ಮಲೆನಾಡು ಶಾಸಕರಿಂದ ವಿಧಾನಸಭೆ ಸ್ಪೀಕರ್‌ಗೆ ಪತ್ರ, ಏನಿದೆ ಪತ್ರದಲ್ಲಿ? ಎಂಎಲ್‌ಎ ಹೇಳಿದ್ದೇನು?
ಸಾಗರ: ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಕಾಲವಕಾಶ ಕೋರಿ ಮಲೆನಾಡು ಭಾಗದ ಶಾಸಕರಿಂದ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕುಪತ್ರ, ವನ್ಯಜೀವಿಗಳ ಉಪಟಳ, ಅಡಿಕೆಗೆ ರೋಗಬಾಧೆ ಮತ್ತಿತರ ಸಮಸ್ಯೆಗಳು ಮಲೆನಾಡು ಜನರನ್ನು ಪ್ರತಿನಿತ್ಯ ಕಾಡುತ್ತಿವೆ. ಈ ಬಗ್ಗೆ ಶಾಸನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡು ಭಾಗದ ಶಾಸಕರೆಲ್ಲರೂ ಪಕ್ಷಾತೀತವಾಗಿ … Read more