ಸಿದ್ದರಾಮಯ್ಯ, ಹೆಲಿಕಾಪ್ಟರ್ ನೋಡಲು ತರಗತಿ ಅರ್ಧಕ್ಕೆ ಬಿಟ್ಟು ಬಂದ ತೀರ್ಥಹಳ್ಳಿ ವಿದ್ಯಾರ್ಥಿಗಳು

150622 Siddaramaiah at Thirthahalli college

SHIVAMOGGA LIVE NEWS | THIRTHAHALLI | 15 ಜೂನ್ 2022 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ತೀರ್ಥಹಳ್ಳಿಯ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಖುಷಿಪಟ್ಟರು. ತರಗತಿಯನ್ನು ಅರ್ಧಕ್ಕೆ ಬಿಟ್ಟು ಹೊರಬಂದು ಮಾಜಿ ಸಿಎಂ ಅವರತ್ತ ಕೈ ಬೀಸಿದರು. ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ತೀರ್ಥಹಳ್ಳಿಗೆ ಆಗಮಿಸಿದ್ದರು. ಸರ್ಕಾರಿ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಹೆಲಿಪ್ಯಾಡ್ ನರ್ಮಿಸಲಾಗಿತ್ತು‌. ಹೆಲಿಕಾಪ್ಟರ್ ಬರಲಿದೆ, ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎಂಬ ವಿಚಾರ ತಿಳಿದ … Read more

ಜಿಂಕೆ ಕೊಂಬು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಂಚಾರಿ ದಳ ದಾಳಿ

Arrest News Graphics

SHIVAMOGGA LIVE NEWS | SAGARA| 15 ಜೂನ್ 2022 ಜಿಂಕೆ ಕೊಂಬು ಸಾಗಣೆ ಮಾಡುತ್ತಿದ್ದವರ ಮೇಲೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. DEER ಶಿವಮೊಗ್ಗದ ಹಾರನಹಳ್ಳಿಯ ಇಸ್ಮಾಯಿಲ್ ಸಿರಿಗೆರೆ ಮತ್ತು ನಯಾಜುಲ್ಲಾ ಆರೆಮನೆ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಎರಡು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿರಿಗೆರೆ ರಸ್ತೆಯ ಆಯನೂರು ಕೆರೆ ಬಳಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ … Read more

ಮಾರಿಕಾಂಬ ದೇವಸ್ಥಾನ ವ್ಯವಸ್ಥಾಪನ ಸಮಿತಿ ವಿರುದ್ಧ ಅಹೋರಾತ್ರಿ ಧರಣಿಗೆ ನಿರ್ಧಾರ, ಕಾರಣವೇನು?

sagara graphics

SHIVAMOGGA LIVE NEWS | SAGARA| 15 ಜೂನ್ 2022 ಸಾಗರದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಸ್ಥಾನ ವ್ಯವಸ್ಥಾಪಕ ಸಮಿತಿ ವಿರುದ್ಧ ಆಹೋರಾತ್ರಿ ಧರಣಿ ನಡೆಸಲು ಮಾರಿಕಾಂಬಾ ಹಿತರಕ್ಷಣಾ ಸಮಿತಿ ನಿರ್ಧರಿಸಲಾಗಿದೆ. TEMPLE ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಡಿ.ಆನಂದ್ ಅವರು, ಜೂ 20ರಂದು ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಅವರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಜೂ.21ರಂದು ದೇವಸ್ಥಾನದ ಮುಂಭಾಗ ಧರಣಿ ನಡೆಯಲಿದೆ ಎಂದು ತಿಳಿಸಿದರು. ಸಮಿತಿಯ ಆಗ್ರಹ ಏನು? ಹಾಲಿ … Read more

