ಹಸಿರುಮಕ್ಕಿ ಲಾಂಚ್‌ ಬಳಿ ಟಾಟಾ ಏಸ್‌ ಪಲ್ಟಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಣಿಪಾಲಕ್ಕೆ ದಾಖಲು, ಹೇಗಾಯ್ತು ಘಟನೆ?

Hasirumakki-Launch-Hasrirumakki-Kolluru-Route

ಹೊಸನಗರ: ಹಸಿರುಮಕ್ಕಿ ಲಾಂಚ್‌ ಸಮೀಪ ಟಾಟಾ ಏಸ್‌ ವಾಹನ (Vehicle) ಪಲ್ಟಿಯಾಗಿ, ಅದರಲ್ಲಿದ್ದವರು ಗಾಯಗೊಂಡಿದ್ದಾರೆ. ಹಸಿರುಮಕ್ಕಿ ಲಾಂಚ್‌ಗಿಂತಲು ಸ್ವಲ್ಪ ದೂರದಲ್ಲಿ ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಟಾಟಾ ಏಸ್‌ ವಾಹನಕ್ಕೆ ದನಗಳು ಅಡ್ಡ ಬಂದಿವೆ. ದಿಢೀರ್‌ ಬ್ರೇಕ್‌ ಹಾಕಿದ್ದರಿಂದ ನಿಯಂತ್ರಣ ತಪ್ಪಿದ ಟಾಟಾ ಏಸ್‌ ವಾಹನ ಪಲ್ಟಿಯಾಗಿದೆ. ಅದರಲ್ಲಿದ್ದ ರಾಮಚಂದ್ರ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಟಾಟಾ ಏಸ್‌ ವಾಹನದ ಚಾಲಕನ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ … Read more

ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್‌ ಇತಿಹಾಸ

170725 sigandur launch old and new photo

ಸಾಗರ: ಸಿಗಂದೂರ ಸೇತುವೆ (Sigandur Bridge) ಲೋಕಾರ್ಪಣೆ ಆಗುತ್ತಿದ್ದಂತೆ ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ಪ್ರವಾಸಿಗರು, ಸಿಗಂದೂರು ದೇವಸ್ಥಾನಕ್ಕೆ ಅಗಮಿಸುವ ಭಕ್ತರು, ಸ್ಥಳೀಯರು ಈಗ ಸೇತುವೆ ಮೇಲೆ ಸಂಚಾರ ಆರಂಭಿಸಿದ್ದಾರೆ. ಈ ಭಾಗದ ಪ್ರಮುಖ ಆಕರ್ಷಣೆಯಾಗಿದ್ದ ಲಾಂಚ್‌ಗಳು (Sigandur Launch) ಮೂಲೆಗುಂಪಾಗಿದ್ದು, ನೂತನ ಸೇತುವೆ ಆ ಜಾಗ ಆಕ್ರಮಿಸಿಕೊಂಡಿದೆ. ಅಂಬಾರಗೋಡ್ಲು – ಕಳಸವಳ್ಳಿ ಮಧ್ಯೆ ಶರಾವತಿ ನದಿ ದಾಟಲು ಮೂರು ಲಾಂಚ್‌ಗಳಿವೆ. ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಗುತ್ತಿದ್ದಂತೆ ಲಾಂಚ್‌ಗಳಿಗೆ ಜನ ಬರುವುದೇ … Read more

ಸಿಗಂದೂರು ಲಾಂಚ್‌ಗಳು ಇನ್ಮುಂದೆ ತೇಲುವ ಹೊಟೇಲ್, ಯೋಜನೆ ಮಾಹಿತಿ ನೀಡಿದ ಎಂಎಲ್‌ಎ

Sigandur-Launch-in-Sharavathi-River

ಶಿವಮೊಗ್ಗ: ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಲಾಂಚ್‌ಗಳನ್ನು (Launch) ಇನ್ಮುಂದೆ ಹೊಟೇಲ್ ಆಗಿ ಪರಿವರ್ತಿಸುವ ಯೋಜನೆ ಇದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ‌. ಇದನ್ನೂ ಓದಿ » ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಸೇತುವೆ ಉದ್ಘಾಟನೆಯಾಗಿದೆ. ಹಾಗಾಗಿ ಇಲ್ಲಿನ ಎರಡು ಲಾಂಚ್‌ಗಳಲ್ಲಿ ಹೊಟೇಲ್ ನಿರ್ಮಿಸುವ ಯೋಜನೆ ಇದೆ. ಬೋಟ್‌ಗಳಲ್ಲಿ ಲಾಂಚ್ ಬಳಿಗೆ ಜನರನ್ನು ಕರೆದೊಯ್ದು ಊಟ, ತಿಂಡಿಗೆ ವ್ಯವಸ್ಥೆ ಮಾಡುವ … Read more

ಸಿಗಂದೂರು ಲಾಂಚ್‌, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್‌, ಕಾರಣವೇನು?

