ಇಂಟರ್‌ನೆಟ್‌ ಬಿಲ್‌ ಕಟ್ಟಲು ಮುಂದಾದ ನಿವೃತ್ತ ಉದ್ಯೋಗಿಯ ಬ್ಯಾಂಕ್‌ ಖಾತೆ ಖಾಲಿ, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಜಿಯೋ ಏರ್‌ಫೈಬರ್ ಇಂಟರ್‌ನೆಟ್‌ ಕನೆಕ್ಷನ್ ಕಸ್ಟಮರ್ ಕೇರ್ ಸಿಬ್ಬಂದಿಯಂತೆ ನಟಿಸಿ ಆನ್‌ಲೈನ್ ವಂಚಕರು ನಿವೃತ್ತ ವ್ಯಕ್ತಿಯೊಬ್ಬರಿಗೆ ₹2,53,500 ವಂಚಿಸಿದ್ದಾರೆ. ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರ ಮನೆಯ ಟಿವಿ ಸಂಪರ್ಕವು ಇದ್ದಕ್ಕಿದ್ದಂತೆ ಕಡಿತಗೊಂಡಿತ್ತು. ಹಾಗಾಗಿ ವಾಟ್ಸ್ಆ್ಯಪ್‌ನಲ್ಲಿ ಇದ್ದ ಕಸ್ಟಮರ್ ಕೇರ್ ಸೇವೆಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯು ಹಿಂದಿನ ರೀಚಾರ್ಜ್ ಬಿಲ್ ದಿನಾಂಕದ ವಿವರಣೆ ಕೇಳಿದ್ದಾರೆ. ತಾವು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಿವೃತ್ತ ಉದ್ಯೋಗಿ ತಿಳಿಸಿದಾಗ, ಆ ವ್ಯಕ್ತಿಯು ತಕ್ಷಣವೇ ಒಂದು APK ಆ್ಯಪ್ ಲಿಂಕ್ ವಾಟ್ಸ್ ಆ್ಯಪ್‌ಗೆ … Read more

ಶಿವಮೊಗ್ಗದ ಉದ್ಯಮಿಯ ಖಾತೆಗೆ ಪ್ರತಿ ದಿನ ₹200 ಹಣ ಬಂತು, 60 ದಿನ ಆದ್ಮೇಲೆ ಕಾದಿತ್ತು ಆಘಾತ, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಪ್ರತಿ ದಿನ ₹200 ಮೊತ್ತ ವರ್ಗಾವಣೆ ಮಾಡಿ ನಂಬಿಕೆ ಮೂಡಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹7.84 ಲಕ್ಷ ವಂಚಿಸಲಾಗಿದೆ (Investment). ಹೇಗಾಯ್ತು ವಂಚನೆ? ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಪ್ರಕಟವಾದ ಜಾಹಿರಾತು ನಂಬಿ ಶಿವಮೊಗ್ಗದ ಉದ್ಯಮಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದಾಗ ಉದ್ಯಮಿಯನ್ನು ಗ್ರೂಪ್‌ ಒಂದಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲಿಗೆ ₹20,000 ಹೂಡಿಕೆ ಮಾಡುವಂತೆ ಸೂಚಿಸಲಾಯಿತು. ಅಂತೆಯೇ ಶಿವಮೊಗ್ಗದ ಉದ್ಯಮಿ ಹೂಡಿಕೆ ಮಾಡಿದ್ದರು. ಪ್ರತಿದಿನ ಬಂತು ₹200 ಹಣ ಹೂಡಿಕೆ ಮಾಡಿಸಿಕೊಂಡವರು … Read more

ಪಾರ್ಟ್‌ ಟೈಮ್‌ ಕೆಲಸಕ್ಕಾಗಿ ಬ್ಯಾಂಕಿನಲ್ಲಿದ್ದ ಫುಲ್‌ ಹಣ ಕಳೆದುಕೊಂಡ ಮಹಿಳೆ

SMS-Fraud-Shimoga-CEN-Police-Station.

