ರಾತ್ರೋರಾತ್ರಿ ದೇವಸ್ಥಾನದ ಬಾಗಿಲ ಬೀಗ ಮುರಿದು ಹುಂಡಿ ಕಳ್ಳತನ
SHIVAMOGGA LIVE NEWS | TEMPLE | 29 ಮೇ 2022 ಶಿವಮೊಗ್ಗ ತಾಲೂಕು ಪುರದಾಳು (PURADALU) ಗ್ರಾಮದಲ್ಲಿ ದೇವಸ್ಥಾನ (TEMPLE) ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಲಾಗಿದೆ. ಕಳೆದ ರಾತ್ರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇಗುಲದ ಬಾಗಿಲ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳ ಪ್ರವೇಶ ಮಾಡಿದ್ದಾರೆ. ದೇವರ ಮುಂದಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಇದ್ದ ಸಿಸಿಟಿವಿ ಕ್ಯಾಮರಾವನ್ನು ಹಾನಿಗೊಳಿಸಿದ್ದಾರೆ. ಇವತ್ತು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. … Read more