Sigandur-Launch-in-Sharavathi-River

ಸಾಗರ : ಸಿಗಂದೂರು ಲಾಂಚ್‌ಗೆ (Launch) ವಾಹನಗಳನ್ನು ಬಿಡುವ ವಿಚಾರದಲ್ಲಿ ಜಗಳವಾಗಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ನೇಮಿಸಿರುವ ಟಿಕೆಟ್ ಕಲೆಕ್ಟರ್ ಸೇರಿ ಹಲವರ ವಿರುದ್ಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೇಮಕವಾಗಿರುವ ಟಿಕೆಟ್ ಕಲೆಕ್ಟರ್ ಮತ್ತು 10-15 ಸಹಚರರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಗಲಾಟೆ ಆಗಿದ್ದೇಕೆ? ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಪುರದ ನಿವಾಸಿ ಪ್ರಣತಿ, ತಂದೆ ಪ್ರಸನ್ನ, ತಾಯಿ ಪ್ರಭಾ, ಸಹೋದರ … Read more

BREAKING NEWS | ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ

Siganduru-Bridge-in-sagara-taluk

SAGARA NEWS, 13 NOVEMBER 2024 : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು (Youths) ಕಣ್ಮರೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದೆ. ಚೇತನ್‌, ಸಂದೀಪ್‌ ಮತ್ತು ರಾಜು ಎಂಬುವವರು ಕಣ್ಮರೆಯಾಗಿದ್ದಾರೆ. ಇವರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ. ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇದನ್ನೂ ಓದಿ » ಹೊಳೆ ಸ್ಟಾಪ್‌ನಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿ, ತಪ್ಪಿದ ಅನಾಹುತ

ಸಿಗಂದೂರು ಲಾಂಚ್‌, ಹೊಳೆಬಾಗಿಲಲ್ಲಿ ರೈತರಿಂದ ಪ್ರತಿಭಟನೆ, ಕಾರಣವೇನು?

-farmers-protest-against-launch-and-taxi.

SAGARA NEWS, 12 NOVEMBER 2024 : ಸಿಗಂದೂರು ಲಾಂಚ್‌ನಲ್ಲಿ (Launch) ರೈತ ಮುಖಂಡರೊಬ್ಬರ ವಿರುದ್ಧ ಲಾಂಚ್‌ ಮತ್ತು ಟ್ಯಾಕ್ಸಿ ಚಾಲಕರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ (ಹೆಚ್.ಗಣಪತಿಯಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ಹೊಳೆಬಾಗಿಲು ಲಾಂಚ್‌ ತಟದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಆರೋಪವೇನು? ಜಿಲ್ಲಾ ರೈತ ಸಂಘದ ಮುಖಂಡರೊಬ್ಬರು ಹೊಳೆಬಾಗಿಲು ಮೂಲಕ ಬ್ಯಾಕೋಡಿಗೆ ಶನಿವಾರ ಬಂದು, ಪುನಃ ಮರಳುವಾಗ ಅವರ ವಾಹನವನ್ನು ಲಾಂಚ್‌ಗೆ ಹಾಕುವ ವಿಚಾರದಲ್ಲಿ ಸ್ಥಳೀಯ ವಾಹನ ಚಾಲಕರು ಮತ್ತು … Read more

ಮುಪ್ಪಾನೆ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಆಗಿದ್ದೇನು?

