ಶಿವಮೊಗ್ಗದ ಕೃಷಿ ಮೇಳಕ್ಕೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಜನರು, ಏನೇನಿದೆ ಮೇಳದಲ್ಲಿ?
ಶಿವಮೊಗ್ಗ: ನವುಲೆಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ರೈತರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಮೊದಲ ದಿವನೇ ಸುಮಾರು 50 ಸಾವಿರದಷ್ಟು ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ. ಕೃಷಿಯಲ್ಲಿನ ಆವಿಷ್ಕಾರಗಳು, ಸಂಶೋಧನೆ ಹಾಗೂ ತಾಂತ್ರಿಕತೆಗಳ ಬಗ್ಗೆ ರೈತರು ಮಾಹಿತಿ ಪಡೆದರು. ಮೇಳದಲ್ಲಿ ಆಹಾರ, ತಿಂಡಿ ಮಳಿಗೆಗಳು ಇದ್ದು, ಧಾರವಾಡ ಪೇಡೆ, ಬೆಳಗಾವಿಯ ಕುಂದಾ, ಮೇಲುಕೋಟೆಯ ಪುಳಿಯೊಗರೆ, … Read more