ಬಾಕಿ ಇರುವ 790 ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ, ಯಾವ್ಯಾವ ಕೇಸ್‌?

RTO-office-at-jayanagara-in-Shimoga

ಶಿವಮೊಗ್ಗ: ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡ 50ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ವಾಹನ ಮಾಲೀಕರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ದಂಡ ಮೊತ್ತದ ಅರ್ಧದಷ್ಟು ಪಾವತಿ ಮಾಡಬಹುದಾಗಿದೆ. 1990-91 ರಿಂದ 2019-20 ರೊಳಗೆ ಪ್ರಾದೇಶಿಕ ಸಾರಿಗೆ ಕಛೇರಿ (ಆರ್.ಟಿ.ಓ) ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ಮಾತ್ರ ಶೇಕಡಾ 50ರಷ್ಟು ದಂಡ ಪಾವತಿ ರಿಯಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ 790 ಪ್ರಕರಣಗಳು … Read more

ಶಿವಮೊಗ್ಗದಲ್ಲಿ ಹೆಚ್ಚು ಹಣ ವಸೂಲಿ ಮಾಡಿದ ಆಟೋ ಚಾಲಕನಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Fined-auto-driver-for-collecting-extra-amount

ಶಿವಮೊಗ್ಗ: ರೈಲ್ವೆ ನಿಲ್ದಾಣದ ಆಟೋ (Auto) ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿದ್ದ ದರಕ್ಕಿಂತಲು, ಹೆಚ್ಚು ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡಿದ ಆಟೋ ಚಾಲಕನಿಗೆ, ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಆಟೋ ಚಾಲಕರೊಬ್ಬರು ಪ್ರೀ ಪೇಯ್ಡ್‌ ಟಿಕೆಟ್‌ನಲ್ಲಿ ನಿಗದಿಯಾಗಿರುವ ದರಕ್ಕಿಂತಲು ಪ್ರಯಾಣಿಕರಿಂದ ₹15 ಹೆಚ್ಚು ವಸೂಲಿ ಮಾಡಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದರು. ಈ ಸಂಬಂಧ ಪ್ರಯಾಣಿಕ ಕಂಟ್ರೋಲ್‌ ರೂಂಗೆ ದೂರು ನೀಡಿದ್ದರು. ಚಾಲಕನನ್ನು ಪತ್ತೆ ಹಚ್ಚಿದ ಪೂರ್ವ ಸಂಚಾರ ಠಾಣೆ ಪೊಲೀಸರು ಹೆಚ್ಚುವರಿ … Read more

ಶಿವಮೊಗ್ಗದ 21 ವರ್ಷದ ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, ₹10,000 ದಂಡ

azgar-sentenced-for-7-years.

ಶಿವಮೊಗ್ಗ: 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರ ಸಂಬಂಧ, ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಮುಖ ಆರೋಪಿಗೆ ಏಳು ವರ್ಷಗಳ (7 Years) ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಿ ತೀರ್ಪು ನೀಡಿದೆ. 2021ರ ಆಗಸ್ಟ್‌ 9ರಂದು ಶಿವಮೊಗ್ಗದ ಬಾಪೂಜಿನಗರದ ನಿವಾಸಿ ರಾಹಿಲ್ (21) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಟ್ಯಾಂಕ್‌ ಮೊಹಲ್ಲಾದ ಅಜ್ಗರ್ ಖಾನ್ (21) ಮತ್ತು ಅತೀಖ್ ಪಾಷಾ (36) ಎಂಬುವವರನ್ನು … Read more

ಶಿವಮೊಗ್ಗದಲ್ಲಿ ಮುಗಿಬಿದ್ದು ಫೈನ್‌ ಕಟ್ಟಿದ ಜನ, ಕೊನೆ ದಿನ ಸಂಗ್ರಹವಾಯ್ತು ₹50 ಲಕ್ಷ ದಂಡ, ಒಟ್ಟು ಎಷ್ಟಾಗಿದೆ?

