ಶಿವಮೊಗ್ಗದ ರಾಗಿಗುಡ್ಡದಲ್ಲಿ ಏಳು ಭಾರಿ ಸ್ಪೋಟ, ಅಕ್ಕಪಕ್ಕದ ನಿವಾಸಿಗಳಿಗೆ ಢವಢವ, ಗೋಡೆಗಳಲ್ಲಿ ಬಿರುಕು

Blast-At-Ragigudda-ESI-Hospital-area.

SHIVAMOGGA LIVE NEWS | BLAST | 2 ಜೂನ್ 2022 ಶಿವಮೊಗ್ಗದ ರಾಗಿಗುಡ್ಡದಲ್ಲಿ ಏಳು ಭಾರಿ ಸ್ಪೋಟ (BLAST) ಸಂಭವಿಸಿದೆ. ಇದರಿಂದ ಸುತ್ತಮುತ್ತಲ ಮನೆಗಳಲ್ಲಿ ಕಂಪನದ ಅನುಭವವಾಗಿದೆ. ಕೆಲವು ಮನೆಗಳ ಗೋಡೆಗಳ ಮೇಲೆ ಬಿರುಕು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಸಂಜೆವರೆಗೆ ಸ್ಪೋಟದ ಸದ್ದು ಕೇಳಿದೆ. ಎಳು ಭಾರಿ ಸ್ಪೋಟ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬೆಳವಣಿಗೆ ರಾಗಿಗುಡ್ಡ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಹುಟ್ಟಿಸುವುದರ ಜೊತೆಗೆ ಆಕ್ರೋಶಕ್ಕೂ ಕಾರಣವಾಗಿದೆ. ಸ್ಪೋಟಕ್ಕೆ ಕಾರಣವೇನು? … Read more

ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸಾವು

Bhadravathi Name Graphics

SHIVAMOGGA LIVE NEWS | ACCIDENT | 2 ಜೂನ್ 2022 ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರು ಮೃತಪಟ್ಟಿದ್ದಾರೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಸಮೀಪ ಘಟನೆ ಸಂಭವಿಸಿದೆ. ಉತ್ತಮ ಚಕ್ರವರ್ತಿ ಮತ್ತು ಮನೋಜ್ ಮೃತ ದುರ್ದೈವಿಗಳು. ಕಳೆದ ರಾತ್ರಿ ಬೈಕಿನಲ್ಲಿ ಭದ್ರಾವತಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಜಂಕ್ಷನ್ ಸರ್ಕಲ್’ನಿಂದ ಭದ್ರಾವತಿ ರಸ್ತೆಯಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ … Read more

ಶಿವಮೊಗ್ಗ ನಗರದ ಕೆಲ ಬಡಾವಣೆಗಳಲ್ಲಿ ಜೂ.3ರಂದು ಬೆಳಗ್ಗೆಯಿಂದ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | POWER CUT | 2 ಜೂನ್ 2022 ಮಾಡೆಲ್ ಸಬ್ ಡಿವಿಷನ್ ಯೋಜನೆ ಅಡಿ ವಿದ್ಯುತ್ ಕೇಬಲ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಆದ್ದರಿಂದ ಶಿವಮೊಗ್ಗ ನಗರದ ಕೆಲವು ಕಡೆ ಜೂನ್ 3ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಹಲವು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ರಾಜೇಂದ್ರನಗರ, ರವೀಂದ್ರನಗರ, ಜಯನಗರ, ಬಸವನಗುಡಿ, ಸವಳಂಗ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ … Read more

ಶಿವಮೊಗ್ಗದಲ್ಲಿ ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮೇಲೆ ಎಸಿಬಿ ದಾಳಿ