SHIMOGA NEWS, 15 OCTOBER 2024 : ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು, ಮಹಿಳೆಯೊಬ್ಬರಿಂದ (ಹೆಸರು ಗೌಪ್ಯ) ಒಬ್ಬರಿಂದ ಹಣ (Money) ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. 7.40 ಲಕ್ಷ ರೂ. ಕಳೆದುಕೊಂಡಿರುವ ಮಹಿಳೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ಮೋಸ ಹೋಗಿದ್ದು ಹೇಗೆ? ಪಾರ್ಟ್‌ ಟೈಮ್‌ ಜಾಬ್‌ ಎಂದು ನಂಬಿಸಿ ಹೊಟೇಲ್‌ ರಿವ್ಯು ಮಾಡುವಂತೆ ಟೆಲಿಗ್ರಾಂ ಆಪ್‌ ಮೂಲಕ ಲಿಂಕ್‌ ಕಳುಹಿಸಲಾಗಿತ್ತು. ರಿವ್ಯುಮಾಡುತ್ತಿದ್ದಂತೆ ಮಹಿಳೆಯ ಖಾತೆಗೆ 50 ರೂ. ಮತ್ತು 1000 ರೂ. … Read more

ಕೃಷಿಕನ ವಾಟ್ಸಪ್‌ಗೆ ಬಂತು ಮೆಸೇಜ್‌, ಅನುಮಾನದಿಂದ ಬ್ಯಾಂಕ್‌ಗೆ ಹೋದಾಗ ಕಾದಿತ್ತು ಶಾಕ್

SMS-Fraud-Shimoga-CEN-Police-Station.

SHIMOGA, 21 AUGUST 2024 : ಬ್ಯಾಂಕ್‌ ಒಂದರ ಹೆಸರಿನಲ್ಲಿ ವಾಟ್ಸಪ್‌ ಮಾಡಿ ರೈತರೊಬ್ಬರ ಫಿಕ್ಸೆಡ್‌ ಡೆಪಾಸಿಟ್‌ (Fixed Deposit) ಖಾತೆಯಿಂದ 2.99 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕೃಷಿಕರೊಬ್ಬರಿಗೆ ಆನ್‌ಲೈನ್‌ ಮೂಲಕ ವಂಚಿಸಲಾಗಿದೆ. ವಾಟ್ಸಪ್‌ಗೆ ಬಂತು APK ಫೈಲ್‌ ವಾಟ್ಸಪ್‌ನಲ್ಲಿ ಕೃಷಿಕನಿಗೆ ಆ್ಯಕ್ಸಿಸ್ ಬ್ಯಾಂಕ್‌ಗೆ ಕೆವೈಸಿ ಅಪ್‌ಡೇಟ್‌ ಮಾಡಬೇಕು ತಿಳಿಸಿ ಒಂದು APK ಫೈಲ್‌ ಕಳುಹಿಸಲಾಗಿತ್ತು. ಅನುಮಾನಗೊಂಡ ಕೃಷಿಕ ತಮ್ಮ ಖಾತೆ ಇರುವ ಆ್ಯಕ್ಸಿಸ್ ಬ್ಯಾಂಕ್‌ ಶಾಖೆಗೆ ತೆರಳಿ ಸಿಬ್ಬಂದಿಯಲ್ಲಿ ವಿಚಾರಿಸಿದ್ದರು. … Read more

ಉಪನ್ಯಾಸಕನಿಗೆ ಸಂಕಷ್ಟ ತಂದೊಡ್ಡಿದ ಪ್ರಿಯಾ, ಲಕ್ಷ ಲಕ್ಷ ಮಂಗಮಾಯ, ಆಗಿದ್ದೇನು?

SMS-Fraud-Shimoga-CEN-Police-Station.

SHIVAMOGGA LIVE NEWS | 14 MAY 2024 CYBER CRIME : ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತು (Online task fraud) ನಂಬಿ ಉಪನ್ಯಾಸಕರೊಬ್ಬರು 13.33 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಜಾಹೀರಾತಿನ ಕೆಳಗಿದ್ದ ADD ಬಟನ್‌ ಕ್ಲಿಕ್‌ ಮಾಡಿದ ಭದ್ರಾವತಿಯ ಉಪನ್ಯಾಸಕರೊಬ್ಬರು (ಹೆಸರು ಗೌಪ್ಯ) ಪ್ರಿಯಾ ಎಂಬ ಟೆಲಿಗ್ರಾಂ ಅಕೌಂಟ್‌ಗೆ ಜಾಯಿನ್‌ ಆಗಿದ್ದರು. ಆರಂಭದಲ್ಲಿ ವಿಡಿಯೋ ರಿವ್ಯೂಗೆ 120 ರೂ. ಹಣ ಕೊಡುವುದಾಗಿ ನಂಬಿಸಿದ್ದ ಪ್ರಿಯಾ, ಹಣ ಕಳುಹಿಸಿದ್ದರು. ನಂತರ ವಿವಿಧ ಟಾಸ್ಕ್‌ ಪೂರೈಸಿದರೆ ಹಣ … Read more

