ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಮಧ್ಯರಾತ್ರಿ ಅಂಗಡಿಗೆ ಬೆಂಕಿ ಹಚ್ಚಲು ಯತ್ನ

crime name image

SHIVAMOGGA LIVE NEWS | 6 ಏಪ್ರಿಲ್ 2022 ನಡುರಾತ್ರಿ ಅಂಗಡಿಗಳಿಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ವಿಫಲ ಯತ್ನ ನಡೆಸಿದ್ದಾರೆ. ಗಸ್ತು ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದಂತಾಗಿದೆ. ಶಿವಮೊಗ್ಗ ಬೈಪಾಸ್ ರಸ್ತೆಯ ವಾದಿ-ಎ-ಹುದಾ ಬಡಾವಣೆ ಬಳಿ ಘಟನೆ ಸಂಭವಿಸಿದೆ. ಅಜ್ಮಲ್ ಅಹಮದ್ ಎಂಬುವವರಿಗೆ ಸೇರಿದ ಹಣ್ಣಿನ ಅಂಗಡಿಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಬೆಂಕಿ ಹಚ್ಚಿದ ಕಿಡಿಗೇಡಿಗಳು ಸಂಬಂಧಿಯೊಬ್ಬರ ಜಾಗದಲ್ಲಿ ಹಲವು ವರ್ಷದಿಂದ ಅಜ್ಮಲ್ ಅಹಮದ್ ಅವರು ಶೆಡ್ ನಿರ್ಮಿಸಿ, ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ. ಏಪ್ರಿಲ್ … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಲಾರಿ ಪಲ್ಟಿ, ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಕ್ಕಳ ಪ್ರಾಣ

Bhadravathi Name Graphics

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 8 ಜನವರಿ 2022 ಸೈಕಲ್’ನಲ್ಲಿ ಏಕಾಏಕಿ ಅಡ್ಡ ಬಂದ ಮಕ್ಕಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಲಾರಿ ಪಲ್ಟಿಯಾಗಿದೆ. ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಹೊಸ ಸಿದ್ಧಾಪುರ ಗ್ರಾಮದ ಬಳಿ ರಸ್ತೆಯಲ್ಲಿ ಶಾಲಾ ಮಕ್ಕಳು ಸೈಕಲ್’ನಲ್ಲಿ ದಿಢೀರ್ ಮುಖ್ಯ ರಸ್ತೆಗೆ ಬಂದಿದ್ದಾರೆ. ಇವರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಲಾರಿಯನ್ನು ಚಾಲಕ ಪಕ್ಕಕ್ಕೆ ತಿರುಗಿಸಿದ್ದಾನೆ. ಲಾರಿ ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. ಲಾರಿಯು ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿತ್ತು … Read more

ಭಯಾನಕವಾಗುತ್ತಿದೆ ಶಿವಮೊಗ್ಗದ ಬೈಪಾಸ್ ರಸ್ತೆ, ಇಲ್ಲಿ ಯಾರ ಪ್ರಾಣಕ್ಕೂ ಗ್ಯಾರಂಟಿ ಇಲ್ಲ

shimoga-Bypass-Road.

ಶಿವಮೊಗ್ಗದ ಲೈವ್.ಕಾಂ | SHIMOGA NEWS |  31 ಡಿಸೆಂಬರ್ 2021 ಘಟನೆ 1 – 30 ಡಿಸೆಂಬರ್ 2021 ರಸ್ತೆ ದಾಟುತ್ತಿದ್ದ ಅಬ್ದುಲ್ ರಶೀದ್ (70) ಅವರಿಗೆ KSRTC ಬಸ್ ಡಿಕ್ಕಿ ಹೊಡೆಯಿತು. ತಲೆ ಭಾಗಕ್ಕೆ ಗಂಭೀರ ಹೊಡೆತ ಬಿದ್ದಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಜನ ರೊಚ್ಚಿಗೆದ್ದು ರಾತ್ರಿಯೇ ಬಸ್ ತಡೆದು ಪ್ರತಿಭಟನೆ ಮಾಡಿದರು. ಘಟನೆ 2 – ಸೆಪ್ಟೆಂಬರ್ 2021 ಬಸ್ ಇಳಿದು ರಸ್ತೆ ದಾಟಿ ನಂಜಪ್ಪ ಲೇಔಟ್’ನಲ್ಲಿರುವ ಮನೆಗೆ ತೆರಳುತ್ತಿದ್ದ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬೈಕ್ ಡಿಕ್ಕಿ, ಜಾವಳ್ಳಿ ಅರಬಿಂದೋ ಶಾಲೆ ಶಿಕ್ಷಕ ಸಾವು

