ಹಾಲಿನ ಕ್ಯಾಂಟರ್‌, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು

car-and-canter-mishap-at-gouthamapura.

SHIVAMOGGA LIVE NEWS | 25 JUNE 2024 SAGARA : ಹಾಲಿನ ಕ್ಯಾಂಟರ್ ಮತ್ತು ಒಮ್ನಿ ಕಾರು (Car) ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಾಗರ ತಾಲೂಕು ಗೌತಮಪುರದಲ್ಲಿ ಘಟನೆ ಸಂಭವಿಸಿದೆ. ಆನಂದಪುರ ಕಡೆಯಿಂದ ಧಾರವಾಡಕ್ಕೆ ಹೋಗುತ್ತಿದ್ದ ನಂದಿನಿ ಹಾಲಿನ ಕ್ಯಾಂಟರ್ ಮತ್ತು ಶಿಕಾರಿಪುದ ಕಡೆಯಿಂದ ಆನಂದಪುರಕ್ಕೆ ಬರುತ್ತಿದ್ದ ಮಾರುತಿ ಓಮ್ಮಿ ಡಿಕ್ಕಿಯಾಗಿವೆ. ಓಮ್ಮಿಯಲ್ಲಿದ್ದ ವೀರಪ್ಪ(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓಮ್ನಿ ಕಾರಿನಲ್ಲಿದ್ದ ಉಳಿದ ನಾಲ್ವರಿಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ … Read more

ಬ್ಯಾಂಕ್‌ ಮ್ಯಾನೇಜರ್‌ ಮನೆಯ ಇಂಟರ್‌ ಲಾಕ್‌ ಮುರಿದು ಒಳ ನುಗ್ಗಿದ ಕಳ್ಳರು

281123-Anandapura-Police-Station-Board.webp

SHIVAMOGGA LIVE NEWS | 15 JUNE 2024 ANANDAPURA : ಮನೆಯಲ್ಲಿ ಯಾರೂ ಇಲ್ಲದಾಗ ಬಾಗಿಲಿನ ಇಂಟರ್ ಲಾಕ್ (interlock) ಮುರಿದು ಬಂಗಾರ ಮತ್ತು ಹಣವನ್ನು ಕಳವು ಮಾಡಿದ ಘಟನೆ ಅಂದಾಸುರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೆನರಾ ಬ್ಯಾಂಕ್ ಮ್ಯಾನೇಜ‌ರ್ ಆಗಿದ್ದ ಅಬ್ದುಲ್ ಅಹಮದ್‌ ಅವರು ಅಂದಾಸುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪದೋನ್ನತಿ ಮೇರೆಗೆ ಅವರಿಗೆ ಮಣಿಪಾಲಕ್ಕೆ ವರ್ಗಾವಣೆಯಾಗಿತ್ತು. ಶನಿವಾರ ಮಣಿಪಾಲಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು, ಮನೆಯನ್ನು ಇನ್ನೂ ಖಾಲಿ ಮಾಡಿರಲಿಲ್ಲ. ಬೀರುವಿನಲ್ಲಿ ಇಟ್ಟಿದ್ದ 330 … Read more

ಆನಂದಪುರ ಸುತ್ತಮುತ್ತ ಇವತ್ತು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವ್ಯತ್ಯಯವಾಗಲಿದೆ?

power cut mescom ELECTRICITY

SHIVAMOGGA LIVE NEWS | 8 JUNE 2024 ANANDAPURA : ವಿದ್ಯುತ್ ಮಾರ್ಗ ನಿರ್ವಹಣೆ ಕಾಮಗಾರಿ ಹಿನ್ನೆಲೆ ಜೂ.8ರಂದು ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಆನಂದಪುರಂ, ಮಲಂದೂರು, ಯಡೇಹಳ್ಳಿ, ದಾಸಕೊಪ್ಪ, ಆಚಾಪುರ, ಇಸ್ಲಾಂಪುರ, ಲಕ್ಕವಳ್ಳಿ, ಕೆರೆಹಿತ್ತಲು, ಗಿಳಾಲಗುಂಡಿ, ಚೆನ್ನಕೊಪ್ಪ, ತಂಗಳವಾಡಿ, ಕೊಡ್ಲಿಕೊಪ್ಪ, ಗೇರುಬೀಸು, ಇರುವಕ್ಕಿ, ತಾವರೆಹಳ್ಳಿ, ಜೇಡಿಸರ, ಅಡೂರು, ಬಳ್ಳಿಬೈಲು, ಕೊಂಗನಹೊಸಳ್ಳಿ, ಹೆಗ್ಗೋಡಿ ಗ್ರಾಮದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (POWER CUT) ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ … Read more

ಹೆದ್ದಾರಿಯಲ್ಲಿ ಲಾಂಗ್‌ ಹಿಡಿದು ಓಡಾಡಿದವನಿಗೆ ಧರ್ಮದೇಟು, ಕೆಲ ಹೊತ್ತು ಸ್ಥಳದಲ್ಲಿ ಆತಂಕ

youth-shows-long-at-anandapura-highway-road.

