ಚಂದ್ರಗುತ್ತಿಯಲ್ಲಿ ಇವತ್ತು ಲಕ್ಷ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ
ಸೊರಬ: ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ನ.20 ರಂದು ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಕೊನೆಯ ಕಾರ್ತಿಕ ಅಮಾವಾಸ್ಯೆಯಂದು ಲಕ್ಷ ದೀಪೋತ್ಸವವನ್ನು ಆಚರಿಸಲಾಗುವುದು. ದೇವಸ್ಥಾನದಲ್ಲಿ ದೀಪಲಂಕಾರ ಸೇರಿದಂತೆ ಪ್ರಧಾನ ಅರ್ಚಕರಾದ ಅರವಿಂದ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಪರಿವಾರ ದೇವರುಗಳಾದ ನಾಗದೇವತೆ, ಕಾಲಭೈರವ, ಪರಶುರಾಮ, ಮಾತಂಗಿ, ತ್ರಿಶೂಲ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ … Read more