240721 Bypass Road No Rain 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಸೆಪ್ಟೆಂಬರ್ 2021 ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ  ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ದಾಟುತ್ತಿದ್ದಾಗ ಅವಘಡ  ಸಂಭವಿಸಿದೆ. ಜಾವಳ್ಳಿ ಅರಬಿಂದೋ ಶಾಲೆಯ ಶಿಕ್ಷಕ ರಾಜೀವ್ (38) ಮೃತರು. ಇವರ ಮಗ ವತ್ಸ (6) ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಮಗನೊಂದಿಗೆ ಮೈಸೂರಿನಿಂದ ಹಿಂತಿರುಗುತ್ತಿದ್ದ ರಾಜೀವ್ ಅವರು, ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಸ್ಸಿನಿಂದ ಇಳಿದುಕೊಂಡಿದ್ದಾರೆ. ನಂಜಪ್ಪ ಲೇಔಟ್’ನಲ್ಲಿರುವ ಮನೆಗೆ ತೆರಳಬೇಕಿತ್ತು. … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಸ್ಪೋಟಕ ತುಂಬಿದ್ದ ಲಾರಿ ರಿಪೇರಿ, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಲಾರಿಯಲ್ಲಿ ಏನಿತ್ತು?

250921 Explosives Truck in Shimoga Bypass Road

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟೆಂಬರ್ 2021 ಹುಣಸೋಡು ಸ್ಪೋಟ ಪ್ರಕರಣದ ಬಳಿಕವು ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ತೋರುತ್ತಿಲ್ಲ. ಸ್ಪೋಟಕ ಸಾಗಣೆ ವಿಚಾರವಾಗಿ ಆಡಳಿತ ಯಂತ್ರ ನಿರ್ಲಕ್ಷ್ಯ ವಹಿಸಿದಂತೆ ತೋರುತ್ತಿದೆ. ಸ್ಪೋಟಕ ತುಂಬಿದ್ದ ಲಾರಿಯೊಂದನ್ನು ಶಿವಮೊಗ್ಗ ನಗರದ ನಡುವೆ ರಿಪೇರಿಗೆ ನಿಲ್ಲಿಸಿದ್ದೆ ಇದಕ್ಕೆ ಸಾಕ್ಷಿಯಾಗಿದೆ. ಯಾವುದೆ ಭದ್ರತೆ ಇಲ್ಲದೆ, ಮುನ್ನೆಚ್ಚರಿಕಾ ಕ್ರಮಗಳು ಇಲ್ಲದೆ ಲಾರಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ಶಿವಮೊಗ್ಗದ ಬೈಪಾಸ್ ರಸ್ತೆಯ ಗ್ಯಾರೇಜ್’ನಲ್ಲಿ ಇವತ್ತು ಲಾರಿಯೊಂದನ್ನು ರಿಪೇರಿಗಾಗಿ ನಿಲ್ಲಿಸಲಾಗಿತ್ತು. ಲಾರಿಯ ಮುಂದಿನ ಚಕ್ರ … Read more

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ MRS ಸರ್ಕಲ್’ನಲ್ಲಿ ರಸ್ತೆ ತಡೆ, ಕುವೆಂಪು ವಿವಿ ನಗರ ಕಚೇರಿ ಮುತ್ತಿಗೆ ಯತ್ನ

