BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ

First Flight - Indigo ATR 72 Flight in Shimoga Airport

ಶಿವಮೊಗ್ಗ: ಸಿಬ್ಬಂದಿ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ದೇಶಾದ್ಯಂತ ಇಂಡಿಗೋ ವಿಮಾನಯಾನ (Indigo Flight) ಸೇವೆ ವ್ಯತ್ಯಯವಾಗಿದೆ. ಕಳೆದ ಮೂರು ದಿನದಲ್ಲಿ ಒಂದು ಸಾವಿರಕ್ಕು ಹೆಚ್ಚು ವಿಮಾನ ಹಾರಾಟ ರದ್ದಾಗಿದೆ ‍(Flight Cancel) ಎಂದು ವರದಿಯಾಗಿದೆ. ಈ ಮಧ್ಯೆ ಶಿವಮೊಗ್ಗಕ್ಕು ಬಿಸಿ ತಟ್ಟಿದೆ. ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರತಿದಿನ ಇಂಡಿಗೋ ವಿಮಾನ ಸೇವೆ ಇದೆ. ಆದರೆ ಸೇವೆಯಲ್ಲಿ ವ್ಯತ್ಯಯದಿಂದಾಗಿ ಇಂದು ಇಂಡಿಗೋ ವಿಮಾನ ಸಂಚಾರ ರದ್ದಾಗಿದೆ. ಇವತ್ತು 60 ಮಂದಿ ಪ್ರಯಾಣಿಕರು ಇಂಡಿಗೋ … Read more

ಶಿವಮೊಗ್ಗದಲ್ಲಿ ಅಲರ್ಟ್‌, ರೈಲುಗಳಲ್ಲಿ ಶೋಧ, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

Police-checking-at-Railway-station-and-Airport-in-Shimoga

ಶಿವಮೊಗ್ಗ: ದೆಹಲಿ ಸ್ಪೋಟದ ಬೆನ್ನಿಗೆ ಶಿವಮೊಗ್ಗದಲ್ಲಿ ಕಟ್ಟೆಚ್ಚರ (Alert) ಮುಂದುವರೆದಿದೆ. ರೈಲು, ಬಸ್ಸು ನಿಲ್ದಾಣಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕರು ಹೆಚ್ಚು ಸೇರುವ ಕಡೆಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶ್ವಾನ ದಳ ಮತ್ತು ಬಾಂಬ್‌ ಪತ್ತೆ ದಳದ ಅಧಿಕಾರಿಗಳು ಪರಿಶೀಲನೆ ಕಾರ್ಯ ಮುಂದುವರೆಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಹೇಗಿತ್ತು ಸ್ಥಿತಿ? ಶಿವಮೊಗ್ಗ ಪೊಲೀಸರು ಮತ್ತು ರೈಲ್ವೆ ಪೊಲೀಸರು ಜಂಟಿಯಾಗಿ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ಕಾರ್ಯ ನಡೆಸಿದರು. ಡಿವೈಎಸ್‌ಪಿ ಸಂಜೀವ್‌ ಕುಮಾರ್‌, ರೈಲ್ವೆ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಅವರ … Read more

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

SHIMOGA-NEWS-UPDATE

ಶಿವಮೊಗ್ಗ: ‘ನಿಮ್ಮ ರೀಲ್ಸ್‌ನ ಅಭಿಮಾನಿಗಳು’ ಎಂದು ತಿಳಿಸಿ ಟೀಚರ್‌ (Teacher) ಒಬ್ಬರನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ. ಖಾಸಗಿ ಶಾಲೆಯೊಂದರ ಶಿಕ್ಷಕ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ … Read more

ಶಿವಮೊಗ್ಗ ವಿಮಾನ ನಿಲ್ದಾಣದ ಗೇಟ್‌ ಮುಂದೆ ಪೆಂಡಾಲ್‌ ಹಾಕಿ ರೈತರ ಧರಣಿ, ಇಲ್ಲಿದೆ ಕಾರಣ

091025 Farmers protest in Front of Shimoga Airport

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡದ ಸರ್ಕಾರದ ಕ್ರಮ ಖಂಡಿಸಿ ಸೋಗಾನೆ ಭೂಮಿ ಹಕ್ಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ವಿಮಾನ ನಿಲ್ದಾಣದ (Airport) ಗೇಟ್‌ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರು, ಅವರ ಕುಟುಂಬದವರು ಧರಣಿಯಲ್ಲಿ ಭಾಗವಹಿಸಿದ್ದಾರೆ. ವಿಮಾನ ನಿಲ್ದಾಣದ ಗೇಟ್‌ ಮುಂಭಾಗ ಮಹಾತ್ಮ ಗಂಧೀಜಿ ಫೋಟೊ ಇರಿಸಿಕೊಂಡು ರೈತರು ಧರಣಿ ಆರಂಭಿಸಿದ್ದಾರೆ. ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಪ್ರಮುಖಾಂಶ ಇನ್ನು, ವಿಮಾನ ನಿಲ್ದಾಣದ ಮುಂಭಾಗ … Read more

