ಶಿವಮೊಗ್ಗದಲ್ಲಿ ಸರಳವಾಗಿತ್ತು ರಕ್ಷಾ ಬಂಧನ, ಪೊಲೀಸರಿಗೆ ರಾಖಿ ಕಟ್ಟಿದ ಟೀಚರ್ಸ್, ಹೇಗಿತ್ತು ಈ ಬಾರಿಯ ಆಚರಣೆ?

030820 Raksha Bhandana In Shimoga Kote Police Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಕರೋನ ಭೀತಿಯ ನಡುವೆ ಶಿವಮೊಗ್ಗದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಸಂಭ್ರಮದಿಂದ ಹಬ್ಬ ಮಾಡಲಾಯಿತು. ಕೋವಿಡ್ ಪರಿಣಾಮ ಅದ್ಧೂರಿಯಾಗಿ ಹಬ್ಬ ಆಚರಿಸಿಲ್ಲ. ದುಬಾರಿ ಮತ್ತು ವಿಭಿನ್ನ ರಾಖಿಗಳಿಗೆ ಈ ಬಾರಿ ಡಿಮಾಂಡ್ ಕುಸಿದಿದೆ. ಆದರೆ ಸರಳವಾಗಿಯೇ ರಕ್ಷಾ ಬಂಧನ ಆಚರಿಸಲಾಯಿತು. ಮನೆಗಳಲ್ಲೇ ಸಹೋದರರಿಗೆ ರಾಖಿ ಕಟ್ಟಿ, ಆರತಿ ಬೆಳಗಿದರು. ಶಿವಮೊಗ್ಗದ ವಾಸವಿ ಶಾಲೆಯ ಶಿಕ್ಷಕರು ಕೋಟೆ ಠಾಣೆ ಪೊಲೀಸರಿಗೆ ರಾಖಿ ಕಟ್ಟಿ ಹಬ್ಬ … Read more

ಸಿಎಂ ಯಡಿಯೂರಪ್ಪಗೆ ಕರೋನ ಪಾಸಿಟಿವ್, ಮಗಳ ಜೊತೆ ಫೋನ್‌ನಲ್ಲಿ ಮಾತು, ಏನಂದರು? ಹೇಗಿದೆ ಆರೋಗ್ಯ?

BY Arunadevi CM BS Yedyurappa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಅಂತಾ ಯಡಿಯೂರಪ್ಪ ಪುತ್ರಿ ಬಿ.ವೈ.ಅರುಣಾದೇವಿ ತಿಳಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಶಿವಮೊಗ್ಗದಲ್ಲಿ ಮಾತನಾಡಿದ ಬಿ.ವೈ.ಅರುಣಾದೇವಿ, ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅವರಿಗೆ ಯಾವುದೇ ರೋಗ ಗುಣ ಲಕ್ಷಣವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಯಡಿಯೂರಪ್ಪ ಅವರು ಶೀಘ್ರದಲ್ಲಿ ಗುಣವಾಗಲಿದ್ದಾರೆ. ಈ ಬಗ್ಗೆ ಯಾರೂ ಆತಂಕ ಪಡುವ … Read more

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ, ಶಿವಮೊಗ್ಗದಲ್ಲಿ ಹೇಗಿರುತ್ತೆ ಗೊತ್ತಾ ಸಂಭ್ರಮಾಚರಣೆ?

030820 VHP Ramesh Babu about ayodhya 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸುತ್ತಿರುವ ಹಿನ್ನೆಲೆ, ಶಿವಮೊಗ್ಗದ ಎಲ್ಲಾ ತಾಲೂಕಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರೋನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡು ಸಂಭ್ರಮಾಚರಣೆ ಮಾಡಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಶಿವಮೊಗ್ಗದಲ್ಲಿ ಹೋಮ, ಸನ್ಮಾನ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿಹೆಚ್‌ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್, ಭೂಮಿ ಪೂಜೆಯ ದಿನ ಬೆಳಗ್ಗೆ ಶಿವಮೊಗ್ಗದ ಕೋಟೆ ಶ್ರೀ … Read more

