ಮೈದೂಳಲು ಗ್ರಾಮದಲ್ಲಿ ಹಲವರಿಗೆ ವಾಂತಿ, ಭೇದಿ, ಆಸ್ಪತ್ರೆಗೆ ದಾಖಲು

-Doctors-visit-Mydolalu-village-for-verification

SHIVAMOGGA LIVE NEWS | HOLEHONNUR| 14 ಜೂನ್ 2022 ಮೈದೊಳಲು ಗ್ರಾಮದ ಎರಡು ಬೀದಿಯಲ್ಲಿ ಒಂದೆರಡು ದಿನದಿಂದ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಎಂ.ವಿ.ಅಶೋಕ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮದ ಕುಡಿಯುವ ನೀರಿನ (WATER) ಮೂಲವನ್ನು ಆರೋಗ್ಯಾಧಿಕಾರಿಗಳು ಪರಿಶೀಲಿಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕಿನಿಂದ ಸರಬರಾಜು ಆಗುತ್ತಿರುವ ನೀರು ಕುಡಿದ ಜನರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಟ್ಯಾಂಕಿನ ಬಳಿ … Read more

ಹುಷಾರ್, ನಿಮ್ಮ ಮನೆಗೂ ಬರಬಹುದು ‘ಮೆಸ್ಕಾಂ ಬಿಲ್ ಕಲೆಕ್ಟರ್’, ಭದ್ರಾವತಿಯಲ್ಲೊಂದು ವಿಚಿತ್ರ ಕೇಸ್

Bhadravathi News Graphics

SHIVAMOGGA LIVE NEWS | BHADARAVATHI| 14 ಜೂನ್ 2022 ಮೆಸ್ಕಾಂ ಬಿಲ್ ಕಲೆಕ್ಟರ್ ಎಂದು ಹಣ ವಸೂಲಿ ಮಾಡಿ, ಜನರನ್ನು ವಂಚಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬ ಕಂಬಿ ಎಣಿಸುವಂತಾಗಿದೆ. ಸಾರ್ವಜನಿಕರೆ ಹಿಡಿದು ಆತನನ್ನು ಮೆಸ್ಕಾಂ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಭದ್ರಾವತಿ ಹಳೇ ನಗರದ ಕುಂಬಾರ ಬೀದಿಯಲ್ಲಿ ಘಟನೆ ಸಂಭವಿಸಿದೆ. ತಾನು ಮೆಸ್ಕಾಂ ಬಿಲ್ ಕಲೆಕ್ಟರ್ ಎಂದು ಮಹಿಳೆಯೊಬ್ಬರನ್ನು ವಂಚಿಸಲು ಮುಂದಾಗಿದ್ದಾಗ, ಸಾರ್ವಜನಿಕರೆ ಈತನನ್ನು ಹಿಡಿದಿದ್ದಾರೆ. FAKE BILL COLLECTOR ಏನಿದು ಘಟನೆ? ಕುಂಬಾರ ಬೀದಿಯ ಶಾಂತಮ್ಮ ಎಂಬುವವರ ಮನೆ … Read more

ಭದ್ರಾವತಿಯಲ್ಲಿ ಬ್ಯಾಂಕ್ ಒಳೆಗೆ ಹೋಗಿ ಹಣ ಪಾವತಿಸಿ ಹಿಂತಿರುಗುವಷ್ಟರಲ್ಲಿ ಬೈಕ್ ಇಲ್ಲ

bike theft reference image

SHIVAMOGGA LIVE NEWS | BHADRAVATHI | 14 ಜೂನ್ 2022 ಬ್ಯಾಂಕ್ ಒಳಗೆ ಹೋಗಿ ಹಣ ಕಟ್ಟಿ ಹಿಂತಿರುಗುವಷ್ಟರಲ್ಲಿ ಹೋಂಡಾ ಆಕ್ಟೀವಾ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. BIKE ಹೊಸಮನೆ ನೃಪತುಂಗ ನಗರದ ಚಂದನ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಬೈಕ್ ಕಳುವಾಗಿದೆ. ಭದ್ರಾವತಿಯ ಬಿ.ಹೆಚ್.ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಒಳಗೆ ಹೋಗಿ ಹಣ ಪಾವತಿ ಮಾಡಿ, ಹಿಂತಿರುಗುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಚಂದನ್ ಬಳಿಕ … Read more

