ಸಾಗರದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಶಾಸಕರ ಮೌನಕ್ಕೆ ಬೇಳೂರು ಆಕ್ರೋಶ

Beluru-Gopalakrishna-General-Image

SHIVAMOGGA LIVE NEWS | SAGARA | 9 ಜೂನ್ 2022 ಶಿಕ್ಷಕರ ಕೊರತೆಯಿಂದಾಗಿ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಲಭಿಸುತ್ತಿಲ್ಲ. ಶಾಲೆಗಳಿಗೆ ಮೂಲ ಸೌಕರ್ಯವನ್ನು ಒದಗಿಸದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟು ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪಿಸಿದರು. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಶಾಲೆಗಳಲ್ಲಿ ತರಗತಿ ಆರಂಭವಾಗಿ ಒಂದು ತಿಂಗಳು ಕಳೆದರೂ ಶಿಕ್ಷಕರಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಆಪಾದಿಸಿದರು. ಕ್ಷೇತ್ರದ ಶಾಸಕರು ಮೌನವಾಗಿದ್ದಾರೆ ಇತ್ತೀಚೆಗೆ ಸುರಿದ … Read more

ಸಾಗರದ MDF ಸಂಸ್ಥೆ ಸಭೆಯಲ್ಲಿ ಗದ್ದಲ, ಶಾಸಕರ ಎದುರಲ್ಲೇ ಕೈ ಕೈ ಮಿಲಾಯಿಸಿದ ಗುಂಪುಗಳು

Attack-on-Shripad-Hegde-Nisrani-at-LB-College

SHIVAMOGGA LIVE NEWS | 13 ಮಾರ್ಚ್ 2022 ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (MDF) ಸಂಸ್ಥೆಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸರ್ವ ಸದಸ್ಯರ ಸಭೆಯಲ್ಲಿ ಎರಡು ಗುಂಪುಗಳು ಕೈ ಕೈ ಮಿಲಾಯಿಸಿವೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಲಹಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, MDF ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ 56ನೇ ಸರ್ವ ಸದಸ್ಯರ … Read more

ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿಯಾದ ಶಿವಮೊಗ್ಗ ಎಂಪಿ, ರಿಂಗ್ ರೋಡ್ ನಕ್ಷೆ, NT ರಸ್ತೆ ಅಗಲೀಕರಣಕ್ಕೆ ಮನವಿ

050821 BY Raghavendra Meets Central Ministers 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021 ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಭೂ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳ ಮಂಜೂರಾತಿಗಾಗಿ ಮನವಿ ಮಾಡಿದ್ದಾರೆ. ಸೈನಿಕ ಶಾಲೆ, DRDO ಲ್ಯಾಬ್ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗಕ್ಕೆ ಸೈನಕ ಶಾಲೆ ಮತ್ತು DRDO ರೀಸರ್ಚ್ … Read more

GOOD NEWS | ಅದ್ಧೂರಿ ಮದುವೆಯ ಹಣ ಶಾಲೆಗೆ ದೇಣಿಗೆ ನೀಡಿದ ತೀರ್ಥಹಳ್ಳಿ ಯುವತಿ

251120 Donation For School by Bride in Thirthahalli Agumbe 1

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 25 NOVEMBER 2020 ಅದ್ಧೂರಿ ವಿವಾಹದ ಬದಲು ತಾನು ಓದಿದ ಶಾಲೆಗೆ ಹಣ ದೇಣಿಗೆ ನೀಡಿ, ಯುವತಿಯೊಬ್ಬರು ಜನ ಮೆಚ್ಚುಗೆ ಗಳಿಸಿದ್ದಾರೆ. ಮದುವೆ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಬದಲು, ಶಾಲೆಯ ಅಭಿವೃದ್ಧಿದಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತೀರ್ಥಹಳ್ಳಿಯ ತಾಲೂಕು ಮನಸ್ಸುಗಾರ ಗ್ರಾಮದ ಟೀಕಪ್ಪ ಗೌಡ ಅವರ ಪುತ್ರಿ ಚೇತನಾ ಒಂದು ಲಕ್ಷ ರೂ. ಹಣವನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ. ತಾವು ಓದಿದ ಗುಡ್ಡೇಕೇರಿ ಪ್ರೌಢಶಾಲೆ ಮತ್ತು … Read more

ಸೂಡಾ ಅಧ್ಯಕ್ಷರಾಗಿ ಜ್ಯೋತಿಪ್ರಕಾಶ್, ನಾಲ್ವರು ಸದಸ್ಯರ ನೇಮಕ, ಯಾರೆಲ್ಲ ಸದಸ್ಯರು? ಅಧಿಕಾರವಧಿ ಎಷ್ಟು ವರ್ಷ?

shivamogga graphics map

‌ ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2020 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಅವರು ಈ ಅಧಿಸೂಚನೆ ಪ್ರಕಟಿಸಿದ್ದಾರೆ. ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗೋಪಾಳದ ಉಮಾ ಮೂರ್ತಿ, ಭದ್ರಾವತಿ ಜನ್ನಾಪುರದ ಬಿ.ಜಿ.ರಾಮಲಿಂಗಯ್ಯ, ಭದ್ರಾವತಿ ಹೊಸಮನೆ ಮುಖ್ಯ ರಸ್ತೆಯ ಕದಿರೇಶ್, ಶಿವಮೊಗ್ಗ ವಿದ್ಯಾನಗರದ ಎಸ್.ದೇವರಾಜ್ ಅವರನ್ನು ಪ್ರಾಧಿಕಾರದ … Read more

‘ಮಂಡ್ಯ ಜೆಡಿಎಸ್ ಅಭ್ಯರ್ಥಿಯನ್ನು ವಿದೇಶದಲ್ಲಿ ಹುಡುಕುವಂತಾಗಿದೆ, ಶಿವಮೊಗ್ಗಕ್ಕೂ ಅಂತಹ ಸ್ಥಿತಿ ದೂರವಿಲ್ಲ’

Kumar Bangarappa Photo 1

ಶಿವಮೊಗ್ಗ ಲೈವ್.ಕಾಂ | 21 ಏಪ್ರಿಲ್ 2019 ಚುನಾವಣೆ ಬಳಿಕ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ವಿದೇಶದಲ್ಲಿ ಹುಡುಕುವಂತಾಗಿದೆ. ಅಂತಹ ಸ್ಥಿತಿ ಶಿವಮೊಗ್ಗಕ್ಕೂ ದೂರವಿಲ್ಲ ಅಂತಾ ಸೊರಬ ಶಾಸಕ ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಗಾಗಿ ವಿದೇಶದಿಂದ ಅಭ್ಯರ್ಥಿ ಕರೆಸಿಕೊಂಡಿದ್ದಾರೆ. ಚುನಾವಣೆ ಬಳಿಕ ಮತ್ತೆ ಅಭ್ಯರ್ಥಿಯನ್ನು ವಿದೇಶದಲ್ಲಿಯೇ ಹುಡುಕಬೇಕಾಗುತ್ತದೆ ಎಂದು ಲೇವಡಿ ಮಾಡಿದರು. ಇವರದ್ದು ಚುನಾವಣಾ ಶೋಕಿ ಕೊಳೆರೋಗ, ಅತಿವೃಷ್ಟಿಯಾದಾಗ ಸಿಎಂ ಕುಮಾರಸ್ವಾಮಿ ಅವರನ್ನು ಕರೆದೆವು. ಪ್ರಗತಿ ಪರಿಶೀಲನಾ … Read more