ಶಿವಮೊಗ್ಗದಲ್ಲಿ ಧಗಧಗ ಹೊತ್ತಿ ಉರಿದ ಕಾರು

Car-Incident-at-Sagara-road-near-lion-safari.

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮುಂಭಾಗ ಸುಟ್ಟು ಹೋಗಿದೆ. ಶಿವಮೊಗ್ಗ ತಾಲೂಕು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಮೀಪ ರಾತ್ರಿ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಇದನ್ನೂ ಓದಿ » ಸೋಮಿನಕೊಪ್ಪ ಸಮೀಪ ಕೆಲಸ ಮುಗಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಶಾಕ್ Car Incident Near Lion and Tiger Safari

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಒಂದು ಅಡಿ ಹೆಚ್ಚಳ, ಇವತ್ತು ಎಷ್ಟಿದೆ ಒಳ ಹರಿವು?

-Linganamakki-Dam-General-Image

ಸಾಗರ: ಲಿಂಗನಮಕ್ಕಿ ಜಲಾಶಯಕ್ಕೆ (Dam Level) ಇವತ್ತು 34,680 ಕ್ಯೂಸೆಕ್‌ ಒಳ ಹರಿವು ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಒಳ ಹರಿವು ಹೆಚ್ಚಳವಾಗುವ ಸಾದ್ಯತೆ ಇದೆ. ಜಲಾಶಯದ ನೀರಿನ ಮಟ್ಟ 1795.90 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ ಒಂದು ಅಡಿ ಏರಿಕೆಯಾಗಿದೆ. ಸದ್ಯ ಜಲಾಶಯ ಶೇ.56.77ರಷ್ಟು ಭರ್ತಿಯಾಗಿದೆ. ಇದನ್ನೂ ಓದಿ » ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳಿಗೆ ಎಷ್ಟಿದೆ ಒಳ ಹರಿವು?

ರವೀಂದ್ರನಗರ ಗಣಪತಿ ದೇಗುಲದ ಮುಂಭಾಗ ನಾಗದೇವರ ಪ್ರತಿಷ್ಠಾಪನೆ

Shimoga-News-update

ಶಿವಮೊಗ್ಗ: ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಿರ್ಮಿಸಲಾಗಿರುವ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ಜುಲೈ 13ರಂದು ಬೆಳಿಗ್ಗೆ 8.30ಕ್ಕೆ ‘ನಾಗದೇವರ ಪುನರ್ ಪ್ರತಿಷ್ಠಾಪನಾ’ ಹಮ್ಮಿಕೊಳ್ಳಲಾಗಿದೆ. ರವೀಂದ್ರನಗರ ಮುಖ್ಯ ರಸ್ತೆಯ ಗಣಪತಿ ದೇವಸ್ಥಾನ (temple) ಮುಂಭಾಗದಲ್ಲಿ ಸಮಾರಂಭ ನಡೆಯಲಿದೆ.  ನಾಗಪ್ರತಿಷ್ಠಾಂಗ ಹೋಮ, ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ದತ್ತಿಯ ಆಡಳಿತ ಮಂಡಳಿಯ ಪರವಾಗಿ ಕಾರ್ಯದರ್ಶಿ ಎನ್.ಉಮಾಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು … Read more

ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಕುಸಿತ, ಇವತ್ತು ಎಷ್ಟಿದೆ?

Tunga-Dam-full

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ತುಂಗಾ ಮತ್ತು ಭದ್ರಾ ಜಲಾಶಯಗಳ (Dam Level) ಒಳ ಹರಿವು ಪ್ರಮಾಣ ತಗ್ಗಿದೆ. » ತುಂಗಾ ಜಲಾಶಯ ಗಾಜನೂರಿನ ತುಂಗಾ ಜಲಾಶಯಕ್ಕೆ ಇವತ್ತು 28,013 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ 26,867 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 2.299 ಟಿಎಂಸಿ ನೀರಿನ ಸಂಗ್ರಹವಿದೆ. ಇದನ್ನೂ ಓದಿ » ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳಿಗೆ ಎಷ್ಟಿದೆ ಒಳ ಹರಿವು? … Read more