ಶಿವಮೊಗ್ಗದ ವ್ಯಾಪಾರಿಗೆ ಶಾಕ್‌ ನೀಡಿತು ಟೆಲಿಗ್ರಾಂನ ಅಲೀನಾ ಮೆಸೇಜ್‌, ಆಗಿದ್ದೇನು? ಕಳೆದುಕೊಂಡ ಹಣವೆಷ್ಟು?

SMS-Fraud-Shimoga-CEN-Police-Station.

SHIVAMOGGA LIVE NEWS | 22 MARCH 2024 SHIMOGA : ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ ಎಂದು ಆಸೆ ಹುಟ್ಟಿಸಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ಆಗಿದ್ದು ಹೇಗೆ? ಶಿವಮೊಗ್ಗದ ವ್ಯಾಪಾರಿಯೊಬ್ಬರ (ಹೆಸರು ಗೌಪ್ಯ) ಮೊಬೈಲ್‌ಗೆ ಚಿನ್ನಾಭರಣ ಸಂಸ್ಥೆಯೊಂದರ ಹೆಸರಿನಲ್ಲಿ ಟೆಲಿಗ್ರಾಂ ಆಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಅದರಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ … Read more

ಮ್ಯಾಟ್ರಿಮೋನಿ ಆ್ಯಪ್‌ ಬಳಸುತ್ತಿದ್ದ ಉಪನ್ಯಾಸಕಿಗೆ ಇಂಗ್ಲೆಂಡ್‌ನಿಂದ ಗಿಫ್ಟ್‌, ಕಾದಿತ್ತು ಶಾಕ್‌, ಶಿವಮೊಗ್ಗದಲ್ಲಿ ಕೇಸ್‌

SMS-Fraud-Shimoga-CEN-Police-Station.

SHIVAMOGGA LIVE NEWS | 5 FEBRUARY 2024 SHIMOGA : ಡಿವೋರ್ಸ್‌ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಇಂಗ್ಲೆಂಡ್‌ನಿಂದ ಉಪನ್ಯಾಸಕಿಗೆ (ಹೆಸರು, ಊರು ಗೌಪ್ಯ) ಗಿಫ್ಟ್‌ ಕಳುಹಿಸಿರುವುದಾಗಿ ನಂಬಿಸಿ 4.05 ಲಕ್ಷ ರೂ. ವಂಚಿಸಿದ್ದಾನೆ. ಹೆಚ್ಚುವರಿ ಹಣಕ್ಕೆ ಬೇಡಿಕೆ ಬಂದಾಗ ಉಪನ್ಯಾಸಕಿಗೆ‌ ಅನುಮಾನ ಮೂಡಿದೆ. ವಂಚನೆ ಆಗಿದ್ದು ಹೇಗೆ? ಡಿವೋರ್ಸ್‌ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಇಂಗ್ಲೆಂಡ್‌ನಲ್ಲಿ ವೈದ್ಯ ಎಂದು ಹೇಳಿಕೊಂಡು ಡಾ.ಶಿವ ಎಂಬಾತ ಉಪನ್ಯಾಸಕಿಗೆ ಪರಿಚಯವಾಗಿದ್ದ. ಜ.27ರಂದು ವಾಟ್ಸಪ್‌ನಲ್ಲಿ ಮೆಸೇಜ್‌, ಕಾಲ್‌ ಮಾಡಿ ಪರಸ್ಪರ ಮಾತನಾಡಿದ್ದರು. ಜ.30ರಂದು … Read more

ಶಿವಮೊಗ್ಗದ ಮಹಿಳೆಗೆ ದೆಹಲಿ ವಿಮಾನ ನಿಲ್ದಾಣದಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್