ಶಿವಮೊಗ್ಗ ಏರ್‌ಪೋರ್ಟ್‌ ಬಳಿ ಶಾಪಿಂಗ್‌ ಮಾಲ್‌, ಹೊಟೇಲ್‌, KSIIDC ಅಧ್ಯಕ್ಷರು ಏನೆಲ್ಲ ಹೇಳಿದರು? ಇಲ್ಲಿದೆ ಹೈಲೈಟ್ಸ್‌

KSIIDC-President-Nanjayanamata-speaks-about-shimoga-airport

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ (Airport) ಬಳಕೆಯಾಗಿ ಉಳಿದಿರುವ 111 ಎಕರೆ ಪ್ರದೇಶದಲ್ಲಿ ಶಾಪಿಂಗ್‌ ಮಾಲ್‌, ಹೊಟೇಲ್‌ ನಿರ್ಮಿಸುವ ಯೋಚನೆ ಇದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಿಳಿಸಿದರು. ಮಲ್ನಾಡ್‌ ಶೈರ್‌ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಜಿ.ನಂಜಯ್ಯನಮಠ, ಶಿವಮೊಗ್ಗ ವಿಮಾನ ನಿಲ್ದಾಣದ ಬಳಕೆಗೆ 780 ಎಕರೆ ಜಾಗವಿದೆ. ಉಳಿಕೆ 111 ಎಕರೆ ಜಾಗವನ್ನು ಲೀಸ್‌ಗೆ ನೀಡುವ ಯೋಚನೆ ಇದೆ. ಅಲ್ಲಿ ಶಾಪಿಂಗ್‌ ಮಾಲ್‌ ಅಥವಾ ಹೊಟೇಲ್‌ ಸೇರಿ ಸಾರ್ವಜನಿಕ ಬಳಕೆಗೆ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರದಿಂದ ₹6.50 ಕೋಟಿ

Madhu-Bangarappa-About-Shimoga-Airport

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Airport) ನ್ಯಾವಿಗೇಷನ್‌ ಉಪಕರಣ ಡಿವಿಓರ್‌ ಅಳವಡಿಕೆಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ₹6.50 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಲಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಸಂಬಂಧ ಸಚಿವ ಮಧು ಬಂಗಾರಪ್ಪ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಪ್ರಕಟಿಸಿದ್ದಾರೆ. ಇದರ ವಿವರ ಇಲ್ಲಿದೆ. ನೈಟ್‌ ಲ್ಯಾಂಡಿಂಗ್‌ಗೆ ಅನುಕೂಲವಾಗುವ ನ್ಯಾವಿಗೇಷನ್‌ ಉಪಕರಣ ತರಿಸಲಾಗಿದೆ. ಆದರು ರಾಜ್ಯ ಸರ್ಕಾರ ಅಳವಡಿಕೆಗೆ ಆಸಕ್ತಿ ತೋರಿಸಿಲ್ಲ ಎಂದು ಕಳೆದ … Read more

ಶಿವಮೊಗ್ಗ ವಿಮಾನ ನಿಲ್ದಾಣ, ಸಂಸದ ರಾಘವೇಂದ್ರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಆಕ್ರೋಶ, ಏನೆಲ್ಲ ಹೇಳಿದರು?

Madhu-Bangarappa-in-Shimoga-Ambedkar-Bhavana

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣವನ್ನು (Airport) ರಾಜ್ಯ ಸರ್ಕಾರಕ್ಕೆ ನಿರ್ವಹಣೆಗೆ ನೀಡಬಾರದಾಗಿತ್ತು ಎಂಬ ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿನಿಸ್ಟರ್‌ ಹೇಳಿದ್ದೇನು? ರಾಜ್ಯ ಸರ್ಕಾರ ಬೆವರು ಸುರಿಸಿ ಸಂಗ್ರಹಿಸಿದ ತೆರಿಗೆ ಹಣದಿಂದ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗಿದ್ದ ಮೇಲೆ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಯಾಕೆ ನೀಡಬೇಕು? ಇದನ್ನು ಅದಾನಿಯಂತಹ ಖಾಸಗಿ ಸಂಸ್ಥೆಗೆ ನೀಡಬೇಕಿತ್ತೇ? ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ವಿಮಾನ ನಿಲ್ದಾಣ … Read more

‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಪಕರಣ ತರಿಸಿ 15 ದಿನವಾಯ್ತು, ಅಳವಡಿಸಿಲ್ಲ’, ರಾಘವೇಂದ್ರ ಗರಂ

MP-BY-raghavendra-about-Shimoga-Airport-Flight

Visibility ಶಿವಮೊಗ್ಗ: ವಿಸಿಬಲಿಟಿ (Visibility) ಸಮಸ್ಯೆಯಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್‌ ಆಗಲು ಸಮಸ್ಯೆಯಾಗುತ್ತಿದೆ. ಇದನ್ನು ನೀಗಿಸಲು 15 ದಿನದ ಹಿಂದೆಯೇ ಉಪಕರಣ ತರಿಸಲಾಗಿದೆ. ಆದರೆ ಇದನ್ನು ಅಳವಡಿಸಲು ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ವಿಳಂಬ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ವಿಮಾನ ನಿಲ್ದಾಣದ ವಿಸಿಬಲಿಟಿ ಸಮಸ್ಯೆ ನೀಗಿಸಲು ಜೂನ್‌ ಕೊನೆಯ ವಾರದಲ್ಲಿ ಉಪಕರಣ ತರಿಸಲಾಗಿದೆ. ಇದರ ಅಳವಡಿಕೆಗೆ ಫೌಂಡೇಷನ್‌, ಆಂಟೆನಾ … Read more

ಶಿವಮೊಗ್ಗ ವಿಮಾನ ನಿಲ್ದಾಣ, ಎಡದಂಡೆ ನಾಲೆ ನೀರಿನಿಂದ ರೈತರಿಗೆ ಸಂಕಷ್ಟ, ಅಧಿಕಾರಿಗಳು ಭೇಟಿ, ಏನಿದು ಕೇಸ್‌?

Dr-Amshumanth-visit-near-kachinakatte

ಶಿವಮೊಗ್ಗ: ಭದ್ರಾ ಎಡದಂಡೆ ಚಾನಲ್‌ (Canal) ನೀರು ಮತ್ತು ವಿಮಾನ ನಿಲ್ದಾಣದಿಂದ ಹೊರಗೆ ಹರಿಯುವ ನೀರು ತೋಟ, ಗದ್ದೆ ಮತ್ತು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಭದ್ರಾ ಕಾಡಾ ಅಧ್ಯಕ್ಷರು ಮತ್ತು ಅಧಿಕಾರಿಗಳ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಳೆಯಾದಾಗ, ಜಲಾಶಯದಿಂದ ನೀರು ಹರಿಸಿದಾಗ ಎಡದಂಡೆ ನಾಲೆ ತುಂಬಿ ಹರಿಯುತ್ತದೆ. ವಿಮಾನ ನಿಲ್ದಾಣದಿಂದ ಹೊರಗೆ ಹರಿಯುವ ಮಳೆ ನೀರು ಕೂಡ ನಾಲೆಗೆ ಸೇರುತ್ತದೆ. ಹಾಗಾಗಿ ಹೆಚ್ಚಿನ … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪೈಲೆಟ್‌ ತರಬೇತಿ ಸಂಸ್ಥೆ, ಕನ್ನಡಿಗರಿಗೆ ಶೇ.25ರಷ್ಟು ಸೀಟ್‌, ಶುಲ್ಕ ವಿನಾಯಿತಿ

020823-Private-Jets-visit-Shivamogga-Airport-at-Sogane.webp

ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿ (Airport) ವೈಮಾನಿಕ ತರಬೇತಿ ಸಂಸ್ಥೆ (ಎಫ್‌.ಟಿ.ಓ) ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್‌ ಆಹ್ವಾನಿಸಲಾಗಿದೆ. ಪ್ರತಿ ವರ್ಷ ಇಲ್ಲಿ 100 ಪೈಲೆಟ್‌ಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಶಿವಮೊಗ್ಗದಲ್ಲಿ ವೈಮಾನಿಕ ತರಬೇತಿ (ಎಫ್.ಟಿ.ಓ) ಸಂಸ್ಥೆ ಆರಂಭಕ್ಕೆ ಅನುಭವಿ ಖಾಸಗಿ ಏಜೆನ್ಸಿಗಳಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಬಿಡ್‌ದಾರರು ಇಲ್ಲಿ ಎಫ್‌.ಟಿ.ಓ ನಿರ್ಮಿಸಿ, 20 ವರ್ಷ ನಿರ್ವಹಣೆ ಮಾಡಬೇಕು. ಆದರೆ ಇದಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ ಎಂದು ಷರತ್ತು ವಿಧಿಸಿದೆ. ಎಲ್ಲವು ರೂಲ್ಸ್‌ … Read more