ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಸಂಸ್ಥೆಗೇ ₹3,00,000 ವಂಚಿಸಿದ ಕ್ವಾಲಿಟಿ ಮ್ಯಾನೇಜರ್‌, ಏನಿದು ಕೇಸ್‌?

Sagara Police Station Building

ಸಾಗರ: ಗ್ರಾಹಕರು ಮರುಪಾವತಿ ಮಾಡಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ (Finance) ಸಂಸ್ಥೆಗೆ ಕಟ್ಟದೆ ವಂಚಿಸಿದ ಬ್ರಾಂಚ್‌ ಕ್ವಾಲಿಟಿ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಲೆಕ್ಕ ಪರಿಶೋಧನೆ ಮಾಡಿದಾಗ ಕ್ವಾಲಿಟಿ ಮ್ಯಾನೇಜರ್‌ ₹3.03 ಲಕ್ಷ ವಂಚಿಸಿರುವು ಬೆಳಕಿಗೆ ಬಂದಿದೆ. ಫೈನಾನ್ಸ್‌ ಸಂಸ್ಥೆಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುತ್ತದೆ. ಅವರು ಸಾಲ ಮರುಪಾವತಿ ಮಾಡಿದ್ದನ್ನು ಕ್ವಾಲಿಟಿ ಮ್ಯಾನೇಜರ್‌ ಫೈನಾನ್ಸ್‌ ಸಂಸ್ಥೆಗೆ ಮರುಪಾವತಿಸಬೇಕು. 2024ರ ಡಿಸೆಂಬರ್‌ 10 ರಿಂದ 2025ರ ಮೇ 12ರವರೆಗೆ ₹3.03 ಲಕ್ಷವನ್ನು ಫೈನಾನ್ಸ್‌ ಸಂಸ್ಥೆಗೆ … Read more

ವ್ಯಕ್ತಿಯನ್ನು ಮನೆಯೊಳಗೆ ಕೂಡಿ ಹಾಕಿ ಫೈನಾನ್ಸ್‌ ಸಿಬ್ಬಂದಿಯಿಂದ ಜೀವ ಬೆದರಿಕೆ

soraba-News-Update

ಸೊರಬ: ಸಾಲದ ಕಂತು ಕಟ್ಟದ್ದಕ್ಕೆ ವ್ಯಕ್ತಿಯೊಬ್ಬರನ್ನು ಮನೆಯೊಳಗೆ ಕೂಡಿ ಹಾಕಿದ ಫೈನಾನ್ಸ್‌ (finance) ಸಂಸ್ಥೆಯ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸೊರಬ ತಾಲೂಕು ಆನವಟ್ಟಿಯ ಜೆ.ಸಿ. ಬಡಾವಣೆಯ ಮಂಜುನಾಥ್‌ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಮಂಜುನಾಥ ಅವರ ತಾಯಿ ಫೈನಾನ್ಸ್‌ ಸಂಸ್ಥೆಯಿಂದ ₹11 ಲಕ್ಷ ಗೃಹ ಸಾಲ ಪಡೆದಿದ್ದರು. ಒಂದು ವರ್ಷದ ಹಿಂದೆ ಅವರ ತಾಯಿ ತೀರಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಚೆಗೆ ಮನೆ ಬಳಿಗೆ ಬಂದ ಫೈನಾನ್ಸ್‌ ಸಂಸ್ಥೆಯ ಸಿಬ್ಬಂದಿ, ಮಂಜುನಾಥ … Read more

ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂನಲ್ಲಿ ಮಹತ್ವದ ಬದಲಾವಣೆಗೆ NPCI ಸೂಚನೆ

