ಶಿವಮೊಗ್ಗದ ಲಾಡ್ಜ್ ರೂಮಿನಲ್ಲಿ ಬೆಂಕಿ ಕೇಸ್, ಪುರುಷ, ಮಹಿಳೆ ವಿರುದ್ಧವೇ ಕೇಸ್, ಏನೇನಿದೆ ದೂರಿನಲ್ಲಿ?
ಶಿವಮೊಗ್ಗ: ಲಾಡ್ಜ್‌ನ ರೂಂನಲ್ಲಿ ಬೆಂಕಿಯಿಂದಾಗಿ ಮಹಿಳೆಗೆ ಗಂಭೀರ ಗಾಯ ಪ್ರಕರಣ ಸಂಬಂಧ ಲಾಡ್ಜ್‌ನ ಸೂಪರ್ ವೈಸರ್ ದೂರು ನೀಡಿದ್ದಾರೆ. ರೂಂನಲ್ಲಿದ್ದ ಪುರುಷ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ನ.18ರಂದು ಶಿವಮೊಗ್ಗದ ಲಾಡ್ಜ್‌ನ ರೂಂನಲ್ಲಿ ಬೆಂಕಿಗೆ ಮಹಿಳೆ ಗಂಭೀರ ಗಾಯಗೊಂಡಿದ್ದರು. ಜೊತೆಗಿದ್ದ ವ್ಯಕ್ತಿಗು ಗಾಯವಾಗಿತ್ತು. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ದೂರಿನಲ್ಲಿ ಏನಿದೆ? ‘ಗಿರೀಶ್ ಎಂಬುವವರು ನ.18ರಂದು ಮಧ್ಯಾಹ್ನ ಒಬ್ಬರೆ ಲಾಡ್ಜ್‌ಗೆ ಬಂದು ರೂಂ ನಂಬರ್ 211ರಲ್ಲಿ ಉಳಿದಿದ್ದರು. … Read more