Arrest News Graphics

SHIVAMOGGA LIVE NEWS | CORRUPTION | 2 ಜೂನ್ 2022 ಒಂದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮಹಿಳಾ ಅಧಿಕಾರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಯನ್ನು ಬಂಧಿಸಲಾಗಿದ್ದು, ಶಿವಮೊಗ್ಗದ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಲೀಮಾ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಏನಿದು ಪ್ರಕರಣ? ವಿನೋಬನಗರದ ನಿವಾಸಿಯೊಬ್ಬರು ದಿನಸಿ ಅಂಗಡಿ ನಡೆಸಲು ನೋಂದಣಿಗಾಗಿ ಶಿವಮೊಗ್ಗದ … Read more

ಐದು ವರ್ಷದಿಂದ ಮನೆ ಮುಂದೆ ಕೆಟ್ಟು ನಿಂತಿದ್ದ ಬೈಕ್ ಕಳ್ಳತನ

bike theft reference image

SHIVAMOGGA LIVE NEWS | BIKE | 1 ಜೂನ್ 2022 ಐದು ವರ್ಷದಿಂದ ಕೆಟ್ಟು ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಕೈನೆಟಿಕ್ ಸ್ಪಾರ್ಕ್ ಬೈಕ್ ಕಳ್ಳತನವಾಗಿದೆ. 1988ರ ಮಾಡೆಲ್’ನ ದ್ವಿಚಕ್ರ ವಾಹನವನ್ನು ಮಂಜುನಾಥ್ ಅವರು ಚಲಾಯಿಸುತ್ತಿದ್ದರು. ರಿಪೇರಿ ಆಗಿದ್ದರಿಂದ ಕಳೆದ ಐದು ವರ್ಷದಿಂದ ವಾಹನವನ್ನು ಚಲಾಯಿಸದೆ ಮನೆ ಮುಂದೆ ನಿಲ್ಲಿಸಿದ್ದರು. ವಿನೋಬನಗರದ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಮುಂದೆ … Read more

ಆನ್ ಲೈನ್ ರಮ್ಮಿ ಗೇಮ್ಸ್ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ, ಗೃಹ ಸಚಿವರಿಗೆ ದೂರು

Protest-against-Online-Rummy-in-Shimoga

SHIVAMOGGA LIVE NEWS | RUMMY | 1 ಜೂನ್ 2022 ಆನ್‌ಲೈನ್ ರಮ್ಮಿ ಗೇಮ್‌ಗಳನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿಗೆ ಆನ್‌ಲೈನ್‌ನಲ್ಲಿ ರಮ್ಮಿ ಗೇಮ್‌ಗಳು ಹೆಚ್ಚಾಗಿವೆ. ಇದು ಆನ್‌ಲೈನ್ ಜೂಜಿಗೆ ಸಮಾನವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಪ್ರಭಾವ ಹೆಚ್ಚಾಗುತ್ತಿದೆ. ಆದ್ದರಿಂದ ಯುವ ಪೀಳಿಗೆ ಗೇಮ್ ಮೊರೆ ಹೋಗುತ್ತಿದೆ. ಇದು ಆರ್ಥಿಕ ನಷ್ಟವನ್ನುಂಟು ಮಾಡುವುದರ ಜೊತೆಗೆ ಯುವ ಪೀಳಿಗೆಗೆ ಚಟವಾಗಿ ಪರಿಣಮಿಸಿದೆ … Read more

ಆಗುಂಬೆ ಘಾಟಿಯಲ್ಲಿ ಧರೆಗುರುಳಿದ ಮರ, ಕೆಲಕಾಲ ಟ್ರಾಫಿಕ್ ಜಾಮ್

Tree-Fall-in-Agumbe-Road.

SHIVAMOGGA LIVE NEWS | AGUMBE | 1 ಜೂನ್ 2022 ಮರ ಧರೆಗುರುಳಿ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮರ ತೆರವು ಮಾಡಿದ್ದಾರೆ. ಆಗುಂಬೆ ಘಾಟಿಯ ಮೂರನೆ ತಿರುವಿನಲ್ಲಿ ಇವತ್ತು ಬೆಳಗ್ಗೆ ಮರವೊಂದು ಧರೆಗುರುಳಿತ್ತು. ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು. ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಡ್ಡಲಾಗಿ ಬಿದ್ದಿದ್ದ ಮರದ … Read more

