ಶಿವಮೊಗ್ಗ ಸಿಟಿ ಜಗಮಗ, ಎಲ್ಲ ರಸ್ತೆಗಳಲ್ಲು ದೀಪಾಲಂಕಾರ, ಎಲ್ಲೆಲ್ಲಿ ಹೇಗಿದೆ? ಇಲ್ಲಿವೆ ಫೋಟೊಗಳು

021025-Light-decoration-in-shimoga-city.webp

ದಸರಾ ಸುದ್ದಿ: ನವರಾತ್ರಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿದ್ಯುತ್‌ ದೀಪಾಲಂಕಾರ (Light Decoration) ಮಾಡಲಾಗಿದೆ. ಎಲ್ಲ ಪ್ರಮುಖ ರಸ್ತೆಗಳು ಜಗಮಗಿಸುತ್ತಿವೆ. ಶಿವಮೊಗ್ಗ ನಗರದಲ್ಲಿ ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇದರ ಹೊರತಾಗಿ ಬಿ.ಹೆಚ್‌.ರಸ್ತೆ, ಬಾಲರಾಜ ಅರಸ್‌ ರಸ್ತೆ, ಸವಳಂಗ ರೋಡ್‌, ತುಂಗಾ ನದಿ ಸೇತುವೆಗಳು ಸೇರಿದಂತೆ ಹಲವೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇಲ್ಲಿವೆ ಫೋಟೊಗಳು. ಇದನ್ನೂ ಓದಿ » ಇವತ್ತಿನ ಪಂಚಾಂಗ | 2 ಅಕ್ಟೋಬರ್‌ 2025 | ಇವತ್ತಿನ ಶುಭ ಮುಹೂರ್ತ ಎಷ್ಟೊತ್ತಿಗೆ? … Read more

ಶಿವಮೊಗ್ಗ ಸಿಟಿಯಲ್ಲಿ ಸಕ್ರೆಬೈಲು ಆನೆಗಳ ತಾಲೀಮು ಶುರು

Sakrebyle-Elephant-practise-in-Shimoga-city.

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಮೂರು ಆನೆಗಳಿಗೆ (Elephants) ನಗರದಲ್ಲಿ ತಾಲೀಮು ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಇವತ್ತು ಆನೆಗಳಿಗೆ ತಾಲೀಮು ನಡೆಸಲಾಯಿತು. ಅಂಬಾರಿ ಹೊರಲಿರುವ ಸಾಗರ, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ನಗರದಲ್ಲಿ ತಾಲೀಮು ನಡೆಸಿದವು. ವಾಸವಿ ಶಾಲೆ ಆವರಣದಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್‌, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ರಸ್ತೆ ಮೂಲಕ ಸಾಗಿದವು. ಇದನ್ನೂ ಓದಿ » ವಿಡಿಯೋ ಕರೆಯಲ್ಲೆ ಶಿವಮೊಗ್ಗದ … Read more

ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ನಾಡದೇವಿಯ ಮೆರವಣಿಗೆ? ಇಲ್ಲಿದೆ ಉದ್ಘಾಟನಾ ಕಾರ್ಯಕ್ರಮದ ಹೈಲೈಟ್ಸ್‌

Shimoga-Dasara-inauguration-in-Kote-Road

ದಸರಾ ಸುದ್ದಿ: ಶಿವಮೊಗ್ಗ ದಸರಾಗೆ (Dasara 2025) ವೈಭವದ ಚಾಲನೆ ಸಿಕ್ಕಿದೆ. ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ ರಾಜು ಅವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬವನ್ನು ಉದ್ಘಾಟಿಸಿದರು. ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನಿದೆ? ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಶಾಸಕ ಎಸ್.ಎನ್‌.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಹೆಚ್.ಎಂ.ಮಧು, … Read more

ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನಿದೆ? ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

dasara-Programme-today

ದಸರಾ ಸುದ್ದಿ: ಶಿವಮೊಗ್ಗ ದಸರಾಗೆ (Dasara 2025) ಅದ್ಧೂರಿ ಚಾಲನೆ ಸಿಕ್ಕಿದೆ. ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇವತ್ತು ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ. ಇಲ್ಲಿದೆ ಡಿಟೇಲ್ಸ್‌.   » ಮಕ್ಕಳ ಜಾಥಾ – ಸಮಯ: ಬೆಳಗ್ಗೆ 9 ಸ್ಥಳ: ನಗರದ ವಿವಿಧೆಡೆಯಿಂದ ಅಂತಾರಾಷ್ಟ್ರೀಯ ನೃತ್ಯಗಾರ್ತಿ, ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ ವಿವಿಧ ಶಾಲೆಗಳ ಮಕ್ಕಳಿಂದ ನಗರದ ವಿವಿಧೆಡೆಯಿಂದ ಜಾಥಾ ಆರಂಭವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಮುಕ್ತಾಯ   » ಮಕ್ಕಳ ದಸರಾ … Read more

ಶಿವಮೊಗ್ಗ ದಸರಾ ಇವತ್ತು ಉದ್ಘಾಟನೆ, ನಾಡಹಬ್ಬದಲ್ಲಿ ಇಡೀ ದಿನ ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರಲಿದೆ?

dasara-Programme-today

ದಸರಾ ಸುದ್ದಿ: ಮೈಸೂರಿನ ನಂತರ ಶಿವಮೊಗ್ಗದಲ್ಲಿ ವೈಭವದ ದಸರಾ (Dasara 2025) ಕಾರ್ಯಕ್ರಮಗಳು ನಡೆಯಲಿವೆ. ಇವತ್ತು ನಾಡಹಬ್ಬಕ್ಕೆ ಚಾಲನೆ ಸಿಗಲಿದೆ. ಮೊದಲ ದಿನ ದಸರಾದಲ್ಲಿ ಏನೇನಿರಲಿದೆ? ಇಲ್ಲಿದೆ ವಿವರ. ಭಜನಾ ವೈಭವ – ಸಮಯ: ಬೆಳಗ್ಗೆ 6.30ಕ್ಕೆ ಸ್ಥಳ: ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟೆ ರಸ್ತೆ ವಿದ್ವಾನ್‌ ಅರುಣ್‌ ಕುಮಾರ್‌ ಹಾಗೂ ತಂಡದವರಿಂದ ಮಕ್ಕಳ ದಸರಾ – ಸಮಯ: ಬೆಳಗ್ಗೆ 9ಕ್ಕೆ ಸ್ಥಳ: ಕುವೆಂಪು ರಂಗಮಂದಿರ ರಾಷ್ಟ್ರೀಯ ಸ್ಕೇಟಿಂಗ್‌ ವಿಜೇತರಾದ ಆದ್ವಿಕಾ ನಾಯರ್‌, ಹಿತ ಪ್ರವೀಣ್‌ … Read more