130925 traffic fine in Shimoga city

ಶಿವಮೊಗ್ಗ: ರಿಯಾಯತಿ ದರದಲ್ಲಿ ಟ್ರಾಫಿಕ್‌ ಫೈನ್‌ (Traffic Fine) ಕಟ್ಟಲು ಕೊನೆಯ ದಿನವಾದ್ದರಿಂದ ಶಿವಮೊಗ್ಗದಲ್ಲಿ ಶುಕ್ರವಾರ ಜನರು ಕ್ಯೂನಲ್ಲಿ ನಿಂತು ತಡರಾತ್ರಿವರೆಗೆ ದಂಡ ಕಟ್ಟಿದ್ದಾರೆ. ಶಿವಮೊಗ್ಗ ಸಿಟಿಯ ವಿವಿಧೆಡೆ ಬೆಳಗ್ಗೆಯಿಂದಲೇ ಸಂಚಾರ ಠಾಣೆ ಪೊಲೀಸರ ಬಳಿ ಹೋಗಿ ಜನರು ದಂಡ ಪಾವತಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಂಡ ಕಟ್ಟಲು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹಾಗಾಗಿ ಬಹುತೇಕ ಕಡೆಗಳಲ್ಲಿ ಪೊಲೀಸರು ಜನರನ್ನು ಕ್ಯೂನಲ್ಲಿ ನಿಲ್ಲಿಸಿದ್ದರು. ರಸ್ತೆಗಳು, ಸರ್ಕಲ್‌ಗಳಲ್ಲಿ ಜನರು ಕ್ಯೂನಲ್ಲಿ ನಿಂತು ಶೇ.50ರ ರಿಯಾಯಿತಿ ದರದಲ್ಲಿ … Read more

ಶಿವಮೊಗ್ಗದ ಒಂದು ಕಾರಿಗೆ ₹88,500 ದಂಡ, ಎಷ್ಟು ಕೇಸ್‌ ಇತ್ತು? ಪಾವತಿಸಿದ್ದೆಷ್ಟು?

Traffic-Police-standing-in-front-of-police-jeep

ಶಿವಮೊಗ್ಗ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರೊಂದಕ್ಕೆ (Car) ₹88,500 ದಂಡ ವಿಧಿಸಲಾಗಿದೆ. ರಿಯಾಯಿತಿ ದರದ ಅವಕಾಶ ಪಡೆದ ಕಾರು ಚಾಲಕ ಈಗ ಅರ್ಧ ಮೊತ್ತದ ದಂಡ ಪಾವತಿಸಿದ್ದಾರೆ. ಶಿವಮೊಗ್ಗ ನೋಂದಣಿಯ ಕಾರೊಂದರ ವಿರುದ್ಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 44 ಪ್ರಕರಣಗಳಿದ್ದವು. ಒಟ್ಟು ₹88,500 ದಂಡ ಪಾವತಿಸಬೇಕಿತ್ತು. ಸರ್ಕಾರ ಘೋಷಿಸಿರುವ ರಿಯಾಯಿತಿ ದರದ ಅವಕಾಶ ಪಡೆದ ಕಾರು ಮಾಲೀಕ ₹44,250 ದಂಡ ಪಾವತಿಸಿದ್ದಾರೆ. ಸಿಗ್ನಲ್‌ ಜಂಪ್‌, ಅತಿ ವೇಗದ ಚಾಲನೆ, ಕಾರು ಚಾಲನೆ ವೇಳೆ ಮೊಬೈಲ್‌ ಬಳಕೆ ಸೇರಿದಂತೆ … Read more

ಹೊಳೆಹೊನ್ನೂರು ಪಟ್ಟಣದ ವಿವಿಧೆಡೆ ಅಧಿಕಾರಿಗಳಿಂದ ದಿಢೀರ್‌ ದಾಳಿ, 63 ಕೇಸ್‌ ದಾಖಲು

Raid-at-Holehonnuru-city.

ಹೊಳೆಹೊನ್ನೂರು: ದಿಢೀರ್‌ ಕಾರ್ಯಾಚರಣೆ (Raid) ನಡೆಸಿದ ಅಧಿಕಾರಿಗಳು ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರ ವಿರುದ್ಧ 63 ಪ್ರಕರಣ ದಾಖಲು ಮಾಡಿಕೊಂಡು ₹4800 ದಂಡ ಸಂಗ್ರಹಿಸಿದ್ದಾರೆ. ಹೊಳೆಹೊನ್ನೂರು ಪಟ್ಟಣದ ವಿವಿಧೆಡೆ ಇಂದು ಕಾರ್ಯಾಚರಣೆ ನಡೆಸಲಾಯಿತು. ಇದೇ ವೇಳೆ ಸಾರ್ವಜನಿಕರಿಗೆ ಕೋಟ್ಪಾ ಕಾಯ್ದೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಡೇಂಜರಸ್‌ ಬೈಕ್‌ ಸ್ಟಂಟ್‌, ಯುವಕನಿಗೆ ಪೊಲೀಸರಿಂದ ಶಾಕ್ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಹೇಮಂತ್ ರಾಜ್ ಅರಸ್, ರವಿರಾಜ್, ತಾಲೂಕು ಆರೋಗ್ಯ ಅಧಿಕಾರಿಗಳ … Read more

ವಾಹನ ಸವಾರರಿಗೆ ಗುಡ್‌ ನ್ಯೂಸ್‌, ಮತ್ತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ಡಿಸ್ಕೌಂಟ್‌, ಯಾರಿಗೆಲ್ಲ ಅನ್ವಯ?

Traffic-police-in-Shimoga-city.

ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಕಟ್ಟಬೇಕಿದ್ದ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ (Discount) ನೀಡಿದೆ. ಆದರೆ ಇದಕ್ಕೆ ಷರತ್ತ ವಿಧಿಸಿದೆ. ಆಗಸ್ಟ್‌ 23ರಿಂದ ಸೆಪ್ಟೆಂಬರ್‌ 12ರವರೆಗೆ ರಿಯಾಯತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶ ಆದೇಶದಲ್ಲಿ ತಿಳಿಸಿದ್ದಾರೆ. ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಷರತ್ತು ವಿಧಿಸಲಾಗಿದೆ. ಇದನ್ನೂ ಓದಿ » ಇಂಟರ್‌ಸಿಟಿ ರೈಲಿನಲ್ಲಿ … Read more

ಸಾಲು ಸಾಲು ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ಮೂರು ಮೀಟರ್‌ ಉದ್ದದ ರಶೀದಿ

Traffic-fine-for-car-driver-in-Shimoga

SHIMOGA NEWS, 18 OCTOBER 2024 : ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ಶಿವಮೊಗ್ಗದ ಪಶ್ಚಿಮ ಸಂಚಾರ (Traffic) ಪೊಲೀಸರು ದೊಡ್ಡ ಬಿಲ್‌ ನೀಡಿದ್ದಾರೆ. ಅಲ್ಲದೆ 11 ಸಾವಿರ ರೂ. ದಂಡ ಕಟ್ಟಿಸಿಕೊಂಡಿದ್ದಾರೆ. ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿಕ ವಾಹನ ತಪಾಸಣೆ ವೇಳೆ ಕಾರನ್ನು ತಡೆದು ಪರಿಶೀಲಿಸಲಾಗಿದೆ. ಆಗ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಕಾರು ಚಾಲಕನಿಗೆ ಅತಿ ದೊಡ್ಡ ಬಿಲ್‌ ನೀಡಲಾಗಿದೆ. ಅಲ್ಲದೆ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ ಎಂದು … Read more

ಶಿವಮೊಗ್ಗ ಜಿಲ್ಲೆಯ ವಾಹನ ಸವಾರರೆ ಎಚ್ಚರ, ವಿಡಿಯೋ ಸಂದೇಶ ರಿಲೀಸ್ ಮಾಡಿದ ಎಸ್‌ಪಿ

SP Mithun Kumar

SHIMOGA, 1 AUGUST 2024 : ಅತಿ ವೇಗ, ಅಡ್ಡಾದಿಡ್ಡಿ ವಾಹನ ಚಾಲನೆ, ಕ್ರಮಬದ್ಧವಲ್ಲದ ನಂಬರ್ ಪ್ಲೇಟ್ ಬಳಕೆ ಸೇರಿದಂತೆ ಸಂಚಾರ ನಿಮಯ ಉಲ್ಲಂಘಿಸುವವರ ವಿರುದ್ಧ ಇವತ್ತಿನಿಂದ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ (FINE) ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಆ.1ರಿಂದ ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಬಿಎನ್‌ಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗುತ್ತದೆ. ಶಿವಮೊಗ್ಗ ನಗರದ ವಿವಿಧೆಡೆ ಕ್ಯಾಮರಾಗಳಿವೆ. ಇವುಗಳ ಮೂಲಕ ಸಂಚಾರ … Read more

ವೀಲಿಂಗ್‌ ಮಾಡಿದವನಿಗೆ ಭಾರಿ ದಂಡ, ವಿಡಿಯೋ ವೈರಲ್‌ | ಬೈಕ್‌ ಚಲಾಯಿಸಿದ ಮಗ, ತಾಯಿಗೆ 30 ಸಾವಿರ ದಂಡ

Police-Slaps-fine-for-bike-wheeling-at-Shimoga

ಕೆಟಿಎಂನಲ್ಲಿ ವೀಲಿಂಗ್‌, 10 ಸಾವಿರ ರೂ. ದಂಡ SHIMOGA : ನಗರದ ರಸ್ತೆಯಲ್ಲಿ ಕೆಟಿಎಂ ಬೈಕ್‌ ವೀಲಿಂಗ್‌ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ಯುವಕನನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ವಿಡಿಯೋ ಆಧರಿಸಿ ಬೈಕ್‌ ಚಾಲಕನನ್ನು ಪತ್ತೆ ಹಚ್ಚಲಾಗಿದೆ. ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನೆಡಸಿದ ನ್ಯಾಯಾಲಯ ಆರೋಪಿಗೆ 10 ಸಾವಿರ ರೂ. ದಂಡ ವಿಧಿಸಿದೆ. ವೀಲಿಂಗ್‌ ದೃಶ್ಯ ಮತ್ತು ಆ ಬಳಿಕ ಪೊಲೀಸರು ದಂಡದ … Read more