ಸೋಮಿನಕೊಪ್ಪ ಸಮೀಪ ಕೆಲಸ ಮುಗಿಸಿ ಮನೆಗೆ ಬಂದ ದಂಪತಿಗೆ ಕಾದಿತ್ತು ಶಾಕ್

Police-Jeep-at-Shimoga-General-Image

ಶಿವಮೊಗ್ಗ: ಮನೆಯಲ್ಲಿದ್ದವರು ಕೆಲಸಕ್ಕೆ ತೆರಳಿದಾಗ ಬಾಗಲಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದು ಕಳ್ಳತನ (Theft) ಮಾಡಲಾಗಿದೆ. ಶಿವಮೊಗ್ಗದ ಸೋಮಿನಕೊಪ್ಪ ಸಮೀಪದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಘಟನೆ ಸಂಭವಿಸಿದೆ. ಯೋಗೇಂದ್ರಪ್ಪ ಎಂಬುವವರ ಮನೆಯ ಗೇಟ್‌ಗೆ ಹಾಕಿದ್ದ ಬೀಗ, ಬಾಗಿಲಿನಿಂದ ಮುಂದಿದ್ದ ಕಬ್ಬಿಣ್ಣದ ಬಾಗಿಲಿನ ಇಂಟರ್‌ ಲಾಕ್‌, ಬಾಗಿಲಿನ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಕೊಠಡಿಯ ಬೀರುವಿನ ಲಾಕ್‌ ಮುರಿದು ಕಳ್ಳತನ ಮಾಡಿದ್ದಾರೆ. ವಿನೋಬನಗರ ಪೊಲೀಸ್‌ ಚೌಕಿ ಸಮೀಪ ಯೋಗೇಂದ್ರಪ್ಪ ಅವರು ಡಯೋಗ್ನಸ್ಟಿಕ್‌ … Read more

ಅಡಿಕೆ ಬೆಳೆಗಾರರ ಸಂಘದಿಂದ ಉಪ ವಿಭಾಗಾಧಿಕಾರಿ ಭೇಟಿ, ಚರ್ಚೆ, ಏನೆಲ್ಲ ಮನವಿ ಸಲ್ಲಿಸಲಾಯ್ತು?

areca-growers-meet-Sagara-

ಸಾಗರ: ಅಡಿಕೆ (Adike) ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಸಾಗರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್‌ ಅವರ ನೇತೃತ್ವದ ನಿಯೋಗ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಇದೇ ವೇಳೆ ಮನಲ್ಲಿ ಸಲ್ಲಿಸಲಾಯಿತು. ಇದನ್ನೂ ಓದಿ » ಮರದ ದಿಮ್ಮಿ ಉರುಳಿ ಕಾರ್ಮಿಕನ ತಲೆಗೆ ಗಂಭೀರ ಗಾಯ, ಸಾವು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ರಂಗನಾಥ ಪಡವಗೋಡು, ಗೌತಮ್‌, ಪ್ರವೀಣ್‌, … Read more

ಹೊಸನಗರದಲ್ಲಿ ಮುಂದುವರೆದ ಮಳೆ, ಇವತ್ತು ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಡ್ಯಾಂಗಳಿಗೆ ಎಷ್ಟಿದೆ ಒಳ ಹರಿವು?

Rain-General-Image-youth-With-an-Umbrella

ಹೊಸನಗರ: ತಾಲೂಕಿನಾದ್ಯಂತ ಉತ್ತಮ ಮಳೆ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಚಕ್ರಾ, ಸಾವೇಹಕ್ಲು ಭಾಗದಲ್ಲಿ ನೂರು ಮಿ.ಮೀಗಿಂತಲು ಹೆಚ್ಚಿನ ಮಳೆಯಾಗಿದೆ. (Rainfall Report) ಹೊಸನಗರದ ಮಾನಿ ವ್ಯಾಪ್ತಿಯಲ್ಲಿ 68 ಮಿ.ಮೀ. ಮಳೆಯಾಗಿದೆ. ಯಡೂರಿನಲ್ಲಿ 60 ಮಿ.ಮೀ., ಹುಲಿಕಲ್‌ನಲ್ಲಿ 69 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 87 ಮಿ.ಮೀ., ಚಕ್ರಾದಲ್ಲಿ 155 ಮಿ.ಮೀ., ಸಾವೇಹಕ್ಲು ಭಾಗದಲ್ಲಿ 115 ಮಿ.ಮೀ. ಮಳೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಮಾನಿ ಜಲಾಶಯಕ್ಕೆ 4136 ಕ್ಯೂಸೆಕ್‌ ಒಳ ಹರಿವು ಇದೆ. … Read more

