ಶಿವಮೊಗ್ಗದ ಸರ್ಜಿ ಫೌಂಡೇಷನ್‌ಗೆ ಆಂಬುಲೆನ್ಸ್‌

Ambulance-for-Sarji-Foundation

ಶಿವಮೊಗ್ಗ: ಶಿವಮೊಗ್ಗ ರೌಂಡ್ ಟೇಬಲ್ 166 ವತಿಯಿಂದ ಸರ್ಜಿ ಫೌಂಡೇಷನ್‌ಗೆ ಆಂಬುಲೆನ್ಸ್ ಹಸ್ತಾಂತರ ಮಾಡಲಾಯಿತು. ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಚಿಂತೆ ಬೆಂಬಿಡದೆ ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ರೌಂಡ್ ಟೇಬಲ್‌ನಂತಹ ಸಂಸ್ಥೆಗಳು ಸಮಾಜದ ಆರೋಗ್ಯ ಕಾಪಾಡಲು, ಮೂಲಸೌಕರ್ಯ ಬಲಪಡಿಸಲು ನೀಡುತ್ತಿರುವ ಕೊಡುಗೆ ಅಪಾರ ಎಂದರು. ಸರ್ಜಿ ಸಮೂಹ ಸಂಸ್ಥೆಯ ನಿರ್ದೇಶಕರಾದ ಈಶ್ವರ್ ಸರ್ಜಿ, ನಮಿತಾ ಸರ್ಜಿ, ಶುಶ್ರುತ್, ಗಗನ್ ಕೋಟೆ, ವಾದಿರಾಜ್ ಕುಲಕರ್ಣಿ, … Read more

ಶಿವಮೊಗ್ಗದಲ್ಲಿ ಆಂಬುಲೆನ್ಸ್‌ ಪರಿಶೀಲಿಸಿದ ಪೊಲೀಸ್‌, ಚಾಲಕನಿಗೆ ಕಾದಿತ್ತು ಶಾಕ್

Fine-for-ambulance-in-Shimoga-by-Traffic-police.

ಶಿವಮೊಗ್ಗ: ಆಂಬುಲೆನ್ಸ್‌ (Ambulance) ತಡೆದು ತಪಾಸಣೆ ಮಾಡಿದಾಗ ಚಾಲಕ ಮದ್ಯ ಸೇವಿಸಿರುವುದು ಮತ್ತು ವಾಹನಕ್ಕೆ ಇನ್ಸುರೆನ್ಸ್‌ ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಆಂಬುಲೆನ್ಸ್‌ ಚಾಲಕನಿಗೆ ₹13,000 ದಂಡ ವಿಧಿಸಲಾಗಿದೆ. ಶಿವಮೊಗ್ಗ ನಗರದ ಐಬಿ ಸರ್ಕಲ್‌ ಬಳಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ವೇಳೆ ಆಂಬುಲೆನ್ಸ್‌ ಪರಿಶೀಲಿಸಿದ್ದರು. ಈ ವೇಳೆ ಆಂಬುಲೆನ್ಸ್‌ ಚಾಲಕ ಮದ್ಯ ಸೇವಿಸಿರುವುದು ಗೊತ್ತಾಗಿತ್ತು. ಅಲ್ಲದೆ ವಾಹನಕ್ಕೆ ಇನ್ಸುರೆನ್ಸ್‌ ಕೂಡ ಇರಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂತು ಏರ್‌ ಆಂಬುಲೆನ್ಸ್‌ ವಿಮಾನ, ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲಕ್ಕೆ ರೋಗಿ ಶಿಫ್ಟ್‌

Air-Ambulance-in-Shimoga-Airport.

SHIVAMOGGA LIVE NEWS | 11 JANUARY 2024 SHIMOGA : ಎದೆ ನೋವಿನಿಂದ ಬಳಲುತ್ತಿದ್ದ ಶಿವಮೊಗ್ಗದ ಗಾಂಧಿ ಬಜಾರ್‌ ನಿವಾಸಿಯೊಬ್ಬರನ್ನು ಏರ್‌ ಆಂಬುಲೆನ್ಸ್‌ ಮೂಲಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೆ ಮೊದಲ ಬಾರಿ ಶಿವಮೊಗ್ಗ ವಿಮಾನ ನಿಲ್ದಾಣದವನ್ನು ಏರ್‌ ಆಂಬುಲೆನ್ಸ್‌ಗಾಗಿ ಬಳಸಿಕೊಳ್ಳಲಾಗಿದೆ. ಚೇತನ್‌ ಎಂಬುವವರು ಜ.8ರಂದು ನೆಹರು ಕ್ರೀಡಾಂಗಣದಲ್ಲಿ ಜಾಗಿಂಗ್‌ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಪಕ್ಕದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ಹಿನ್ನೆಲೆ … Read more

