ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು
ಆನಂದಪುರಂ: ಸಮೀಪದ ಗೌತಮಪುರದ ನಿವೃತ್ತ ಶಿಕ್ಷಕ ಮಂಜಪ್ಪ ಎಂಬುವವರ ಅಡಿಕೆ ತೋಟದಲ್ಲಿ ಮರದಿಂದ ಗೊನೆಗಳ ಕಳವು ಮಾಡಲಾಗಿದೆ. ಕೊಯ್ಲಿನ ಹಂತದಲ್ಲಿದ್ದ ಐದು ಕ್ವಿಂಟಾಲ್‌ನಷ್ಟು ಅಡಿಕೆ ಕಳುವಾಗಿದೆ ಎಂದು ತೋಟದ ಮಾಲೀಕ ಮಂಜಪ್ಪ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೊ, ಏನಂದ್ರು ಅಧ್ಯಕ್ಷರು?