ಶಿವಮೊಗ್ಗದಲ್ಲಿ ಕಲರ್ಸ್‌ ಕನ್ನಡ ‘ಗಿಚ್ಚಿ ಗಿಲಿಗಿಲಿ’ ಆಡಿಷನ್, ಎಲ್ಲಿ? ಯಾರೆಲ್ಲ ಭಾಗವಹಿಸಬಹುದು?

SHIMOGA-NEWS-UPDATE

ಶಿವಮೊಗ್ಗ: ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’ ರಿಯಾಲಿಟಿ ಷೋಗಾಗಿ ಡಿ. 14ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬಸವೇಶ್ವರ ನಗರದ 3ನೇ ಕ್ರಾಸ್‌ನಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಸ್ಕೂಲ್‌ನ ಆವರಣದಲ್ಲಿ ಆಡಿಷನ್ (Audition) ನಡೆಯಲಿದೆ. 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್‌ನಲ್ಲಿ ಭಾಗವಹಿಸಬಹುದು. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ, ಮಕ್ಕಳ ಮತ್ತು ಪೋಷಕರ ಆಧಾರ್ ಕಾರ್ಡ್‌ ಜೆರಾಕ್ಸ್ ಪ್ರತಿ ಸಹಿತ ಆಡಿಷನ್‌ಗೆ ಹಾಜರಾಗಬೇಕು ಎಂದು ಕಲರ್ಸ್ … Read more

ಶಿವಮೊಗ್ಗ ಜಿಲ್ಲೆಯ 19 ಶಾಲೆಗಳು KPS ಶಾಲೆಗಳಾಗಿ ಉನ್ನತೀಕರಣ, ಯಾವೆಲ್ಲ ಶಾಲೆ? ಇಲ್ಲಿದೆ ಲಿಸ್ಟ್‌

Minister-Madhu-Bangarappa-in-shimoga-press-trust

ಬೆಂಗಳೂರು: ರಾಜ್ಯಾದ್ಯಂತ 474 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ (KPS) ಉನ್ನತೀಕರಿಸಿ ಹೆಚ್ಚುವರಿ ಮೂಲಸೌಲಭ್ಯ ಒದಗಿಸಲು ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 19 ಶಾಲೆಗಳನ್ನು ಉನ್ನತೀಕರಿಸಿ ಕೆಪಿಎಸ್‌ ಶಾಲೆಗಳಾಗಿ ಪರಿವರ್ತಿಸಲಾಗುತ್ತದೆ. ಯಾವ್ಯಾವ ಶಾಲೆಗಳು? ಇಲ್ಲಿದೆ ಲಿಸ್ಟ್‌ ಭದ್ರಾವತಿ: ಅರಳಿಹಳ್ಳಿಯ ಸರ್ಕಾರಿ ಹೈಸ್ಕೂಲ್‌, ದೊಣಬಘಟ್ಟದ ಉರ್ದು ಸರ್ಕಾರಿ ಪಿಯು ಕಾಲೇಜು, ಹಳೆನಗರದ ಸಂಚಿಹೊನ್ನಮ್ಮ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪಿಯು ಕಾಲೇಜು. ಹೊಸನಗರ: ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜು ಸಾಗರ: ಬ್ಯಾಕೋಡಿನ ಸರ್ಕಾರಿ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 9 ಅಕ್ಟೋಬರ್‌ 2025 | ಪಿ.ವಿ.ಸಿಂಧು ಉದಾಹರಣೆಯೊಂದಿಗೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಇಂದಿನ ಸುಭಾಷಿತ ಕಷ್ಟಗಳು ಅನಿವಾರ್ಯ. ಅವುಗಳನ್ನು ಎದುರಿಸುವ ಧೈರ್ಯವೆ ವಿಶಿಷ್ಟ ಸುಭಾಷಿತಕ್ಕೆ ಉದಾಹರಣೆ ಹಲವು ಕಷ್ಟಗಳನ್ನು ಎದುರಿಸಿದ ನಂತರ ಸಾಧನೆಯಾಗುತ್ತದೆ. ಒಲಿಂಪಿಕ್‌ ಪದಕ ವಿಜೇತೆ, ವಿಶ್ವದ ಪ್ರಮುಖ ಶಟ್ಲರ್‌ ಪಿ.ವಿ.ಸಿಂಧು. ಹಲವು ಕಷ್ಟಗಳ ಎದುರಿಸಿ ಕೊನೆಗೆ ಪದಕ ಗೆದ್ದರು. ರಿಯೋ ಒಲಿಂಪಿಕ್‌ ಮುನ್ನ 2016ರಲ್ಲಿ ಕೋಚ್‌ ಗೋಪಿಚಂದ್‌, ಸಿಂಧು ಮೂರು ತಿಂಗಳು ಮೊಬೈಲ್‌ ಬಳಕೆ ಮಾಡದಂತೆ ಸೂಚಿಸಿದರು. ಎಲ್ಲ ಬಗೆಯ ಮನರಂಜನೆಯಿಂದ ದೂರ ಉಳಿದು … Read more