ನಂಜಪ್ಪ ಆಸ್ಪತ್ರೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | SHIMOGA | 15 ಜೂನ್ 2022 ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೆಳಗ್ಗೆ ತಂದು ನಿಲ್ಲಿಸಿದ್ದ ಬೈಕ್ ರಾತ್ರಿ ನಾಪತ್ತೆಯಾಗಿತ್ತು. BIKE THEFT ಮಲವಗೊಪ್ಪದ ಚಂದ್ರ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಚಂದ್ರ ಅವರು ಕೆಲಸಕ್ಕೆಂದು ನಂಜಪ್ಪ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ಬೈಕ್ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದರು. ರಾತ್ರಿ ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ … Read more

ತೀರ್ಥಹಳ್ಳಿಯಲ್ಲಿ ಬೈಕ್ ಜಾಥಾ, ಕಾರ್ಯಕರ್ತರ ಬೈಕ್ ಚಲಾಯಿಸಿದ ಹೋಂ ಮಿನಿಸ್ಟರ್

Home-Minister-Thirthahalli-bike-rally

SHIVAMOGGA LIVE NEWS | THIRTHALLI| 15 ಜೂನ್ 2022 ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿಯಲ್ಲಿ ವಿಕಾಸ ತೀರ್ಥ ಬೈಕ್ ರಾಲಿ ನಡೆಸಲಾಯಿತು. ತೀರ್ಥಹಳ್ಳಿಯ ಪ್ರಮುಖ ಬೀದಿಗಳಲ್ಲಿ ರಾಲಿ ಸಾಗಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ವತಃ ಬೈಕ್ ಚಲಾಯಿಸಿ ಗಮನ ಸೆಳೆದರು. BIKE RALLY ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಿಂದ ಬೈಕ್ ರಾಲಿ ನಡೆಸಲಾಯಿತು. ದೊಡ್ಡ ಸಂಖ್ಯೆಯ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕರ್ತರು ಹಾದಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ … Read more

ಹೊಟ್ಟೆ ತುಂಬಾ ತಿಂದು, ಬಿಲ್ ಕೇಳಿದ್ದಕ್ಕೆ ಹೊಟೇಲ್ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಿದರು

Tunga-Nagara-Police-Station-Shimoga

SHIVAMOGGA LIVE NEWS | SHIMOGA | 15 ಜೂನ್ 2022 ಹೊಟೇಲ್’ನಲ್ಲಿ ಊಟ ಮಾಡಿ, ಬಿಲ್ ಪಾವತಿಸುವಂತೆ ತಿಳಿಸಿದ ಮಾಲೀಕನಿಗೆ ಒಡೆದ ಬಾಟಲಿಯಲ್ಲಿ ಚುಚ್ಚಲು ಯತ್ನಿಸಿ, ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ASSAULT ಶಿವಮೊಗ್ಗದ ಸಕ್ರೆಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸಕ್ರೆಬೈಲು ಹೊಟೇಲ್’ನ ಕೆ.ಎಂ.ರವಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಏನಿದು ಪ್ರಕರಣ? ದಾಳಿಗೇನು ಕಾರಣ? ಸಕ್ರೆಬೈಲು ಹೊಟೇಲ್’ಗೆ ಬಂದಿದ್ದ ನಾಲ್ವರು ಯುವಕರು ಮಧ್ಯಾಹ್ನದಿಂದ ಸಂಜೆವರೆಗೆ ಇದ್ದರು. … Read more

‘ಇಲ್ಲಿ 33 ರೂ. ಊಟಕ್ಕೆ 190 ರೂ. ಬಿಲ್, ಸರ್ಕಾರಕ್ಕೆ ದೊಡ್ಡ ಲಾಸ್’

Sagara Government Hospital

SHIVAMOGGA LIVE NEWS | SAGARA| 15 ಜೂನ್ 2022 ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆಯುತ್ತಿದೆ. ಇದರ ವಿರುದ್ಧ ಕೂಡಲೆ ತನಿಖೆ ನಡೆಸಬೇಕು ಎಂದು ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು ಒತ್ತಾಯಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಬಾಬು ಅವರು, ಆಸ್ಪತ್ರೆಯಲ್ಲಿ 33 ರೂ.ಗೆ ಒದಗಿಸುತ್ತಿದ್ದ ಆಹಾರವನ್ನು ಈಗ 190 ರೂ.ಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ದೊಡ್ಡಮಟ್ಟದ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು. FOOD ಅಡುಗೆ ಕೋಣೆ ಇದ್ದರೂ … Read more

ಕುಪ್ಪಳಿಯಲ್ಲಿ ಪಾದಯಾತ್ರೆಗೆ ಹಂಸಲೇಖ ಚಾಲನೆ, ಹೋರಾಟದ ಬಗ್ಗೆ ಹೇಳಿದ್ದೇನು?

