ಲಾರಿ ಚಕ್ರದಡಿ ಸಿಲುಕಿದ ಬೈಕ್, ಇಬ್ಬರು ಸವಾರರು ಸ್ಥಳದಲ್ಲೆ ಸಾವು
ತೀರ್ಥಹಳ್ಳಿ: ಲಾರಿ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಆರ್.ಎಂ.ಸಿ ಯಾರ್ಡ್ ಬಳಿ ತಡರಾತ್ರಿ ಅಪಘಾತವಾಗಿದೆ. ಬೈಕ್ ಸವಾರರಾದ ಸುದೀಪ್ (25), ಸುಧೀಶ್ (30) ಮೃತರು. ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೈಕ್ ನಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಮೃತರು ತೀರ್ಥಹಳ್ಳಿಯ ಯಡೇಹಳ್ಳಿ ಮತ್ತು ಇಂದಿರಾನಗರಕ್ಕೆ ಸೇರಿದವರು. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಅಗರದಹಳ್ಳಿ ಕ್ಯಾಂಪ್‌ನ ವ್ಯಕ್ತಿಗೆ … Read more