ಫೋನ್‌ ಬಂತು ಅಂತಾ ಎಚ್ಚರವಾಗಿ ಪಕ್ಕದ ಸೀಟ್‌ ಕಡೆ ಕಣ್ಣು ಹಾಯಿಸಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ

KSRTC-Bus-Stand-In-Shimoga

SHIMOGA, 5 SEPTEMBER 2024 : KSRTC ಬಸ್ಸಿನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ ಬ್ಯಾಗ್‌ ಕಳ್ಳತನ ಮಾಡಲಾಗಿದೆ. ಅದರಲ್ಲಿ ಲ್ಯಾಪ್‌ ಟಾಪ್‌ ಸೇರಿ ವಿವಿಧ ವಸ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಕಮ್ಮರಡಿ ಮೂಲದ ಇಂಜಿನಿಯರ್‌ ಸುಹೈಬತ್‌ ಉಲ್‌ ಅಸ್ಲಾಮಿಯಾ ಎಂಬುವರು ಬೆಂಗಳೂರಿನಿಂದ ತಮ್ಮೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಎಚ್ಚರವಾದಾಗ ಬ್ಯಾಗ್‌ ನಾಪತ್ತೆ ಸುಹೈಬತ್‌ ಉಲ್‌ ಅಸ್ಲಾಮಿಯಾ ಅವರು ಬೆಂಗಳೂರಿನಿಂದ ಶೃಂಗೇರಿಗೆ ತೆರಳುವ ಬಸ್‌ ಹತ್ತಿದ್ದರು. ಆ ಬಸ್ಸು ಬೆಳಗ್ಗೆ 5 ಗಂಟೆಗೆ ಶಿವಮೊಗ್ಗಕ್ಕೆ ಬಂದು ಶೃಂಗೇರಿ ಕಡೆಗೆ … Read more

ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಯಾರು ಅರ್ಜಿ ಸಲ್ಲಿಸಬಹುದು?

laptop general image

SHIVAMOGGA LIVE NEWS | 30 AUGUST 2023 SHIMOGA : ಕಾರ್ಮಿಕ ಇಲಾಖೆಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಲ್ಲಿ 2023-24 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ (Application) ಆಹ್ವಾನಿಸಿದೆ. ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಚೇರಿಯಿಂದ ಪಡೆದು, ಭರ್ತಿ ಮಾಡಬೇಕು. ಅರ್ಜಿಯೊಂದಿಗೆ … Read more

ಶಿವಮೊಗ್ಗದಲ್ಲಿ ಬೆಳಗ್ಗೆ ಬಸ್‌ ಇಳಿಯುವ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗೆ ಕಾದಿತ್ತು ಶಾಕ್

KSRTC-Bus-General-Image-Shimoga-Bangalore

SHIVAMOGGA LIVE | 20 JUNE 2023 SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯ ಲ್ಯಾಪ್‌ಟಾಪ್‌ (Laptop Theft) ಕಳ್ಳತನವಾಗಿದೆ. ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಗ್ಗೆ ಶಿವಮೊಗ್ಗ ತಲುಪಿದಾಗ ಲ್ಯಾಪ್‌ಟಾಪ್‌ ಇದ್ದ ಬ್ಯಾಗ್‌ ನಾಪತ್ತೆಯಾಗಿತ್ತು. ಆಲ್ಕೊಳದ ವಿನಯ್‌ ಎಂಬುವವರ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಜೂ.16ರ ರಾತ್ರಿ ವಿನಯ್‌ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೊರಟು ಬೆಳಗ್ಗೆ 6.30ಕ್ಕೆ ಶಿವಮೊಗ್ಗ ತಲುಪಿದ್ದರು. ಆಗ ಲಗೇಜ್‌ ಕ್ಯಾರಿಯರ್‌ನಲ್ಲಿ ಇಟ್ಟಿದ್ದ ಬ್ಯಾಗ್‌ ಕಾಣಿಸಲಿಲ್ಲ. ಬಸ್ಸಿನಲ್ಲೆಲ್ಲ ಹುಡುಕಾಡಿದರು ಸಿಗಲಿಲ್ಲ. ಬ್ಯಾಗಿನಲ್ಲಿ ತನ್ನ ಕಂಪನಿಗೆ … Read more

ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIVAMOGGA LIVE NEWS | 19 JANUARY 2023 SHIMOGA | ಬಸ್ಸಿನಿಂದ ಕೆಳಗಿಳಿದು ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿ ಮರಳುವ ಹೊತ್ತಿಗೆ ಪ್ರಯಾಣಿಕರೊಬ್ಬರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ (shimoga ksrtc) ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಹುಬ್ಬಳಿ ಮೂಲದ ಧೃತಿ ರೆಡ್ಡಿ ಎಂಬುವವರಿಗೆ ಸೇರಿದ 70 ಸಾವಿರ ರೂ. ಮೌಲ್ಯದ ಲೆನೊವೋ ಲ್ಯಾಪ್ ಟಾಪ್ ಮತ್ತು ಅದರ ಬ್ಯಾಗ್ ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಧೃತಿ ಅವರು ಶಿವಮೊಗ್ಗದಲ್ಲಿರುವ ತಮ್ಮ ಸ್ನೇಹಿತೆಯ … Read more

ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್

Airavat-KSRTC-Volvo-Bus

SHIVAMOGGA LIVE NEWS | 14 DECEMBER 2022 ಶಿವಮೊಗ್ಗ : ಐರಾವತ ಬಸ್ಸಿನಲ್ಲಿ (airavata bus) ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಮೈಸೂರಿನಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬರುವಾಗ ಘಟನೆ ಸಂಭವಿಸಿದೆ. ವಿನೋಬನಗರದ ಪ್ರಜ್ಞಲ್ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಪ್ರಜ್ವಲ್ ಅವರು ಮೈಸೂರಿನಿಂದ ಐರಾವತ (airavata bus) ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ರಾತ್ರಿ ಮೈಸೂರಿನಲ್ಲಿ ಬಸ್ ಹತ್ತಿದ್ದ ಅವರು ಬ್ಯಾಗ್ ಸಹಿತ ಲ್ಯಾಪ್ ಟಾಪನ್ನು ಲಗೇಜ್ ಕ್ಯಾರಿಯರ್ ಮೇಲೆ ಇಟ್ಟಿದ್ದರು. … Read more

ಮೀನಾಕ್ಷಿ ಭವನ ಬಳಿ ಶಾಲೆಯ ಹೆಂಚು ತೆಗೆದು ಒಳಗಿಳಿದ ಕಳ್ಳರು

theft case general image

SHIMOGA |  ಸರ್ಕಾರಿ ಪಬ್ಲಿಕ್ ಶಾಲೆಯ ಬೀರುವಿನಲ್ಲಿಟ್ಟಿದ್ದ ಲ್ಯಾಪ್ ಟಾಪ್ (LAPTOP) ಕಳ್ಳತನವಾಗಿದೆ. ಶಾಲೆ ಕಟ್ಟಡದ ಹೆಂಚು ತೆಗೆದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಶಿವಮೊಗ್ಗದ ಮೀನಾಕ್ಷಿ ಭವನ ಸಮೀಪದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಶಾಲೆಗೆ ಸಂಬಂಧಿಸಿದ ಕೆಲಸ ಮಾಡಲು ಸರ್ಕಾರದ ವತಿಯಿಂದ ಡೆಲ್ ಕಂಪನಿಯ ಲ್ಯಾಪ್ ಟಾಪ್ ಒದಗಿಸಲಾಗಿತ್ತು. ಸೆ.10ರಂದು ಲ್ಯಾಪ್ ಟಾಪ್’ನಲ್ಲಿ ಕೆಲಸ ಮುಗಿಸಿ ಶಾಲೆಯ ಬೀರುವಿನಲ್ಲಿಟ್ಟದ್ದರು. ಸೆ.15ರಂದು ಬೆಳಗ್ಗೆ ಅಟೆಂಡರ್ ಅವರು ಮುಖ್ಯ ಶಿಕ್ಷಕಿಗೆ ಕರೆ ಮಾಡಿ, ಶಾಲೆಯಲ್ಲಿ ಕಳ್ಳತನ ಆಗಿರುವ … Read more