ನ್ಯೂ ಮಂಡ್ಲಿಯಲ್ಲಿ ವ್ಯಕ್ತಿಗೆ ಇಟ್ಟಿಗೆಯಿಂದ ಹಲ್ಲೆ | ಮೇಲಿನ ಕುಂಚೇನಹಳ್ಳಿ, ಗಾಡಿಕೊಪ್ಪದಲ್ಲಿ ಅಪಘಾತ, ಮೂವರಿಗೆ ಗಾಯ

Crime-News-General-Image

SHIVAMOGGA LIVE NEWS | 4 JANUARY 2024 ನ್ಯೂ ಮಂಡ್ಲಿಯಲ್ಲಿ ವ್ಯಕ್ತಿಗೆ ಇಟ್ಟಿಗೆಯಿಂದ ಹಲ್ಲೆ SHIMOGA : ನೀರಿನ ವಿಚಾರವಾಗಿ ನೆರಹೊರೆಯವರ ಮಧ್ಯೆ ಗಲಾಟೆಯಾಗಿದ್ದು ವ್ಯಕ್ತಿಯೊಬ್ಬನಿಗೆ ಇಟ್ಟಿಗೆಯಿಂದ ಹೊಡೆಯಲಾಗಿದೆ ಎಂದು ಆರೋಪಿಸಲಾಗಿದೆ. ನಗರದ ನ್ಯೂ ಮಂಡ್ಲಿಯಲ್ಲಿ ಘಟನೆ ಸಂಭವಿಸಿದೆ. ದಾದಾಪೀರ್‌ ಎಂಬುವವರ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಲಾಗಿದ್ದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಸಿದ್ದಾರೆ. ತಲೆ ಮತ್ತು ಕಣ್ಣಿನ ಭಾಗಕ್ಕೆ ಪೆಟ್ಟಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪಕ್ಕದ ಮನೆಯವರ ಜೊತೆ ನೀರು ಮತ್ತು ಮನೆ ಸಮೀಪ … Read more

ನೇಣು ಬಿಗಿದ ಸ್ಥಿತಿಯಲ್ಲಿ ಆಂಬುಲೆನ್ಸ್‌ ಚಾಲಕನ ಮೃತದೇಹ ಪತ್ತೆ

Ambulance-Driver-Succumbed-at-Thirthahalli

SHIVAMOGGA LIVE NEWS | 19 OCTOBER 2023 THIRTHAHALLI : ಆಂಬುಲೆನ್ಸ್‌ (Ambulance) ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀರ್ಥಹಳ್ಳಿಯ ಬೆಟ್ಟಮಕ್ಕಿಯ ಬಾಡಿಗೆ ನಿವಾಸದಲ್ಲಿ ರಮೇಶ್‌ (45) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಯಲ್ಲಿ ಸುಮಾರು 10 ವರ್ಷದಿಂದ ಆಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಮೇಶ್‌ ಹೊಸನಗರ ಪಟ್ಟಣದವರು. ಅಲ್ಲಿಯೇ ಅಂತ್ಯಕ್ರಿಯೆ ನಡೆಯಿತು. ಇವರಿಗೆ ಇಬ್ಬರು ಪುತ್ರರಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ … Read more

ಆಂಬುಲೆನ್ಸ್‌ ಡಿಕ್ಕಿಯಾಗಿ ಸಂತೆ ಕಡೂರು ನಿವಾಸಿಗೆ ಗಂಭೀರ ಗಾಯ, ಚಿಕಿತ್ಸೆ ವೇಳೆ ಕುಟುಂಬಕ್ಕೆ ಮತ್ತೊಂದು ಶಾಕ್

200123 Police Jeep With Light jpg

SHIVAMOGGA LIVE NEWS | 21 MAY 2023 SHIMOGA : 108 ಆಂಬುಲೆನ್ಸ್‌ (Ambulance) ಡಿಕ್ಕಿಯಾಗಿ ಬೈಕ್‌ ಸವಾರರೊಬ್ಬರಿಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇದೆ ವೇಳೆ ಮಂಗಳೂರಿನಲ್ಲಿ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಈ ಹಿನ್ನೆಲೆ ಅಪಘಾತದ ಕುರಿತು ತಡವಾಗಿ ದೂರು ದಾಖಲಾಗಿದೆ. ಏನಿದು ಪ್ರಕರಣ? ಸಂತೆ ಕಡೂರು ಗ್ರಾಮದ ರಾಂಪುರದ ಬಸವರಾಜಪ್ಪ ಎಂಬುವವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಮೇ.14ರಂದು ಸಂಜೆ ಕೆಲಸ ಮುಗಿಸಿ … Read more