ಶಿವಮೊಗ್ಗ ನಗರದ ವಿವಿಧೆಡೆ ಜೋರು ಮಳೆ

Rain-At-Shimoga-City

SHIVAMOGGA LIVE NEWS | RAIN | 1 ಜೂನ್ 2022 ಶಿವಮೊಗ್ಗ ನಗರದ ವಿವಿಧೆಡೆ ಮಳೆ ಆರಂಭವಾಗಿದೆ. ಮಧ್ಯಾಹ್ನದ ವೇಳೆಗೆ ಜೋರು ಮಳೆ ಸುರಿಯುತ್ತಿದೆ. ದಿಢೀರ್ ಮಳೆಯಿಂದ ಶಿವಮೊಗ್ಗ ನಗರದಲ್ಲಿ ಜನರು ಸಂಕಷ್ಟಕ್ಕೀಡಾದರು. ಮಳೆಯಿಂದ ತಪ್ಪಸಿಕೊಳ್ಳಲು ವಿವಿಧೆಡೆ ಆಶ್ರಯ ಪಡೆಯುವಂತಾಗಿದೆ. ಮೇ 19ರಂದು ಶಿವಮೊಗ್ಗದಲ್ಲಿ ಭಾರಿ ಮಳೆಯಾಗಿತ್ತು. ಆ ಬಳಿಕ ನಗರದಲ್ಲಿ ಬಿರು ಬಿಸಿಲಿನಿಂದಾಗಿ ಜನರು ಕಂಗೆಟ್ಟಿದ್ದರು. ಈಗ ದಿಢೀರ್ ಮಳೆ ಸುರಿಯುತ್ತಿದೆ. ಇದನ್ನೂ ಓದಿ – ಒಂದೇ ವಾರಕ್ಕೆ ಶಿವಮೊಗ್ಗದ ವಾತಾವರಣ ಬದಲು, ರಣ ಬಿಸಿಲಿಗೆ … Read more

ಕಮಲಾ ನರ್ಸಿಂಗ್ ಹೋಂ ಪಕ್ಕದ ಆಟೋ ನಿಲ್ದಾಣ ಬಳಿ ಜೂಜಾಟ

crime name image

SHIVAMOGGA LIVE NEWS | GAMBLING | 1 ಜೂನ್ 2022 ಶಿವಮೊಗ್ಗದ ಕಮಲಾ ನರ್ಸಿಂಗ್ ಹೋಂ ಬಳಿ ಓ.ಸಿ ಜೂಜಾಟ ಆಡಿಸುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಮಲಾ ನರ್ಸಿಂಗ್ ಹೋಂ ಪಕ್ಕದ ಆಟೋ ನಿಲ್ದಾಣದ ಸಮೀಪ ವ್ಯಕ್ತಿಯೊಬ್ಬ ಓ.ಸಿ ಜೂಜಾಟ ಆಡಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ನಾಪತ್ತೆ ನಿಮ್ಮೂರು, ನಿಮ್ಮ … Read more

ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ನಾಪತ್ತೆ

Doddapete-Police-Station-General-Image.

SHIVAMOGGA LIVE NEWS | BIKE | 1 ಜೂನ್ 2022 ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ಕಳ್ಳತನವಾಗಿದೆ. ಹೂವಿನ ಮಾರುಕಟ್ಟೆ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಗೋಪಾಳದ ಶಿವಕುಮಾರ್ ಎಂಬುವವರಿಗೆ ಸೇರಿದ ಟಿವಿಎಸ್ ಅಪಾಚೆ ಬೈಕ್ ಕಳುವಾಗಿದೆ. ಹೂವಿನ ಮಾರುಟ್ಟೆಯಲ್ಲಿ ಶಿವಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಹೂವಿನ ಮಾರುಕಟ್ಟೆ ಪಕ್ಕದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಶಿವಕುಮಾರ್ ಅವರು ಬಳಿಕ ದೊಡ್ಡಪೇಟೆ … Read more