030921 Sahyadri College Students Protest Against Khelo India

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಸೆಪ್ಟೆಂಬರ್ 2021 ಕ್ಯಾಂಪಸ್ ಒಳಗೆ ಖೇಲೋ ಇಂಡಿಯಾ ಯೋಜನೆ ವಿರೋಧಿಸಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಇವತ್ತು ಸಹ್ಯಾದ್ರಿ ಕಾಲೇಜು ಮುಂಭಾಗ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಅಲ್ಲದೆ ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಖೇಲೋ ಇಂಡಿಯಾ ಯೋಜನೆ ಅಡಿ ವಿಶೇಷ ಕ್ರೀಡಾ ಸಂಕೀರ್ಣ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಹ್ಯಾದ್ರಿ ಕಾಲೇಜು … Read more

ಶಿವಮೊಗ್ಗದಲ್ಲಿ ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿದ ಮಹಿಳೆ

030921 Fire Department Finds Woman Body in Tunga River

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಸೆಪ್ಟೆಂಬರ್ 2021 ಸೇತುವೆಯಿಂದ ತುಂಗಾ ನದಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಮೃತ ಮಹಿಳೆ 40 ರಿಂದ 45 ವರ್ಷವಿರಬೇಕು ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೇಗಾಯ್ತು ಘಟನೆ? ಗುರುವಾರ ಸಂಜೆ ಮಹಿಳೆಯೊಬ್ಬರು ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ತುಂಗಾ ನದಿ ಸೇತುವೆ ಮೇಲಿಂದ ಹೊಳೆಗೆ ಹಾರಿದ್ದಾರೆ. ಮಹಿಳೆ ಹಾರಿದ್ದನ್ನು ಗಮನಿಸಿದ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ನಾಪತ್ತೆ

Car Theft General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗಾಗುವುದರಲ್ಲಿ ಕಣ್ಮರೆಯಾಗಿದೆ. ಸರ್ವಿಸ್ ಸೆಂಟರ್ ಒಂದರ ಮುಂದೆ ಕಾರು ನಿಲ್ಲಿಸಿದ್ದ ಮಾಲೀಕ ನಂತರ ಬಂದು ನೋಡಿದಾಗ ಇರಲಿಲ್ಲ. ಮತ್ತೂರಿನ ಪ್ರಶಾಂತ್ ಎಂಬುವವರಿಗೆ ಸೇರಿದ ಟೊಯೋಟಾ ಇಟಿಯೋಸ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ. ಊರುಗಡೂರು ಬಳಿ ಬೈಪಾಸ್ ರಸ್ತೆಯಲ್ಲಿರುವ ಸರ್ವಿಸ್ ಸೆಂಟರ್ ಒಂದರ ಮುಂದೆ ಪ್ರಶಾಂತ್ ಅವರು ಕಾರು ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಬಂದು ಪರಿಶೀಲಿಸಿದಾಗ ಕಾರು … Read more

ಗೋವಾದಿಂದ ಮನೆಗೆ ಮರಳುತ್ತಿದ್ದಾಗ ಭದ್ರಾವತಿ ಬಳಿ ಅಪಘಾತ, ಕಾರಿನಲ್ಲಿದ್ದ ಇಬ್ಬರು ಸಾವು, ಆರು ಮಂದಿಗೆ ಗಾಯ

041220 Car Accident At Bhadaravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 4 DECEMBER 2020 ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರು ಮಂದಿಗೆ ಗಾಯವಾಗಿದೆ. ಭದ್ರಾವತಿ ತಾಲೂಕು ಸಿದ್ಧಾಪುರ ಗ್ರಾಮದ ಬಳಿ ಘಟನೆ ಸಂಭವಿಸಿದೆ. ರಾಜೇಶ್ (19) ಮತ್ತು ತರುಣ್ (19) ಮೃತರು. ಇವರೆಲ್ಲ ಗೋವಾಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಗೋವಾದಿಂದ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಗೋವಾದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಮರಳುತ್ತಿದ್ದರು. ಭದ್ರಾವತಿ ಬೈಪಾಸ್‍ ರಸ್ತೆಯ ಸಿದ್ಧಾಪುರ ಗ್ರಾಮದ … Read more