google-pay-phone-pay-scanner

ಟೆಕ್‌ ನ್ಯೂಸ್:‌ ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂನಲ್ಲಿ ಇನ್ಮೂಂದೆ ಹಣ ವಿನಂತಿಸುವ ಫೀಚರ್‌ ಕಣ್ಮರೆಯಾಗಲಿದೆ. ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಈ ಫೀಚರ್‌ ತೆಗೆದು ಹಾಕುವಂತೆ ಬ್ಯಾಂಕುಗಳು ಮತ್ತು ಯುಪಿಐ (bhim upi) ಪ್ಲಾಟ್‌ಫಾರಂಗಳಿಗೆ ಈಗಾಗಲೇ ಸೂಚನೆ ನೀಡಿದೆ. ಈ ಕುರಿತ ಹೈಲೈಟ್ಸ್‌ ಇಲ್ಲಿದೆ ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಂತಿಸುವ (P2P) ಫೀಚರ್‌ 2025ರ ಅಕ್ಟೋಬರ್‌ 1ರಿಂದ ತೆಗೆದು ಹಾಕಲಾಗುತ್ತಿದೆ. ಕುಟುಂಬದವರು, ಸ್ನೇಹಿತರ ಮಧ್ಯೆ ಹಣ ವರ್ಗಾವಣೆ ಸುಲಭಗೊಳಿಸಲು. ನಿಗದಿತ ಮೊತ್ತವನ್ನು ವಿನಂತಿಸಿಲು … Read more

ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌

Police-Van-Jeep-at-Shimoga-Nehru-Road

ಶಿವಮೊಗ್ಗ: ಕಾರ್ಖಾನೆಯೊಂದರ ನೌಕರರೊಬ್ಬರಿಗೆ ಫೈನಾನ್ಸ್‌ (Finance) ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿ, ಸಾಲ ನೀಡುವುದಾಗಿ ನಂಬಿಸಿ, ಬಳಿಕ ನಾನಾ ಕಾರಣಕ್ಕೆ ಹಣ ಪಾವತಿಸಿಕೊಂಡು ವಂಚಿಸಲಾಗಿದೆ. ಸಾಲ ಸಿಗುವ ಭರವಸೆಯಲ್ಲಿ ಕಾರ್ಖಾನೆ ನೌಕರ ₹4.13 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಕಾರ್ಖಾನೆ ನೌಕರರೊಬ್ಬರಿಗೆ (ಹೆಸರು ಗೌಪ್ಯ) ಫೈನಾನ್ಸ್‌ ಸಂಸ್ಥೆಯೊಂದರ ಬೆಂಗಳೂರು ಶಾಖೆಯ ಪ್ರತಿನಿಧಿ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಸಾಲದ ಅಗತ್ಯವಿದ್ದರೆ ಒದಗಿಸುವುದಾಗಿ ನಂಬಿಸಿದ್ದರು. ತುರ್ತು ಹಣದ ಅವಶ್ಯಕತೆ ಇದ್ದಿದ್ದರಿಂದ ನೌಕರ ಸಾಲ ಬೇಕು ಎಂದು ಒಪ್ಪಿಕೊಂಡಿದ್ದರು. ಇದನ್ನೂ … Read more

ಶಿವಮೊಗ್ಗದಲ್ಲಿ ವಿಷ ಸೇವಿಸಿದ ಆಟೋ ಚಾಲಕ, ಕಾರಣವೇನು?

160125 mc gann hospital general image

SHIVAMOGGA LIVE NEWS, 29 JANUARY 2025 ಶಿವಮೊಗ್ಗ : ಖಾಸಗಿ ಫೈನಾನ್ಸ್‌ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತು ಆಟೋ ಚಾಲಕರೊಬ್ಬರು (Driver) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವಮೊಗ್ಗದ ಪುರಲೆಯ ಆಟೋ ಚಾಲಕ ನಾಗೇಶ್‌ (35) ಆತ್ಮಹತ್ಯೆಗೆ ಯತ್ನಿಸಿದವರು. ಪುರಲೆ ಸಮೀಪ ನಾಗೇಶ್‌ ವಿಷ ಸೇವಿಸಿ ಪ್ರಜ್ಞಾಹೀನರಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ನಾಗೇಶ್‌ನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ನಾಗೇಶ್‌ ಗುಣವಾಗಿದ್ದಾರೆ. ಪತ್ನಿಯ ಚಿಕಿತ್ಸೆಗಾಗಿ ಫೈನಾನ್ಸ್‌ ಸಂಸ್ಥೆಗಳಿಂದ 3 ಲಕ್ಷ ರೂ. … Read more

