೆಯಾಗುತ್ತಿದ್ದಂತೆ ನಾಯಿ ಕೊಡೆಗಳಂತೆ ಗುಂಡಿಗಳು ಪ್ರತ್ಯಕ್ಷವಾಗಿವೆ. ಹೆದ್ದಾರಿಯಿಂದ ಹಿಡಿದು ಕಿರುದಾರಿವರೆಗೆ ಡಾಂಬಾರು ಕಿತ್ತು ಬಂದು, ಅಡಿ ಲೆಕ್ಕದ ಆಳದ ಗುಂಡಿ ಬಿದ್ದಿವೆ. ರೈಲು ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಕಡೆಗೆ ತಿರುವು ಪಡೆಯುವಲ್ಲಿ ಎರಡು ಬೃಹತ್‌ ಗುಂಡಿಗಳಾಗಿವೆ. … Read more

ಶಿವಮೊಗ್ಗದ ಈವರೆಗಿನ ಸುದ್ದಿಗಳು – ಓದಲು ಇಲ್ಲಿ ಕ್ಲಿಕ್‌ ಮಾಡಿ

Shivamogga Live Today News

SHIMOGA, 8 SEPTEMBER 2024 : ಶಿವಮೊಗ್ಗ ಲೈವ್‌ ವೆಬ್‌ಸೈಟ್‌ನಲ್ಲಿ ಈವರೆಗೂ ಪ್ರಕಟವಾದ ಟಾಪ್‌ 5 ಸುದ್ದಿಗಳ ಹೆಡ್‌ಲೈನ್‌ ಕೆಳಗಿದೆ. ಪ್ರತಿ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಸುದ್ದಿ ಓದಿ. ಬ್ಯಾಕ್‌ ಬಂದು ಮತ್ತೊಂದು ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ. ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್‌ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ? – ಓದಲು ಇಲ್ಲಿ ಕ್ಲಿಕ್‌ ಮಾಡಿ ಶಿವಮೊಗ್ಗದಲ್ಲಿ ಬೈಕ್‌ ಸ್ಟಂಟ್‌ ಮಾಡಿ ಲೈಕ್‌ ಗಿಟ್ಟಿಸುತ್ತಿದ್ದವನು ಈಗ ಟ್ರೋಲ್‌ ಆಗ್ತಿದ್ದಾನೆ – 3 … Read more

ಶಿವಮೊಗ್ಗದಲ್ಲಿ ಬೈಕ್‌ ಸ್ಟಂಟ್‌ ಮಾಡಿ ಲೈಕ್‌ ಗಿಟ್ಟಿಸುತ್ತಿದ್ದವನು ಈಗ ಟ್ರೋಲ್‌ ಆಗ್ತಿದ್ದಾನೆ – 3 ಫಟಾಫಟ್‌ ನ್ಯೂಸ್‌

Cops-fined-biker-for-stunt-on-road.

SHIMOGA, 8 SEPTEMBER 2024 ಇದನ್ನೂ ಓದಿ » ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್‌ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?

ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್‌ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?

locking-tiles-in-shimoga-smart-city-near-nanjappa-hospital.

CITY NEWS, 8 SEPTEMBER 2024 : ಸಾವಿರ ಕೋಟಿಯ ಸ್ಮಾರ್ಟ್‌ ಸಿಟಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಶಿವಮೊಗ್ಗದ ನಾಗರಿಕರಿಗೆ ಹೊಸ ಸಮಸ್ಯೆಗಳು ಶುರುವಾಗಿವೆ. ನಗರದಾದ್ಯಂತ ಅಳವಡಿಸಿರುವ ಲಾಕಿಂಗ್‌ ಟೈಲ್ಸ್‌ಗಳು (Locking Tiles) ಜನರ ಸುಗಮ ಸಂಚಾರಕ್ಕೆ ಬ್ರೇಕ್‌ ಹಾಕುತ್ತಿವೆ. ನಮ್ಮೂರು ಸ್ಮಾರ್ಟ್‌ ಸಿಟಿ ಆಗುವ ಮೊದಲೇ ಚೆನ್ನಾಗಿತ್ತು ಎಂದು ಜನರ ಗೊಣಗುವಂತಾಗಿದೆ. ನೆಮ್ಮದಿಯ ಒಡಾಟಕ್ಕೆ ‘ಲಾಕ್‌ʼ ಸ್ಮಾರ್ಟ್‌ ಸಿಟಿ ಯೋಜನೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ರಸ್ತೆಯ ಎರಡು ಬದಿ ಮತ್ತು ಫುಟ್‌ ಪಾತ್‌ಗಳಲ್ಲಿ ಲಾಕಿಂಗ್‌ ಟೈಲ್ಸ್‌ ಹಾಕಲಾಗಿದೆ. ಇದರಿಂದ … Read more

