ಶಿವಮೊಗ್ಗ ಸಿಟಿಯಲ್ಲಿ ಗಾಳಿ ಮಳೆಗೆ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತ

Heavy-Rainfall-in-Shimoga-city

ಶಿವಮೊಗ್ಗ : ಗುಡುಗು, ಗಾಳಿ ಸಹಿತ ಭಾರಿ ಮಳೆಗೆ (rainfall) ಶಿವಮೊಗ್ಗ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಗೆ ಮರದ ರೆಂಬೆಕೊಂಬೆಗಳು ಕಟ್ಟಡಗಳು, ರಸ್ತೆಗೆ ಬಿದ್ದಿರುವ ವರದಿಯಾಗಿದೆ. ವಾಹನ ಸವಾರರು ಚಲಿಸುತ್ತಿರುವ ವಾಹನಗಳ ಮೇಲೆ ಸವಾರರು ರೆಂಬೆ, ಕೊಂಬೆಗಳು ಬೀಳಬಹುದು ಎಂಬ ಆತಂಕದಲ್ಲಿದ್ದಾರೆ. ಆದ್ದರಿಂದ ಅಲ್ಲಲ್ಲಿ ಕಟ್ಟಡಗಳ ಅಡಿಯಲ್ಲಿ ನಿಂತು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಹಲವು ಕಡೆ ಗುಡುಗು ಸಹಿತ ಜೋರು ಮಳೆ

ಶಿವಮೊಗ್ಗ ಸಿಟಿಯಲ್ಲಿ ಮಳೆ ಅಬ್ಬರ, ಜೈಲ್‌ ರಸ್ತೆ ಜಲಾವೃತ

Heavy-Rain-Shimoga-Jail-Road

SHIMOGA, 16 AUGUST 2024 : ಶಿವಮೊಗ್ಗ ನಗರದಲ್ಲಿ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಜೋರಾಗಿದೆ. ನಗರದಲ್ಲಿ ದಟ್ಟ ಮೋಡ ಕವಿದಿದ್ದು ಕೆಲ ಹೊತ್ತು ಎಡೆಬಿಡದೆ ಮಳೆಯಾಗುತ್ತಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಿವಿಧೆಡೆ ಮನೆ, ಮಳಿಗೆಗಳಿಗು ನೀರು ನುಗ್ಗಿದೆ. ಜೈಲ್‌ ರಸ್ತೆ ಜಲಾವೃತ ಶಿವಮೊಗ್ಗ ಜೈಲ್‌ ರಸ್ತೆ ಜಲಾವೃತವಾಗಿದೆ. ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್‌ ವರೆಗು ರಸ್ತೆ ಮೇಲೆ … Read more

ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ, ಬದಲಿ ಮಾರ್ಗ ಸೂಚಿಸಿ ಡಿಸಿ ಆದೇಶ

AGUMBE-GHAT-THIRTHAHALLI.

SHIVAMOGGA LIVE NEWS | 27 JUNE 2024 THIRTHAHALLI : ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ (AGUMBE) ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಜೂನ್‌ 27 ರಿಂದ ಸೆಪ್ಟೆಂಬರ್‌ 15ರವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗವನ್ನು ಗುರುತಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಜಿಲ್ಲಿ ಸೇರಿದಂತೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗ 1 ತೀರ್ಥಹಳ್ಳಿ – ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ … Read more

ಮುಂದುವರೆದ ಯಲ್ಲೋ ಅಲರ್ಟ್‌, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇವತ್ತು ಗುಡುಗು ಸಹಿತ ಮಳೆ

Rain-at-Shimoga-Kote-Road

SHIVAMOGGA LIVE NEWS | 13 MAY 2024 RAINFALL NEWS : ದೇಶದಲ್ಲಿ ಮುಂಗಾರು ಪೂರ್ವ ಮಳೆ ಬಿರುಸಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಯಲ್ಲೋ ಅಲರ್ಟ್‌ ಮುಂದುವರೆದಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಸಂಭವವಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಿತ್ರದುರ್ಗ, ಮಂಡ್ಯ, ರಾಮನಗರ ಜಿಲ್ಲೆಗಳು … Read more

ಆಗುಂಬೆ ಘಾಟಿ, ಭಾರೀ ವಾಹನ ಸಂಚಾರ ನಿಷೇಧ ತೆರವು, 10 ದಿನ ಮೊದಲು ಆದೇಶ ಹಿಂಪಡೆದಿದ್ದೇಕೆ?

Agumbe-Ghat-Road

SHIVAMOGGA LIVE NEWS | 5 SEPTEMBER 2023 SHIMOGA : ಆಗುಂಬೆ ಘಾಟಿಯಲ್ಲಿ (Agumbe Ghat) ಭಾರಿ ವಾಹನ ಸಂಚಾರ ನಿಷೇಧವನ್ನು ಹಿಂಪಡೆಯಲಾಗಿದೆ. ಈ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ – ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕು ಕಂಡು ಬಂದಿತ್ತು. ಅಲ್ಲಲ್ಲಿ … Read more

ಶಿವಮೊಗ್ಗ ನಗರದ 19 ರಸ್ತೆಯಲ್ಲಿ ಸರಕು ಸಾಗಣೆ, ಭಾರಿ ವಾಹನ ಪ್ರವೇಶ ನಿಷೇಧ, ಸಂಚಾರಕ್ಕೆ ಟೈಮ್ ಫಿಕ್ಸ್