ಶಿವಮೊಗ್ಗದಲ್ಲಿ ಕಚೇರಿ ಬಳಿ ಬೈಕ್‌ ಡಿಕ್ಕಿ ತೆಗೆದ ಉದ್ಯೋಗಿಗೆ ಕಾದಿತ್ತು ಶಾಕ್

Crime-News-General-Image

SHIMOGA NEWS, 15 NOVEMBER 2024 : ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದ 1.20 ಲಕ್ಷ ರೂ. ನಗದು ಕಳ್ಳತನವಾಗಿದೆ. ಶಿವಮೊಗ್ಗದ ಬಿ.ಹೆಚ್‌.ರಸ್ತೆಯಲ್ಲಿರುವ ಬಜಾಜ್‌ ಫೈನಾನ್ಸ್‌ (finance) ಸಂಸ್ಥೆಯಲ್ಲಿ ಮುಂಭಾಗ ಘಟನೆ ನಡೆದಿದೆ. ಬಜಾಜ್‌ ಫೈನಾನ್ಸ್‌ ಸಂಸ್ಥೆಯ ಉದ್ಯೋಗಿ ಪದ್ಮನಾಭ ಎಂಬುವವರು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದ ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್‌ಗೆ ಕಟ್ಟಲು ಪದ್ಮನಾಭ ಅವರ ಸಹೋದರಿ ಹಣ ನೀಡಿದ್ದರು. ಅದನ್ನು ಬೈಕ್ ಡಿಕ್ಕಿಯಲ್ಲಿ ಇರಿಸಿಕೊಂಡು ಪದ್ಮನಾಭ ಅವರು ಕಚೇರಿಗೆ ತೆರಳಿದ್ದರು. ಇದನ್ನೂ … Read more

ಫಳಫಳ ಹೊಳೆಯುವ ಚಿನ್ನ ಅಡವಿಟ್ಟು ಸಾಲ ಪಡೆದಳು, ಆಮೇಲೆ ಫೈನಾನ್ಸ್‌ ಸಂಸ್ಥೆಗೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

SHIVAMOGGA LIVE NEWS | 7 JUNE 2024 SHIMOGA : ಕದ್ದ ಚಿನ್ನದ ಆಭರಣವನ್ನ (JEWELS) ತನ್ನದು ಎಂದು ನಂಬಿಸಿ ಅಡವಿಟ್ಟು ಹಣ ಪಡೆದಿದ್ದ ಮಹಿಳೆ ವಿರುದ್ಧ ಮಣಪ್ಪುರಂ ಫೈನಾನ್ಸ್‌ ಸಂಸ್ಥೆ ದೂರು ನೀಡಿದೆ. ಪೂಜಾ ಎಂಬಾಕೆ 2022ರಲ್ಲಿ 25.6 ಗ್ರಾಂ ಚಿನ್ನದ ಆಭರಣವನ್ನು ಮಣಪ್ಪುರಂ ಫೈನಾನ್ಸ್‌ ಸಂಸ್ಥೆಯಲ್ಲಿ ಅಡವಿಟ್ಟಿದ್ದಳು. 84 ಸಾವಿರ ರೂ. ಸಾಲದ ಹಣ ಪಡೆದಿದ್ದಳು ಎಂದು ಆರೋಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಠಾಣೆ ಪೊಲೀಸರು, ಪೂಜಾ ಅಡವಿಟ್ಟ ಚಿನ್ನ ಕಳ್ಳತನದ್ದು ಎಂದು … Read more

ಫೈನಾನ್ಸ್‌ ಸಂಸ್ಥೆ ಆಡಿಟ್‌ ವೇಳೆ ಲಕ್ಷ ಲಕ್ಷ ಹಣದ ವ್ಯತ್ಯಾಸ ಪತ್ತೆ, ಪರಿಶೀಲಿಸಿದ ಮ್ಯಾನೇಜರ್‌ಗೆ ಕಾದಿತ್ತು ಶಾಕ್‌, ದೂರು ದಾಖಲು