ಈ ರಸ್ತೆಯಲ್ಲಿ ಹೆಡ್‌ಲೈಟ್‌ ಗಟ್ಟಿ ಇದ್ದರಷ್ಟೆ ಜೀವಕ್ಕೆ ಗ್ಯಾರಂಟಿ, ರಾತ್ರಿಯು ಜನ ಓಡಾಡುವ ರೋಡಲ್ಲಿ ಇದೆಂಥಾ ದುಸ್ಥಿತಿ?

No-Street-lights-at-sarvajna-circle-in-shimoga-city.webp

ಶಿವಮೊಗ್ಗ: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎನ್ನುವಂತಿದೆ ಈ ರಸ್ತೆಯ ಡಿವೈಡರ್‌ ಮೇಲಿರುವ ಬೀದಿ ದೀಪಗಳ (Street Light) ಸ್ಥಿತಿ. ಮೆಸ್ಕಾಂನ ಕಾರ್ಯ ಮತ್ತು ಪಾಲನ ಕಚೇರಿ ಮುಂಭಾಗದಲ್ಲಿಯೆ ಇರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಶಿವಮೊಗ್ಗದ ಸರ್ವಜ್ಞ ವೃತ್ತದಲ್ಲಿ ಬೀದಿ ದೀಪ ಬೆಳಗದೆ ತಿಂಗಳುಗಳೆ ಉರುಳಿವೆ. ವಾಹನಗಳ ಹೆಡ್‌ಲೈಟ್‌ನಿಂದಷ್ಟೆ ಈ ರಸ್ತೆಯಲ್ಲಿ ಬೆಳಕು ಕಾಣುತ್ತಿದೆ. ಹಗಲು ರಾತ್ರಿ ವಾಹನ ಸಂಚಾರ ಸರ್ವಜ್ಞ ವೃತ್ತ ಶಿವಮೊಗ್ಗದ ರೈಲ್ವೆ ನಿಲ್ದಾಣ, ಬಾಲರಾಜ ಅರಸ್‌ ರಸ್ತೆ, ಹೊನ್ನಾಳಿ ರಸ್ತೆ, ಶಂಕರಮಠ ರಸ್ತೆಗೆ … Read more

ಶುಭೋದಯ ಶಿವಮೊಗ್ಗ | 11 ಸೆಪ್ಟೆಂಬರ್ 2025 | ಇಂದಿನ ಸುಭಾಷಿತಕ್ಕೆ ಭೀಷ್ಮ ಪ್ರತಿಜ್ಞೆಯ ಉದಾಹರಣೆ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಭೀಷ್ಮ ಮೇಲಿನ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಧರ್ಮವನ್ನು ಎತ್ತಿ ಹಿಡಿದರು. ತನ್ನ ತಂದೆ ಶಂತನು ಮಹಾರಾಜನಿಗಾಗಿ ರಾಜಪದವಿ ಮತ್ತು ವಿವಾಹವನ್ನೇ ತ್ಯಜಿಸುವ ಪ್ರತಿಜ್ಞೆ ಮಾಡಿದರು. ಅದನ್ನು ಭೀಷ್ಮ ಪ್ರತಿಜ್ಞೆ ಎನ್ನಲಾಗುತ್ತದೆ. ತನ್ನ ಗುರು ಪರಶುರಾಮರ ಕುರಿತು ಭಕ್ತಿ ಹೊಂದಿದ್ದರು. ಕುರುಕ್ಷೇತ್ರ ಯುದ್ದದಲ್ಲಿ ಕೌರವರ ಪರವಿದ್ದರು ಪಾಂಡವರ ಕುರಿತು ಸಹಾನುಭೂತಿ, ಕ್ಷಮೆ ಮತ್ತು ದಯೆಯನ್ನು ಹೊಂದಿದ್ದರು. ಧರ್ಮವನ್ನು ಎತ್ತಿ ಹಿಡಿದ ಕಾರಣಕ್ಕೆ ಭೀಷ್ಮರೆಂದರೆ ಪುರಾಣಗಳಲ್ಲಿ ವಿಭಿನ್ನ ಸ್ಥಾನ. … Read more

ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಮಹಾನಗರ ಪಾಲಿಕೆ ಅಧಿಕಾರಿ ಬಲೆಗೆ

Lokayuktha-Raid-General-Image

ಶಿವಮೊಗ್ಗ: ಆಶ್ರಯ ಮನೆಯೊಂದಕ್ಕೆ ಖಾತೆ ಮಾಡಿಕೊಡಲು ₹10,000 ಲಂಚ ಪಡೆಯುತ್ತಿದ್ದ ಮಹಾನಗರ ಪಾಲಿಕೆಯ ಆಶ್ರಯ ಕಚೇರಿಯ ಸಮುದಾಯ ಸಂಘಟನಾ ಅಧಿಕಾರಿ ಎ.ಪಿ.ಶಶಿಧರ್‌ ಲೋಕಾಯುಕ್ತ ಬಲೆಗೆ (Trap) ಬಿದ್ದಿದ್ದಾರೆ. ನೆಹರು ರಸ್ತೆಯ ನೇತಾಜಿ ಸುಭಾಷಚಂದ್ರ ಬೋಸ್‌ ವಾಣಿಜ್ಯ ಸಂಕೀರ್ಣದಲ್ಲಿರುವ ಆ‍ಶ್ರಯ ಕಚೇರಿಯಲ್ಲಿ ಇಂದು ಸಂಜೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ₹10,000 ನಗದು ಮತ್ತು ಅಧಿಕಾರಿ ಎ.ಪಿ.ಶಶಿಧರ್‌ನನ್ನು ವಶಕ್ಕೆ ಪಡೆಯಲಾಗಿದೆ. ಏನಿದು ಪ್ರಕರಣ? ಮೊಹಮ್ಮದ್‌ ಆಸಿಫ್‌ ಎಂಬುವವರು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಖರೀದಿಸಿದ್ದ ನಿವೇಶನಕ್ಕೆ ಖಾತೆ ಮಾಡಿಕೊಡಲು … Read more

ಶಿವಮೊಗ್ಗ ಜಿಲ್ಲೆಗೆ ಅಲರ್ಟ್‌ ಪ್ರಕಟ, ಕೊನೆ ದಿನವು ಅಬ್ಬರಿಸುತ್ತಾ ಮಘಾ ಮಳೆ? ಇಲ್ಲಿದೆ ಡಿಟೇಲ್ಸ್‌

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಾದ್ಯಂತ ಇಂದೂ ಮಳೆ ಮುಂದುವರೆಯಲಿದೆ. ಸದ್ಯಕ್ಕೆ ಹವಾಮಾನ ಇಲಾಖೆಗೆ ಯಲ್ಲೋ ಅಲರ್ಟ್‌ ಘೋಷಿಸಿದೆ. ಜೋರು ಮಳೆ ಮತ್ತು ವೇಗದ ಮೇಲ್ಮೈ ಗಾಳಿ ಇರಲಿದೆ ಎಂದು ತಿಳಿಸಲಾಗಿದೆ. (Weather) ಕಳೆದ ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಮಘಾ ಮಳೆ ಅಬ್ಬರಿಸುತ್ತಿದೆ. ಇವತ್ತು ಈ ಮಳೆಯ ಕೊನೆಯ ದಿನ. ಇಂದೂ ಜೋರು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ತಾಪಮಾನ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟಿದೆ ಉಷ್ಣಾಂಶ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ … Read more

ಮೈಸೂರು ತಾಳಗುಪ್ಪ ರೈಲು ನಿಲುಗಡೆ ಕುರಿತು ಮಹತ್ವದ ಅಪ್‌ಡೇಟ್‌, ಕುಂಸಿ, ಅರಸಾಳು ಭಾಗದವರಿಗೆ ಗುಡ್‌ ನ್ಯೂಸ್‌