ಮತ್ತೆ ಪ್ರತ್ಯಕ್ಷವಾಯ್ತು ಕಾಡಾನೆ, ಗ್ರಾಮಸ್ಥರಲ್ಲಿ ಢವಢವ

Elephant-near-Agumbe-vatehalla

SHIVAMOGGA LIVE NEWS | THIRTHAHALLI | 14 ಜೂನ್ 2022 ಆಗುಂಬೆ ಭಾಗದಲ್ಲಿ ಪುನಃ ಕಾಡಾನೆ ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮಸ್ಥರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ವಾಟೆಹಳ್ಳದ ಸಮೀಪದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಈವರೆಗೂ ಕಾಡಾನೆ ಗ್ರಾಮದ ಬಳಿಗೆ ಬಂದಿರಲಿಲ್ಲ. ಈಗ ಗ್ರಾಮದ ಸಮೀಪದಲ್ಲಿ ಸಂಚರಿಸಿ, ಜನರಲ್ಲಿ ಭೀತಿ ಉಂಟು ಮಾಡಿದೆ. ಆಗುಂಬೆ ಭಾಗದಲ್ಲಿ ಹಲವು ವರ್ಷದಿಂದ ಕಾಡಾನೆ ಹಾವಳಿ ಇದೆ. ವಾಟೆಹಳ್ಳಿ ಸಮೀಪ 2018ರಲ್ಲಿ ಕಾಡಾನೆ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಈ ಪುನಃ … Read more

ರಸ್ತೆ ಪಕ್ಕ ನಿಂತುಕೊಂಡು ಮಾತಾಡುತ್ತಿದ್ದ ಸ್ನೇಹಿತರಿಗೆ ಬೈಕ್ ಡಿಕ್ಕಿ, ಒಬ್ಬ ಸಾವು

crime name image

SHIVAMOGGA LIVE NEWS | BHADRAVATHI | 14 ಜೂನ್ 2022 ಬೈಕ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಚಾಲಕನ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ACCIDENT ಅಂತರಗಂಗೆ ಕ್ಯಾಂಪ್’ನ ಸಂತೋಷ್ (35) ಮೃತ ದುರ್ದೈವಿ. ಮಂಜುನಾಥ್ ಎಂಬಾತ ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಭದ್ರಾವತಿ ಹೊಸಮನೆಯ ಮುರುಗೇಶ್ ಕೂಡ ಗಾಯಗೊಂಡಿದ್ದಾನೆ. ಹೇಗಾಯ್ತು ಆಪಘಾತ? … Read more

ಶಿವಮೊಗ್ಗದ ಬೊಮ್ಮನಕಟ್ಟೆ ಕೆರೆಯಲ್ಲಿ ಮಹಿಳೆಯ ಮೃತದೇಹ

woman-dead-body-found-at-Bommanakatte-Lake

SHIVAMOGGA LIVE NEWS | SHIMOGA | 13 ಜೂನ್ 2022 ಬೊಮ್ಮನಕಟ್ಟೆ ಕೆರೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅವರ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಮೃತಳನ್ನು ಬೊಮ್ಮನಕಟ್ಟೆಯ ಎ ಬ್ಲಾಕ್ ನಿವಾಸಿ ಮಮತಾ ಎಂದು ಗುರುತಿಸಲಾಗಿದೆ. ಬೊಮ್ಮನಕಟ್ಟೆಯ ಜಿ ಬ್ಲಾಕ್’ನಲ್ಲಿರುವ ಕೆರೆಯಲ್ಲಿ ಮೃತದೇಹ ತೇಲುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹವನ್ನು ಕೆರೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದನ್ನೂ ಓದಿ – ಗೋಂದಿ ಚಾನಲ್ ಏರಿ … Read more

