ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ
ಶಿವಮೊಗ್ಗ: ಹಣಗೆರೆಯಿಂದ ಆಯನೂರಿಗೆ ಖಾಸಗಿ ಬಸ್ಸಿನಲ್ಲಿ ತೆರಳುವಾಗ ಮಹಿಳೆಯ ಮಾಂಗಲ್ಯ (Mangalya) ಸರ ಕಳ್ಳತನವಾಗಿದೆ. ಚಿನ್ನದ ಅಂಗಡಿಗೆ ತೆರಳಿದಾಗಲೆ ಮಹಿಳೆಗೆ ತನ್ನ ಮಾಂಗಲ್ಯ ಸರ ಕಳುವಾಗಿರುವುದು ಗೊತ್ತಾಗಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಿರಿಜಾ ಎಂಬುವವರು ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಆಯನೂರಿನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಇಲ್ಲಿನ ಗಣೇಶ ಜ್ಯೂವೆಲರಿ ಅಭರಣ ಮಳಿಗೆಗೆ ತೆರಳಿದ್ದರು. ಅಂಗಡಿಯವರು ಕೊರಳು ನೋಡಿ ಸರ ಇಲ್ಲವ ಎಂದು ಪ್ರಶ್ನಿಸಿದಾಗ ಗಿರಿಜಾ ಅವರಿಗೆ ತಮ್ಮ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. … Read more