Train-Jan-Shatabdi-General-Image

ಶಿವಮೊಗ್ಗ: ಹೊಸನಗರ ತಾಲೂಕು ಅರಸಾಳು ಮತ್ತು ಶಿವಮೊಗ್ಗ ತಾಲೂಕು ಕುಂಸಿ ನಿಲ್ದಾಣಗಳಲ್ಲಿ (Railway Station) ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ಎರಡು ಎಕ್ಸ್‌ಪ್ರೆಸ್‌ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ರೈಲ್ವೆ ಇಲಾಖೆ ಮುಂದುವರಿಸಿದೆ. ರಾತ್ರಿ ವೇಳೆ ಸಂಚರಿಸುವ ಮೈಸೂರು ತಾಳಗುಪ್ಪ(16227/16228) ಎಕ್ಸ್‌ಪ್ರೆಸ್ ರೈಲು ಮತ್ತು ಹಗಲಿನಲ್ಲಿ ಹಾಸನ ಮಾರ್ಗವಾಗಿ ಸಂಚರಿಸುವ ಮೈಸೂರು ತಾಳಗುಪ್ಪ (16206/16205) ರೈಲುಗಳು ಈ ಎರಡೂ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ತಲಾ 1 ನಿಮಿಷ ನಿಲುಗಡೆ ಮಾಡಲಾಗುತ್ತಿತ್ತು. ಪ್ರಯಾಣಿಕರ ಅಪೇಕ್ಷೆ ಮೇರೆಗೆ ತಾತ್ಕಾಲಿಕ ನಿಲುಗಡೆಯನ್ನು 2026ನೇ ಫೆಬ್ರವರಿ 23ರ … Read more

BREAKING NEWS – ಕುವೆಂಪು ವಿವಿ, ಪ್ರಶ್ನೆ ಪತ್ರಿಕೆಯಲ್ಲಿ ಯಡವಟ್ಟು, ಕನ್ನಡ ಪರೀಕ್ಷೆ ದಿಢೀರ್‌ ರದ್ದು, ಏನಿದು ಪ್ರಕರಣ?

Kuvempu-University-File-Image

ಶಿವಮೊಗ್ಗ: ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಐಚ್ಛಿಕ ಪರೀಕ್ಷೆ (Examination) ದಿಢೀರ್‌ ರದ್ದಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಕಳುಹಿಸಲಾಗಿದೆ.   ಬಿ.ಎ. 6ನೇ ಸೆಮಿಸ್ಟರ್‌ ಐಚ್ಛಿಕ ಕನ್ನಡ ಪರೀಕ್ಷೆ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಇವತ್ತು ನಿಗದಿಯಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಬದಲಾದ ಹಿನ್ನೆಲೆ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಲಕೋಟೆ ತೆರೆದಾಗ ಪ್ರಶ್ನೆ ಪತ್ರಿಕೆಯಲ್ಲಿನ ಸಮಸ್ಯೆ ಗೊತ್ತಾಗಿದೆ. ಆತಂಕ, ಗೊಂದಲದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದ … Read more

ಬೈಕ್‌ಗೆ ಕಾರು ಡಿಕ್ಕಿ, ಸಾಗರದ ಎಲ್‌.ಬಿ ಕಾಲೇಜು ವಿದ್ಯಾರ್ಥಿನಿ ಸಾವು

LB-College-Student-anusha-Succumbed-in-a-mishap.

SHIVAMOGGA LIVE NEWS | 24 JUNE 2024 SAGARA : ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ (Bike) ತೆರಳುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸಾಗರ ತಾಲೂಕು ಕುಗ್ವೆ ಬಳಿ ಘಟನೆ ಸಂಭವಿಸಿದೆ. ಕುಂದಾಪುರದ ಅನುಷಾ(20) ಮೃತ ವಿದ್ಯಾರ್ಥಿನಿ. ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದುತ್ತಿದ್ದಳು. ಬೈಕ್‌ನಲ್ಲಿ ಸ್ನೇಹಿತೆ ಜತೆಗೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಜೋಗದ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಅನುಷಾಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ … Read more