Halke-Muppane-Launch-in-Sagara-taluk

SAGARA NEWS, 9 SEPTEMBER 2024 : ತಾಂತ್ರಿಕ ದೋಷದಿಂದ ಹಲ್ಕೆ – ಮುಪ್ಪಾನೆ ಲಾಂಚ್‌ (Launch) ಸೇವೆ ಸ್ಥಗಿತಗೊಂಡಿದೆ. ರಿಪೇರಿ ಕಾರ್ಯದ ಬಳಿಕ ಲಾಂಚ್‌ ಸೇವೆ ಪುನಾರಂಭವಾಗಲಿದೆ. ಇದರಿಂದ ಈ ಭಾಗದ ಜನರಲ್ಲಿ ಸಂಷಕ್ಟಕ್ಕೀಡಾಗಿದ್ದಾರೆ. ಲಾಂಚ್‌ಗೆ ಆಗಿದ್ದೇನು? ನಿರಂತರ ಮಳೆಯಿಂದಾಗಿ ಲಾಂಚ್‌ ನಿಲುಗಡೆಗೆ ಪ್ಲಾಟ್‌ಫಾರಂ ಸಿಗುತ್ತಿಲ್ಲ. ಮಣ್ಣಿನ ಮೇಲೆಯೇ ನಿಲ್ಲಿಸಬೇಕಾಗುತ್ತದೆ. ಈ ವೇಳೆ ಲಾಂಚ್‌ನ ಫ್ಯಾನ್‌ಗೆ ಮರದ ದಿಮ್ಮಿಗಳು ಸಿಲುಕಿ ತಾಂತ್ರಿಕ ದೋಷ ಉಂಟಾಗಿದೆ. ಲಾಂಚ್‌ನ ಬಿಡಿಗ ಭಾಗಗಳನ್ನು ರಿಪೇರಿಗೆ ಕಳುಹಿಸಲಾಗಿದೆ. ಸಾಗರದಲ್ಲಿ ಬಿಡಿ ಭಾಗಗಳ … Read more

ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

Sigandur-Launch-in-sharavathi-back-water.

SHIVAMOGGA LIVE NEWS | 18 JUNE 2024 SAGARA : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ಜೂನ್‌ 19ರಿಂದ ಸಿಗಂದೂರು ಲಾಂಚ್‌ನಲ್ಲಿ (Launch) ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ವೇಳೆ, ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು … Read more

ಸಿಗಂದೂರು ಲಾಂಚ್‌, ವಾಹನ ಸಾಗಟ ಸ್ಥಗಿತ, ಸ್ಥಳೀಯರಲ್ಲಿ ಆತಂಕ, ಪ್ರವಾಸಿಗರಿಗು ಸಂಕಷ್ಟ, ಕಾರಣವೇನು?

Sigandur-Launch-in-Sharavathi-River

SHIVAMOGGA LIVE NEWS | 5 JUNE 2024 SAGARA : ಶರಾವತಿ ಹಿನ್ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದ್ದರಿಂದ ಜೂ.5ರಿಂದ ಕಳಸವಳ್ಳಿ – ಅಂಬಾರಗೋಡ್ಲು ಲಾಂಚ್‌ನಲ್ಲಿ (Sigandur Launch) ವಾಹನ ಸಾಗಾಟ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಲಾಂಚ್‌ನಲ್ಲಿ ವಾಹನ ಸಾಗಾಟ ಸ್ಥಗಿತಗೊಳಿಸಿರುವುದರಿಂದ ಕರೂರು ಹೋಬಳಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಆರಂಭವಾಗಿ ನೀರಿನ ಮಟ್ಟ ಏರಿದಲ್ಲಿ ಮಾತ್ರ ಮತ್ತೆ ವಾಹನ ಸಾಗಾಟ ಪುನಾರಂಭವಾಗಲಿದೆ. ಶರಾವತಿ ನದಿಯ ಹಿನ್ನೀರು ಪ್ರಮಾಣ ತೀವ್ರ ಕುಸಿತ ಕಂಡಿದೆ. ಹಾಗಾಗಿ ಹಸಿರುಮಕ್ಕಿ … Read more

ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ನಿರಾಸೆ, ಕಾರಣವೇನು?

Hasirumakki-Launch-Hasrirumakki-Kolluru-Route

SHIVAMOGGA LIVE NEWS | 10 MAY 2024 SAGARA : ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಶರಾವತಿ ಹಿನ್ನೀರು ಭಾಗದ ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಕೊರತೆ ಮತ್ತು ಭಾರಿ ಬಿಸಿಲಿನ ಪರಿಣಾಮ ಶರಾವತಿ ನದಿಯಲ್ಲಿ ನೀರಿನ ಮಟ್ಟ ತಗ್ಗಿದೆ. ನೀರಿನ ಆಳದಲ್ಲಿದ್ದ ಮರದ ದಿಮ್ಮಿಗಳು ಮೇಲೆ ಬರುತ್ತಿವೆ. ಇವು ಲಾಂಚ್‌ಗೆ ತಾಗಿ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ … Read more