150622 Padayathre begins at Kuppali

SHIVAMOGGA LIVE NEWS | THIRTHAHALLI | 15 ಜೂನ್ 2022 ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧಿಸಿ ಕುಪ್ಪಳಿಯಿಂದ ಆಯೋಜಿಸಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಸಾಹಿತಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕುಪ್ಪಳಿಯ ಕವಿಶೈಲದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮಾಧಿಗೆ ನಮನ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ 18 ಕಿ.ಮೀ ಪಾದಯಾತ್ರೆ ನಡೆಯಲಿದೆ. ‘ನಾವು ತಮಿಳರನ್ನು ಅನುಸರಿಸಬೇಕು’ ಪಾದಯಾತ್ರೆಗೆ ಚಾಲನೆ ನೀಡದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು, … Read more

ರಾತ್ರಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಬೆಳಗಾಗುವುದರಲ್ಲಿ ಮಾಯ, ಕಂಗಾಲದ ರೈತ

crime name image

SHIVAMOGGA LIVE NEWS | SHIMOGA | 15 ಜೂನ್ 2022 ಮನೆ ಮುಂದಿನ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿ ಹಾಕಿದ್ದ ಎರಡು ಎತ್ತುಗಳು ಬೆಳಗಾಗುವುದರಲ್ಲಿ ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎತ್ತುಗಳು ಕಳ್ಳತನವಾಗಿರುವ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. OX THEFT ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯ ಚಿನ್ನ ನಾಯ್ಕ್ ಎಂಬುವವರ ಮನೆ ಮುಂದಿನ ಕೊಟ್ಟಿಗೆಯಲ್ಲಿ ಎತ್ತುಗಳು ಕಳ್ಳತನವಾಗಿದೆ. ಮೇ 17ರ ರಾತ್ರಿ ಚಿನ್ನ ನಾಯ್ಕ್ ಅವರು ವ್ಯವಸಾಯದ ಕೆಲಸ ಮುಗಿಸಿ ಎತ್ತುಗಳನ್ನು ತಂದು ಕೊಟ್ಟಿಗೆಯಲ್ಲಿ … Read more

ಶಿವಮೊಗ್ಗದಲ್ಲಿ ಪೊಲೀಸ್ ಸಿಬ್ಬಂದಿ ಮುಖಕ್ಕೆ ಪರಚಿ ವ್ಯಕ್ತಿ ಪರಾರಿ

vinobanagara polic station and police jeep

SHIVAMOGGA LIVE NEWS | SHIMOGA | 15 ಜೂನ್ 2022 ಜಗಳವಾಡುತ್ತಿದ್ದವರನ್ನು ವಿಚಾರಣೆ ಮಾಡಲು ತೆರಳಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆಯೆ ವ್ಯಕ್ತಿಯೊಬ್ಬ ದಾಳಿ ಮಾಡಿ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪೊಲೀಸ್ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ. ATTACK ವಿನೋಬನಗರ ಠಾಣೆ ಪೊಲೀಸ್ ಠಾಣೆ ಸಿಬ್ಬಂದಿ ಶಿವರಾಮ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಏನಿದು ಪ್ರಕರಣ? ಶಿವರಾಮ್ ಅವರು ಇ.ಆರ್.ಎಸ್.ಎಸ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೊಮ್ಮನಕಟ್ಟೆ ಬಳಿ ಗಲಾಟೆ ಆಗುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ ಇ.ಆರ್.ಎಸ್.ಎಸ್ ವಾಹನದಲ್ಲಿ … Read more