ಶಿವಮೊಗ್ಗದಲ್ಲಿ ಪೊಲೀಸ್‌, RAF ರೂಟ್‌ ಮಾರ್ಚ್‌, ಎಲ್ಲೆಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು

Police-RAF-Route-march-in-Shimoga-city-and-cctv

SHIMOGA, 8 SEPTEMBER 2024 : ಗಣೇಶ ಚತುರ್ಥಿ ಮತ್ತು ಈದ್‌ ಮಿಲಾದ್‌ ಹಬ್ಬಗಳ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಪೊಲೀಸರು ರೂಟ್‌ ಮಾರ್ಚ್‌ (ROUTE MARCH) ನಡೆಯಿತು. ಮಂಡಲೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ರೂಟ್‌ ಮಾರ್ಚ್‌ ಎ.ಎ.ವೃತ್ತ, ನ್ಯೂ ಮಂಡ್ಲಿ ವೃತ್ತ, ಸಂದೇಶ್‌ ಮೋಟರ್ಸ್‌, ಕೆಜಿಎನ್‌ ವೃತ್ತ, ಇಮಾಮ್‌ ಬಾಡಾ, ಸೀಗೆಹಟ್ಟಿಯಿಂದ ಎ.ಎ.ವೃತ್ತದವರೆಗೆ ಸಾಗಿತು. ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್‌ ರವಿ ಪಾಟೀಲ್‌, ಇನ್ಸ್‌ಪೆಕ್ಟರ್‌ಗಳಾದ ನಾಗರಾಜ್‌, ಮಂಜುನಾಥ್‌, ಬಾಲಕೃಷ್ಣ, ಆರ್‌.ಎ.ಎಫ್‌, … Read more

ಶಿವಮೊಗ್ಗ – ಭದ್ರಾವತಿ ಮಧ್ಯೆ ರೈಲಿಗೆ ಸಿಲುಕಿ ಯುವಕ ಸಾವು, ಭುಜದ ಮೇಲಿದೆ ಹಚ್ಚೆ

railway-track-general-image.webp

SHIMOGA, 8 SEPTEMBER 2024 : ರೈಲಿಗೆ (RAILWAY TRACK) ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗ – ಭದ್ರಾವತಿ ನಡುವೆ ಹಳಿ ಮೇಲೆ ಶನಿವಾರ ಮೃತದೇಹ ಗಮನಿಸಿದ ಕುವೆಂಪು ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲೆಟ್‌ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದರು. ರೈಲಿಗೆ ಸಿಲುಕಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದ. ಮೃತನಿಗೆ 25 ರಿಂದ 30 ವರ್ಷವಾಗಿದೆ. 5.4 ಅಡಿ ಎತ್ತರವಿದ್ದಾನೆ. ಬಲಗೈ ಭುಜದ ಬಳಿ ಅಮ್ಮ ಎಂಬ ಹಚ್ಚೆ ಇದೆ. ಗುಲಾಬಿ ಬಣ್ಣದ ಟೀ ಶರ್ಟ್‌, ಕಪ್ಪ ಬಣ್ಣದ ಜೀನ್ಸ್‌ … Read more

ಗಣಪತಿ ಮೆರವಣಿಗೆಯಲ್ಲಿ ಡೊಳ್ಳಿನ ವಿಚಾರಕ್ಕೆ ಗಲಾಟೆ, ಪೊಲೀಸ್‌ ಸೇರಿ ಹಲವರಿಗೆ ಗಾಯ

Police-Jeep-With-Light-New.

HOLEHONNURU, 8 SEPTEMBER 2024 : ಗಣಪತಿ ವಿಸರ್ಜನ ಪೂರ್ವ ಮೆರವಣಿಗೆ (Procession) ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿದೆ. ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿದ ಹಲವರು ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಅರಬಿಳಚಿ ಕ್ಯಾಂಪ್‌ನಲ್ಲಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ವಿಷಯ ತಿಳಿದು ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿದ್ದಾರೆ. ಈ ಸಂದರ್ಭ ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿ ಗ್ರಾಮಸ್ಥರು ಗಾಯಗೊಂಡಿದ್ದಾರೆ. ಘಟನಾ … Read more