ಶಿವಮೊಗ್ಗ ಹೊಸಮನೆಯಲ್ಲಿ ಮೂರು ದಿನ ಕರೋನ ಟೆಸ್ಟಿಂಗ್ ಶಿಬಿರ, ಇವತ್ತಿಂದಲೇ ತಪಾಸಣೆ ಶುರು

030820 corona checkup at Hosamane 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮೂರು ದಿನದ ಕರೋನ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಬಡಾವಣೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ತಪಾಸಣಾ ಶಿಬಿರ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಹೊಸಮನೆ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕರೋನ ಟೆಸ್ಟ್ ಮಾಡಲಾಗುತ್ತದೆ. ಕೆಮ್ಮು, ಶೀತ, ಜ್ವರದ ಲಕ್ಷಣಗಳು … Read more

SHIKARIPURA | ಕರೋನದಿಂದ ಯಡಿಯೂರಪ್ಪ ಗುಣವಾಗಲಿ ಅಂತಾ ವಿಶೇಷ ಪೂಜೆ

030820 Raghavendra Pooja hucharaya swamy temple 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 3 ಆಗಸ್ಟ್ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೋನದಿಂದ ಶೀಘ್ರ ಗುಣವಾಗಲಿ ಅಂತಾ ಶಿಕಾರಿಪುರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸಿಎಂ ಗುಣವಾಗಿ, ಶೀಘ್ರ ಸಾರ್ವಜನಿಕ ಸೇವೆಗೆ ಮರಳಲಿ ಎಂದು ಪ್ರಾರ್ಥಿಸಲಾಯಿತು. ಶಿಕಾರಪುರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರಾಧ್ಯ ದೈವ ಶ್ರೀ ಹುಚ್ಚುರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಪೂಜೆ ನೆರವೇರಿಸಿದರು. ಈ ವೇಳೆ ಶಿಕಾರಿಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ … Read more

BREAKING NEWS | ಶಿವಮೊಗ್ಗದಲ್ಲಿ ಶಾಸಕರೊಬ್ಬರಿಗೆ ಕರೋನ ಪಾಸಿಟಿವ್, ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಗಾಗುವಂತೆ ಮನವಿ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020 ಶಿವಮೊಗ್ಗದಲ್ಲಿ ಶಾಸಕರೊಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಹಾಗಾಗಿ ತಮ್ಮ ಸಂಪರ್ಕದಲ್ಲಿ ಇರುವವರು ಕೂಡಲೆ ತಪಾಸಣೆಗೆ ಒಳಪಡುವಂತೆ ಶಾಸಕರು ಮನವಿ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಇವತ್ತು ಬೆಳಗ್ಗೆ ಕರೋನ ತಪಾಸಣೆ ನಡೆಸಿದಾಗ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅನುಮಾನದ ಮೇಲೆ ಇವತ್ತು ತಪಾಸಣೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಆದರೆ ಯಾವುದೇ ರೋಗ … Read more

ಶಿವಮೊಗ್ಗದಲ್ಲಿ ಇವತ್ತು ಕರೋನ ಸೋಂಕಿತರಿಗಿಂತಲೂ ಗುಣ ಆದವರ ಸಂಖ್ಯೆ ಹೆಚ್ಚಳ, ಸೋಂಕಿತರೆಷ್ಟು? ಗುಣವಾದವರೆಷ್ಟು?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 2 ಆಗಸ್ಟ್‍  2020 ಶಿವಮೊಗ್ಗದಲ್ಲಿ ಇವತ್ತು ಕರೋನ ಪಾಸಿಟಿವ್ ಸಂಖ್ಯೆಗಿಂತಲೂ ಗುಣವಾದವರ ಸಂಖ್ಯೆ ಹೆಚ್ಚಳವಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 30 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಇವತ್ತೆಷ್ಟು ಕರೋನ ಪಾಸಿಟವ್ ಬಂದಿದೆ? 76 ಮಂದಿಗೆ ಮನೆಯಲ್ಲಿ ಚಿಕಿತ್ಸೆ ಮನೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದೆ. ಇವತ್ತಿನವರೆಗೆ 76 ಮಂದಿ ಕರೋನಾಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 242 … Read more