Online-Fraud-In-Shimoga

SHIVAMOGGA LIVE NEWS | 21 DECEMBER 2023 SHIMOGA : ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಐ-ಫೋನ್‌ ಮತ್ತು ಲ್ಯಾಪ್‌ ಟಾಪ್‌ ಗಿಫ್ಟ್‌ ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಮಹಿಳಾ ಉದ್ಯೋಗಿಯೊಬ್ಬರಿಗೆ 7.61 ಲಕ್ಷ ರೂ. ವಂಚಿಸಲಾಗಿದೆ. 2023ರ ಜೂನ್‌ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತರು ಮಹಿಳೆಗೆ ಗಿಫ್ಟ್‌ ಕಳುಹಿಸುವುದಾಗಿ ನಂಬಿಸಿದ್ದರು. ಜುಲೈ ತಿಂಗಳಲ್ಲಿ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿ ಪ್ರಿಯಾಂಕ ಎಂದು ಪರಿಚಯಿಸಿಕೊಂಡು ಮಹಿಳೆಯೊಬ್ಬಳು ಕರೆ ಮಾಡಿದ್ದಳು. ಅಮೆರಿಕದಿಂದ ಐ – ಫೋನ್‌ ಮತ್ತು ಲ್ಯಾಪ್‌ ಟಾಪ್‌ … Read more

ಕಾಂಪ್ಲೆಕ್ಸ್‌ನ ಮಹಡಿ ಮೇಲಿರುವ ಸೈಬರ್‌ ಸೆಂಟರ್‌ ಬಾಗಿಲು ತೆಗೆಯಲು ಬಂದ ಮಾಲೀಕನಿಗೆ ಕಾದಿತ್ತು ಶಾಕ್

House-Theft-in-Shimoga.

SHIVAMOGGA LIVE NEWS | 18 NOVEMBER 2023 SHIMOGA : ಅಂಗಡಿಯೊಂದರ ಶೆಟರ್‌ನ ಬೀಗ ಮುರಿದು ನಗದು ಮತ್ತು ರೆಡಿಮೇಡ್‌ ಬಟ್ಟೆಗಳನ್ನು ಕಳ್ಳತನ (Theft) ಮಾಡಲಾಗಿದೆ. ಮರುದಿನ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಮಾಲೀಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಹರ್ಷ ಕಾಂಪ್ಲೆಕ್ಸ್‌ ಪಕ್ಕದ ಗುರುರಾಜ ಕಾಂಪ್ಲೆಕ್ಸ್‌ನ ಮಹಡಿಯಲ್ಲಿರುವ ಸೈಬರ್‌ ಮತ್ತು ಬಟ್ಟೆ ಮಳಿಗೆಯಲ್ಲಿ ಘಟನೆ ಸಂಭವಿಸಿದೆ. ಸೆಂಥಿಲ್‌ ಕುಮಾರ್‌ ಅವರು ನ.16ರಂದು ರಾತ್ರಿ ಸೈಬರ್‌ ಮತ್ತು ಬಟ್ಟೆ ಮಳಿಗೆಯ ಬಾಗಿಲಿಗೆ ಬೀಗ ಹಾಕಿ … Read more

ಅಕೌಂಟ್‌ಗೆ 79 ಸಾವಿರ ರೂ. ಹಾಕುತ್ತೇವೆ ಅಂದರು, ನಂತರ ಬಂದ SMS ನೋಡಿ ನಿವೃತ್ತ ಉದ್ಯೋಗಿಗೆ ಶಾಕ್

Online-Fraud-In-Shimoga

SHIVAMOGGA LIVE NEWS | 9 NOVEMBER 2023 SHIMOGA : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸೀನಿಯರ್‌ ಮ್ಯಾನೇಜರ್‌ (Manager) ಸೋಗಿನಲ್ಲಿ ಕರೆ ಮಾಡಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್‌ ಖಾತೆಯಿಂದ 80,501 ರೂ. ಹಣ ಲಪಟಾಯಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಈ ವಂಚನೆ? ಶಿವಮೊಗ್ಗದಲ್ಲಿ ವಾಸವಾಗಿರುವ ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಎಸ್‌ಬಿಐ ಬ್ಯಾಂಕಿನ ಸೀನಿಯರ್‌ ಮ್ಯಾನೇಜರ್‌ ಎಂದು ಪರಿಚಿಯಿಸಿಕೊಂಡಿದ್ದ. ನಿಮ್ಮ ಎಸ್‌ಬಿಐ ಕ್ರೆಡಿಟ್‌ … Read more