ಶಿವಮೊಗ್ಗದ ಡಾಕ್ಟರ್’ಗೆ ನಿರಂತರ ಕರೆ ಮಾಡಿ ಲ್ಯಾಪ್ ಟಾಪ್ ಡೇಟಾ ವಿಚಾರವಾಗಿ ಬೆದರಿಕೆ

Cyber-Crime-in-Shivamogga

ಶಿವಮೊಗ್ಗ | ನಗರದ ವೈದ್ಯರೊಬ್ಬರಿಗೆ ನಿರಂತರ ಕರೆ ಮಾಡಿ, ಲ್ಯಾಪ್ ಟ್ಯಾಪ್ (LAPTOP) ಆಕ್ಸಸ್ ಪಡೆದಿರುವುದಾಗಿ ಅಪರಿಚಿತನೊಬ್ಬ ಬೆದರಿಕೆ ಒಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಟಿಪ್ಪು ನಗರದ ನಿವಾಸಿಯಾಗಿರುವ ವೈದ್ಯರೊಬ್ಬರಿಗೆ ಅಪರಿಚಿತನೊಬ್ಬ ನಿರಂತರ ಕರೆ ಮಾಡಿದ್ದಾನೆ. ತಮ್ಮ ಲ್ಯಾಪ್ ಟಾಪ್’ನ ಆಕ್ಸಸ್ ಪಡೆದುಕೊಂಡಿದ್ದೇನೆ. ಹಣ ಕೊಟ್ಟರೆ ಡೇಟಾ ಹಿಂತಿರುಗಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ವೈದ್ಯರ ಕುಟುಂಬದವರು, ಸಹೋದ್ಯೋಗಿಗಳಿಗೂ ಈತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆ ವೈದ್ಯ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು … Read more

ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್

KSRTC-Bus-After-Curfew-In-Shimoga-city

SHIVAMOGGA LIVE NEWS | 24 ಮಾರ್ಚ್ 2022 ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳತನ ಪ್ರಕರಣ ಮುಂದುವರೆದಿವೆ. ವಿದ್ಯಾರ್ಥಿನಿಯೊಬ್ಬರಿಗೆ ಸೇರಿದ ಲ್ಯಾಪ್ ಟಾಪ್, ಹಣ ಕಳವಾಗಿದೆ. ಬಾಗಲಕೋಟೆ ಜಿಲ್ಲೆಯ ಸೌಮ್ಯ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಕಳ್ಳತನ? ಸೌಮ್ಯ ಅವರು ಹುನಗುಂದದಿಂದ KSRTC ಬಸ್ಸಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಬೆಳಗಿನ ಜಾವ 3.30ರ ಹೊತ್ತಿಗೆ ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ. ಆ ಸಂದರ್ಭ ಸೌಮ್ಯ … Read more

ಲ್ಯಾಪ್ ಟಾಪ್ ಇಟ್ಟುಕೊಂಡು ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಬಂದರೆ ಕಾದಿರುತ್ತೆ ಶಾಕ್

KSRTC-Bus-After-Curfew-In-Shimoga-city

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ಸಿನಲ್ಲಿ ಇರಿಸಿದ್ದ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನ ಮಾಡಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವಿದ್ಯಾರ್ಥಿ ಗಗನ ಎಂಬುವವರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಕಳ್ಳತನ? ಗಗನ ಅವರು ಶಿರಸಿಯಿಂದ ಚನ್ನರಾಯಪಟ್ಟಣ ತೆರಳುವ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ ಗಗನ ಅವರು … Read more

ಕರ್ನಾಟಕ ಸಂಘ ಬಳಿ ಬ್ರಾಂಚ್ ಮ್ಯಾನೇಜರ್ ಬ್ಯಾಗ್ ಲಪಟಾಯಿಸಿದ ಕಳ್ಳರು

crime name image

SHIVAMOGGA LIVE NEWS | 1 ಮಾರ್ಚ್ 2022 ಫೈನಾನ್ಸ್ ಸಂಸ್ಥೆಯೊಂದರ ಬ್ರಾಂಚ್ ಮ್ಯಾನೇಜರ್ ಒಬ್ಬರ ಲ್ಯಾಪ್ ಟಾಪ್ ಬ್ಯಾಗ್ ಮತ್ತು ದಾಖಲೆಗಳ ಕಳ್ಳತನವಾಗಿದೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. ವಿಶ್ವನಾಥ್ ಎಂಬುವವರು ತಮ್ಮ ಲ್ಯಾಪ್ ಟಾಪ್, ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೇಗಾಯ್ತು ಘಟನೆ? ವಿಶ್ವನಾಥ್ ಅವರು ಡೆಪ್ಯುಟೇಷನ್ ಮೇಲೆ ಫೈನಾನ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಿದ್ದರು. ದಾವಣಗೆರೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ತಾವು ಕುಳಿತಿದ್ದ ಸೀಟಿನ … Read more