ತೀರ್ಥಹಳ್ಳಿಯ ಒಂದೇ ಕುಟುಂಬದ ನಾಲ್ವರಲ್ಲಿ ಕರೋನ ಸೋಂಕು

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 ಆಗಸ್ಟ್ 2020 ತೀರ್ಥಹಳ್ಳಿ ತಾಲೂಕಿನಲ್ಲಿ ಒಂದೇ ಕುಟುಂಬದ ನಾಲ್ವರಲ್ಲಿ ಕರೋನ ಸೋಂಕು ಪತ್ತೆಯಾಗಿದೆ. ಬೆಂಗಳೂರಿನ ಸಂಪರ್ಕದಿಂದ ಇವರಿಗೆ ಸೋಂಕು ತಗುಲಿರುವ ಸಾದ್ಯತೆ ಇದೆ. ಕನ್ನಂಗಿ ಗ್ರಾಮದಲ್ಲಿ ಒಂದೇ ಮನೆಯ ನಾಲ್ಕು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತಂದೆ, ತಾಯಿ, ಮಗ ಮತ್ತು ಮಗಳಲ್ಲಿ ಸೋಂಕು ಪತ್ತೆಯಾಗಿದೆ. ಇವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ತೀರ್ಥಹಳ್ಳಿ … Read more

ಇವತ್ತಿಂದ ಸಂಡೆ ಲಾಕ್‌ಡೌನ್ ಇಲ್ಲ, ವ್ಯಾಪಾರ, ವಾಹಿವಾಟು ಸುಗಮ

Shimoga City Nehru Road General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020 ಸರ್ಕಾರ ಸಂಡೆ ಕರ್ಫ್ಯೂ ತೆರವುಗೊಳಿಸಿರುವ ಹಿನ್ನೆಲೆ ಇವತ್ತಿಂದ ಶಿವಮೊಗ್ಗದಲ್ಲಿ ಭಾನುವಾರ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಈವರೆಗೂ ಭಾನುವಾರ ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶವಿತ್ತು. ಈ ವಾರದಿಂದ ಆ ನಿಬಂಧನೆಯೂ ಇಲ್ಲ. ಈವರೆಗೂ ನೈಟ್ ಕರ್ಫ್ಯೂ ಮತ್ತು ಸಂಡೆ ಲಾಕ್‍ಡೌನ್ ಜಾರಿಯಲ್ಲಿತ್ತು. ಆದ್ದರಿಂದ ಶನಿವಾರ ರಾತ್ರಿ 9 ಗಂಟೆಗೆ ಜಿಲ್ಲೆಯಾದ್ಯಂತ ಅಂಗಡಿಗಳನ್ನು ಬಂದ್ ಮಾಡಿ, ವಾಹನ ಮತ್ತು ಜನ ಸಂಚಾರ ನಿರ್ಬಂಧಿಸಲಾಗುತ್ತಿತ್ತು. 36 ಗಂಟೆ … Read more

ಮಾನವೀಯತೆ ಮೆರೆದ ಮಹಿಳಾ ಎಎಸ್ಐ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

020820 Police Help A Lady in Sagara Talaguppa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2020 ವಿವಸ್ತ್ರಳಾಗಿ ಓಡಾಡುತ್ತಿದ್ದ ಮಹಿಳೆಯೊಬ್ಬರಿಗೆ ಎಎಸ್‍ಐ ಒಬ್ಬರು ಬಟ್ಟೆ ತೊಡಿಸಿ, ಊಟ ಮಾಡಿಸಿ, ಊರಿಗೆ ಬಸ್ಸು ಹತ್ತಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದ್ದು, ಎಎಸ್ಐ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತಾಳಗುಪ್ಪದಲ್ಲಿ ಮಹಿಳೆಯೊಬ್ಬರು ಬಟ್ಟೆ ಇಲ್ಲದೆ ಓಡಾಡುತ್ತಿದ್ದರು. ಬಕ್ರಿದ್ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಎಎಸ್‍ಐ ಮೀರಾಬಾಯಿ ಇದನ್ನು ಗಮನಿಸಿ, ಮಹಿಳೆಗೆ ಬಟ್ಟೆ ತೊಡಿಸಿ, ಊಟ, ತಿಂಡಿ ಕೊಡಿಸಿ, ಆಪ್ತ ಸಮಾಲೋಚನೆ ಮಾಡಿ, ಊರಿಗೆ ಕಳುಹಿಸಿದ್ದಾರೆ. ಮಹಿಳೆ … Read more