Bhadravathi-Old-Town-Police-Station

SHIVAMOGGA LIVE NEWS | 7 FEBRUARY 2024 BHADRAVATHI : ಗ್ರಾಹಕರಿಂದ ಸಂಗ್ರಹಿಸಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ ಸಂಸ್ಥೆಗೆ ಪಾವತಿಸದೆ, ಸಿಬ್ಬಂದಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಆರೋಪದ ಹಿನ್ನೆಲೆ ನಾಲ್ವರು ಸಿಬ್ಬಂದಿ ವಿರುದ್ಧ ಫೈನಾನ್ಸ್‌ ಸಂಸ್ಥೆಯ (ಹೆಸರು ಗೌಪ್ಯ) ಬ್ರ್ಯಾಂಚ್ ಮ್ಯಾನೇಜರ್‌ ದೂರು ನೀಡಿದ್ದಾರೆ. ಭದ್ರಾವತಿಯಲ್ಲಿರುವ ಫೈನಾನ್ಸ್‌ ಸಂ‍ಸ್ಥೆಯೊಂದು ನೂರುಕ್ಕೂ ಹೆಚ್ಚು ಮಹಿಳಾ ಸಂಘಗಳಿಗೆ ಸಾಲ ನೀಡಿತ್ತು. ಗ್ರಾಹಕರಿಂದ ಸಾಲದ ಕಂತು ಸಂಗ್ರಹಿಸಿ ಫೈನಾನ್ಸ್‌ ಸಂಸ್ಥೆಗೆ ಕಟ್ಟಲು ಸಿಬ್ಬಂದಿ ನೇಮಿಸಿಕೊಳ್ಳಲಾಗಿತ್ತು. ಇವರು 22 … Read more

ಫೈನಾನ್ಸ್‌ ಸಂಸ್ಥೆಯಲ್ಲಿ ಸುಲಭವಾಗಿ 2 ಲಕ್ಷ ರೂ.ವರೆಗೆ ಸಾಲ, ನಂಬಿದ ಭದ್ರಾವತಿ ಯುವಕನಿಗೆ ಕಾದಿತ್ತು ಆಘಾತ

Online-Fraud-Case-image

SHIVAMOGGA LIVE NEWS | 22 JANUARY 2024 SHIMOGA : ಎರಡು ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ದೊರೆಯಲಿದೆ ಎಂದು ಫೇಸ್‌ಬುಕ್‌ನಲ್ಲಿದ್ದ ಜಾಹೀರಾತು ನಂಬಿ ಕರೆ ಮಾಡಿದ್ದ ಭದ್ರಾವತಿ ಯುವಕನಿಗೆ (ಹೆಸರು ಗೌಪ್ಯ) 36,500 ರೂ. ವಂಚನೆಯಾಗಿದೆ. ಜಾಹೀರಾತಿನಲ್ಲಿದ್ದ ಮೊಬೈಲ್‌ ನಂಬರ್‌ಗೆ ಭದ್ರಾವತಿಯ ಯುವಕ ಕರೆ ಮಾಡಿದ್ದ. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ತಾವು ಮಂಗಳೂರಿನ ಫೈನಾನ್ಸ್‌ ಸಂಸ್ಥೆ ಎಂದು ಪರಿಚಯಿಸಿಕೊಂಡಿದ್ದ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ವಿವರ, ಪ್ಯಾನ್‌ ಕಾರ್ಡ್‌ ವಾಟ್ಸಪ್‌ ಮಾಡುವಂತೆ … Read more

ಶಿವಮೊಗ್ಗದಲ್ಲಿ ಫೈನಾನ್ಸ್‌ ಸಂಸ್ಥೆಯ ಬಾಗಿಲು ತೆಗೆದು ಒಳ ಹೋದ ಮ್ಯಾನೇಜರ್‌, ಸಿಬ್ಬಂದಿಗೆ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 16 OCTOBER 2023 SHIMOGA : ಕಿಟಕಿಯ ಕಬ್ಬಿಣದ ರಾಡ್‌ಗಳನ್ನು ಮುರಿದು ಫೈನಾನ್ಸ್‌ ಸಂಸ್ಥೆಯೊಂದರಲ್ಲಿ (Finance Institution) ನಗದು ಮತ್ತು ಸಿಸಿಟಿವಿ ಡಿವಿಆರ್‌ ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಎನ್‌.ಟಿ.ರಸ್ತೆಯಲ್ಲಿರುವ ಫೈವ್‌ ಸ್ಟಾರ್‌ ಬಿಸ್ನೆಸ್‌ ಫೈನಾನ್ಸ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಅ.12ರಂದು ರಾತ್ರಿ ಉದ್ಯೋಗಿಗಳು ಸಂಸ್ಥೆಯ ಬಾಗಿಲು ಬಂದ್‌ ಮಾಡಿ ತೆರಳಿದ್ದರು. ಅ.13ರಂದು ಬೆಳಗ್ಗೆ 9.30ಕ್ಕೆ ಸೀನಿಯರ್‌ ಬ್ರಾಂಚ್‌ ಮ್ಯಾನೇಜರ್‌ ಚನ್ನಕೇಶವ … Read more