ಶಿವಮೊಗ್ಗದ ಬಿದಿರೆಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ

SHIMOGA-NEWS-UPDATE

ಶಿವಮೊಗ್ಗ: ಬಿದಿರೆಯಲ್ಲಿರುವ ಶಿರಡಿ ಸಾಯಿಬಾಬಾ ಸೇವಾ ಸಮಿತಿಯಿಂದ ಜು.10 ರಂದು ಗುರುಪೂರ್ಣಿಮಾ (Guru Purnima) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಮಿತಿ ಕೋರಿದೆ. ಹೆಚ್ಚಿನ ಮಾಹಿತಿಗೆ 98457 32240 ಅಥವಾ 94487 67067 ಈ ನಂಬರುಗಳಿಗೆ ಸಂಪರ್ಕಿಸಬಹುದು. ಇದನ್ನೂ ಓದಿ » ಸಿಗಂದೂರು ಸೇತುವೆ, ಸಾಗರದಿಂದ ಉಡುಪಿ, ಮಂಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ಮರದ ದಿಮ್ಮಿ ಉರುಳಿ ಕಾರ್ಮಿಕನ ತಲೆಗೆ ಗಂಭೀರ ಗಾಯ, ಸಾವು

Yogendra-gowda-incident-near-devangi-in-thirthahalli.

ತೀರ್ಥಹಳ್ಳಿ: ಮರದ ದಿಮ್ಮಿಗಳನ್ನು (Timber) ಮಣ್ಣಿನ ದಿಬ್ಬದಿಂದ ಕೆಳಗೆ ಉರುಳಿಸುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ಸಮೀಪದ ಕೊಳವಾರ ಗ್ರಾಮದಲ್ಲಿ ಸೋಮವಾರ ಘಟನೆ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಸಕ್ರೆಬೈಲು ನಿವಾಸಿ ಎಸ್.ಟಿ.ಯೋಗೇಂದ್ರ ಗೌಡ (52) ಮೃತರು. ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ವರು ಕಾರ್ಮಿಕರು ಅಕೇಶಿಯಾ ಮರದ ದಿಮ್ಮಿಗಳನ್ನು ದಿಬ್ಬದಿಂದ ಕೆಳಗಿಳಿಸುತ್ತಿದ್ದರು. ಈ ವೇಳೆ ಯೋಗೇಂದ್ರ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದು, ದಿಮ್ಮಿಯೊಂದು ಅವರ ಮೇಲೆ ಉರುಳಿ ತಲೆಗೆ ಗಂಭೀರ ಗಾಯವಾಗಿದೆ. ಸ್ಥಳದಲ್ಲಿದ್ದವರು ತಕ್ಷಣ … Read more

ಸಿಗಂದೂರು ಸೇತುವೆ, ಸಾಗರದಿಂದ ಉಡುಪಿ, ಮಂಗಳೂರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

Sigandur-Bridge-work-photo

ಸಾಗರ: ಸಿಗಂದೂರು ಸೇತುವೆ ಉದ್ಘಾಟನೆ ಬಳಿಕ ಸಾಗರದಿಂದ ಆವಿನಹಳ್ಳಿ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ಸಾರಿಗೆ ಬಸ್‌ (Bus) ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್‌.ಕೆ.ಅಣ್ಣಪ್ಪ ಒತ್ತಾಯಿಸಿದ್ದಾರೆ. ಜುಲೈ 14ರಂದು ಸಿಗಂದೂರು ಸೇತುವೆ ಉದ್ಘಾಟನೆ ಆಗಲಿದೆ. ವಾಹನಗಳ ಸಂಚಾರ ಸರಾಗವಾಗಲಿದೆ. ಹಾಗಾಗಿ ಆವಿನಹಳ್ಳಿ ಮೂಲಕ ಸಾಗರದಿಂದ ಉಡುಪಿಗೆ ಸಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಆವಿನಹಳ್ಳಿ, ಹೊಳೆಬಾಗಿಲು, ಸಿಗಂದೂರು, ತುಮರಿ, ಕೊಲ್ಲೂರು, ಕುಂದಾಪುರ, ಉಡುಪಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಿದರೆ … Read more