ಆಯನೂರು ಬಳಿ ಅಪಘಾತ, ಯುವಕನ ಪಾಲಿಗೆ ಯಮ ಸ್ವರೂಪಿಯಾದ ಆಂಬುಲೆನ್ಸ್‌

Ambulance-hits-bike-at-ayanuru

SHIVAMOGGA LIVE NEWS | 14 MAY 2023 SHIMOGA : ಬೈಕ್‌ಗೆ ಆಂಬುಲೆನ್ಸ್‌ (Ambulance) ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದಾನೆ. ಶಿವಮೊಗ್ಗದ ಆಯನೂರಿನ ಚನ್ನಳ್ಳಿ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ. WATCH VIDEO ಬೆಳಗುತ್ತಿಯ ಪುನೀತ್‌ ಎಂಬಾತ ಮೃತ ವ್ಯಕ್ತಿ. ಪುನೀತ್‌ ಬೈಕಿನಲ್ಲಿ ಶಿವಮೊಗ್ಗದಿಂದ ಬೆಳಗುತ್ತಿ ಕಡೆಗೆ ತೆರಳುತ್ತಿದ್ದರು. ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಆಂಬುಲೆನ್ಸ್‌ (Ambulance) ಪುನಿತ್‌ ಬೈಕಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪುನಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್‌ ನಜ್ಜುಗುಜ್ಜಾಗಿದೆ. ಕುಂಸಿ ಪೊಲೀಸ್‌ ಠಾಣೆ … Read more

ಶಿವಮೊಗ್ಗ ಪೊಲೀಸರಿಂದ ಅಂಬುಲೆನ್ಸ್’ಗೆ ಜೀರೋ ಟ್ರಾಫಿಕ್ ವ್ಯವಸ್ಥೆ

Zero-Traffic-For-Ambulance-From-Shimoga

SHIVAMOGGA LIVE NEWS | SHIMOGA | 9 ಜೂನ್ 2022 ZERO TRAFFIC ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಗೆ ತುರ್ತು ಚಿಕಿತ್ಸೆ ಹಿನ್ನೆಲೆ ಆಂಬುಲೆನ್ಸ್’ಗೆ ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ (ZERO TRAFFIC) ವ್ಯವಸ್ಥೆ ಕಲ್ಪಿಸಿದ್ದಾರೆ. ಭದ್ರಾವತಿಯ ರಾಧಿಕಾ (18) ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿತ್ತು. ತುರ್ತಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಬೇಕಿದ್ದರಿಂದ ರಾಧಿಕಾ ಅವರು … Read more

ಸಿಗಂದೂರು ಸಮೀಪ ರಾತ್ರಿ ಭೀಕರ ಅಪಘಾತ, ಮಹಿಳೆ ಸಾವು

Accident-Near-Sigandur-temple-bykodu

SHIVAMOGGA LIVE NEWS | 3 ಮಾರ್ಚ್ 2022 ಸಿಗಂದೂರು ಚೌಡೇಶ್ವರಿ ದೇವಿ ಸನ್ನಿಧಿಗೆ ತೆರಳುತ್ತಿದ್ದ ಭಕ್ತರಿದ್ದ ಕ್ರೂಸರ್ ಪಲ್ಟಿಯಾಗಿ ಕಂದಕ್ಕೆ ಉರುಳಿದೆ. ಮಹಿಳೆಯೊಬ್ಬರು ಮೃತಪಟ್ಟಿದ್ದು ಐವರು ಗಾಯಗೊಂಡಿದ್ದಾರೆ. ಬ್ಯಾಕೋಡು ಸಮೀಪ ಒಕ್ಕೋಡಿ ಬಳಿ ರಸ್ತೆ ಪಕ್ಕದ ಗುಂಡಿಗೆ ಕ್ರೂಸರ್ ಪಲ್ಟಿಯಾಗಿದೆ. ರಾತ್ರಿ 9 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಸ್ಥಳದಲ್ಲೇ ಮಹಿಳೆ ಸಾವು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ 11 ಮಂದಿ ಮುರುಡೇಶ್ವರ ಪ್ರವಾಸ ಮುಗಿಸಿ ಸಿಗಂದೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಒಕ್ಕೋಡಿ ಬಳಿ ರಸ್ತ ಪಕ್ಕದ … Read more

ಮೆಗ್ಗಾನ್ ಆಸ್ಪತ್ರೆ ಮುಂದೆ ಆಂಬುಲೆನ್ಸ್ ಚಾಲಕರ ಮಧ್ಯೆ ಗಲಾಟೆ, ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್

Mc-Gann-Hospital

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021 ರೋಗಿಯನ್ನು ಕರೆದೊಯ್ಯುವ ವಿಚಾರವಾಗಿ ಇಬ್ಬರು ಆಂಬುಲೆನ್ಸ್ ಚಾಲಕರ ಮಧ್ಯೆ ಗಲಾಟೆಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಘಟನೆ ಸಂಭವಿಸಿದೆ. ಖಾಸಗಿ ಆಂಬಲೆನ್ಸ್ ಚಾಲಕರಾದ ಸಮೀರ್ ಮತ್ತು ಅಮರೇಶ್ ಎಂಬುವವರ ಮಧ್ಯೆ ಗಲಾಟೆಯಾಗಿದೆ. ಬಾಡಿಗೆ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸಮೀರ್ ಎಂಬಾತ ಮರದ ಪೀಸ್ ತೆಗೆದುಕೊಂಡು ಅಮರೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಕೊಲೆ ಬೆದರಿಕೆಯನ್ನು ಒಡ್ಡಿದ್ದಾನೆ ಎಂದು … Read more