ಜಾತಿ ಸಮೀಕ್ಷೆ: ಸಮೀಕ್ಷಾದಾರರಿಗೆ ಗೌರವಧನ ಪಾವತಿಗೆ ಅನುದಾನ ಬಿಡುಗಡೆ, ಯಾರಿಗೆ ಎಷ್ಟೆಷ್ಟು ಅನುದಾನ ಸಿಗಲಿದೆ?

VIDHANA-SOUDHA-GENERAL-IMAGE.jpg

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷಾದಾರರಿಗೆ (Census) ಗೌರವಧನ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ₹127.73 ಕೋಟಿ ಅನುದಾನವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ. ಯಾರಿಗೆ ಎಷ್ಟೆಷ್ಟು ಅನುದಾನ? ಪ್ರತಿ ಸಮೀಕ್ಷಾದಾರರಿಗೆ ₹5000 ನಿಗದಿತ ಮೊತ್ತ. ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ ಇಂತಿಷ್ಟು ಎಂದು ನಿಗದಿಪಡಿಸಲಾಗಿದೆ. ಒಂದೆರಡು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹50,  ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳ ಸಮೀಕ್ಷೆಗೆ ತಲಾ ₹100 ಪಾವತಿಸುವಂತೆ ತಿಳಿಸಲಾಗಿದೆ. ಮೇಲ್ವಿಚಾರಕರಿಗೆ ನಿಗದಿತ ಮೊತ್ತ ₹10,000 … Read more

‘ಎಲ್ಲ ಸಮಸ್ಯೆ ಪರಿಹಾರವಾಗಿದೆ, ನಿಗದಿತ ಸಮಯದಲ್ಲೆ ಪೂರ್ಣ ಆಗುತ್ತೆʼ, ಶಿವಮೊಗ್ಗದಲ್ಲಿ ಮಿನಿಸ್ಟರ್‌ ಏನೆಲ್ಲ ಹೇಳಿದರು?

270925 Minister Madhu Bangarappa speaks to media in shimoga

ಶಿವಮೊಗ್ಗ: ತಾಂತ್ರಿಕ ಕಾರಣದಿಂದಾಗಿ ಜಾತಿ ಸಮೀಕ್ಷೆ(Caste Census) ಕಾರ್ಯಕ್ಕೆ ಸಮಸ್ಯೆಯಾಗಿತ್ತು. ಶಿಕ್ಷಕರು ಸ್ಪಂದಿಸುತ್ತಿಲ್ಲ ಎಂಬುದು ಸುಳ್ಳು. ಈಗ ಎಲ್ಲ ಸಮಸ್ಯ ಪರಿಹಾರವಾಗಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಕುವೆಂಪು ರಂಗಮಂದಿರ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಅವರು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳ ಜೊತೆಗೆ ಸಭೆ ನಡೆಸಿದ್ದಾರೆ. ಎಲ್ಲ ಸಮಸ್ಯೆಗಳು ಪರಿಹಾರವಾಗಿದೆ. ಶಿಕ್ಷಕರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಕಡೆ … Read more

ಜಾತಿ ಸಮೀಕ್ಷೆ, ಅಧಿಕಾರಿಯನ್ನು ಅಮಾನತು ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ

himoga-DC-office-and-Police-jeep-in-front-of-office

ಶಿವಮೊಗ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆ ಸಮನ್ವಯಾಧಿಕಾರಿ ರಂಗನಾಥ್‌.ಎಂ ಅರವನ್ನು ಅಮಾನತು (Suspension) ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ರಂಗನಾಥ್‌.ಎಂ ಅವರು ಹೊನಸಗರ ತಾಲೂಕು ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಪೂರ್ವಾನುಮತಿ ಪಡೆಯದೆ ರಜೆ ಹಾಕಿದ್ದು, ದೂರವಾಣಿ ಕರೆಗು ಸ್ಪಂದಿಸಲಿಲ್ಲ. ಇದರಿಂದ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ರಂಗನಾಥ್‌.ಎಂ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ … Read more