ಕುವೆಂಪು ರಸ್ತೆಯಲ್ಲಿ ಬೈಕ್ ಕಳ್ಳರ ಖರ್ತನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆ

bike theft reference image

SHIVAMOGGA LIVE NEWS | SHIMOGA | 13 ಜೂನ್ 2022 ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕ್ ನಾಪತ್ತೆಯಾಗಿದೆ. ಪಕ್ಕದ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬೈಕ್ ಕಳ್ಳತನ (THEFT) ಆಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಮಕ್ಕಳ ಖಾಸಗಿ ಆಸ್ಪತ್ರೆ ಮುಂದೆ ಘಟನೆ ಸಂಭವಿಸಿದೆ. ಆಸ್ಪತ್ರೆಯ ಸಿಬ್ಬಂದಿ ಲಿಂಗರಾಜು ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಲಿಂಗರಾಜು ಅವರು ಬೈಕ್ ತಂದು ಆಸ್ಪತ್ರೆ ಮುಂದೆ ನಿಲ್ಲಿಸಿ, ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಹೊರ … Read more

ಗೋಂದಿ ಚಾನಲ್ ಏರಿ ಮೇಲೆ ಅಂದರ್ ಬಾಹಾರ್ ಜೂಜಾಟ

Club-Cards-General-Image

SHIVAMOGGA LIVE NEWS | BHADRAVATHI | 13 ಜೂನ್ 2022 ಗೋಂದಿ ಚಾನಲ್ ಬಳಿ ಅಂದರ್ ಬಾಹಾರ್ ಜೂಜಾಟ ಆಡುತ್ತಿದ್ದವರ ವಿರುದ್ಧ ಭದ್ರಾವತಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಜೂಜಾಟ ಆಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. (GAMBLING) ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ತಿಲಕನಗರ ಗ್ರಾಮದ ಗೋಂದಿ ಚಾನಲ್ ಪಕ್ಕದ ಏರಿ ಮೇಲೆ ಇಸ್ಪೀಟ್ ಜೂಜಾಟ ಅಡಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಸ್ಥಳದಲ್ಲಿ … Read more

ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದ ಬಸ್ ಚಾಲಕನಿಗೆ ಕಾದಿತ್ತು ಶಾಕ್

Shimoga Map Graphics

SHIVAMOGGA LIVE NEWS | SHIMOGA | 13 ಜೂನ್ 2022 ಶಿವಮೊಗ್ಗ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿದೆ. ಖಾಸಗಿ ಬಸ್ ಚಾಲಕ ವಾಸುಕಿ ಪ್ರಸಾದ್ ಎಂಬುವವರಿಗೆ ಸೇರಿದ ಬಜಾಜ್ ಪ್ಲಾಟೀನ ಬೈಕ್ ಕಳ್ಳತನ ಮಾಡಲಾಗಿದೆ. ವಾಸುಕಿ ಪ್ರಸಾದ್ ಅವರು ಕೆಲಸ ಮುಗಿಸಿ ರಾತ್ರಿ ಹಿಂತಿರುಗಿದಾಗ ಬೈಕನ್ನು ತಮ್ಮ ಮನೆ ಮುಂದೆ ತಂದು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದಾಗ ಬೈಕ್ ನಾಪತ್ತೆಯಾಗಿತ್ತು. … Read more

ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ, ಕಾರಣವೇನು?

Kimmane-Rathnakar-Former-Minister

SHIVAMOGGA LIVE NEWS | SHIMOGA | 12 ಜೂನ್ 2022 ಪಠ್ಯ ಪುಸ್ತಕ ಪರಿಷ್ಕರಣೆ ಮತ್ತು ಕುವೆಂಪು ಅವರಿಗೆ ಅವಮಾನ ಖಂಡಿಸಿ ಜೂನ್ 15ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯತ್ರೆ (PADAYATHRE) ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಜೂ.15ರಂದು ಬೆಳಗ್ಗೆ 7 ಗಂಟೆಗೆ ಕುವೆಂಪು ಸಮಾಧಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುತ್ತದೆ. 18 ಕಿ.ಮೀ ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ 12 ಗಂಟೆ … Read more