ಗಂಡ ಹೆಂಡತಿ ಮಲಗಿದ್ದಾಗ ರಾತ್ರಿ ಮಂಚದ ಕೆಳಗಿಂದ ಎದ್ದು ಬಂದ ‘ಫ್ರಾಕ್‌ ಧರಿಸಿದ್ದ ಪುರುಷ’

Crime-News-General-Image

ತೀರ್ಥಹಳ್ಳಿ: ಕೊಠಡಿಯಲ್ಲಿ ಪತಿಯೊಂದಿಗೆ ತಂಗಿದ್ದ ಮಹಿಳೆಗೆ ಮಂಚದ ಕೆಳಗೆ ಮಲಗಿದ್ದ ಪುರುಷನೊಬ್ಬ ನಡುರಾತ್ರಿ ಮೈಕೈ ಮುಟ್ಟಿ ಆತಂಕ ಮೂಡಿಸಿದ್ದಾನೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (Frock) ಬೆಂಗಳೂರಿನ ದಂಪತಿ ಈಚೆಗೆ ತೀರ್ಥಹಳ್ಳಿಯಲ್ಲಿ ತಂಗಿದ್ದರು. ಕೊಠಡಿಯಲ್ಲಿ ಮಲಗಿದ್ದಾಗ ರಾತ್ರಿ 12.30ರ ಹೊತ್ತಿಗೆ ಮಂಚದ ಕೆಳಗಿನಿಂದ ವ್ಯಕ್ತಿಯೊಬ್ಬ ಮಹಿಳೆಯ ಮೈಕೈ ಮುಟ್ಟಿದ ಅನುಭವವಾಗಿದೆ. ಮಹಿಳೆ ತನ್ನ ಪತಿಗೆ ವಿಷಯ ತಿಳಿಸಿದ್ದು, ಅವರು ಪರಿಶೀಲಿಸಿದರು. ಆಗ ಮಂಚದ ಅಡಿಯಿಂದ ಎದ್ದು ಬಂದ ವ್ಯಕ್ತಿಯೊಬ್ಬ ಕಿಟಕಿಯಿಂದ ಹೊರಗೆ ಹೋಗಿದ್ದಾನೆ … Read more

ಶಿವಮೊಗ್ಗದ ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

Police-Jeep-at-Shimoga-General-Image

SHIMOGA, 6 SEPTEMBER 2024 : ಅಪಾರ್ಟ್‌ಮೆಂಟ್‌ (Apartment) ಒಂದಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ದುರ್ವಾಸನೆ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗೋಪಾಳ ಬಡಾವಣೆಯ ಅಪಾರ್ಟ್‌ಮೆಂಟ್‌ ಒಂದರ ನಿವಾಸಿ ಸುಧಾ (48) ಮೃತ ಮಹಿಳೆ. ಅವರು ತಂಗಿದ್ದ ಅಪಾರ್ಟ್‌ಮೆಂಟ್ ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿದ್ದು ಮನೆಯ ಬಾತ್ ರೂಂನಲ್ಲಿ ಮೃತದೇಹ ಪತ್ತೆಯಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೆ ವಾಸಿಸುತ್ತಿದ್ದರು ಮನೆಯಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ … Read more

ರಾತ್ರೋರಾತ್ರಿ ಸೋಮಿನಕೊಪ್ಪದಲ್ಲಿ ಶಿಕ್ಷಣ ಸಂಸ್ಥೆಯ ನಾಲ್ಕು ಬಸ್ಸುಗಳಿಂದ ಡಿಸೇಲ್ ಕಳ್ಳತನ

vinobanagara police station

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಸುಗಳಲ್ಲಿ ಡಿಸೇಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಡಿಸೇಲ್ ಟ್ಯಾಂಕ್’ನ ಕ್ಯಾಪ್ ತೆಗೆದು 580 ಲೀಟರ್ ಡಿಸೇಲ್ ಕಳುವು ಮಾಡಲಾಗಿದೆ. ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ ಕಳ್ಳರು ತಮ್ಮ ಕರಾಮತ್ತು ತೋರಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹೇಗಾಯ್ತು ಘಟನೆ? ಶಿವಮೊಗ್ಗ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ಘಟನೆ ಸಂಭವಿಸಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು … Read more