Auto-in-Shimoga-Nehru-road

SHIVAMOGGA LIVE NEWS |1 JANUARY 2023 ಶಿವಮೊಗ್ಗ : ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಶಿವಮೊಗ್ಗದಲ್ಲಿ ಭಾರಿ ವಾಹನಗಳು (heavy vehicles) ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ಈ ವಾಹನಗಳು ನಗರದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ನಗರದ 19 ರಸ್ತೆಗಳಲ್ಲಿ ಭಾರಿ ಮತ್ತು ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಮಯ ನಿಗದಿ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ … Read more

ಶಿವಮೊಗ್ಗದಲ್ಲಿ ಇವತ್ತೂ YELLOW ALERT, ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ

080822 Night Rain in Shimoga

ಶಿವಮೊಗ್ಗ | ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದೆ. ಶಿವಮೊಗ್ಗದಲ್ಲಿ (SHIMOGA) ಕಳೆದ ರಾತ್ರಿ ಭಾರಿ ಮಳೆಯಾಗಿದೆ (HEAVY RAIN). ಇತ್ತ ಹವಾಮಾನ ಇಲಾಖೆ ಇವತ್ತು ಕೂಡ YELLOW ALERT ಘೋಷಿಸಿದೆ. ಶಿವಮೊಗ್ಗದಲ್ಲಿ ಕಳೆದ ರಾತ್ರಿ ಜೋರು ಮಳೆಯಾಗಿದೆ. ಗುಡುಗು, ಮಿಂಚು (THUNDER STORM) ಸಹಿತ ಮಳೆ ಸುರಿದಿದೆ. ಭಾರಿ ಮಳೆಯಿಂದಾಗಿ ನಗರದ ತಗ್ಗು ಪ್ರದೇಶದ ಜನರಲ್ಲಿ ಆತಂಕ ಉಂಟಾಗಿದೆ. ಇನ್ನು, ಇವತ್ತು ಕೂಡ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಶಿವಮೊಗ್ಗ ಸೇರಿದಂತೆ ದಕ್ಷಿಣ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಎಲ್ಲೆಲ್ಲಿ ಏನೇನಾಗಿದೆ?

Stone-fall-on-Road-in-Hosanagara

ಶಿವಮೊಗ್ಗ| ಜಿಲ್ಲೆಯಲ್ಲಿ ವರುಣ ಇನ್ನೂ ಅಬ್ಬರಿಸುತ್ತಿದ್ದಾನೆ. ಭಾರಿ ಮಳೆಗೆ (RAIN DAMAGE) ಜನರು ತತ್ತರಿಸಿ ಹೋಗಿದ್ದಾರೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಜೀವ ಹಾನಿ ಸಂಭವಿಸಿದೆ. ಬೆಳೆ ಹಾನಿಯು ಉಂಟಾಗಿದೆ. ರಸ್ತೆ ಸಂಪರ್ಕವು ಕಡಿತವಾಗಿದೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಗಿದೆ? ಕಳೆದ 24 ಗಂಟೆ ಅವಧಿಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇವತ್ತು ಮೋಡ ಕವಿದ ವಾತಾವರಣವಿದೆ. ಜೋರು ಮಳೆಯಾಗುವ ಸಾಧ್ಯತೆ ಇದೆ. ಮನೆಗಳಿಗೆ ನುಗ್ಗಿದ ಭದ್ರಾ ನೀರು ಇಲ್ಲಿನ ಎನ್.ಡಿ.ಕಾಲೋನಿಯ … Read more

ಭಾರಿ ಮಳೆ, ಶಿವಮೊಗ್ಗ ಜಿಲ್ಲೆಯ ಹಲವು ಕಡೆ 100 ಮಿ.ಮೀಗಿಂತಲೂ ಹೆಚ್ಚು ವರ್ಷಧಾರೆ

Rain-at-Hosanagara

ಶಿವಮೊಗ್ಗ | ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (HEAVY RAIN) ಅಬ್ಬರಿಸಿದೆ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರು ಮಿಲಿ ಮೀಟರ್’ಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಹೊಸನಗರ ತಾಲೂಕಿನ ಮೇಲಿನಬೆಸಿಗೆ 220 ಮಿ.ಮೀ, ಸುಳಗೋಡು 143 ಮಿ.ಮೀ, ಕೋಡೂರು 128 ಮಿ.ಮೀ, ನಿಟಿರು 124 ಮಿ.ಮೀ, ಅಂಡಗದದೂರು 124 ಮಿ.ಮೀ, ಸೋನಲೆ 124 ಮಿ.ಮೀ, ತೀರ್ಥಹಳ್ಳಿಯ ಹೊನ್ನೇತಾಳು 127 ಮಿ.ಮೀ, ಹಾದಿಗಲ್ಲು 126 ಮಿ.ಮೀ, ಆರಗ 124 … Read more

ಇನ್ನು ನಾಲ್ಕು ದಿನ ಶಿವಮೊಗ್ಗದಲ್ಲಿ ಅಬ್ಬರಿಸಲಿದೆ ಮಳೆ, ಎಷ್ಟು ಮಳೆ ಆಗಲಿದೆ?

Rain-in-Shimoga-City.

ಶಿವಮೊಗ್ಗ | ಜಿಲ್ಲೆಯಾದ್ಯಂತ ಇನ್ನು ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ (RAIN ALERT) ಇದೆ. ಈ ಸಂಬಂಧ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆಗಸ್ಟ್ 6 ರಿಂದ 9ರವರೆಗೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಪೈಕಿ ಎರಡು ದಿನ ಗುಡುಗು ಸಹಿತ ಮಳೆ ಸುರಿಯುವ ಸಂಭವವಿದೆ ಎಂದು ತಿಳಿಸಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ … Read more