ಶಿವಮೊಗ್ಗ ಪೊಲೀಸರಿಂದ 21 ವಾಹನಗಳು ಬಹಿರಂಗ ಹರಾಜು, ದಿನಾಂಕ ಪ್ರಕಟ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 21 ವಿವಿಧ ಮಾದರಿಯ ವಾಹನಗಳನ್ನು ನ.21 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆಸಕ್ತರು ನಿಗದಿತ ಸಮಯದಲ್ಲಿ ಬಹಿರಂಗ ಹರಾಜು (Auction) ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಿಎಸ್‌ಪಿ ಡಿಎಆರ್ ಶಿವಮೊಗ್ಗ ದೂರವಾಣಿ ಸಂಖ್ಯೆ: 08182-261412 ನ್ನು ಸಂಪರ್ಕಿಸುವುದು. ಇದನ್ನೂ ಓದಿ » ವಿದೇಶದಿಂದ ಮರಳಿದ್ದ ಯುವಕನಿಗೆ ಹೃದಯಾಘಾತ, ಸಾವು