SHIVAMOGGA LIVE NEWS | 26 MAY 2024 ANANDAPURA : ಲಾಂಗ್‌ ಹಿಡಿದುಕೊಂಡು ಹೆದ್ದಾರಿಯಲ್ಲಿ ಓಡಾಡಿ ಆತಂಕ ಮೂಡಿಸಿದ್ದ ಯುವಕನಿಗೆ (Youth) ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಆನಂದಪುರದಲ್ಲಿ ಘಟನೆ ಸಂಭವಿಸಿದೆ. ಸದ್ಯ ಇದರ ವಿಡಿಯೋ ವೈರಲ್‌ ಆಗಿದೆ. ಯುವಕನೊಬ್ಬ ಲಾಂಗ್‌ ಹಿಡಿದು ನಡೆದು ಹೋಗುತ್ತಿರುವುದನ್ನು ಕಾರಿನಲ್ಲಿದ್ದವರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಲಾಂಗ್‌ ಹಿಡಿದು ತೆರಳುತ್ತಿದ್ದವನನ್ನು ಸ್ಥಳೀಯರು ತಡೆದಿದ್ದಾರೆ. ಈ ವೇಳೆ ‘ನನ್ನ ತಮ್ಮನಿಗೆ ಆಕ್ಸಿಡೆಂಟ್‌ ಅಗಿದೆʼ ಎಂದು ಆತ … Read more

ಏಕಾಏಕಿ ರಸ್ತೆಗೆ ಬಂದ ಜೆಸಿಬಿ, ಬೈಕ್‌ಗೆ ಡಿಕ್ಕಿ, ಆನಂದಪುರದಲ್ಲಿ ಒಬ್ಬ ಸಾವು, ಮತ್ತೊಬ್ಬ ಆಸ್ಪತ್ರೆಗೆ

jcb-incident-at-anandapura-in-sagara-taluk

SHIVAMOGGA LIVE NEWS | 28 APRIL 2024 ANANDAPURA : ಕೆರೆ ಏರಿ ಮೇಲೆ ಜೆಸಿಬಿ ಡಿಕ್ಕಿಯಾಗಿ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಸೈಯದ್‌ ಹುಸೇನ್‌ (34) ಮೃತರು. ಆನಂದಪುರದಿಂದ ಯಡೇಹಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಬೈಕ್‌ ತೆರಳುತ್ತಿದ್ದಾಗ ಪಕ್ಕದ ಜಮೀನಿನಿಂದ ಜೆಸಿಬಿ ವಾಹನ ಏಕಾಏಕಿ ರಸ್ತೆಗೆ ಬಂದಿದೆ. ಈ ಸಂದರ್ಭ ಡಿಕ್ಕಿ ಸಂಭವಿಸಿ ಸೈಯದ್‌ ಹುಸೇನ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು, … Read more

ಮಳೆ ಬಳಿಕ ಶಿವಮೊಗ್ಗದಲ್ಲಿ ಸ್ಕಿಡ್‌ ಆದ ಬೈಕ್‌ಗಳು, ಆನಂದಪುರ ಸುತ್ತಮುತ್ತ ಮರ, ಕಂಬಗಳ ಬುಡಮೇಲು

vehicles-skid-at-kuvempu-road-in-Shimoga

SHIVAMOGGA LIVE NEWS | 12 APRIL 2024 SHIMOGA : ನಗರದ ವಿವಿಧೆಡೆ ಗುರುವಾರ ಮಳೆಯಾಗಿದೆ. ಮಳೆ ನಂತರ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಸಮೀಪ, ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಬಿದ್ದವು. ಸುಮಾರು 15 ವಾಹನಗಳು ಸ್ಕಿಡ್‌ ಆಗಿ ಬಿದ್ದು, ಸವಾರರಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬ್ಯಾರಿಕೇಡ್‌ ಹಾಕಿ ದ್ವಿಚಕ್ರ ವಾಹನ ಸವಾರರಿಗೆ ನಿಧಾನವಾಗಿ … Read more

ಆನಂದಪುರ ಬಳಿ ಬೈಕುಗಳ ಮಧ್ಯೆ ಡಿಕ್ಕಿ, ಒಬ್ಬರಿಗೆ ಗಂಭೀರ ಗಾಯ

Two-bike-incident-near-anandapura-in-sagara-taluk

SHIVAMOGGA LIVE NEWS | 14 MARCH 2024 SAGARA : ಆನಂದಪುರ ಸಮೀಪದ ಗೌರಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆನಂದಪುರದಿಂದ ಆಡೂರಿಗೆ ಹೋಗುತ್ತಿದ್ದ ಬೈಕ್ ಹಾಗೂ ಯಡೇಹಳ್ಳಿಯಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಸತ್ಯನಾರಾಯಣ ಎಂಬುವವರಿಗೆ ತೀವ್ರ ಗಾಯವಾಗಿದೆ. ಆನಂದಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನೂ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆನಂದಪುರ … Read more

ತಲೆ ಮೇಲೆ ಕಾರು ಹತ್ತಿಸಿ ವ್ಯಕ್ತಿಯ ಬರ್ಬರ ಹತ್ಯೆ, ರಸ್ತೆ ಬದಿಯಲ್ಲಿ ಮೃತದೇಹ ಪತ್ತೆ

Incident-near-Iginabailu-in-sagara-taluk-anandapura-limits-rafiq

SHIVAMOGGA LIVE NEWS | 01 MARCH 2024 ANANDAPURA : ವ್ಯಕ್ತಿಯೊಬ್ಬನ ತಲೆ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾಗರ ತಾಲೂಕು ಆನಂದಪುರ ಸಮೀಪದ ನೆದರವಳ್ಳಿ ಬಳಿ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ಆನವಟ್ಟಿ ಸಮೀಪದ ಗ್ರಾಮವೊಂದರ ರಫೀಕ್‌ (38) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಕರೆತಂದು ಆತನನ್ನು ಕೆಳಗೆ ತಳ್ಳಿ ತಲೆ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಘಟನೆ ನಡೆದಿರುವ ಕುರಿತು ಪೊಲೀಸರು ಅನುಮಾನ … Read more

ಆನಂದಪುರ ಬಳಿ ಕಾರು, ಬೈಕ್‌ ಮುಖಾಮುಖಿ ಡಿಕ್ಕಿ, ಓರ್ವ ಸಾವು

Incident-near-Gouthamapura-at-Anandapura-in-Sagara-taluk

SHIVAMOGGA LIVE NEWS | 26 FEBRUARY 2024 ANANDAPURA : ಸಮೀಪದ ಗೌತಮಪುರದಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರದಿಂದ ಶಿಕಾರಿಪುರ ಕಡೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿವೆ. ಬೈಕ್‌ ಸವಾರ ಭೀಮೇಶ್‌ (42) ಮೃತ ವ್ಯಕ್ತಿ. ಮತ್ತೊಬ್ಬ ಸವಾರ ಪ್ರತಾಪ್‌ (26) ಗಂಭೀರವಾಗಿ ಗಾಯಗೊಂಡಿದ್ದಾನೆ.  ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕಾರಿಪುರದ ಕಪ್ಪನಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಿ … Read more

ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಲಾರಿ ಹರಿದು ವ್ಯಕ್ತಿ ಸಾವು

281123-Anandapura-Police-Station-Board.webp

SHIVAMOGGA LIVE NEWS | 28 NOVEMBER 2023 ANANDAPURA : ಲಾರಿ ಹರಿದು ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಆನಂದಪುರ ಬಸ್ ನಿಲ್ದಾಣದ ಬಳಿ ಘಟನೆ (Incident) ಸಂಭವಿಸಿದೆ. ಆನಂದಪುರದ ನಿವಾಸಿ ಸದಾಶಿವ ರಾವ್ (60) ಮೃತರು. ಇವರು ಗ್ರಾಮ ಪಂಚಾಯಿತಿಯಲ್ಲಿ ನೀರು ಘಂಟಿಯಾಗಿ ಕೆಲಸ ಮಾಡುತ್ತಿದ್ದರು. ಬಸ್ ನಿಲ್ದಾಣದ ಪಕ್ಕದಲ್ಲಿರುವ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಸದಾಶಿವ ಅವರ ಕೈ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗಾಗಿ … Read more